ಮೊಬೈಲ್ ರೀಚಾರ್ಜ್ ಮಾಡಿದರೆ 10 ಲಕ್ಷ ಬಹುಮಾನ.! ಜಿಯೋ ಗ್ರಾಹಕರಿಗೆ ಬಂಪರ್ ಆಫರ್

Reliance Jio 6 Days Of Recharge Dhamaka:  ಮೊಬೈಲ್ ರೀಚಾರ್ಜ್ ಮಾಡುವ ಗ್ರಾಹಕರಿಗೆ ದಿನಕ್ಕೆ 10 ಲಕ್ಷ ರೂಪಾಯಿಗಳವರೆಗೆ ಬಹುಮಾನವನ್ನು ಗೆಲ್ಲುವ ಸುವರ್ಣಾವಕಾಶವನ್ನು ಕಂಪನಿ ನೀಡುತ್ತಿದೆ.   

Written by - Ranjitha R K | Last Updated : Sep 7, 2022, 09:14 AM IST
  • ಗ್ರಾಹಕರಿಗೆ ಭರ್ಜರಿ ಆಫರ್ ನೀಡುತ್ತಿದೆ ಜಿಯೋ
  • ರೀಚಾರ್ಜ್ ಮಾಡಿದರೆ 10 ಲಕ್ಷ ಬಹುಮಾನ
  • ಕಂಪನಿ ಆರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಆಫರ್
ಮೊಬೈಲ್ ರೀಚಾರ್ಜ್ ಮಾಡಿದರೆ 10 ಲಕ್ಷ  ಬಹುಮಾನ.!  ಜಿಯೋ  ಗ್ರಾಹಕರಿಗೆ  ಬಂಪರ್ ಆಫರ್  title=
Jio Anniversary Offer (file photo)

Reliance Jio 6 Days Of Recharge Dhamaka :  ರಿಲಯನ್ಸ್ ಜಿಯೋ ಆರು ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ರಾಹಕರಿಗೆ ಭರ್ಜರಿ ಆಫರ್ ನೀಡುತ್ತಿದೆ. ಮೊಬೈಲ್ ರೀಚಾರ್ಜ್ ಮಾಡುವ ಗ್ರಾಹಕರಿಗೆ ದಿನಕ್ಕೆ 10 ಲಕ್ಷ ರೂಪಾಯಿಗಳವರೆಗೆ ಬಹುಮಾನವನ್ನು ಗೆಲ್ಲುವ ಸುವರ್ಣಾವಕಾಶವನ್ನು ಕಂಪನಿ ನೀಡುತ್ತಿದೆ. ಸೆಪ್ಟೆಂಬರ್ 6 ಮತ್ತು ಸೆಪ್ಟೆಂಬರ್ 11, 2022 ರ ನಡುವೆ ತಮ್ಮ ಮೊಬೈಲ್ ರೀಚಾರ್ಜ್ ಮಾಡುವ ಗ್ರಾಹಕರಿಗೆ 10 ಲಕ್ಷ ಗೆಲ್ಲುವ ಅವಕಾಶವಿದೆ.  ಆಫರ್ ಅವಧಿಯ ಸಮಯದಲ್ಲಿ 299 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಪ್ರಿಪೇಯ್ಡ್ ಯೋಜನೆಗಳೊಂದಿಗೆ ರೀಚಾರ್ಜ್ ಮಾಡುವ ಗ್ರಾಹಕರು ಬಹುಮಾನಗಳನ್ನು ಗೆಲ್ಲಲು ಅರ್ಹರಾಗಿರುತ್ತಾರೆ. ತಮಿಳುನಾಡು ಬಳಕೆದಾರರನ್ನು ಹೊರತುಪಡಿಸಿ, ಭಾರತದಾದ್ಯಂತ ಜಿಯೋ ಬಳಕೆದಾರರು ಈ ಕೊಡುಗೆಯ ಲಾಭವನ್ನು ಪಡೆಯಬಹುದು. 

