ಇಂಟರ್ ನೆಟ್ ಇಲ್ಲದೆಯೂ ವಾಟ್ಸ್ ಆಪ್ ನಲ್ಲಿ ಕಳುಹಿಸಬಹುದು ಫೋಟೋ ಮತ್ತು ಫೈಲ್ಸ್

ಈ ವೈಶಿಷ್ಟ್ಯ ಆರಂಭವಾದರೆ ಇದರಿಂದ ಇಂಟರ್ನೆಟ್ ಇಲ್ಲದೆಯೂ ಯಾರಿಗೆ ಬೇಕಾದರೂ ಫೈಲ್‌ಗಳನ್ನು ಕಳುಹಿಸಬಹುದು ಎನ್ನಲಾಗಿದೆ.  

Written by - Ranjitha R K | Last Updated : Apr 23, 2024, 12:37 PM IST
  • ಇಂಟರ್ನೆಟ್ ಇಲ್ಲದೆಯೂ ಫೈಲ್‌ಗಳನ್ನು ಶೇರ್ ಮಾಡಬಹುದು
  • ಈ ಮೆಸೇಜಿಂಗ್ ಅಪ್ಲಿಕೇಶನ್ ಶೀಘ್ರದಲ್ಲೇ ಹೊಸ ತಂತ್ರಜ್ಞಾನವನ್ನು ಹೊರ ತರಲಿದೆ
  • ಹೊರ ಬಿತ್ತು ಈ ವೈಶಿಷ್ಟ್ಯದ ಸ್ಕ್ರೀನ್‌ಶಾಟ್‌
ಇಂಟರ್ ನೆಟ್ ಇಲ್ಲದೆಯೂ ವಾಟ್ಸ್ ಆಪ್ ನಲ್ಲಿ ಕಳುಹಿಸಬಹುದು ಫೋಟೋ ಮತ್ತು ಫೈಲ್ಸ್  title=

ಬೆಂಗಳೂರು : ವಾಟ್ಸಾಪ್ ಹೊಸ ವೈಶಿಷ್ಟ್ಯವನ್ನು ತರಲಿದ್ದು,ಇದರ ಮೂಲಕ ನೀವು ಇಂಟರ್ನೆಟ್ ಇಲ್ಲದೆಯೂ ಫೈಲ್‌ಗಳನ್ನು ಶೇರ್ ಮಾಡುವುದು ಸಾಧ್ಯವಾಗುತ್ತದೆ. ಸೋರಿಕೆಯಾದ ಮಾಹಿತಿಯ ಪ್ರಕಾರ,ಈ ಮೆಸೇಜಿಂಗ್ ಅಪ್ಲಿಕೇಶನ್ ಶೀಘ್ರದಲ್ಲೇ ಹೊಸ ತಂತ್ರಜ್ಞಾನವನ್ನು ಹೊರ ತರಲಿದೆ.ಈ ಮೂಲಕ ಇಂಟರ್ನೆಟ್ ಇಲ್ಲದೆಯೂ ಫೋಟೋ, ವೀಡಿಯೊ, ಹಾಡುಗಳು ಮತ್ತು  ಡಾಕ್ಯುಮೆಂಟ್ಸ್ ಗಳನ್ನು ಕಳುಹಿಸಲು ಸಾಧ್ಯವಾಗುತ್ತದೆ.ಈ ವೈಶಿಷ್ಟ್ಯ ಆರಂಭವಾದರೆ ಇದರಿಂದ ಇಂಟರ್ನೆಟ್ ಇಲ್ಲದೆಯೂ ಯಾರಿಗೆ ಬೇಕಾದರೂ ಫೈಲ್‌ಗಳನ್ನು ಕಳುಹಿಸಬಹುದು ಎನ್ನಲಾಗಿದೆ.

ಹೊರ ಬಿತ್ತು ಸ್ಕ್ರೀನ್‌ಶಾಟ್‌ :  
ಇಂಟರ್ನೆಟ್ ಇಲ್ಲದೆ ವಾಟ್ಸಾಪ್ ನಲ್ಲಿ ಫೈಲ್ ಶೇರಿಂಗ್ ಫೀಚರ್ ಹೇಗೆ ಕೆಲಸ ಮಾಡುತ್ತದೆ ಎಂಬ ಬಗ್ಗೆ ಕೆಲವು ಮಾಹಿತಿಗಳು ಸೋರಿಕೆಯಾಗಿವೆ.ಈ ವೈಶಿಷ್ಟ್ಯಕ್ಕಾಗಿ WhatsApp ನಿಮ್ಮ ಫೋನ್‌ನಿಂದ ಯಾವ ಅನುಮತಿಗಳನ್ನು ಬಯಸುತ್ತದೆ ಎಂಬುದನ್ನು ತೋರಿಸುವ ಕೆಲವು ಸ್ಕ್ರೀನ್‌ಶಾಟ್‌ಗಳು ಹೊರ ಬಿದ್ದಿವೆ.  ಈ ವೈಶಿಷ್ಟ್ಯ ಕಾರ್ಯನಿರ್ವಹಿಸುವ ಫೋನ್‌ಗಳನ್ನು ಹುಡುಕುವುದು ಒಂದು ಪ್ರಮುಖ ಪರ್ಮಿಶನ್ ಆಗಿದೆ. ಇದು Android ನ ಸಾಮಾನ್ಯ ಅನುಮತಿಯಾಗಿದ್ದು, ಹತ್ತಿರದ ಫೋನ್‌ಗಳನ್ನು ಹುಡುಕಲು ಮತ್ತು ಬ್ಲೂಟೂತ್ ಮೂಲಕ ಫೈಲ್‌ಗಳನ್ನು ಹಂಚಿಕೊಳ್ಳಲು ಸಹಾಯ ಮಾಡುತ್ತದೆ.ಆದರೆ ನಿಮಗೆ ಬೇಡ ಎಂದಿದ್ದರೆ ಈ ಅನುಮತಿಯನ್ನು ಆಫ್ ಮಾಡಬಹುದು.

