ವಿಶ್ವಕಪ್’ಗೆ ರಿಂಕು-ರಾಹುಲ್ ಆಯ್ಕೆಯಾಗದಿರುವುದು ಈ ಕಾರಣಕ್ಕೆ! ಕೊನೆಗೂ ಮೌನ ಮುರಿದ ಕ್ಯಾಪ್ಟನ್ ರೋಹಿತ್ ಶರ್ಮಾ

Rohit Sharma Press Conference: ಕೆಎಲ್ ರಾಹುಲ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಜಿತ್ ಅಗರ್ಕರ್, "ಕೆಎಲ್ ರಾಹುಲ್ ಅದ್ಭುತ ಆಟಗಾರ. ಇತರ ವಿಕೆಟ್ ಕೀಪರ್‌ಗಳು ಮಧ್ಯಮ ಕ್ರಮಾಂಕದಲ್ಲಿ ಆಡುತ್ತಿದ್ದರೆ, ರಾಹುಲ್ ಅಗ್ರ ಕ್ರಮಾಂಕದಲ್ಲಿದ್ದಾರೆ. ಇದು ತಂಡವನ್ನು ಸಮತೋಲನಗೊಳಿಸಲು ತೆಗೆದುಕೊಂಡ ಹೆಜ್ಜೆ ಮಾತ್ರ" ಎಂದು ಹೇಳಿದರು

Written by - Bhavishya Shetty | Last Updated : May 2, 2024, 06:37 PM IST
    • ನಾಯಕ ರೋಹಿತ್ ಶರ್ಮಾ ಮತ್ತು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಸುದ್ದಿಗೋಷ್ಠಿ
    • ಕೆಎಲ್ ರಾಹುಲ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಜಿತ್ ಅಗರ್ಕರ್
    • ಬಿಸಿಸಿಐ ಟಿ20 ವಿಶ್ವಕಪ್‌ಗೆ 15 ಸದಸ್ಯರ ತಂಡವನ್ನು ಪ್ರಕಟಿಸಿದೆ
ವಿಶ್ವಕಪ್’ಗೆ ರಿಂಕು-ರಾಹುಲ್ ಆಯ್ಕೆಯಾಗದಿರುವುದು ಈ ಕಾರಣಕ್ಕೆ! ಕೊನೆಗೂ ಮೌನ ಮುರಿದ ಕ್ಯಾಪ್ಟನ್ ರೋಹಿತ್ ಶರ್ಮಾ title=
Press Conference

Rohit Sharma Press Conference: ಟಿ20 ವಿಶ್ವಕಪ್‌ಗೆ ಭಾರತ ತಂಡ ಸಜ್ಜಾಗಿದೆ. ಏಪ್ರಿಲ್ 30 ರಂದು ಬಿಸಿಸಿಐ ಟಿ20 ವಿಶ್ವಕಪ್‌ಗೆ 15 ಸದಸ್ಯರ ತಂಡವನ್ನು ಪ್ರಕಟಿಸಿತ್ತು. ಈ ಸಂಬಂಧ ಸುದ್ದಿಗೋಷ್ಠಿಯ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮತ್ತು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಮಾಹಿತಿ ನೀಡಿದ್ದಾರೆ.

ಕೆಎಲ್ ರಾಹುಲ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅಜಿತ್ ಅಗರ್ಕರ್, "ಕೆಎಲ್ ರಾಹುಲ್ ಅದ್ಭುತ ಆಟಗಾರ. ಇತರ ವಿಕೆಟ್ ಕೀಪರ್‌ಗಳು ಮಧ್ಯಮ ಕ್ರಮಾಂಕದಲ್ಲಿ ಆಡುತ್ತಿದ್ದರೆ, ರಾಹುಲ್ ಅಗ್ರ ಕ್ರಮಾಂಕದಲ್ಲಿದ್ದಾರೆ. ಇದು ತಂಡವನ್ನು ಸಮತೋಲನಗೊಳಿಸಲು ತೆಗೆದುಕೊಂಡ ಹೆಜ್ಜೆ ಮಾತ್ರ" ಎಂದು ಹೇಳಿದರು

ಇದನ್ನೂ ಓದಿ: ತೆಂಗಿನೆಣ್ಣೆಗೆ ಈ ತರಕಾರಿಯ ರಸ ಸೇರಿಸಿ ಹಚ್ಚಿ: ನಿಮಿಷಗಳಲ್ಲಿ ಕಡುಕಪ್ಪಾಗುತ್ತೆ ಬಿಳಿಕೂದಲು! ಜೊತೆಗೆ ಬೊಕ್ಕ ತಲೆಯಲ್ಲೂ ದಷ್ಟಪುಷ್ಟ ಕೂದಲು ಬೆಳೆಯುತ್ತೆ

ನಾಯಕತ್ವದ ಬಗ್ಗೆ ಮಾತನಾಡಿದ ರೋಹಿತ್ ಶರ್ಮಾ, "ಭಾರತದ ನಾಯಕನಾಗಿ ಇದು ಉತ್ತಮ ಅನುಭವವಾಗಿದೆ. ನನ್ನ ವೃತ್ತಿ ಜೀವನದಲ್ಲಿ ಹಲವು ಆಟಗಾರರ ನಾಯಕತ್ವದಲ್ಲಿ ಆಡಿದ್ದೇನೆ. ಇದು ಹೊಸ ವಿಷಯ. ಆಟಗಾರನಾಗಿ ನೀವು ನಿಮ್ಮ ತಂಡಕ್ಕಾಗಿ ಆಡಬೇಕು” ಎಂದರು.

