Comedy Khiladigalu Premier League: ಹೊಸ ಅವತಾರದಲ್ಲಿ ಬರುತಿದೆ ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್

Comedy Khiladilu Premier League: ಶೋನ ಹೆಸರೇ ಹೇಳುವಂತೆ ಇಲ್ಲಿ ನಗುವಿನ ಲೀಗ್‌ ಮ್ಯಾಚ್‌ ನಡೆಯಲ್ಲಿದ್ದು ಇಲ್ಲಿ ಟೀ ಟ್ವಂಟಿ ಮ್ಯಾಚುಗಳಲ್ಲಿ ಇರುವಂತೆ ತಂಡಗಳು ,ಮಾಲೀಕರು,ಕ್ಯಾಪ್ಟನ್‌ಗಳು ಇದ್ದು ಕ್ರಿಕೇಟಿಗರನ್ನ ಹರಾಜು ಪ್ರಕ್ರಿಯೆಯಲ್ಲಿ ಕೊಂಡುಕೊಳ್ಳುವಂತೆ ಇಲ್ಲೂ ಕೂಡ ಕರ್ನಾಟಕದ ಮೂವತ್ತೊಂದು ಜಿಲ್ಲೆಗಳಿಂದ ಆಯ್ದು ತಂದ ಕಲಾವಿದರನ್ನ ಮೆಗಾ ಆಕ್ಷನ್‌ ಮೂಲಕ ತಮ್ಮ ತಂಡಗಳಿಗೆ ಸೇರಿಸಿಕೊಳ್ಳುವ ಕೆಲಸ ನಡೆಯಲಿದ್ದು, ಇಲ್ಲಿ ಐದು ತಂಡಗಳು ಒಂದು ಟ್ರೋಫಿಗಾಗಿ ಹಣಾಹಣಿ ನಡೆಸಲಿದೆ.

Written by - Zee Kannada News Desk | Last Updated : Apr 24, 2024, 09:14 PM IST
  • ಕಾರ್ಯಕ್ರಮದ ಬಗ್ಗೆ ಸಣ್ಣ ಸುಳಿವೊಂದನ್ನ ಬಿಟ್ಟುಕೊಟ್ಟಿರುವ ZEE ಕನ್ನಡ ವಾಹಿನಿಯ ಪ್ರಕಾರ,
  • ಪ್ರತಿವಾರ ಒಂದು ಲಕ್ಷಮೌಲ್ಯದ ನಗದು ಬಹುಮಾನವನ್ನ ಗೆಲ್ಲುವ ಅವಕಾಶವನ್ನ ಈ ಕಾರ್ಯಕ್ರಮದಲ್ಲಿ ನೀಡಲಾಗಿದ್ದು
  • ಇದು ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್ನ ವಿಶೇಷತೆಗಳಲ್ಲಿ ಒಂದಾಗಿದೆ.
Comedy Khiladigalu Premier League: ಹೊಸ ಅವತಾರದಲ್ಲಿ ಬರುತಿದೆ ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್ title=

ಕರ್ನಾಟಕವನ್ನ ಸತತವಾಗಿ ನಗಿಸುತ್ತ ಬಂದಿರುವ ZEE ಕನ್ನಡ ವಾಹಿನಿಯ ಜನಮೆಚ್ಚಿದ ರಿಯಾಲಿಟಿ ಶೋ, ಕಾಮಿಡಿ ಕಿಲಾಡಿಗಳು ಈ ಬಾರಿ ಹೊಸ ಅವತಾರದಲ್ಲಿ ಪ್ರೇಕ್ಷಕರು ಮುಂದೆ ಬರಲಿದೆ. ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ ಹೆಸರಿನಲ್ಲಿ ವೀಕೆಂಡಲ್ಲಿ ನಗುವಿನ ಟಾನಿಕ್‌ ನೀಡೋಕೆ ಸಿದ್ದವಾಗಿರುವ ಈ ಶೋನಲ್ಲಿ ನಗುವಿನ ಮಹಾಯುದ್ದ ನಡೆಯೋದಿದೆ.ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಮೂಲಕ ಈಗಾಲೇ ಸಾಕಷ್ಟು ಹಾಸ್ಯ ಕಲಾವಿದರನ್ನ ಕನ್ನಡ ಚಿತ್ರರಂಗಕ್ಕೆ ನೀಡಿರುವ ZEE ಕನ್ನಡ ವಾಹಿನಿ, ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ ಮೂಲಕ ಮನೋರಂಜನೆಯನ್ನ ಮತ್ತಷ್ಟು ಹೆಚ್ಚು ಮಾಡವುದರ ಜೊತೆಗೆ ಮತ್ತಷ್ಟು ಹಾಸ್ಯ ಕಲಾವಿದರನ್ನ ಕರುನಾಡಿಗೆ ಪರಿಚಯಿಸುವ ಕೆಲಸ ಮಾಡಲಿದೆ.