ಇದನ್ನೂ ಓದಿ : Earth day : ಭೂ ದಿನಕ್ಕೆ ಗೂಗಲ್ ಇಂದ ಹೊಸ ಡೂಡಲ್, ನೈಸರ್ಗಿಕ ಸೌಂದರ್ಯದ ಮೆಲುಕು

ಅನುಮತಿ ಬೇಕಾಗುತ್ತದೆ : 
ನಿಮ್ಮ ಫೋನ್‌ನ ಫೈಲ್‌ಗಳು ಮತ್ತು ಫೋಟೋ ಗ್ಯಾಲರಿ ಆಕ್ಸೆಸ್ ಪಡೆಯಲು  ಎರಡನೇ  ಪರ್ಮಿಶನ್ ನೀಡಬೇಕಾಗುತ್ತದೆ. ಇದರಿಂದ ನೀವು ಶೇರ್ ಮಾಡಬೇಕಾಗಿರುವ ಫೈಲ್ ಅನ್ನು WhatsApp ಸರ್ಚ್ ಮಾಡಬಹುದು. ಮೂರನೇ ಅನುಮತಿ ಲೋಕೇಶನ್ ಗೆ ಸಂಬಂಧಪಟ್ಟದ್ದಾಗಿದೆ. ಇದರಿಂದಾಗಿ ಬೇರೆ ಫೋನ್ ಅನ್ನು ಕನೆಕ್ಟ್ ಮಾಡಲು ಅದು ಹತ್ತಿರದಲ್ಲಿದೆಯೇ ಅಥವಾ ಇಲ್ಲವೇ ಎಂದು ತಿಳಿಯಬಹುದು.ಈ ಎಲ್ಲಾ ಪರ್ಮಿಶನ್ ನೀಡುವುದು ಅಗತ್ಯವಾಗಿರುತ್ತದೆ. ಆದರೆ, WhatsApp ಫೋನ್ ಸಂಖ್ಯೆಯನ್ನು ಮರೆಮಾಡುವ ಮೂಲಕ ಮತ್ತು ಫೈಲ್‌ಗಳನ್ನು ಎನ್‌ಕ್ರಿಪ್ಟ್ ಮಾಡುವ ಮೂಲಕ ನೀವು ಶೇರ್ ಮಾಡುವ ಫೈಲ್ ಅನ್ನು  ಸುರಕ್ಷಿತವಾಗಿಡುತ್ತದೆ. 

ShareIT ನಂತೆ ಕೆಲಸ ಮಾಡುತ್ತದೆ: 
ಈ ಹೊಸ ವೈಶಿಷ್ಟ್ಯವು ShareIT ನಂತಹ ಕೆಲವು ಹಳೆಯ ಅಪ್ಲಿಕೇಶನ್‌ಗಳಂತೆ ಕಾರ್ಯನಿರ್ವಹಿಸುತ್ತದೆ. ಈ ಅಪ್ಲಿಕೇಶನ್‌ಗಳು ಇಂಟರ್ನೆಟ್ ಇಲ್ಲದೆ ಎರಡು ಫೋನ್‌ಗಳ ನಡುವೆ ಫೈಲ್‌ಗಳನ್ನು ಹಂಚಿಕೊಳ್ಳಲು ಬಳಸುತ್ತವೆ.ಜನರು ಸಾಮಾನ್ಯವಾಗಿ WhatsApp ನಲ್ಲಿ ಫೋಟೋಗಳು,ವೀಡಿಯೊಗಳು ಮತ್ತು  ಡಾಕ್ಯುಮೆಂಟ್ಸ್ ಹಂಚಿಕೊಳ್ಳುತ್ತಾರೆ. ಆದ್ದರಿಂದ ಈ ಹೊಸ ವೈಶಿಷ್ಟ್ಯವು ತುಂಬಾ ಉಪಯುಕ್ತವಾಗಿದೆ.

ಇದನ್ನೂ ಓದಿ : 2 ಸಾವಿರಕ್ಕಿಂತ ಕಡಿಮೆ ಬೆಲೆಯ ಈ ಫೋನ್ ನಲ್ಲಿ Youtube ಆಯ್ಕೆಯೂ ಇದೆ, UPI ಪೇಮೆಂಟ್ ಕೂಡಾ ಸಾಧ್ಯ !

ಪ್ರಸ್ತುತ ಈ ವೈಶಿಷ್ಟ್ಯ ಪ್ರಾಯೋಗಿಕ ಹಂತದಲ್ಲಿದೆ :
ವಾಟ್ಸಾಪ್‌ನಲ್ಲಿ ಇಂಟರ್ನೆಟ್ ಇಲ್ಲದೆ ಫೈಲ್‌ಗಳನ್ನು ಹಂಚಿಕೊಳ್ಳುವ ಈ ವೈಶಿಷ್ಟ್ಯವು ಇನ್ನೂ ಪರೀಕ್ಷಾ ಹಂತದಲ್ಲಿದೆ.ಆದರೆ ಅದು ಶೀಘ್ರದಲ್ಲೇ ಜನ ಸಾಮಾನ್ಯರಬಳಕೆಗೆ ಲಭ್ಯವಾಗಲಿದೆ ಎನ್ನಲಾಗಿದೆ.ಈ ಹೊಸ ವಿಧಾನವು ಫೈಲ್ ಹಂಚಿಕೆಯನ್ನು ಸುಲಭ ಮತ್ತು ಸುರಕ್ಷಿತವಾಗಿಸುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News