ಕರೀನಾ ಹೋದ್ರೆ ಏನಂತೆ... ಯಶ್ ಸಿನಿಮಾಗೆ ಎಂಟ್ರಿ ಕೊಟ್ರು ಸೌತ್ ಲೇಡಿ ಸೂಪರ್ ಸ್ಟಾರ್..!

Yash Toxic movie updates : ಯಶ್‌ ಕೆಜಿಎಫ್, ಕೆಜಿಎಫ್ 2 ಚಿತ್ರಗಳ ಮೂಲಕ ಅಂತರರಾಷ್ಟ್ರೀಯ ಗಮನ ಸೆಳೆದರು. ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾ ಕನ್ನಡ ಚಿತ್ರರಂಗವನ್ನು ನೆಕ್ಸ್‌ ಲೆವೆಲ್‌ಗೆ ಕರೆದುಕೊಂಡು ಹೋಯಿತು. ಇದೀಗ ಟಾಕ್ಸಿಕ್‌ ಸಿನಿಮಾದ ಮೂಲಕ ಸಾಕಷ್ಟು ಸಮಯದ ನಂತರ ರಾಕಿ ಕಮ್‌ಬ್ಯಾಕ್‌ ಮಾಡಿದ್ದಾರೆ.

Written by - Krishna N K | Last Updated : May 4, 2024, 08:47 AM IST
    • ಯಶ್ ʼಟಾಕ್ಸಿಕ್‌ʼ ಸಿನಿಮಾದ ಮೂಲಕ ತೆರೆ ಮೇಲೆ ಬರುತ್ತಿದ್ದಾರೆ.
    • ಇದೀಗ ಈ ಸಿನಿಮಾಗೆ ಸಂಬಂಧಿಸಿ ಬಿಗ್‌ ಅಪ್‌ ಡೇಟ್‌ ಹೊರಬಿದ್ದಿದೆ.
    • ಲೇಡಿ ಸೂಪರ್‌ ಸ್ಟಾರ್‌ ಈ ಚಿತ್ರತಂಡವನ್ನು ಸೇರಲಿದ್ದಾರೆ ಎಂದು ತಿಳಿದು ಬಂದಿದೆ.
ಕರೀನಾ ಹೋದ್ರೆ ಏನಂತೆ... ಯಶ್ ಸಿನಿಮಾಗೆ ಎಂಟ್ರಿ ಕೊಟ್ರು ಸೌತ್ ಲೇಡಿ ಸೂಪರ್ ಸ್ಟಾರ್..! title=

Nayanthara in Toxic movie : ಕೆಜಿಎಫ್‌ನ ದೊಡ್ಡ ಯಶಸ್ಸಿನ ನಂತರ, ಯಶ್ ʼಟಾಕ್ಸಿಕ್‌ʼ ಸಿನಿಮಾದ ಮೂಲಕ ತೆರೆ ಮೇಲೆ ಬರುತ್ತಿದ್ದಾರೆ. ಇದೀಗ ಈ ಸಿನಿಮಾಗೆ ಸಂಬಂಧಿಸಿ ಬಿಗ್‌ ಅಪ್‌ ಡೇಟ್‌ ಒಂದು ಹೊರಬಿದ್ದಿದ್ದು, ಲೇಡಿ ಸೂಪರ್‌ ಸ್ಟಾರ್‌ ಈ ಚಿತ್ರತಂಡವನ್ನು ಸೇರಲಿದ್ದಾರೆ ಎಂದು ತಿಳಿದು ಬಂದಿದೆ.. ಈ ಕುರಿತ ಇಂಟ್ರಸ್ಟಿಂಗ್‌ ಮಾಹಿತಿ ಇಲ್ಲಿದೆ..

ಹೌದು... ಯಶ್ ಅಭಿನಯದ ಟಾಕ್ಸಿಕ್‌ ಸಿನಿಮಾ ಟೈಟಲ್‌ನಿಂದಲೇ ಸಖತ್‌ ಸದ್ದು ಮಾಡುತ್ತಿದೆ. ಈ ಸಿನಿಮಾದ ಅಪ್‌ಡೇಟ್ಸ್‌ಗಾಗಿ ರಾಕಿ ಅಭಿಮಾನಿಗಳು ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ. ಇದೀಗ ಈ ಚಿತ್ರಕ್ಕೆ ಸಂಬಂಧಿಸಿ ಹೊಸ ಸುದ್ದಿಯೊಂದು ಹೊರಬಿದ್ದಿದೆ. ಈ ಕುರಿತ ಸಂಪೂರ್ಣ ವಿವರ ಇಲ್ಲಿದೆ.

