ಜಿಯೋ ಬಳಕೆದಾರರಿಗೆ ಆಘಾತ .! ಈ ಅಗ್ಗದ ಪ್ಲಾನ್ ಗಳು ಇನ್ನು ದುಬಾರಿ

ರಿಲಯನ್ಸ್ ಜಿಯೋ ತನ್ನ ಕೆಲವು ಯೋಜನೆಗಳ ಬೆಲೆಯನ್ನು ಶೇಕಡಾ 20 ರಷ್ಟು ಹೆಚ್ಚಿಸಿದೆ. ಇದು ಜಿಯೋ ಬಳಕೆದಾರರ ಪಾಲಿಗಂತೂ ಕೆಟ್ಟ ಸುದ್ದಿ. 

Written by - Ranjitha R K | Last Updated : Jun 17, 2022, 12:59 PM IST
  • ದುಬಾರಿಯಾಯಿತು ಜಿಯೋ ರೀಚಾರ್ಜ್ ಪ್ಲಾನ್
  • 155 ರೂಪಾರಿ ಪ್ಲಾನ್ ಗೆ ಇನ್ನು ನೀಡಬೇಕು 186 ರೂಪಾಯಿ
  • 185 ಪ್ಲಾನ್‌ನ ಬೆಲೆಯೂ ಹೆಚ್ಚಿದೆ
ಜಿಯೋ ಬಳಕೆದಾರರಿಗೆ ಆಘಾತ .! ಈ ಅಗ್ಗದ ಪ್ಲಾನ್ ಗಳು ಇನ್ನು ದುಬಾರಿ  title=
jio recharge plan ( file photo)

ಬೆಂಗಳೂರು : ಇಂದಿನ ಕಾಲದಲ್ಲಿ, ಸ್ಮಾರ್ಟ್‌ಫೋನ್ ಬಳಸದವರು ವಿರಳ ಎನ್ನಬಹುದು. ಸ್ಮಾರ್ಟ್‌ಫೋನ್ ಬಳಕೆದಾರರುವರು ತಮಗಿಷ್ಟ ಬಂದತಹ ಟೆಲಿಕಾಂ ಕಂಪನಿಯ ರೀಚಾರ್ಜ್ ಪ್ಲಾನ್‌ಗಳನ್ನು ಬಳಸುತ್ತಾರೆ.  ನೀವು ರಿಲಯನ್ಸ್ ಜಿಯೋ ತನ್ನ ಕೆಲವು ಯೋಜನೆಗಳ ಬೆಲೆಯನ್ನು ಶೇಕಡಾ 20 ರಷ್ಟು ಹೆಚ್ಚಿಸಿದೆ. ಇದು ಜಿಯೋ ಬಳಕೆದಾರರ ಪಾಲಿಗಂತೂ ಕೆಟ್ಟ ಸುದ್ದಿ. ಹಾಗಿದ್ದರೆ ಕಂಪನಿಯು ಯಾವ ಯೋಜನೆಗಳ ಬೆಲೆಗಳನ್ನು ಹೆಚ್ಚಿಸಿದೆ ನೋಡೋಣ. 

ದುಬಾರಿಯಾಯಿತು  ಜಿಯೋ ರೀಚಾರ್ಜ್ ಪ್ಲಾನ್ :  
ಜಿಯೋ ತನ್ನ ರೀಚಾರ್ಜ್ ಯೋಜನೆಗಳ ಬೆಲೆಯನ್ನು ಹೆಚ್ಚಿಸಿದೆ.  ಹೌದು  ಕೆಲವು ಸಮಯದ ಹಿಂದೆ Jio ತನ್ನದೇ ಆದ ಅಗ್ಗದ ಫೀಚರ್ ಫೋನ್ JioPhone ಅನ್ನು ಬಿಡುಗಡೆ ಮಾಡಿತ್ತು. JioPhone ಬಳಕೆದಾರರಿಗೆ ಕಂಪನಿಯು ಕೆಲವು ವಿಶೇಷ ಯೋಜನೆಗಳನ್ನು ಕೂಡಾ ಪರಿಚಯಿಸಿತ್ತು. ಆದರೆ ಈಗ Jio ತನ್ನ ಎಲ್ಲಾ ಮೂರು JioPhone ರೀಚಾರ್ಜ್ ಯೋಜನೆಗಳ ಬೆಲೆಯನ್ನು ಹೆಚ್ಚಿಸಿದೆ . ಈ ಮೂರು ಯೋಜನೆಗಳನ್ನು ಇಲ್ಲಿಯವರೆಗೆ 20% ರಿಯಾಯಿತಿಯಲ್ಲಿ ನೀಡಲಾಗುತ್ತಿತ್ತು.ಆದರೆ ಈಗ ಈ ಆಫರ್ ತೆಗೆದುಹಾಕಲಾಗಿದೆ.   ಇದರಿಂದಾಗಿ ರೀಚಾರ್ಜ್ ಯೋಜನೆಗಳು ದುಬಾರಿಯಾಗಿವೆ. 

