Reliance Jio ಗ್ರಾಹಕರಿಗೆ ಸಂತಸದ ಸುದ್ದಿ, Quizನಲ್ಲಿ ಪಾಲ್ಗೊಂಡು Free Internet ಹಾಗೂ ಇತರ ಬಹುಮಾನಗಳನ್ನು ಗೆಲ್ಲಿ

Reliance Jio, Jio Desserts Corner Picture Quiz ಅನ್ನು ಆರಂಭಿಸಿದೆ. ಇದರಲ್ಲಿ ಸರಿಯಾದ ಉತ್ತರ ನೀಡಿದ ಮೇಲೆ ಬಳಕೆದಾರರಿಗೆ 100MB ಡೇಟಾವನ್ನು ಉಚಿತವಾಗಿ ನೀಡಲಾಗುತ್ತದೆ. ಇದಲ್ಲದೇ, 20 ಅದೃಷ್ಟವಂತರು 5,000 ರೂಗಳ ರಿಲಯನ್ಸ್ ರಿಟೇಲ್ ವೋಚರ್ ಪಡೆಯುತ್ತಾರೆ.  ಈ ಕ್ವಿಜ್ ಆಟ ಹೇಗೆ ಆಡಬೇಕು ತಿಳಿಯೋಣ ಬನ್ನಿ.

Written by - Nitin Tabib | Last Updated : Oct 12, 2021, 12:53 PM IST
  • ಕ್ವಿಜ್ ಕಾಂಟೆಸ್ಟ್ ಆರಂಭಿಸಿದ ರಿಲಯನ್ಸ್ ಜಿಯೋ
  • Jio Desserts Corner Picture Quiz ಕಾಂಟೆಸ್ಟ್ ನಲ್ಲಿ ಬಹುಮಾನಗಳ ಸುರಿಮಳೆ
  • ಕ್ವಿಜ್ ಗೆಲ್ಲುವ ಜಿಯೋ ಬಳಕೆದಾರರಿಗೆ 100MB ಉಚಿತ ಡೇಟಾ
Reliance Jio ಗ್ರಾಹಕರಿಗೆ ಸಂತಸದ ಸುದ್ದಿ, Quizನಲ್ಲಿ ಪಾಲ್ಗೊಂಡು Free Internet ಹಾಗೂ ಇತರ ಬಹುಮಾನಗಳನ್ನು ಗೆಲ್ಲಿ title=
Jio Desserts Corner Picture Quiz (File Photo)

ನವದೆಹಲಿ: Reliance Jio ತನ್ನ ಬಳಕೆದಾರರಿಗಾಗಿ ಉಚಿತ ಡೇಟಾ ಗೆಲ್ಲುವ ರಸಪ್ರಶ್ನೆ ಸ್ಪರ್ಧೆಯನ್ನು ಆರಂಭಿಸಿದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಿ ಸರಿಯಾದ ಉತ್ತರ ನೀಡುವ ಆಟಗಾರರಿಗೆ 100 MB ಡೇಟಾ ಉಚಿತವಾಗಿ ನೀಡಲಾಗುವುದು. ಇದನ್ನು Jio Desserts Corner Picture Quiz ಎಂದು ಕರೆಯಲಾಗುತ್ತದೆ. ಅದರ ಹೆಸರೇ ಸೂಚಿಸುವಂತೆ, ಈ ಹೊಸ ರಸಪ್ರಶ್ನೆ ಸ್ಪರ್ಧೆಯು ಸಿಹಿತಿಂಡಿಗಳಿಗೆ ಸಂಬಂಧಿಸಿದೆ ಮತ್ತು ಓರಿಯೋ, ಟ್ಯಾಂಗ್ ಮತ್ತು ಕ್ಯಾಡ್ಬರಿ ಡೈರಿ ಮಿಲ್ಕ್ ಸಹಯೋಗದೊಂದಿಗೆ ಇದನ್ನು ಆಯೋಜಿಸಲಾಗುತ್ತಿದೆ. ಈ ಸ್ಪರ್ಧೆಯು ಇಂದಿನಿಂದ ಆರಂಭವಾಗಿದೆ. ಈ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿ ನೀವೂ ಕೂಡ ಉಚಿತ ಡೇಟಾ ಮತ್ತು ಹಲವು ಬಹುಮಾನಗಳನ್ನು ಹೇಗೆ ಗೆಲ್ಲಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ದೀಪಾವಳಿಗೂ ಮುನ್ನವೇ ಆರಂಭಗೊಂಡ ಸ್ಪರ್ಧೆ
ಈ ಮೊದಲೂ ಕೂಡ MyJio ಆಪ್‌ನಲ್ಲಿ ರಿಲಯನ್ಸ್ ಜಿಯೋ ತನ್ನ ಬಳಕೆದಾರರಿಗಾಗಿ ಸ್ಪರ್ಧೆಗಳು ಮತ್ತು ರಸಪ್ರಶ್ನೆಗಳನ್ನು ನಡೆಸಲು ವಿವಿಧ ಬ್ರಾಂಡ್‌ಗಳೊಂದಿಗೆ ಕೈಜೋಡಿಸುವುದನ್ನು ನಾವು ನೋಡಿದ್ದೇವೆ. ಈ ಎಲ್ಲಾ ಸ್ಪರ್ಧೆಗಳನ್ನು ಜಿಯೋ ಎಂಗೇಜ್ ವಿಭಾಗದ ಅಡಿಯಲ್ಲಿ ಆಯೋಜಿಸುತ್ತಿದೆ. ಜಿಯೋ ಡೆಸರ್ಟ್ ಕಾರ್ನರ್ ಪಿಕ್ಚರ್ ಕ್ವಿಜ್ ಕಾಂಟೆಸ್ಟ್ ದೀಪಾವಳಿಗೆ ಮುನ್ನ ನಡೆಸಲಾಗುತ್ತಿದೆ.

