ದೇಹದಲ್ಲಿ ಈ ವಿಟಮಿನ್ ಕೊರತೆಯಾದರೆ ಲೆಕ್ಕಕಿಂತ ಹೆಚ್ಚು ನಿದ್ದೆ ಬರುವುದು !

Excessive Sleepiness:ಕೆಲವರು ಸುಮ್ಮನೆ ಕುಳಿತರೂ ನಿದ್ದೆಗೆ ಜಾರಿ ಬಿಡುತ್ತಾರೆ. ಇದಕ್ಕೆ ಅವರ ದೇಹದಲ್ಲಿ ಕೆಲವು ವಿಟಮಿನ್ ಗಳ ಕೊರತೆಯಾಗಿರುವುದೇ ಕಾರಣ.  ಹಾಗಿದ್ದರೆ ದೇಹದಲ್ಲಿ ಯಾವ ವಿಟಮಿನ್ ಕೊರತೆಯಾದರೆ ಲೆಕ್ಕಕ್ಕಿಂತ ಜಾಸ್ತಿ ನಿದ್ದೆ ಬರುತ್ತದೆ. 

Written by - Ranjitha R K | Last Updated : May 3, 2024, 03:55 PM IST
  • ದಿನವಿಡೀ ಮಲಗಿಕೊಂಡೇ ಇರಬೇಕು ಅನ್ನಿಸುತಿದೆಯೇ?
  • ಹಾಗಿದ್ದರೆ ಇದರ ಹಿಂದೆ ಕೆಲವು ಸಮಸ್ಯೆಗಳಿರಬಹುದು.
  • ಪೋಷಕಾಂಶಗಳ ಕೊರತೆ ಉಂಟಾದರೆ ಪದೇ ಪದೇ ನಿದ್ದೆ ಬರುತ್ತದೆ.
ದೇಹದಲ್ಲಿ ಈ ವಿಟಮಿನ್ ಕೊರತೆಯಾದರೆ ಲೆಕ್ಕಕಿಂತ ಹೆಚ್ಚು ನಿದ್ದೆ ಬರುವುದು ! title=

Excessive Sleepiness : ನಿಮಗೂ ದಿನವಿಡೀ ಮಲಗಿಕೊಂಡೇ ಇರಬೇಕು ಅನ್ನಿಸುತಿದೆಯೇ? ಕುಳಿತಲ್ಲಿಯೇ ನಿದ್ದೆ ಆವರಿಸಿ ಬಿಡುತ್ತದೆಯೇ ?  ಹಾಗಿದ್ದರೆ ಇದರ ಹಿಂದೆ ಕೆಲವು ಸಮಸ್ಯೆಗಳಿರಬಹುದು.ದೇಹದಲ್ಲಿ ಕೆಲವು ಪೋಷಕಾಂಶಗಳ ಕೊರತೆ ಉಂಟಾದರೆ ಪದೇ ಪದೇ ನಿದ್ದೆ ಬರುತ್ತದೆ.ನಮ್ಮ ದೇಹದಲ್ಲಿ ಹಲವಾರು ಜೀವಸತ್ವಗಳಿವೆ. ನಿಮ್ಮ ನಿದ್ರೆಯ ಮೇಲೆ ಇದು ಒಂದಲ್ಲ ಒಂದು ರೀತಿಯಲ್ಲಿ ಇದು ಪರಿಣಾಮ ಬೀರುತ್ತದೆ.ಕೆಲವರು ಸುಮ್ಮನೆ ಕುಳಿತರೂ ನಿದ್ದೆಗೆ ಜಾರಿ ಬಿಡುತ್ತಾರೆ. ಇದಕ್ಕೆ ಅವರ ದೇಹದಲ್ಲಿ ಕೆಲವು ವಿಟಮಿನ್ ಗಳ ಕೊರತೆಯಾಗಿರುವುದೇ ಕಾರಣ.  ಹಾಗಿದ್ದರೆ ದೇಹದಲ್ಲಿ ಯಾವ ವಿಟಮಿನ್ ಕೊರತೆಯಾದರೆ ಲೆಕ್ಕಕ್ಕಿಂತ ಜಾಸ್ತಿ ನಿದ್ದೆ ಬರುತ್ತದೆ. 

ವಿಟಮಿನ್ ಬಿ 12 :
ದೇಹದಲ್ಲಿ ವಿಟಮಿನ್ ಬಿ 12 ಕೊರತೆಯಿಂದಾಗಿ, ವ್ಯಕ್ತಿ ಬಹಳ ನಿದ್ದೆ ಮಾಡಲು ಪ್ರಾರಂಭಿಸುತ್ತಾನೆ. ವಿಟಮಿನ್ ಬಿ 12 ನಮ್ಮ ದೇಹದಲ್ಲಿ ಕೆಂಪು ರಕ್ತ ಕಣಗಳ ರಚನೆಗೆ ಸಹಾಯ ಮಾಡುತ್ತದೆ. ಈ ಜೀವಕೋಶಗಳು ನಮ್ಮ ದೇಹದಲ್ಲಿ ಆಮ್ಲಜನಕ ಮತ್ತು ಪೋಷಕಾಂಶಗಳ ಉತ್ತಮ ಹರಿವನ್ನು ಒದಗಿಸುತ್ತವೆ.ಅಂತಹ ಪರಿಸ್ಥಿತಿಯಲ್ಲಿ, ವಿಟಮಿನ್ ಬಿ 12 ಕೊರತೆಯಾದರೆ ಅದು ಕೆಂಪು ರಕ್ತ ಕಣಗಳ ಮೇಲೆ ಪರಿಣಾಮ ಬೀರುತ್ತವೆ. ಹಾಗಾಗಿ ತುಂಬಾ ನಿದ್ದೆ ಮಾಡಲು ಪ್ರಾರಂಭಿಸುತ್ತಾರೆ.ಬೀನ್ಸ್ ಮತ್ತು ಬಟಾಣಿಗಳಂತಹ ವಸ್ತುಗಳಿಂದ ವಿಟಮಿನ್ ಬಿ 12 ಅನ್ನು ಪೂರೈಸಬಹುದು.  