ಇದನ್ನೂ ಓದಿ : ಸ್ಮಾರ್ಟ್ ಫೋನ್ ನಲ್ಲಿ ಈ ಐದು ಆಪ್ ಗಳಿದ್ದರೆ ಇಂದೇ ಡಿಲೀಟ್ ಮಾಡಿ , ಇಲ್ಲವಾದರೆ ಖಾಲಿಯಾದೀತು ನಿಮ್ಮ ಖಾತೆ.. !

 155 ರೂಪಾರಿ ಪ್ಲಾನ್ ಗೆ ಇನ್ನು ನೀಡಬೇಕು 186 ರೂ ಪಾಯಿ : 
155 ರೂಪಾಯಿ ಬೆಲೆಯ JioPhoneನ ಅಗ್ಗದ ರೀಚಾರ್ಜ್ ಯೋಜನೆಯನ್ನು 186 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ. ಈ ಯೋಜನೆಯಲ್ಲಿ, 28 ​​ದಿನಗಳವರೆಗೆ 1GB ದೈನಂದಿನ ಡೇಟಾ, ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಧ್ವನಿ ಕರೆ ಮತ್ತು ದಿನಕ್ಕೆ 100 SMS ನೀಡಲಾಗುತ್ತಿದೆ.   

185 ಪ್ಲಾನ್‌ನ ಬೆಲೆಯೂ ಹೆಚ್ಚಿದೆ :
185 ರೂ. ರೀಚಾರ್ಜ್ ಪ್ಲಾನ್ ಬೆಲೆ ಈಗ 222 ರೂಪಾಯಿಗೆ ಏರಿದೆ. ಈ ಯೋಜನೆಯು ದಿನಕ್ಕೆ 2GB ಡೇಟಾ, ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಧ್ವನಿ ಕರೆ ಮತ್ತು ದಿನಕ್ಕೆ 100 SMS ಪ್ರಯೋಜನಗಳೊಂದಿಗೆ ಬರುತ್ತದೆ. ದೈನಂದಿನ ಡೇಟಾ ಮುಗಿದ ನಂತರ, ಇಂಟರ್ನೆಟ್ ವೇಗವು 64Kbpsಗೆ ಕಡಿಮೆಯಾಗುತ್ತದೆ. ಈ ಯೋಜನೆಯ ಮಾನ್ಯತೆ ಕೂಡ 28 ದಿನಗಳು.

ಇದನ್ನೂ ಓದಿ : Recharge Plan: ನಿತ್ಯ 3ಜಿಬಿ+16ಜಿಬಿ ಹೆಚ್ಚುವರಿ ಡೇಟಾ, 1 ವರ್ಷದ ಡಿಸ್ನಿ ಹಾಟ್ ಸ್ಟಾರ್ ಚಂದಾದಾರಿಕೆ, ಯಾವ ಟೆಲಿಕಾಂ ಕಂಪನಿ ಯೋಜನೆ?

 749 ರೂ. ಟಾಪ್-ಎಂಡ್ ಪ್ಲಾನ್  899 ರೂ .ಗೆ ಹೆಚ್ಚಳ :  
JioPhone ರೀಚಾರ್ಜ್ ಯೋಜನೆಗಳ ಅತ್ಯಂತ ದುಬಾರಿ ಮತ್ತು ಉತ್ತಮವಾದ ಯೋಜನೆಯು ಈಗ 899 ರೂಗಳಿಗೆ ಲಭ್ಯವಿದೆ. ಈ ಮೊದಲು ಈ ಯೋಜನೆಯ ಬೆಲೆ 749 ರೂ. ಆಗಿತ್ತು. ಈ ಯೋಜನೆಯಲ್ಲಿ, 336 ದಿನಗಳ ಮಾನ್ಯತೆಯನ್ನು ನೀಡಲಾಗುತ್ತಿದೆ. ಈ ಸಮಯದಲ್ಲಿ ನೀವು 24GB ಡೇಟಾವನ್ನು ಬಳಸಲು ಸಾಧ್ಯವಾಗುತ್ತದೆ. ಈ ಯೋಜನೆಯು 28 ದಿನಗಳವರೆಗೆ 2GB ಡೇಟಾವನ್ನು ನೀಡುತ್ತದೆ ನಂತರ ಅದನ್ನು ಪ್ರತಿ 28 ದಿನಗಳಿಗೊಮ್ಮೆ ನವೀಕರಿಸಲಾಗುತ್ತದೆ. ಈ ಯೋಜನೆಗಳು ಪ್ರತಿ 28 ದಿನಗಳವರೆಗೆ 50 SMS ಮತ್ತು ಉಚಿತ ಧ್ವನಿ ಕರೆಗಳಂತಹ ಪ್ರಯೋಜನಗಳನ್ನು ಸಹ ನೀಡುತ್ತವೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News