ಇದನ್ನೂ ಓದಿ: ಅಫಜಲಪುರ ಹಾಗೂ ಆಳಂದದಲ್ಲಿ ಕಾಂಗ್ರೆಸ್‌ ಸಮಾವೇಶ

ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ಜನರ ಮನಸ್ಸನ್ನ ಗೆದ್ದು, ಲಕ್ಷಾಂತರ ವೀಕ್ಷಕಣೆ ಕಂಡಿರುವ ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್‌ ಪ್ರೋಮೋ, ಕಾರ್ಯಕ್ರಮದ ಬಗ್ಗೆ ಇರುವ ಕುತೂಹಲವನ್ನ ಹಿನ್ನಷ್ಟು ಹೆಚ್ಚು ಮಾಡಿದೆ.ತಮ್ಮ ಮಾತುಗಳ ಮೂಲಕ ಜನರನ್ನ ಮಂತ್ರ ಮುಗ್ದರನ್ನಾಗಿ ಮಾಡಿದ ಕರ್ನಾಟಕದ  ಶ್ರೇಷ್ಟ ನಿರೂಪಕರುಗಳಾದ ಅನುಶ್ರೀ,ಮಾಸ್ಟರ್‌ ಆನಂದ್‌,ಅಕುಲ್‌,ಶ್ವೇತಾ ಚಂಗಪ್ಪ ಮತ್ತು ಕುರಿಪ್ರತಾಪ್‌ ಈ ಶೋನಲ್ಲಿ ಹೊಸ ಜವಾಬ್ದಾರಿಯೊಂದಿಗೆ ಹೊಸ ರೂಪದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ.ಈ ಕಾರ್ಯಕ್ರಮ ಮುಖ್ಯ ಆರ್ಕಷಣೆಗಳಲ್ಲಿ ಒಂದಾಗಿರುವ ನವರಸ ನಾಯಕ ಜಗ್ಗೇಶ್ ಈಗಾಗಲೇ ಜನರ ತಲೆಯಲ್ಲಿ ಹೊಸ ಯೋಚನಯೊಂದನ್ನ ಪ್ರೋಮೋ ಮೂಲಕ ಬಿಟ್ಟಿದ್ದು, ಇಲ್ಲಿ ನಗಿಸ್ತಾರೆ ನಗಬಾರದು ಅಂತ ಹೇಳುವ ಮೂಲಕ ಕಾರ್ಯಕ್ರಮದ ಬಗ್ಗೆ ಜನರಿಗಿರುವ ಕುತೂಹಲವನ್ನ ಮತ್ತಷ್ಟು ಜಾಸ್ತಿ ಮಾಡಿದ್ದಾರೆ.