ಇದನ್ನೂ ಓದಿ : ಒಂದು ಲೋಟ ಹಾಲಿಗೆ ಈ ಪುಡಿ ಬೆರೆಸಿ ಕುಡಿದರೆ ಬ್ಲಡ್ ಶುಗರ್ ಸಂಪೂರ್ಣ ನಾರ್ಮಲ್ ಆಗುತ್ತೆ! ಯಾವ ಔಷಧಿಯೂ ಬೇಕಿಲ್ಲ!

ವಿಟಮಿನ್ ಡಿ : 
ದೇಹದಲ್ಲಿ ವಿಟಮಿನ್ ಡಿ ಕೊರತೆಯಿಂದಾಗಿ, ಅತಿಯಾಗಿ ನಿದ್ದೆ ಬರುತ್ತದೆ.ಇದರ ಕೊರತೆಯು ನಿಮ್ಮ ಮೂಳೆಗಳು, ಚರ್ಮ ಮತ್ತು ಕೂದಲಿನ ಮೇಲೆ ಮಾತ್ರ ಪರಿಣಾಮ ಬೀರುವುದಿಲ್ಲ.ಬದಲಿಗೆ,ಇದು ಆಯಾಸ ಮತ್ತು ಸೋಮಾರಿತನವನ್ನು ಕೂಡಾ  ಉಂಟುಮಾಡುತ್ತದೆ. ವಿಟಮಿನ್ ಡಿ ಕೊರತೆ ಹೋಗಲಾಡಿಸಲು ಮೊಟ್ಟೆ, ಮೀನು ಮತ್ತು ಹಾಲನ್ನು ಸೇವಿಸಬಹುದು.

ವಿಟಮಿನ್ ಸಿ  :
ದೇಹದಲ್ಲಿ ವಿಟಮಿನ್ ಸಿ ಕೊರತೆಯಿಂದಾಗಿ ಸ್ನಾಯುಗಳ ಪರಿಣಾಮ ಬೀರುತ್ತವೆ. ಇದು ಶಕ್ತಿಯ ಮೇಲೂ ಪರಿಣಾಮ ಬೀರುತ್ತದೆ.ಯಾವುದೇ ಕೆಲಸ ಮಾಡದಿದ್ದರೂ ದಣಿವಾಗುತ್ತದೆ.ಈ ಕೊರತೆ ನೀಗಿಸಲು ಸಿಟ್ರಸ್ ಹಣ್ಣುಗಳು, ನಿಂಬೆ ಮುಂತಾದ ವಿಟಮಿನ್ ಸಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸಬೇಕು.

ಐರನ್ ಕೊರತೆ : 
ಜೀವಸತ್ವಗಳ ಜೊತೆಗೆ, ಕೆಲವು ಖನಿಜಗಳ ಕೊರತೆ ಎದುರಾದರೂ ಯು ರೋಗಿಗಳಲ್ಲಿ ಅತಿಯಾದ ನಿದ್ರೆಗೆ ಕಾರಣವಾಗಬಹುದು.ದೇಹದಲ್ಲಿ ಐರನ್ ಕೊರತೆ ಎದುರಾದರೆ ಬಹಳಷ್ಟು ಆಯಾಸ, ದೌರ್ಬಲ್ಯ ಮತ್ತು ಸೋಮಾರಿತನ ಕಾಡುತ್ತದೆ. ಐರನ್ ಕೊರತೆ ನೀಗಿಸಲು ಬೀಟ್ರೂಟ್,ದಾಳಿಂಬೆ, ಧಾನ್ಯಗಳನ್ನು ಸೇವಿಸಬೇಕು.  

ಇದನ್ನೂ ಓದಿ : ಕೆಮಿಕಲ್ ಹಾಕಿ ಹಣ್ಣಾಗಿಸಿದ ಮಾವನ್ನು ಗುರುತಿಸುವ ಸುಲಭ ಉಪಾಯ ಇದು !

ಮೆಗ್ನೀಸಿಯಮ್ ಕೊರತೆ : 
ಅನೇಕ ಬಾರಿ, ಮೆಗ್ನೀಸಿಯಮ್ ಕೊರತೆಯಿಂದಾಗಿ, ರೋಗಿಗಳು ತುಂಬಾ ನಿದ್ದೆ ಮಾಡಲು ಪ್ರಾರಂಭಿಸುತ್ತಾರೆ.ದೇಹದಲ್ಲಿ ಈ ಚಿಹ್ನೆ ಕಾಣಿಸುತ್ತಿದ್ದರೆ ಆಹಾರದಲ್ಲಿ ಮೆಗ್ನೀಸಿಯಮ್ ಅನ್ನು ಸೇರಿಸಿ.ಇದಕ್ಕಾಗಿ ಬೀಜಗಳು,ಬಾದಾಮಿ,ಧಾನ್ಯಗಳು ಮತ್ತು ದ್ವಿದಳ ಧಾನ್ಯಗಳನ್ನು ಸೇರಿಸಬೇಕು.

(ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News