ಬಾಲಿವುಡ್‌ಗೆ ಗುಡ್‌ ಬಾಯ್‌ ಹೇಳ್ತಾರಾ ಅನುಷ್ಕಾ ಶರ್ಮಾ? ವಿದೇಶಕ್ಕೆ ಶಿಫ್ಟ್‌ ಆಗೋ ಸುಳಿವು ನೀಡಿದ ವಿರಾಟ್‌ ಕೊಹ್ಲಿ!

Anushka Sharma Acting Break: ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ತಮ್ಮ ವೈಯಕ್ತಿಕ ಜೀವನವನ್ನು ಖಾಸಗಿಯಾಗಿಡಲು ಇಷ್ಟಪಡುತ್ತಾರೆ. ಇತ್ತೀಚೆಗೆ ನಟಿ ಎರಡನೇ ಮದುವಿಗೆ ಲಂಡನ್‌ನಲ್ಲಿ ಜನ್ಮ ನೀಡಿದರು.. ಇದೆಲ್ಲದರ ನಡುವೆ ಸದ್ಯದಲ್ಲೇ ಈ ಜೋಡಿ ಭಾರತ ಬಿಟ್ಟು ವಿದೇಶಕ್ಕೆ ಶಿಫ್ಟ್ ಆಗಲಿದೆ ಎಂಬ ಸುದ್ದಿ ಇದೀಗ ಹೊರಬಿದ್ದಿದೆ.. 

1 /5

ಕ್ಯೂಟೆಸ್ಟ್‌ ಕಪಲ್‌ ವಿರಾಟ್‌ ಹಾಗೂ ಅನುಷ್ಕಾ ಇತ್ತೀಚೆಗೆ ಇಬ್ಬರು ಮಕ್ಕಳ ಪೋಷಕರಾಗಿದ್ದಾರೆ.. ಮಗಳು ವಾಮಿಕಾ ಹುಟ್ಟಿದ್ದು ಭಾರತದಲ್ಲಿ.. ಅಕಾಯ್‌ಗೆ ಜನ್ಮ ನೀಡಿದ್ದು ಲಂಡನ್‌ನಲ್ಲಿ.. ಕೆಲವು ದಿನಗಳ ಹಿಂದಷ್ಟೇ ಅನುಷ್ಕಾ ಭಾರತಕ್ಕೆ ಮರಳಿದ್ದಾರೆ..   

2 /5

ಇನ್ನು ಸದ್ಯ ನಡೆಯುತ್ತಿರುವ IPLನಲ್ಲಿ RCB ಟೀಂನಲ್ಲಿ ಆಡುತ್ತಿರುವ ವಿರಾಟ್ ಭರ್ಜರಿ ಪ್ರದರ್ಶನ‌ ನೀಡುತ್ತಿದ್ದಾರೆ.. ಇದೇ ವೇಳೆ ಇವರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಸುದ್ದಿಯೊಂದು ಸಖತ್‌ ವೈರಲ್‌ ಆಗುತ್ತಿದೆ.  

3 /5

ನಟಿ ಅನುಷ್ಕಾ ಝೀರೋ ಚಿತ್ರದ ನಂತರ ಅನುಷ್ಕಾ ಶರ್ಮಾ ಯಾವುದೇ ಚಿತ್ರದಲ್ಲಿ ಕಾಣಿಸಿಕೊಂಡಿಲ್ಲ.. ಮಗ ಹುಟ್ಟಿದಾಗಿನಿಂದಲೂ ಈ ನಟಿ ಸೋಷಿಯಲ್ ಮೀಡಿಯಾದಿಂದ ದೂರ ಉಳಿದಿದ್ದಾರೆ.. ಅಲ್ಲದೇ ಆಕೆ ಬಾಲಿವುಡ್‌ನ ಯಾವುದೇ ಪಾರ್ಟಿಯಲ್ಲಿ ಕಾಣಿಸಿಕೊಂಡಿಲ್ಲ. ನಟಿ ಅನುಷ್ಕಾ ಶರ್ಮಾ ಎರಡು ಮಕ್ಕಳಿಗೆ ಜನ್ಮ ನೀಡಿದರೆ ನಟನೆಯನ್ನು ಬಿಡುತ್ತೇನೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು.   

4 /5

ಇತ್ತೀಚೆಗಷ್ಟೇ ವಿರಾಟ್‌ ಕೊಹ್ಲಿ ತಮ್ಮ ನಿವೃತ್ತಿ ಬಗ್ಗೆ ಮಾತನಾಡಿದ್ದು.."ನನ್ನ ವೃತ್ತಿ ಜೀವನವನ್ನು ಅಪೂರ್ಣವಾಗಿ ಬಿಡಲು ನನಗೆ ಇಷ್ಟವಿಲ್ಲ.. ನನ್ನ ಕೆಲಸ ಇಲ್ಲಿಗೆ ಮುಗಿದಿದೆ ಎಂದಾದರೇ ನಾನೇ ಬಿಟ್ಟು ಹೋಗುವೆ.. ಎಲ್ಲಿಯವರೆಗೂ ನನ್ನಿಂದ ಆಟವಾಡಲು ಸಾಧ್ಯವೋ ಅಲ್ಲಿಯವರೆಗೂ ತಂಡದಲ್ಲಿರುತ್ತೇನೆ.. ನಿವೃತ್ತಿಯ ನಂತರ ಸ್ವಲ್ಪ ಸಮಯ ಎಲ್ಲೂ ಕಾಣಿಸಿಕೊಳ್ಳುವುದಿಲ್ಲ" ಎಂದಿದ್ದಾರೆ..   

5 /5

 ವಿರಾಟ್ ಕೊಹ್ಲಿ ಈ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಅಭಿಮಾನಿಗಳು ಸಾಮಾಜಿಕ ಮಾಧ್ಯಮದಲ್ಲಿ ದಂಪತಿಗಳು ತಮ್ಮ ಇಬ್ಬರು ಮಕ್ಕಳೊಂದಿಗೆ ಶೀಘ್ರದಲ್ಲೇ ವಿದೇಶಕ್ಕೆ ಹೋಗಬಹುದು.. ಅನುಷ್ಕಾ ಶರ್ಮಾ ಬಾಲಿವುಡ್ ಗೆ ಶಾಶ್ವತವಾಗಿ ವಿದಾಯ ಹೇಳುತ್ತಾರೆ ಎಂದು ಊಹಿಸುತ್ತಿದ್ದಾರೆ.. ಸದ್ಯ ಈ ಸುದ್ದಿ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ. ಆದರೆ ಈ ಬಗ್ಗೆ ಅನುಷ್ಕಾ ಕಡೆಯಿಂದ ಯಾವುದೇ ಹೇಳಿಕೆ ಬಂದಿಲ್ಲ.