ICC T20 World Cup 2024: "ನಾನು ಟಿ20 ವಿಶ್ವ ಕಪ್ ನಲ್ಲಿ ಆಡುವುದಿಲ್ಲ", ವಿಂಡೀಸ್ ತಂಡಕ್ಕೆ ಮರಳಲು ನಿರಾಕರಿಸಿದ ದಿಗ್ಗಜ ಆಲ್ ರೌಂಡರ್!

Sunil Narine On T20 World Cup: ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಆವೃತ್ತಿಯಲ್ಲಿ ಪ್ರಬಲ ಆಲ್‌ರೌಂಡರ್ ಆಗಿ ಹೊರಹೊಮ್ಮಿರುವ ಸುನಿಲ್ ನರೈನ್ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ (KKR) ಪರ ಆಡುತ್ತಿರುವ ವೆಸ್ಟ್ ಇಂಡೀಸ್‌ನ ಈ ಆಲ್‌ರೌಂಡರ್ ಐಪಿಎಲ್ 2024 ರಲ್ಲಿ ಭಾರಿ ಅಬ್ಬರಿಸುತ್ತಿದ್ದಾರೆ.   

Written by - Nitin Tabib | Last Updated : Apr 24, 2024, 09:08 PM IST
  • ಐಪಿಎಲ್‌ನ 17ನೇ ಸೀಸನ್‌ನಲ್ಲಿ ಎಡಗೈ ಓಪನರ್‌ನ ಪ್ರದರ್ಶನವನ್ನು ನೋಡಿ, ಅವರು 2024 ರಲ್ಲಿ ಟಿ 20 ವಿಶ್ವಕಪ್ ಆಡುತ್ತಾರೆ
  • ಎಂಬ ಚರ್ಚೆಯು ವೇಗವನ್ನು ಪಡೆದುಕೊಂಡಿದೆ, ಆದರೆ ವೆಸ್ಟ್ ಇಂಡೀಸ್ ಆಲ್‌ರೌಂಡರ್ ಸುನೀಲ್ ಮುಂಬರುವ ಐಸಿಸಿ ಪಂದ್ಯಾವಳಿಯನ್ನು ಆಡುವುದಿಲ್ಲ ಎಂದು ಘೋಷಿಸಿದ್ದಾರೆ.
  • ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ನರೇನ್ ಮಾಹಿತಿ ನೀಡಿದ್ದಾರೆ.
ICC T20 World Cup 2024: "ನಾನು ಟಿ20 ವಿಶ್ವ ಕಪ್ ನಲ್ಲಿ ಆಡುವುದಿಲ್ಲ", ವಿಂಡೀಸ್ ತಂಡಕ್ಕೆ ಮರಳಲು ನಿರಾಕರಿಸಿದ ದಿಗ್ಗಜ ಆಲ್ ರೌಂಡರ್! title=

Sunil Narine On T20 World Cup: ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಆವೃತ್ತಿಯಲ್ಲಿ ಪ್ರಬಲ ಆಲ್‌ರೌಂಡರ್ ಆಗಿ ಹೊರಹೊಮ್ಮಿರುವ ಸುನಿಲ್ ನರೈನ್ ಅದ್ಭುತ ಫಾರ್ಮ್‌ನಲ್ಲಿದ್ದಾರೆ. ಕೋಲ್ಕತ್ತಾ ನೈಟ್ ರೈಡರ್ಸ್ (KKR) ಪರ ಆಡುತ್ತಿರುವ ವೆಸ್ಟ್ ಇಂಡೀಸ್‌ನ ಈ ಆಲ್‌ರೌಂಡರ್ ಐಪಿಎಲ್ 2024 ರಲ್ಲಿ ಭಾರಿ ಅಬ್ಬರಿಸುತ್ತಿದ್ದಾರೆ. ಕುತೂಹಲಕಾರಿಯಾಗಿ, ತನ್ನ ಸ್ಪಿನ್ ಬೌಲಿಂಗ್‌ಗೆ ಹೆಸರುವಾಸಿಯಾದ ನರೈನ್, ಈ ಋತುವಿನಲ್ಲಿ ಇದುವರೆಗೆ  ಎದುರಾಳಿಗಳಿಗೆ ಚೆಂಡಿಗಿಂತ ಬ್ಯಾಟ್‌ನಿಂದ ಹೆಚ್ಚು ಹಾನಿಯನ್ನುಂಟುಮಾಡಿದ್ದಾರೆ.

