ಜಿಯೋ ಬಳಕೆದಾರರಿಗೆ ಭರ್ಜರಿ ಸುದ್ದಿ! ಅತ್ಯಂತ ಅಗ್ಗದ ರಿಚಾರ್ಜ್ ಪ್ಲಾನ್ ಪರಿಚಯಿಸಿದ ಕಂಪನಿ

ಎರಡೂ ಪ್ಲಾನ್ ಗಳು My Jio ಅಪ್ಲಿಕೇಶನ್, Jioನ ಅಧಿಕೃತ ವೆಬ್‌ಸೈಟ್ ಮತ್ತು ಇತರ ಪ್ಲಾಟ್‌ಫಾರ್ಮ್‌ಗಳಲ್ಲಿ ಬಂದಿವೆ. ಈ ಪ್ಲಾನ್ 90 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. 

Written by - Ranjitha R K | Last Updated : Jan 20, 2023, 03:39 PM IST
  • ಜಿಯೋ ಎರಡು ರೀಚಾರ್ಜ್ ಪ್ಲಾನ್ ಗಳನ್ನು ಪರಿಚಯಿಸಿದೆ.
  • ರಿಲಯನ್ಸ್ ಜಿಯೋ 349 ಪ್ರಿಪೇಯ್ಡ್ ಯೋಜನೆ ವಿವರಗಳು
  • ರಿಲಯನ್ಸ್ ಜಿಯೋ 899 ಪ್ರಿಪೇಯ್ಡ್ ಯೋಜನೆ ವಿವರಗಳು
ಜಿಯೋ ಬಳಕೆದಾರರಿಗೆ ಭರ್ಜರಿ ಸುದ್ದಿ! ಅತ್ಯಂತ ಅಗ್ಗದ ರಿಚಾರ್ಜ್ ಪ್ಲಾನ್ ಪರಿಚಯಿಸಿದ ಕಂಪನಿ  title=

ಬೆಂಗಳೂರು : ಜಿಯೋ ಎರಡು ರೀಚಾರ್ಜ್ ಪ್ಲಾನ್ ಗಳನ್ನು ಪರಿಚಯಿಸಿದೆ. ಈ ಪ್ಲಾನ್ ಗಳ ಬೆಲೆ ಕೂಡಾ ಕಡಿಮೆ. ಈ ಎರಡು ಪ್ಲಾನ್ ಗಳ ಬೆಲೆ 899 ಮತ್ತು 349 ರೂ. ಎರಡೂ ಪ್ಲಾನ್ ಗಳು My Jio ಅಪ್ಲಿಕೇಶನ್, Jioನ ಅಧಿಕೃತ ವೆಬ್‌ಸೈಟ್ ಮತ್ತು ಇತರ ಪ್ಲಾಟ್‌ಫಾರ್ಮ್‌ಗಳಲ್ಲಿ ಕಂಡು ಬಂದಿವೆ. ಈ ಪ್ಲಾನ್ 90 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಇದರ ಹೊರತಾಗಿ, ಅನಿಯಮಿತ ಕರೆ ಮತ್ತು  ಪ್ರತಿದಿನ 2.5GB ಡೇಟಾ ಲಭ್ಯವಿದೆ. 

ರಿಲಯನ್ಸ್ ಜಿಯೋ 349 ಪ್ರಿಪೇಯ್ಡ್ ಯೋಜನೆ ವಿವರಗಳು :
ರಿಲಯನ್ಸ್ ಜಿಯೋದ 349 ರೂಪಾಯಿ ಯೋಜನೆಯು 30 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಈ ಪ್ಲಾನ್ ನಲ್ಲಿ ದಿನಕ್ಕೆ 2.5GB ಡೇಟಾ  ಮತ್ತು ಅನಿಯಮಿತ ಕರೆ ಮತ್ತು ಪ್ರತಿದಿನ 100 SMS ಲಭ್ಯವಿದೆ. ಇತರ ಪ್ರಯೋಜನಗಳ ಬಗ್ಗೆ JioTV,JioCinema, Jio Security ಮತ್ತು JioCloud ಲಭ್ಯವಿದೆ. ವೆಲ್ಕಮ್ ಆಫರ್‌ನಲ್ಲಿ 5G ಡೇಟಾ ಕೂಡಾ ಲಭ್ಯವಿರುತ್ತದೆ. 

ಇದನ್ನೂ ಓದಿ : ಹುಂಡೈ ಕ್ರೆಟಾಗೆ ಭಾರೀ ಪೈಪೋಟಿ ನೀಡಲು ರೋಡಿಗಿಳಿಯುತ್ತಿದೆ ಈ SUV

ರಿಲಯನ್ಸ್ ಜಿಯೋ 899 ಪ್ರಿಪೇಯ್ಡ್ ಯೋಜನೆ ವಿವರಗಳು :
ಜಿಯೋದ  899 ರೂಪಾಯಿ ಯೋಜನೆಯು 90 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. ಇದರಲ್ಲಿ ದಿನಕ್ಕೆ 2.5GB ಡೇಟಾ ಸಿಗುತ್ತದೆ. ಈ ಪ್ಲಾನ್ ನಲ್ಲಿ ಅನಿಯಮಿತ ಕರೆ ಮತ್ತು ಪ್ರತಿದಿನ 100 SMS ಲಭ್ಯವಿದೆ. ಯೋಜನೆಯಲ್ಲಿ ಒಟ್ಟು 225GB ಡೇಟಾ ಲಭ್ಯವಿರುತ್ತದೆ. ವೆಲ್ಕಮ್ ಆಫರ್ ಅಡಿಯಲ್ಲಿ 5G ಡೇಟಾ ಲಭ್ಯವಿದೆ. ಜಿಯೋ ಭಾರತದ 100 ಕ್ಕೂ ಹೆಚ್ಚು ನಗರಗಳಲ್ಲಿ 5G ಸೇವೆಯನ್ನು ಪ್ರಾರಂಭಿಸಿದೆ. 

ಇದನ್ನೂ ಓದಿ : ಈ ಐದು 5G ಸ್ಮಾರ್ಟ್ ಫೋನ್ ಗಳಲ್ಲಿ ಕಾರ್ಯ ನಿರ್ವಹಿಸುವುದಿಲ್ಲ Jio 5G!ಫೋನ್ ಖರೀದಿಸುವ ಮುನ್ನ ನೆನಪಿರಲಿ ಈ ಮಾಹಿತಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News