Jio ಈ 'ಸ್ಮಾಲ್' ರೀಚಾರ್ಜ್ ಮಾಡಿ ಪಡೆಯಿರಿ ಉಚಿತವಾಗಿ Disney+ Hotstar ಚಂದಾದಾರಿಕೆ! ಇಲ್ಲಿದೆ ಫುಲ್ ಡಿಟೈಲ್ಸ್!

ಜಿಯೋ ಪ್ರಿಪೇಯ್ಡ್ ಯೋಜನೆಗಳಲ್ಲಿ 499 ರೂ., 666 ರೂ., 888 ರೂ., ಮತ್ತು 2,599 ರೂ.ಯೋಜನೆಗಳು ಸೇರಿವೆ.

Written by - Channabasava A Kashinakunti | Last Updated : Sep 1, 2021, 09:07 AM IST
  • ರಿಲಯನ್ಸ್ ಜಿಯೋ ಇಂದು 5 ಪ್ರಿಪೇಯ್ಡ್ ಪ್ಲಾನ್ ಗಳು ಜಾರಿಗೆ
  • ಪ್ರಿಪೇಯ್ಡ್ ಯೋಜನೆಗಳಲ್ಲಿ 499 ರೂ. 666 ರೂ. 888 ರೂ. ಮತ್ತು 2,599 ರೂ. ಯೋಜನೆಗಳು ಸೇರಿವೆ.
  • ಒಂದು ವರ್ಷದ ಡಿಸ್ನಿ + ಹಾಟ್‌ಸ್ಟಾರ್ ಉಚಿತ ಚಂದಾದಾರಿಕೆಯು ಲಭ್ಯವಿರುತ್ತದೆ.
Jio ಈ 'ಸ್ಮಾಲ್' ರೀಚಾರ್ಜ್ ಮಾಡಿ ಪಡೆಯಿರಿ ಉಚಿತವಾಗಿ Disney+ Hotstar ಚಂದಾದಾರಿಕೆ! ಇಲ್ಲಿದೆ ಫುಲ್ ಡಿಟೈಲ್ಸ್! title=

ನವದೆಹಲಿ : ನೀವು ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ಖರೀದಿಸಲು ಯೋಜಿಸುತ್ತಿದ್ದರೆ, ಈ ಸುದ್ದಿ ನಿಮಗಾಗಿ. ಟೆಲಿಕಾಂ ದೈತ್ಯ ಕಂಪೆನಿಯಾದ ಜಿಯೋ ಹೊಸ ಪ್ರಿಪೇಯ್ಡ್ ಯೋಜನೆಗಳನ್ನು ಬಿಡುಗಡೆ ಮಾಡಿದೆ, ಇದು ಉಚಿತ ಡಿಸ್ನಿ+ ಹಾಟ್‌ಸ್ಟಾರ್‌ನ ಹೆಚ್ಚುವರಿ ಲಾಭದೊಂದಿಗೆ ಬರುತ್ತದೆ. ಜಿಯೋ ಪ್ರಿಪೇಯ್ಡ್ ಯೋಜನೆಗಳಲ್ಲಿ 499 ರೂ., 666 ರೂ., 888 ರೂ., ಮತ್ತು 2,599 ರೂ.ಯೋಜನೆಗಳು ಸೇರಿವೆ.

ಹೊಸ ಈ ಯೋಜನೆಗಳು ಇಂದಿನಿಂದ ಜಾರಿ

ಈ ಹೊಸ ಪ್ಲಾನ್ ಗಳು(New Recharge Plan) ಸೆಪ್ಟೆಂಬರ್ 1 ರ ಬುಧವಾರದಿಂದ ಅಂದರೆ ಇಂದಿನಿಂದ ಮಾನ್ಯವಾಗಿರುತ್ತವೆ. ಡಿಸ್ನಿ + ಹಾಟ್‌ಸ್ಟಾರ್‌ನೊಂದಿಗೆ ಬರುವ ಈ ಯೋಜನೆಗಳಲ್ಲಿ ಯಾವುದೇ ನಿರ್ಬಂಧಗಳಿಲ್ಲ ಮತ್ತು ಜನರು ವೀಡಿಯೊ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ನ ವೀಕ್ಷಿಸಲು ಸಂಪೂರ್ಣ ಉಚಿತವಾಗಿದೆ. ಇದು ಡಿಸ್ನಿ+ ಒರಿಜಿನಲ್ಸ್, ಡಿಸ್ನಿ, ಮಾರ್ವೆಲ್, ಸ್ಟಾರ್ ವಾರ್ಸ್, ನ್ಯಾಷನಲ್ ಜಿಯೋಗ್ರಾಫಿಕ್, ಎಚ್‌ಬಿಒ, ಎಫ್‌ಎಕ್ಸ್, ಶೋಟೈಮ್ ಹಾಗೂ ಹಿಂದಿ ಚಲನಚಿತ್ರಗಳು, ಟಿವಿ ಕಾರ್ಯಕ್ರಮಗಳು ಮತ್ತು ಹೆಚ್ಚಿನ ಇಂಗ್ಲಿಷ್ ಭಾಷೆಯಲ್ಲಿ ಅಂತರಾಷ್ಟ್ರೀಯ ವಿಷಯವನ್ನು ಒಳಗೊಂಡಿದೆ.