ಐಪಿಎಲ್‌ನ 17ನೇ ಸೀಸನ್‌ನಲ್ಲಿ ಎಡಗೈ ಓಪನರ್‌ನ ಪ್ರದರ್ಶನವನ್ನು ನೋಡಿ, ಅವರು 2024 ರಲ್ಲಿ ಟಿ 20 ವಿಶ್ವಕಪ್ ಆಡುತ್ತಾರೆ ಎಂಬ ಚರ್ಚೆಯು ವೇಗವನ್ನು ಪಡೆದುಕೊಂಡಿದೆ, ಆದರೆ ವೆಸ್ಟ್ ಇಂಡೀಸ್ ಆಲ್‌ರೌಂಡರ್ ಸುನೀಲ್ ಮುಂಬರುವ ಐಸಿಸಿ ಪಂದ್ಯಾವಳಿಯನ್ನು ಆಡುವುದಿಲ್ಲ ಎಂದು ಘೋಷಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ನರೇನ್ ಮಾಹಿತಿ ನೀಡಿದ್ದಾರೆ.

ಈ ಕುರಿತು ಇನ್ಸ್ಟಾಗ್ರಾಮ್ ಸ್ಟೋರಿ ಬರೆದುಕೊಂಡ 35 ವರ್ಷದ ಸುನಿಲ್ ನರೈನ್,  “ನೀವೆಲ್ಲರೂ ಚೆನ್ನಾಗಿದ್ದೀರೆಂದು ನಾನು ಭಾವಿಸುತ್ತೇನೆ. ನನ್ನ ಇತ್ತೀಚಿನ ಪ್ರದರ್ಶನಗಳ ನಂತರ, ನಾನು ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಮರಳುತ್ತೇನೆ ಮತ್ತು ವೆಸ್ಟ್ ಇಂಡೀಸ್‌ಗಾಗಿ ಟಿ 20 ವಿಶ್ವಕಪ್ ಆಡುತ್ತೇನೆ ಎಂದು ಹಲವರು ನಂಬಿದ್ದಾರೆ, ಆದರೆ ಇಲ್ಲ, ನಾನು ಪುನರಾಗಮನ ಮಾಡುವುದಿಲ್ಲ. ನಾನು ಟಿ 20 ವಿಶ್ವಕಪ್‌ನಲ್ಲಿ ವೆಸ್ಟ್ ಇಂಡೀಸ್ ಅನ್ನು ಪ್ರತಿನಿಧಿಸುವುದಿಲ್ಲ.

ಇದಕ್ಕೂ ಮುಂದುವರೆದು ಬರೆದುಕೊಂಡ ನರೇನ್, “ಟಿ 20 ವಿಶ್ವಕಪ್‌ನಲ್ಲಿ ಆಡುತ್ತಿರುವ ವೆಸ್ಟ್ ಇಂಡೀಸ್ ಆಟಗಾರರಿಗೆ ಅಭಿನಂದನೆಗಳು. ವೆಸ್ಟ್ ಇಂಡೀಸ್ ಪಂದ್ಯಾವಳಿಯನ್ನು ಗೆಲ್ಲುವುದನ್ನು ನೋಡಲು ನಾನು ಬಯಸುತ್ತೇನೆ. ಇತ್ತೀಚಿನ ದಿನಗಳಲ್ಲಿ ಕಠಿಣ ಪರಿಶ್ರಮ ಪಟ್ಟ ಆಟಗಾರರಿಗೆ ವಿಶ್ವಕಪ್‌ನಲ್ಲಿ ಆಡುವ ಅವಕಾಶ ಸಿಗಬೇಕು ಎಂಬುದು ನನ್ನ ಬಯಕೆ. ವೆಸ್ಟ್ ಇಂಡೀಸ್ ಮತ್ತೊಮ್ಮೆ ಟಿ20 ವಿಶ್ವಕಪ್ ಚಾಂಪಿಯನ್ ಆಗಬೇಕೆಂದು ನಾನು ಬಯಸುತ್ತೇನೆ" ಎಂದಿದ್ದಾರೆ.