ಇದನ್ನೂ ಓದಿ:ಆಸ್ಪತ್ರೆಯ ಬೆಡ್‌ ಮೇಲೆಯೇ ಆ ವ್ಯಕ್ತಿ ಜೊತೆ ಮಲಗಿದ ಬಿಗ್‌ ಬಾಸ್‌ ಸುಂದರಿ..! ಫೋಟೋ ವೈರಲ್‌

ಯಶ್‌ ಕೆಜಿಎಫ್, ಕೆಜಿಎಫ್ 2 ಚಿತ್ರಗಳ ಮೂಲಕ ಅಂತರರಾಷ್ಟ್ರೀಯ ಗಮನ ಸೆಳೆದರು. ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾ ಕನ್ನಡ ಚಿತ್ರರಂಗವನ್ನು ನೆಕ್ಸ್‌ ಲೆವೆಲ್‌ಗೆ ಕರೆದುಕೊಂಡು ಹೋಯಿತು. ಈ ಸಿನಿಮಾದ ಮೂಲಕ ರಾಕಿ ಭಾಯ್‌ ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಮಿಂಚಿದರು. ಕೆಜಿಎಫ್ 2 ಬಾಕ್ಸ್ ಆಫೀಸ್ ನಲ್ಲಿ ಭರ್ಜರಿ ಹಿಟ್ ಆಗಿತ್ತು.

‘ಕೆಜಿಎಫ್’ ಭರ್ಜರಿ ಯಶಸ್ಸಿನ ನಂತರ ನಟ ಯಶ್ ಅವರ ಮುಂದಿನ ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿದೆ. 'ಕೆಜಿಎಫ್' ಚಿತ್ರದ ಮೂಲಕ ಭಾರತದಾದ್ಯಂತ ಖ್ಯಾತಿ ಗಳಿಸಿದ ಯಶ್, ತಮ್ಮ ಮುಂದಿನ ಚಿತ್ರದ ಕಥೆಯನ್ನು ಆಯ್ಕೆ ಮಾಡುವಲ್ಲಿ ಹೆಚ್ಚು ಗಮನಹರಿಸಿದ್ದರು. ಅದರಂತೆ ಇತ್ತೀಚೆಗೆ ಯಶ್ ಅವರ 19ನೇ ಚಿತ್ರವನ್ನು ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ನಿರ್ದೇಶಿಸಲಿದ್ದಾರೆ ಎಂಬ ಅಧಿಕೃತ ಪ್ರಕಟಣೆ ಹೊರಬಿದ್ದಿದೆ. 

ಇದನ್ನೂ ಓದಿ:ಯಶ್‌ 'ಟಾಕ್ಸಿಕ್' ಸಿನಿಮಾದಿಂದ ಹಿಂದೆ ಸರಿದ ಕರೀನಾ ಕಪೂರ್..! ಇದಕ್ಕೆ ಆ ವಿಚಾರವೇ ಕಾರಣ..?

ಗೀತು ಸತ್ಯರಾಜ್ ಅಭಿನಯದ ತಮಿಳಿನ ‘ಬೊಮ್ಮುಕುಟ್ಟಿ ಅಮ್ಮಾವುಕು’ ಚಿತ್ರದಲ್ಲಿ ಬಾಲನಟಿಯಾಗಿ ನಟಿಸಿದ್ದರು. ನಂತರ ಮಾಧವನ್ ಅಭಿನಯದ ‘ನಳ ದಮಯಂತಿ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಇದಲ್ಲದೆ, ಅವರು 2019 ರಲ್ಲಿ ಮಲಯಾಳಂನಲ್ಲಿ ನಿವಿನ್ ಪೌಲಿ ಅಭಿನಯದ 'ಮೂತೊನ್' ಚಿತ್ರವನ್ನು ನಿರ್ದೇಶಿಸಿದ್ದರು. ಇದೀಗ ಗೀತು, 'ಟಾಕ್ಸಿಕ್'ಗೆ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಈ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾಸ್ಟರ್ ಮೈಂಡ್ ಕ್ರಿಯೇಷನ್ಸ್ ನಿರ್ಮಿಸುತ್ತಿವೆ.

ಟಾಕ್ಸಿಕ್ ಚಿತ್ರದಲ್ಲಿ ಬಾಲಿವುಡ್ ನಟಿ ಕರೀನಾ ಕಪೂರ್ ಮುಖ್ಯ ಪಾತ್ರದಲ್ಲಿ ನಟಿಸಬೇಕಿತ್ತು. ಆದರೆ ಕಾರಣಾಂತರದಿಂದ ನಟಿ ದೂರ ಉಳಿದಿದ್ದಾರೆ. ಆದರೆ ಅವರ ಬದಲಿಗೆ ಲೇಡಿ ಸೂಪರ್ ಸ್ಟಾರ್ ನಯನತಾರಾ ನಟಿಸಲಿದ್ದಾರೆ ಎಂದು ವರದಿಯಾಗಿದೆ. ಸದ್ಯದಲ್ಲೇ ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಬೀಳುವ ನಿರೀಕ್ಷೆಯಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News