Amruthadhaare Serial: ಚಿಕ್ಕಮಗಳೂರಿನ ಎಸ್ಟೇಟ್‌ಗಾಗಿ ಗೌತಮ್‌ ವಿರುದ್ಧ ಜೈದೇವ್‌ ಕುತಂತ್ರ: ಮಲ್ಲಿಯ ಪ್ರಾಣ ಅಪಾಯದಲ್ಲಿ!!

Amruthadhaare Kannada Serial: ಅಮೃತಧಾರೆ ಧಾರವಾಹಿಯಲ್ಲಿ ಜೈದೇವ್‌ ಚಿಕ್ಕಮಗಳೂರಿನ ಎಸ್ಟೇಟ್‌ಗಾಗಿ ಒಂದು ಕಡೆ ಗೌತಮ್‌ ವಿರುದ್ಧ ಕುತಂತ್ರ ಮಾಡಿದ್ದಾನೆ ಹಾಗೆಯೇ ತನ್ನ ಹೆಂಡತಿ ಮಲ್ಲಿಯನ್ನು ಕೊಲೆ ಮಾಡಿಸಲು ಕೂಡ ಖತರ್ನಾಕ್‌ ಪ್ಲಾನ್‌ ಮಾಡಿದ್ದಾನೆ. ಇದರ ಕಂಪ್ಲೀಟ್‌ ಸ್ಟೋರಿ ಇಲ್ಲಿದೆ.

Written by - Zee Kannada News Desk | Last Updated : May 17, 2024, 12:30 PM IST
  • ಜೈದೇವ್‌ ಚಿಕ್ಕಮಗಳೂರಿಗೆ ಹೋದ ಗೌತಮ್ ಮತ್ತು ಭೂಮಿಕಾ ಮೇಲೆ ಅಟ್ಯಾಕ್ ಆಗುವಂತೆ ಪ್ಲಾನ್‌ ಮಾಡಿದ್ದಾನೆ.
  • ಮಗನ ಪ್ಲಾನ್‌ ತಿಳಿದ ಮೇಲೆ ಶಕುಂತಲಾಗೆ ತುಂಬಾನೆ ಸಂತೋಷವಾಗುತ್ತದೆ. ಇದಕ್ಕಾಗಿ ಹೆಂಡತಿಯ ಪ್ರಾಣವನ್ನು ಅಪಾಯದಲ್ಲಿರಿಸಿದ್ದಾನೆ.
  • ಜೈದೇವ್‌ ಮಲ್ಲಿಯನ್ನು ನಿಧಾನವಾಗಿ ತನ್ನ ಬಲೆಗೆ ಹಾಕಿಕೊಂಡು, ಅವಳೀಗೆ ಮೋಸ ಮಾಡಲು ಹೊರಟ್ಟಿದ್ದಾನೆ.
Amruthadhaare Serial: ಚಿಕ್ಕಮಗಳೂರಿನ ಎಸ್ಟೇಟ್‌ಗಾಗಿ ಗೌತಮ್‌ ವಿರುದ್ಧ ಜೈದೇವ್‌ ಕುತಂತ್ರ: ಮಲ್ಲಿಯ ಪ್ರಾಣ ಅಪಾಯದಲ್ಲಿ!! title=

Jaidev Plots Against Gautham For Estate: ಜೀ ಕನ್ನಡದಲ್ಲಿ ಪ್ರಸ್ತುತ ಪ್ರಸಾರವಾಗುತ್ತಿರುವ ಅಮೃತಧಾರೆ ಧಾರವಾಹಿಯಲ್ಲಿ ಜೈದೇವ್‌ ಚಿಕ್ಕಮಗಳೂರಿನ ಎಸ್ಟೇಟ್‌ ಪಡೆಯುವುದಕ್ಕಾಗಿ ತನ್ನ ಅಣ್ಣ ಗೌತಮ್‌ ವಿರುದ್ಧ ಕುತಂತ್ರ ಮಾಡಿದ್ದಾರೆ.  ಜೈದೇವ್‌ ತನ್ನ ತಾಯಿ ಶಕುಂತಲಾ ಮನದಲ್ಲಿದ್ದ ಪ್ಲಾನ್‌ ಅನ್ನು ಜಾರಿಗೆ ತಂದಿದ್ದಾನೆ. ಆತ ಗೌತಮ್ ವಿರುದ್ಧ ಕೆಂಚನನ್ನು ಎತ್ತಿಕಟ್ಟಿ, ಹಣ ಕೊಟ್ಟು ಗಲಾಟೆ ಮಾಡಿಸಲು ಉಪಾಯ ಮಾಡಿದ್ದಾನೆ ಅಷ್ಟೇ ಅಲ್ಲೆದೆ ಚಿಕ್ಕಮಗಳೂರಿಗೆ ಹೋದ  ಗೌತಮ್ ಮತ್ತು ಭೂಮಿಕಾ ಮೇಲೆ ಅಟ್ಯಾಕ್ ಆಗುವಂತೆ ಪ್ಲಾನ್‌ ಮಾಡಿದ್ದಾನೆ.