ಇದನ್ನೂ ಓದಿ : Airtel Recharge Plan : ಕೇವಲ 5 ರೂಪಾಯಿಗೆ ಸಿಗುತ್ತಿದೆ 1GB ಡಾಟಾ ಮತ್ತು ಅನ್ಲಿಮಿಟೆಡ್ ಕರೆಗಳ ಸೌಲಭ್ಯ

ರಿಲಯನ್ಸ್ ಜಿಯೋದ ಹೊಸ ಪ್ರಿಪೇಯ್ಡ್ ಯೋಜನೆಗಳು :

-  499 ರೂ. : 28 ದಿನಗಳ ವ್ಯಾಲಿಡಿಟಿ (1 ತಿಂಗಳು), ದಿನಕ್ಕೆ 3GB ಡೇಟಾ, ಉಚಿತ ಅನಿಯಮಿತ ಧ್ವನಿ ಕರೆಗಳು(Unlimited Voice calls) ಮತ್ತು ದೈನಂದಿನ SMS.
- 666 ರೂ : ವ್ಯಾಲಿಡಿಟಿ 56 ದಿನಗಳು (2 ತಿಂಗಳುಗಳು), ದಿನಕ್ಕೆ 2GB ಡೇಟಾ, ಉಚಿತ ಅನಿಯಮಿತ ಧ್ವನಿ ಕರೆಗಳು ಮತ್ತು ಪ್ರತಿದಿನ SMS.
- 888 ರೂ. : ವ್ಯಾಲಿಡಿಟಿ 84 ದಿನಗಳು (3 ತಿಂಗಳುಗಳು), ದಿನಕ್ಕೆ 2GB ಡೇಟಾ, ಉಚಿತ ಅನಿಯಮಿತ ಧ್ವನಿ ಕರೆಗಳು ಮತ್ತು ಪ್ರತಿದಿನ 100 SMS.
- 2,599 ರೂ.: 365 ದಿನಗಳ ವ್ಯಾಲಿಡಿಟಿ (1 ವರ್ಷ), ದಿನಕ್ಕೆ 2GB ಡೇಟಾ, ಉಚಿತ ಅನಿಯಮಿತ ಧ್ವನಿ ಕರೆಗಳು ಮತ್ತು 100 SMS ಪ್ರತಿದಿನ.
- 549 ರೂ.(ಡೇಟಾ ಆಡ್-ಆನ್ ಪ್ಲಾನ್): 56 ದಿನಗಳ ವ್ಯಾಲಿಡಿಟಿ (2 ತಿಂಗಳು), ದಿನಕ್ಕೆ 1.5 ಜಿಬಿ ಡೇಟಾ.

ಇದನ್ನೂ ಓದಿ : ನಿಮ್ಮ ಬಳಿಯೂ ಇದ್ದರೆ MIಯ ಈ ಫೋನ್ , ಕಂಪನಿ ವಾಪಸ್ ನೀಡಲಿದೆ ಫುಲ್ ಅಮೌಂಟ್

ಈ ಯೋಜನೆಗಳೊಂದಿಗೆ ಜಿಯೋ ಡಿಸ್ನಿ + ಹಾಟ್‌ಸ್ಟಾರ್‌(Disney+ Hotstar)ನ ಒಂದು ವರ್ಷದ ಚಂದಾದಾರಿಕೆಯನ್ನು ಉಚಿತವಾಗಿ ನೀಡುತ್ತಿದೆ. ಡಿಸ್ನಿ + ಹಾಟ್‌ಸ್ಟಾರ್ ತನ್ನ ಯೋಜನೆಯನ್ನು ಇಂದಿನಿಂದಲೇ ದುಬಾರಿ ಮಾಡಿದೆ. ಈ ಪ್ಲಾನ್ ಆರಂಭಿಕ ಬೆಲೆ 499 ರೂ.ನಿಂದ ಪ್ರಾರಂಭವಾಗುತ್ತದೆ. ನೀವು ಡಿಸ್ನಿ + ಹಾಟ್‌ಸ್ಟಾರ್‌ಗೆ ಚಂದಾದಾರರಾಗಲು ಬಯಸಿದರೆ ಮತ್ತು ನೀವು ಜಿಯೋ ಬಳಕೆದಾರರಾಗಿದ್ದರೆ, ಈ ಯೋಜನೆಯು ನಿಮಗೆ ಉಪಯುಕ್ತವಾಗಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News