ಪ್ರಶ್ನೆಗಳಿಗೆ ಸರಿಯಾದ ಉತ್ತರಗಳನ್ನು ನೀಡಬೇಕು
ಜಿಯೋ ಡೆಸರ್ಟ್ ಕಾರ್ನರ್ ಪಿಕ್ಚರ್ ಕ್ವಿಜ್ ಸ್ಪರ್ಧೆಯಲ್ಲಿ, ಭಾಗವಹಿಸುವವರಿಗೆ ಜಿಯೋ ಎಂಗೇಜ್ ವಿಭಾಗದಲ್ಲಿ ಕೆಲವು ಪಾಕವಿಧಾನಗಳನ್ನು ಆಧರಿಸಿ ಪ್ರಶ್ನೆಗಳನ್ನು ಕೇಳಲಾಗುತ್ತದೆ. ತೋರಿಸಿರುವ ಚಿತ್ರಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಬಹುಮಾನ ಗೆಲ್ಲಲು ಈ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸುವುದು ಮುಖ್ಯ. ಆದರೆ ಪ್ರತಿದಿನವೂ ಹೊಸ ಪ್ರಶ್ನೆಗಳು ಬರುತ್ತವೆಯೇ ಅಥವಾ ಅವು ಹಾಗೆಯೇ ಇರುತ್ತವೆಯೇ ಎಂಬುದು ಸ್ಪಷ್ಟವಾಗಿಲ್ಲ. ಈ ಸ್ಪರ್ಧೆಯಲ್ಲಿ ಇಂದು ನಾಲ್ಕು ಪ್ರಶ್ನೆಗಳನ್ನು ಕೇಳಲಾಗಿದೆ.

7,20,000 ವಿಜೇತರಿಗೆ 100MB ಡೇಟಾ ಉಚಿತ 
ನೀವು ಜಿಯೋ ಡೆಸರ್ಟ್ ಕಾರ್ನರ್ ಪಿಕ್ಚರ್ ಕ್ವಿಜ್‌ನಲ್ಲಿ ಭಾಗವಹಿಸಿ ಸರಿಯಾದ ಉತ್ತರಗಳನ್ನು ನೀಡಿದರೆ, ನೀವು ಜಿಯೋದಿಂದ 100MB ಡೇಟಾವನ್ನು ಪಡೆಯುತ್ತೀರಿ ಮತ್ತು 720,000 ವಿಜೇತರು ಅದನ್ನು ಪಡೆಯಲು ಅರ್ಹರಾಗಿರುತ್ತಾರೆ. ರಸಪ್ರಶ್ನೆಯನ್ನು ಪೂರ್ಣಗೊಳಿಸಲು ಮತ್ತು ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಲು, 2,27,000 ವಿಜೇತರು 100MB ಡೇಟಾವನ್ನು ಪಡೆಯುತ್ತಾರೆ. ಕೊನೆಯದಾಗಿ, 20 ಅದೃಷ್ಟವಂತ ವಿಜೇತರಿಗೆ ರೂ .5,000 ಮೌಲ್ಯದ ರಿಲಯನ್ಸ್ ರಿಟೇಲ್ ವೋಚರ್ ಸಿಗಲಿದೆ.

ಇದನ್ನೂ ಓದಿ-Amazon Great Indian Festivalನಲ್ಲಿ 58 ಸಾವಿರ ರೂಪಾಯಿಗಳ ರಿಯಾಯಿತಿ ದರದಲ್ಲಿ ಸಿಗಲಿದೆ 65 ಇಂಚಿನ Smart TV

ಇಂದಿನ ನಾಲ್ಕು ಪ್ರಶ್ನೆಗಳು ಯಾವುವು ತಿಳಿಯೋಣ 
Q1: Select the Base ingredient
A1: Flour

Q2: Which of the following is true?
A2: Contains No Egg

ಇದನ್ನೂ ಓದಿ-ಒಮ್ಮೆ ಚಾರ್ಜ್ ಮಾಡಿದರೆ ಏಳು ದಿನ ನಡೆಯುತ್ತದೆ ಈ Smartphone, ಅದ್ಭುತ ಕ್ಯಾಮರಾದೊಂದಿಗೆ ತೆಗೆಯಬಹುದು HD photo

Q3: Select the Star ingredient
A3: Cadbury Cocoa Powder

Q4: Select the total time taken for preparing the dessert
A4: 30-60 minutes

ಇದನ್ನೂ ಓದಿ-Fraud Alert! Gmail-Outlook ಬಳಕೆದಾರರೇ ಎಚ್ಚರ! ಈ ಖತರ್ನಾಕ್ ಲಿಂಕ್ ಮೇಲೆ ಕ್ಲಿಕ್ಕಿಸಿದರೆ...!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News