Gautam Adani : ಅಂಬಾನಿ ಹಿಂದಿಕ್ಕಿ ʼಏಷ್ಯಾದ ಶ್ರೀಮಂತ ವ್ಯಕ್ತಿʼಯಾದ ಅದಾನಿ..! ಅವರ ನಿವ್ವಳ ಮೌಲ್ಯ ಇಷ್ಟು

Gautam Adani : ಸುಮಾರು ಒಂದು ವರ್ಷದ ನಂತರ ಗೌತಮ್ ಅದಾನಿ ಮತ್ತೊಮ್ಮೆ ಭಾರತ ಮತ್ತು ಏಷ್ಯಾದಲ್ಲಿ ಅತಿ ಹೆಚ್ಚು ಸಂಪತ್ತು ಹೊಂದಿರುವ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಈಗ ಅವರು ಕೋಟ್ಯಾಧಿಪತಿಗಳ ಪಟ್ಟಿಯಲ್ಲಿ 12 ನೇ ಸ್ಥಾನದಲ್ಲಿದ್ದಾರೆ.

Written by - Krishna N K | Last Updated : Jan 5, 2024, 03:53 PM IST
  • ಗೌತಮ್ ಅದಾನಿ ಮತ್ತೊಮ್ಮೆ ಭಾರತ ಮತ್ತು ಏಷ್ಯಾದ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.
  • ಅದಾನಿ ನಿವ್ವಳ ಮೌಲ್ಯವೂ ಹೆಚ್ಚಾಗಿದ್ದು, ಪ್ರಸ್ತುತ ಅವರ ಸಂಪತ್ತು 24 ಗಂಟೆಗಳಲ್ಲಿ 7.6 ಶತಕೋಟಿ ಡಾಲರ್‌ನಷ್ಟಿದೆ.
  • ಈ ಮೂಲಕ ಮುಖೇಶ್‌ ಅಂಬಾನಿಯವರನ್ನು ಹಿಂದಿಕ್ಕಿದ್ದಾರೆ.
Gautam Adani : ಅಂಬಾನಿ ಹಿಂದಿಕ್ಕಿ ʼಏಷ್ಯಾದ ಶ್ರೀಮಂತ ವ್ಯಕ್ತಿʼಯಾದ ಅದಾನಿ..! ಅವರ ನಿವ್ವಳ ಮೌಲ್ಯ ಇಷ್ಟು title=

Asia Richest person Gautam Adani : ಹಿರಿಯ ಉದ್ಯಮಿ ಗೌತಮ್ ಅದಾನಿ (Gautam Adani) ಈಗ ಮುಖೇಶ್ ಅಂಬಾನಿ ಅವರನ್ನು ಹಿಂದಿಕ್ಕಿ ಭಾರತ ಮತ್ತು ಏಷ್ಯಾದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಇಷ್ಟೇ ಅಲ್ಲ, ಅದಾನಿ ವಿಶ್ವದ ಕೋಟ್ಯಾಧಿಪತಿಗಳ ಪಟ್ಟಿಯಲ್ಲಿ 12ನೇ ಸ್ಥಾನಕ್ಕೆ ತಲುಪಿದ್ದಾರೆ. ಗೌತಮ್ ಅದಾನಿ ಅವರ ನಿವ್ವಳ ಮೌಲ್ಯವೂ ಹೆಚ್ಚಾಗಿದ್ದು, ಪ್ರಸ್ತುತ ಅವರ ಸಂಪತ್ತು 24 ಗಂಟೆಗಳಲ್ಲಿ 7.6 ಶತಕೋಟಿ ಡಾಲರ್‌ನಷ್ಟಿದೆ. 

ಬಿಲಿಯನೇರ್‌ಗಳ ಪಟ್ಟಿಯಲ್ಲಿ ಮುಖೇಶ್ ಅಂಬಾನಿ (Mukesh Ambani) 12ನೇ ಸ್ಥಾನದಿಂದ 13ನೇ ಸ್ಥಾನಕ್ಕೆ ಕುಸಿದಿದ್ದಾರೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಮುಕೇಶ್ ಅಂಬಾನಿ ಅವರ ಸಂಪತ್ತು 97 ಬಿಲಿಯನ್ ಡಾಲರ್ ಆಗಿದೆ. ಕಳೆದ 24 ಗಂಟೆಗಳಲ್ಲಿ ಅವರ ನಿವ್ವಳ ಮೌಲ್ಯ $665 ಮಿಲಿಯನ್ ಹೆಚ್ಚಾಗಿದೆ.