ಹೌದು.. ಜೈದೇವ್‌ ಪ್ಲಾನ್‌ ಪ್ರಕಾರ ಗೌತಮ್ ಮತ್ತು ಭೂಮಿಕಾ ಮೇಲೆ ಅಟ್ಯಾಕ್  ಆದಾಗ, ಅಲ್ಲಿಗೆ ತಾನೆ ಹೋಗಿ ಕಾಪಾಡುತ್ತಾನೆ. ಅಷ್ಟೇ ಅಲ್ಲದೇ ಜಮೀನಿನ ಸಮಸ್ಯೆಯನ್ನು  ಜೈದೇವ ತಾನೆ ಬಗೆಹರಿಸಿ, ನಂತರ ಗೌತಮ್  ಆ ಚಿಕ್ಕಮಗಳೂರಿನ ಎಸ್ಟೇಟ್ ಮತ್ತು ಕಾಫಿ ತೋಟವನ್ನು ತನ್ನ ಹೆಸರಿಗೆ ಬರೆಯಬೇಕೆಂಬುದು ಆತನ ಪ್ಲಾನ್ ಆಗಿದೆ. ಮಗನ ಪ್ಲಾನ್‌ ತಿಳಿದ ಮೇಲೆ ಶಕುಂತಲಾಗೆ ತುಂಬಾನೆ ಸಂತೋಷವಾಗುತ್ತದೆ. ಇದಕ್ಕಾಗಿ ಹೆಂಡತಿಯ ಪ್ರಾಣವನ್ನು ಅಪಾಯದಲ್ಲಿರಿಸಿದ್ದಾನೆ.

ಇದನ್ನೂ ಓದಿ: Prabhas: ಕೋಟಿ ಕೋಟಿ ಸಂಭಾವನೆ ಪಡೆಯುವ ಡಾರ್ಲಿಂಗ್‌ ಪ್ರಭಾಸ್‌ ʻಕಣ್ಣಪ್ಪʼ ಚಿತ್ರದಲ್ಲಿ ಫ್ರೀಯಾಗಿ ನಟಿಸಲಿದ್ದಾರೆ: ಕಾರಣವೇನು ಗೊತ್ತೇ??

ಜೈದೇವ್‌ ಮಲ್ಲಿಯನ್ನು ಇಷ್ಟವಿಲ್ಲದೆ ಮದುವೆಯಾಗಿದ್ದು, ಮೊದಲ ಮೊದಲು ಆತನಿಗೆ ಮಲ್ಲಿಯ ಮುಖ ಕಂಡರೆ ಆಗುತ್ತಿರಲಿಲ್ಲ. ಆದರೆ ಜೈದೇವ್‌ ಪ್ರೀತಿಯ ನಾಟಕವಾಡುತ್ತಿದ್ದಾನೆ. ಆತ ಮಲ್ಲಿಯನ್ನು ನಿಧಾನವಾಗಿ ತನ್ನ ಬಲೆಗೆ ಹಾಕಿಕೊಂಡು, ಅವಳೀಗೆ ಮೋಸ ಮಾಡಲು ಹೊರಟ್ಟಿದ್ದಾನೆ. ಗಂಡ ತೋರಿಸಿರುವ ನಾಟಕದ ಪ್ರೀತಿಯನ್ನು ಮಲ್ಲಿ ಸಂಪೂರ್ಣವಾಗಿ ನಂಬಿದ್ದಾಳೆ. ಮಲ್ಲಿ ಭೂಮಿಕಾ ಮಾತನ್ನು ಮೀರಿ ಜೈದೇವನನ್ನು ನಂಬಿರುವುದನ್ನು ನೋಡಿದರೆ, ಆಕೆಯ ಜೀವಕ್ಕೆ ಅಪಾಯ ಬರುವ ಸಾಧ್ಯತೆ ಹೆಚ್ಚಾಗಿದೆ.

ಆಫೀಸಿಗೆ ಹೋಗುವ ನೆಪದಲ್ಲಿ ಜೈದೇವ ರೌಡಿಗಳೊಂದಿಗೆ ಸೇರಿಕೊಂಡು  ಒಂದು ಕಿಡ್ನ್ಯಾಪ್ ಪ್ಲಾನ್‌ ಮಾಡಿದ್ದಾನೆ. ಆತನ ಪ್ಲಾನ್‌ ಪ್ರಕಾರ ಫೈಲ್‌ ಒಂದಕ್ಕಾಗಿ ಜೈದೇವ್‌ನನ್ನು ರೌಡಿಗಳು ಕಿಡ್ನ್ಯಾಪ್ ಮಾಡುತ್ತಾರೆ. ನಂತರ ಗಂಡನನ್ನು ಉಳಿಸಲು ಮಲ್ಲಿ ಬಂದಾಗಾ ಆಕೆಯನ್ನು ಲಾಕ್ ಮಾಡಿ, ಅವಳನ್ನು ಹೊಡೆದು ಕೊಲೆ ಮಾಡುವ ಪ್ಲಾನ್‌ ಮಾಡಿದ್ದಾನೆ. ಆಗ ಜೈದೇವನ ಬಗ್ಗೆ ಯಾರಿಗೂ ಸ್ವಲ್ಪವೂ ಅನುಮಾನ ಬರುದಿಲ್ಲವೆಂದು ಉಪಾಯ ಮಾಡಿದ್ದಾನೆ. ಮುಂದೆ ಜೈದೇವನ ಪ್ಲಾನ್‌ ಸಕ್ಸಸ್ ಆಗುತ್ತಾ? ಇಲ್ಲ ಭೂಮಿಕಾ ಮತ್ತೆ ಬಂದು ಮಲ್ಲಿಯನ್ನು ಕಾಪಾಡುತ್ತಾಳಾ ಎಂಬುದನ್ನು ಮುಂಬರುವ ಸಂಚಿಯಲ್ಲಿ ನೋಡಬೇಕಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News