Annamalai : ಸಿನಿಮಾ ಆಗುತ್ತಿದೆ ಅಣ್ಣಾಮಲೈ ಜೀವನ ಚರಿತ್ರೆ..! ಹೀರೋ ಯಾರು ಗೊತ್ತೆ..? 

K Annamalai biopic movie : ಮಾಜಿ ಐಪಿಎಸ್‌ ಅಧಿಕಾರಿ, ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರ ಬಯೋಪಿಕ್ ಸಿನಿಮಾ ಆಗಲಿದೆ ಎಂಬ ವರದಿಗಳಿವೆ. ಅಲ್ಲದೆ, ಅಣ್ಣಾಮಲೈ ಅವರ ಪಾತ್ರವನ್ನು ಯಾರು ನಿರ್ವಹಿಸಲಿದ್ದಾರೆ ಎನ್ನು ಕುತೂಹಲ ಮೂಡಿದೆ.. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ. 

Written by - Krishna N K | Last Updated : May 3, 2024, 10:02 PM IST
    • ಖ್ಯಾತ ನಟರು ಮತ್ತು ಸೆಲೆಬ್ರಿಟಿಗಳ ಜೀವನ ಚಿರಿತ್ರೆ ಸಿನಿಮಾ ಆಗುತ್ತಿವೆ
    • ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರ ಜೀವನ ಚರಿತ್ರೆ ಸಿನಿಮಾ ಆಗಲಿದೆ
    • ಅಣ್ಣಾಮಲೈ ಅವರ ಪಾತ್ರವನ್ನು ಯಾರು ನಿರ್ವಹಿಸಲಿದ್ದಾರೆ ಎನ್ನು ಕುತೂಹಲ ಮೂಡಿದೆ
Annamalai : ಸಿನಿಮಾ ಆಗುತ್ತಿದೆ ಅಣ್ಣಾಮಲೈ ಜೀವನ ಚರಿತ್ರೆ..! ಹೀರೋ ಯಾರು ಗೊತ್ತೆ..?  title=

K Annamalai biopic : ಇತ್ತೀಚಿಗೆ ಚಿತ್ರರಂಗದ ಖ್ಯಾತ ನಟರು ಮತ್ತು ಸೆಲೆಬ್ರಿಟಿಗಳ ಜೀವನ ಚಿರಿತ್ರೆ ಸಿನಿಮಾ ಆಗುತ್ತಿವೆ. ಈ ನಿಟ್ಟಿನಲ್ಲಿ ಖ್ಯಾತ ಸಂಗೀತ ನಿರ್ದೇಶಕ ಇಳಯರಾಜ ಅವರ ಬಯೋಪಿಕ್‌ ತೆರೆ ಮೇಲೆ ಬರಲಿದೆ. ಈ ಕುರಿತ ಸುದ್ದಿ ಎಲ್ಲರಿಗೂ ತಿಳಿದಿದೆ. ಅರುಣ್ ಮಾಥೇಶ್ವರನ್ ನಿರ್ದೇಶನದ ಈ ಸಿನಿಮಾದಲ್ಲಿ, ಇಳಯರಾಜ ಪಾತ್ರವನ್ನು ಧನುಷ್ ನಿರ್ವಹಿಸಲಿದ್ದಾರೆ ಎನ್ನಲಾಗಿದೆ. ಇದರ ಬೆನ್ನಲ್ಲೇ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರ ಜೀವನ ಚರಿತ್ರೆ ಸಿನಿಮಾ ಆಗಲಿದೆ ಎಂಬ ಸುದ್ದಿ ಹೊರಬಿದ್ದಿದೆ. 

ಅಣ್ಣಾಮಲೈ ತಮಿಳುನಾಡಿನ ಜನರಲ್ಲಿ ಅತ್ಯಂತ ಪ್ರಸಿದ್ಧ ರಾಜಕಾರಣಿ. ಐಪಿಎಸ್‌ ಪದವಿ ಪಡೆದು ಪೊಲೀಸ್‌ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಇವರು, ಕೆಲಸ ತೊರೆದು ಬಿಜೆಪಿ ಸೇರಿದ್ದಾರೆ. ತಮಿಳುನಾಡಿನ ಕರೂರಿನಲ್ಲಿ ಹುಟ್ಟಿ ಕೊಯಮತ್ತೂರಿನಲ್ಲಿ ಬೆಳೆದ ಅಣ್ಣಾಮಲೈ ತಮ್ಮ ಭಾಷಣ ಕೌಶಲ್ಯದಿಂದ ಈಗ ಭಾರತದಾದ್ಯಂತ ಜನಪ್ರಿಯರಾಗಿದ್ದಾರೆ. 

ಇದನ್ನೂ ಓದಿ:ನಾಗ ಚೈತನ್ಯ ಜೊತೆ ಡೇಟಿಂಗ್ ಕನ್ಫರ್ಮ್ ಮಾಡಿ, ತಾನು ಪ್ರೀತಿಸುತ್ತಿದ್ದೇನೆ ಎಂದ ಮಂಕಿ ಮ್ಯಾನ್ ನಟಿ

39ರ ಹರೆಯದ ಅಣ್ಣಾಮಲೈ ಸದ್ಯ ರಾಜಕೀಯ ಪ್ರವೇಶ ಮಾಡಿದ್ದು, ತಮಿಳುನಾಡು ಬಿಜೆಪಿ ಪಕ್ಷದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇಂತಹ ಸ್ಪೂರ್ತಿದಾಯಕ ಹಿನ್ನೆಲೆ ಹೊಂದಿರುವ ಅಣ್ಣಾಮಲೈ ಅವರ ಜೀವನ  ಚರಿತ್ರೆ ತೆರೆಗೆ ಬರಲಿದೆ ಎಂಬ ಸುದ್ದಿಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಅಲ್ಲದೆ, ಈ ಸಿನಿಮಾದಲ್ಲಿ ಅಣ್ಣಾಮಲೈ ಅವರ ಪಾತ್ರದಲ್ಲಿ ನಟ ವಿಶಾಲ್ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ನಟ ವಿಶಾಲ್ ಸಹ ಈ ಕುರಿತು ಮೌನವಾಗಿದ್ದಾರೆ. ಅಣ್ಣಾಮಲೈ ಅವರು ಸಹ ಈ ಕುರಿತು ಸ್ಪಷ್ಟತೆ ನೀಡಿಲ್ಲ. ಮುಂದೆ ಏನಾಗುತ್ತೆ ಅಂತ ಕಾಯ್ದು ನೋಡಬೇಕಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News