ಇದನ್ನೂ ಓದಿ: Loksabha Election 2024: ಮತಗಟ್ಟೆ ಸಿಬ್ಬಂದಿಯ ಅಂತಿಮ ಹಂತದ ರ‍್ಯಾಂಡಮೈಸೇಷನ್

ಶೋನ ಹೆಸರೇ ಹೇಳುವಂತೆ ಇಲ್ಲಿ ನಗುವಿನ ಲೀಗ್‌ ಮ್ಯಾಚ್‌ ನಡೆಯಲ್ಲಿದ್ದು ಇಲ್ಲಿ ಟೀ ಟ್ವಂಟಿ ಮ್ಯಾಚುಗಳಲ್ಲಿ ಇರುವಂತೆ ತಂಡಗಳು ,ಮಾಲೀಕರು,ಕ್ಯಾಪ್ಟನ್‌ಗಳು ಇದ್ದು ಕ್ರಿಕೇಟಿಗರನ್ನ ಹರಾಜು ಪ್ರಕ್ರಿಯೆಯಲ್ಲಿ ಕೊಂಡುಕೊಳ್ಳುವಂತೆ ಇಲ್ಲೂ ಕೂಡ ಕರ್ನಾಟಕದ ಮೂವತ್ತೊಂದು ಜಿಲ್ಲೆಗಳಿಂದ ಆಯ್ದು ತಂದ ಕಲಾವಿದರನ್ನ ಮೆಗಾ ಆಕ್ಷನ್‌ ಮೂಲಕ ತಮ್ಮ ತಂಡಗಳಿಗೆ ಸೇರಿಸಿಕೊಳ್ಳುವ ಕೆಲಸ ನಡೆಯಲಿದ್ದು, ಇಲ್ಲಿ ಐದು ತಂಡಗಳು ಒಂದು ಟ್ರೋಫಿಗಾಗಿ ಹಣಾಹಣಿ ನಡೆಸಲಿದೆ.

ಕಾರ್ಯಕ್ರಮದ ಬಗ್ಗೆ ಸಣ್ಣ ಸುಳಿವೊಂದನ್ನ ಬಿಟ್ಟುಕೊಟ್ಟಿರುವ ZEE ಕನ್ನಡ ವಾಹಿನಿಯ ಪ್ರಕಾರ, ಈ ಶೋನಲ್ಲಿ ತಂಡವಾಗಿ ಪ್ರರ್ದಶನ ನೀಡುವ ಕಲಾವಿದರಿಗೆ ವೀಕೆಂಡಿನಲ್ಲಿ ಅವರ ಪ್ರರ್ದಶನ ಆಧಾರದ ಮೇಲೆ ಪ್ರತಿವಾರ ಒಂದು ಲಕ್ಷಮೌಲ್ಯದ ನಗದು ಬಹುಮಾನವನ್ನ ಗೆಲ್ಲುವ ಅವಕಾಶವನ್ನ ಈ ಕಾರ್ಯಕ್ರಮದಲ್ಲಿ ನೀಡಲಾಗಿದ್ದು ಇದು ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್ನ ವಿಶೇಷತೆಗಳಲ್ಲಿ ಒಂದಾಗಿದೆ.

ಪಂಚ ಪಾಂಡವರಂತೆ ಇರುವ ಐದು ನಿರೂಪಕರು ಇಲ್ಲಿ ಹೊಸ ಜವಾಬ್ದಾರಿಯನ್ನ ಹೊತ್ತಿರುವ ಕಾರಣ  ಹೊಸ ನಿರೂಪಕರನ್ನ ಈ ಕಾರ್ಯಕ್ರಮದ ಮೂಲಕ ZEE ಕನ್ನಡ ವಾಹಿನಿ ತೆರೆಗೆ ತರುವ ಪ್ರಯತ್ನ ಮಾಡಲಿದ್ದು, ಯಾರು ಆ ಹೊಸ ನಿರೂಪಕರು ಎಂಬ ಪ್ರಶ್ನಗೆ ಉತ್ತರವನ್ನ ಇದೇ ಶನಿವಾರ ಮತ್ತು ಭಾನುವಾರ ರಾತ್ರಿ 9.00ಕ್ಕೆ ಪ್ರಸಾರವಾಗುವ ಕಾಮಿಡಿ ಕಿಲಾಡಿಗಳು ಪ್ರೀಮಿಯರ್‌ ಲೀಗ್ನ ಮೊದಲ ಸಂಚಿಕೆ ನೀಡಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

Trending News