ಇದನ್ನೂ ಓದಿ-IPL 2024: ಅಂಪೈರ್ ವಿರುದ್ಧ ಕೆಂಡಾಮಂಡಲವಾದ KL Rahul, ತಿಳಿ ಹೇಳಲು ಕೈ....! Watch Video

ಐಪಿಎಲ್‌ನ ಈ ಋತುವಿನಲ್ಲಿ ಅವರ ಅದ್ಭುತ ಪ್ರದರ್ಶನದ ನಂತರ, ಸುನೀಲ್ ನರೈನ್ ಟಿ20 ವಿಶ್ವಕಪ್‌ನಲ್ಲಿ ಆಡುವ ನಿರೀಕ್ಷೆಯಿದೆ, ಆದರೆ ಈಗ ಅವರೇ ಈ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ. 

ಇದನ್ನೂ ಓದಿ-IPL 2024: 'ಅಗ್ಗದ' ಬೌಲರ್ ಈತ ಇಂದು ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಯಶಸ್ಸಿನ ಸೂಪರ್ ಹೀರೋ!

ವೆಸ್ಟ್ ಇಂಡೀಸ್ ಸ್ಟಾರ್ ಆಲ್ ರೌಂಡರ್ ನರೇನ್ ಸೆನ್ಸೆಶ್ನಲ್ ಹೇಳಿಕೆ
ವಿಂಡೀಸ್ ತಂಡದ ಆಲ್‌ರೌಂಡರ್ ರೋವ್‌ಮನ್ ಪೊವೆಲ್ ಇತ್ತೀಚೆಗೆ ತಮ್ಮ ದೇಶದ ಆಟಗಾರನ ಬಗ್ಗೆ ಹೇಳಿಕೆ ನೀಡಿದ್ದರು. ರಾಷ್ಟ್ರೀಯ ತಂಡಕ್ಕೆ ಮರಳಿ ಬರುವಂತೆ ಸುನೀಲ್‌ಗೆ ಒತ್ತಾಯ ಮಾಡುತ್ತಲೇ ಬಂದಿದ್ದೇನೆ ಎಂದು ಅವರು ಬಹಿರಂಗಪಡಿಸಿದ್ದಾರೆ. "ಕಳೆದ 12 ತಿಂಗಳಿನಿಂದ ವೆಸ್ಟ್ ಇಂಡೀಸ್ ತಂಡಕ್ಕೆ ಹಿಂತಿರುಗುವಂತೆ ನಾನು ನರೈನ್ ಅವರನ್ನು ಕೇಳುತ್ತಿದ್ದೇನೆ, ಆದರೆ ಅವರು ಇಲ್ಲ ಎಂದು ಹೇಳಿದ್ದಾರೆ. ನಾನು ಆತನ ಆತ್ಮೀಯ ಗೆಳೆಯರಾದ ಕೀರಾನ್ ಪೊಲಾರ್ಡ್, ಡ್ವೇನ್ ಬ್ರಾವೋ ಮತ್ತು ನಿಕೋಲಸ್ ಪೂರನ್ ಅವರನ್ನು ಮರಳಿ ಕರೆತರಲು ಕೋರಿದ್ದೇನೆ, ಆದರೂ  ನರೈನ್ ಒಪ್ಪುತ್ತಿಲ್ಲ" ಎಂದು ಅವರು ಹೇಳಿದ್ದಾರೆ. 

ಸುನಿಲ್ ನರೈನ್ ಹಂಚಿಕೊಂಡ ಪೋಸ್ಟ್ ಇಲ್ಲಿದೆ

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News