ಇದಲ್ಲದೇ ನಾಯಕತ್ವ ನಿರಂತರ ಬದಲಾವಣೆಯ ಬಗ್ಗೆ ಮಾತನಾಡಿದ ಆಯ್ಕೆಗಾರ ಅಜಿತ್ ಅಗರ್ಕರ್, “ರೋಹಿತ್ ನಮ್ಮ ಅತ್ಯುತ್ತಮ ನಾಯಕ. ಇನ್ನು ಹಾರ್ದಿಕ್ ಕೂಡ ಉತ್ತಮ ಪ್ರದರ್ಶನ ನೀಡಿದ್ದಾರೆ. ರೋಹಿತ್ ಅತ್ಯುತ್ತಮ ನಾಯಕನಾಗಿದ್ದು, ಏಕದಿನ ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ” ಎಂದಿದ್ದಾರೆ.

"ಇದು ಯಾವಾಗಲೂ ಸವಾಲಿನ ಸಂಗತಿಯಾಗಿದೆ, ಆದರೆ ನಾನು ಈಗಾಗಲೇ ರೋಹಿತ್ ಜೊತೆ ಮಾತನಾಡಿದ್ದೇನೆ. ನಾವು ಏನು ಮಾಡಬೇಕೆಂದು ನಾವು ಈಗಾಗಲೇ ಸ್ಪಷ್ಟಪಡಿಸಿದ್ದೇವೆ. ಐಪಿಎಲ್ನಲ್ಲಿನ ಪ್ರದರ್ಶನವು ಇದಕ್ಕೆ ಸಾಕಷ್ಟು ಸಹಾಯ ಮಾಡಿತು." ಎಂದಿದ್ದಾರೆ.

ರಿಂಕು ಸಿಂಗ್ ಟಾಪ್-15ರಿಂದ ಹೊರಗುಳಿಯಲು ಕಾರಣವೇನು?

ಅಜಿತ್ ಅಗರ್ಕರ್ ಮಾತನಾಡಿ, “ರಿಂಕು ಸಿಂಗ್ ಅವರನ್ನು ಹೊರಗಿಡುವುದು ಅತ್ಯಂತ ಕಷ್ಟಕರವಾದ ವಿಷಯವಾಗಿತ್ತು. ಶುಭ್‌ಮನ್ ಗಿಲ್ ವಿಷಯದಲ್ಲೂ ಅದೇ ಆಗಿತ್ತು. ನಾವು ಮೊದಲು ತಂಡದ ಸಂಯೋಜನೆಯನ್ನು ನೋಡಿ ನಂತರ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ” ಎಂದು ಸ್ಪಷ್ಟನೆ ನೀಡಿದರು.

ಇದನ್ನೂ ಓದಿ: ಮಧ್ಯಾಹ್ನ ಊಟದ ಬಳಿಕ ಈ ಹಣ್ಣನ್ನು ಸೇವಿಸಿ ಸಾಕು: ಸೊಂಟದ ಸುತ್ತ ಕಾಡುವ ಹಠಮಾರಿ ಬೊಜ್ಜು 5 ದಿನದಲ್ಲಿ ಕರಗಿ ಹೋಗುತ್ತೆ!

ತಂಡದಲ್ಲಿ ನಾಲ್ವರು ಸ್ಪಿನ್ನರ್‌’ಗಳು ಏಕೆ?

ತಂಡದಲ್ಲಿರುವ ನಾಲ್ವರು ಸ್ಪಿನ್ನರ್‌’ಗಳ ಬಗ್ಗೆ ರೋಹಿತ್ ಶರ್ಮಾ ಸ್ಪಷ್ಟನೆ ನೀಡಿದ್ದಾರೆ. “ವೆಸ್ಟ್ ಇಂಡೀಸ್‌ ಪಿಚ್‌ಗಳನ್ನು ನೋಡಿದಾಗ ನಮಗೆ ತಂಡದಲ್ಲಿ ನಾಲ್ಕು ಸ್ಪಿನ್ನರ್‌ಗಳು ಬೇಕು ಎಂದೆನಿಸಿತು. ಈಗ ನಾವು ಅಲ್ಲಿಗೆ ಹೋಗಿ ಯಾರು ಆಡುತ್ತಾರೆ ಮತ್ತು ಯಾರು ಆಡುವುದಿಲ್ಲ ಎಂದು ನೋಡುತ್ತೇವೆ. ಎಲ್ಲಾ ನಾಲ್ಕು ಸ್ಪಿನ್ನರ್‌ಗಳನ್ನು ತಂಡದಲ್ಲಿ ಇರಿಸಿಕೊಳ್ಳುವ ಸಾಧ್ಯತೆಯಿದೆ. ಚಾಹಲ್ ಮತ್ತು ಕುಲದೀಪ್ ಜೊತೆಯಾಗಿ ಆಡುವ ಸಾಧ್ಯತೆಯೂ ಇದೆ. ಇದಲ್ಲದೇ, ಅಕ್ಷರ್ ಮತ್ತು ಜಡೇಜಾ ಕುಲದೀಪ್ ಜೊತೆಯಲ್ಲಿ ಆಡಬಹುದು” ಎಂದಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News