ಆಫರ್ ಆಗಿದೆ  ಲೈವ್ :
ಆಫರ್‌ನ ನಿಯಮಗಳು ಮತ್ತು ಷರತ್ತುಗಳನ್ನು ಜಿಯೋ ತನ್ನ ಟ್ವಿಟರ್ ಪೋಸ್ಟ್‌ನಲ್ಲಿ ವಿವರವಾಗಿ ಹೇಳಿಲ್ಲ. ಜಿಯೋ ಸೆಪ್ಟೆಂಬರ್ 5 ರಂದು ಆರು ವರ್ಷಗಳನ್ನು ಪೂರೈಸಿದೆ.  ಈ ಹಿನ್ನೆಲೆಯಲ್ಲಿ ರೀಚಾರ್ಜ್ ಆಫರ್ ನೀಡುತ್ತಿದೆ. ಆಫರ್ ಈಗಾಗಲೇ ಲೈವ್ ಆಗಿದ್ದು, ರೀಚಾರ್ಜ್ ಮಾಡುವ ಗ್ರಾಹಕರು ಟೆಲ್ಕೊದಿಂದ ಕೆಲವು ಬಹುಮಾನಗಳನ್ನು ಗೆಲ್ಲಲು ಸಾಧ್ಯವಾಗುತ್ತದೆ.

ಇದನ್ನೂ ಓದಿ :  Saregama ಕಾರ್ವಾನ್ ಮೊಬೈಲ್ ಭಾರತದಲ್ಲಿ ಬಿಡುಗಡೆ- ಇದರ ಬೆಲೆ, ವೈಶಿಷ್ಟ್ಯ ತಿಳಿಯಿರಿ

ಈಗಾಗಲೇ  ಸಕ್ರಿಯ ಪ್ರಿಪೇಯ್ಡ್ ಯೋಜನೆಯನ್ನು ಹೊಂದಿದ್ದರೂ ಸಹ, ನಿಮ್ಮ ಆದ್ಯತೆಗೆ ಅನುಗುಣವಾಗಿ, ಹೊಸ ಪ್ರಿಪೇಯ್ಡ್ ಯೋಜನೆಯೊಂದಿಗೆ ರೀಚಾರ್ಜ್ ಮಾಡಬಹುದು. ಪೋಸ್ಟ್‌ಪೇಯ್ಡ್ ಗ್ರಾಹಕರಿಗೆ ಈ ಕೊಡುಗೆಯಾ ಲಾಭ ಸಿಗಲಿದೆಯೇ   ಎನ್ನುವ ಮಾಹಿತಿ ಲಭ್ಯವಿಲ್ಲ. 

ಬರಲಿದೆ JioPhone 5G :
ಈ AGMನಲ್ಲಿ, JioPhone 5G ಬಿಡುಗಡೆಯ ಬಗ್ಗೆಯೂ ವರದಿಯಾಗುತ್ತಿದೆ. ಜಿಯೋ ತನ್ನ ಅಗ್ಗದ 5G ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿಲ್ಲ, ಆದರೆ ಈ ಫೋನ್ ಅನ್ನು ಗೂಗಲ್‌ ನ ಸಹಯೋಗದೊಂದಿಗೆ ತಯಾರಿಸಲಾಗುತ್ತಿದೆ. ಆ ಫೋನ್ ನ ಬೆಲೆ 15 ಸಾವಿರ ರೂಪಾಯಿಗಳಿಗಿಂತ ಕಡಿಮೆಯಿರಬಹುದು ಎಂದು  ಅಂದಾಜಿಸಲಾಗಿದೆ. ಮುಂದಿನ ವರ್ಷದ AGMನಲ್ಲಿ ಈ ಫೋನ್ ಅನ್ನು ಘೋಷಿಸಲಾಗುವುದು ಎಂದು ನಿರೀಕ್ಷಿಸಲಾಗಿದೆ.  

ಇದನ್ನೂ ಓದಿ :  Used Cars: ಅವಕಾಶ ಮಿಸ್ ಮಾಡ್ಕೋಬೇಡಿ: ಅಗ್ಗದ SUVಗಳನ್ನು ಇನ್ನಷ್ಟು ಕಡಿಮೆ ಬೆಲೆಗೆ ಖರೀದಿಸಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News