ಇದನ್ನೂ ಓದಿ:ನಾಳೆಯೇ L-1 ಪಾಯಿಂಟ್‌ ತಲುಪಲಿದೆ ಆದಿತ್ಯ : ಸೂರ್ಯನ ಮೇಲೂ ರಾರಾಜಿಸುವುದು ಭಾರತ ಧ್ವಜ

ಅದಾನಿ ಗ್ರೂಪ್‌ನ ಮಾಲೀಕ ಮತ್ತು ಭಾರತದ ಶ್ರೀಮಂತ ವ್ಯಕ್ತಿ, ಬಿಲಿಯನೇರ್‌ಗಳ ಪಟ್ಟಿಯಲ್ಲಿ 12 ನೇ ಸ್ಥಾನಕ್ಕೆ ಬಂದಿದ್ದಾರೆ. ಗುರುವಾರದವರೆಗೆ, ಅವರು ಈ ಪಟ್ಟಿಯಲ್ಲಿ 14 ನೇ ಸ್ಥಾನದಲ್ಲಿದ್ದರು, ಆದರೆ 24 ಗಂಟೆಗಳಲ್ಲಿ ಅವರ ನಿವ್ವಳ ಮೌಲ್ಯದಲ್ಲಿ ಉತ್ತಮ ಬೆಳವಣಿಗೆ ಕಂಡುಬಂದಿದೆ. ಇದರಿಂದಾಗಿ 14 ನೇ ಸ್ಥಾನದಿಂದ 12 ನೇ ಸ್ಥಾನಕ್ಕೆ ಏರಿದ್ದಾರೆ. ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಯಾಗಿಯೂ ಸಹ ಮುಂದಿದ್ದಾರೆ. ಬ್ಲೂಮ್‌ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ, ಗೌತಮ್ ಅದಾನಿ ಅವರ ನಿವ್ವಳ ಮೌಲ್ಯ $97.6 ಬಿಲಿಯನ್ ತಲುಪಿದೆ. 

ಅದಾನಿ-ಹಿಂಡೆನ್‌ಬರ್ಗ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ತೀರ್ಪಿನ ನಂತರ, ಅವರ ಕಂಪನಿಗಳ ಷೇರುಗಳಲ್ಲಿ ಏರಿಕೆ ಕಾಣುತ್ತಿವೆ, ಇದರಿಂದಾಗಿ ಕಂಪನಿಯ ಮೌಲ್ಯವು ಹೆಚ್ಚುತ್ತಿದೆ. ಅಲ್ಲದೆ, 24ರಲ್ಲಿ ಉಳಿದ 2 ಪ್ರಕರಣಗಳ ತನಿಖೆ ನಡೆಸಲು ಮಾರುಕಟ್ಟೆ ನಿಯಂತ್ರಕ ಸೆಬಿಗೆ ಇನ್ನೂ 3 ತಿಂಗಳ ಕಾಲಾವಕಾಶ ನೀಡಲಾಗಿದೆ.

ಇದನ್ನೂ ಓದಿ:ಲಕ್ಷದ್ವೀಪದಲ್ಲಿ ಪ್ರಧಾನಿ ಮೋದಿ ಇನ್‌ ಕೂಲ್‌ ಮೂಡ್‌..! ಫೋಟೋಸ್‌ ನೋಡಿ

ಕಳೆದ ಎರಡು ದಿನಗಳಲ್ಲಿನ ಅದಾನಿ ಸಮೂಹದ ಷೇರುಗಳಲ್ಲಿ ಏರಿಕೆಯಾಗಿದೆ. ಶುಕ್ರವಾರವೂ ಸಹ ಷೇರುಗಳಲ್ಲಿ ಬಲವಾದ ಏರಿಕೆ ಕಂಡುಬಂದಿದೆ. ಎಸಿಸಿ ಸಿಮೆಂಟ್‌ನ ಷೇರುಗಳು ಬಿಎಸ್‌ಇಯಲ್ಲಿ ಪ್ರತಿ ಷೇರಿಗೆ 3.20% ಏರಿಕೆಯಾಗಿದೆ. ಅದಾನಿ ಪೋರ್ಟ್ ಶೇ.3ರಷ್ಟು, ಅದಾನೋ ಪವರ್ ಶೇ.2, ಅದಾನಿ ಟೋಟಲ್ ಗ್ಯಾಸ್ ಶೇ.2, ಅದಾನಿ ವಿಲ್ಮರ್ ಶೇರ್ ಶೇ.0.12, ಅಂಬುಜಾ ಶೇ.3ರಷ್ಟು ಏರಿಕೆ ಕಂಡರೆ, ಅದಾನಿ ಎಂಟರ್ ಪ್ರೈಸಸ್ ಶೇರುಗಳು ಶೇ.0.18ರಷ್ಟು ಕುಸಿದಿವೆ. ಇದಲ್ಲದೇ ಅದಾನಿ ಎನರ್ಜಿ ಸೊಲ್ಯೂಷನ್ಸ್ ಶೇ.0.41ರಷ್ಟು ಮತ್ತು ಅದಾನಿ ಎನರ್ಜಿ ಶೇ.0.43ರಷ್ಟು ಕುಸಿತ ಕಂಡಿದೆ.

ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News