Jio ತಂದಿದೆ ಪೈಸಾ ವಸೂಲ್ ಪ್ರಿಪೇಯ್ಡ್ ಪ್ಲಾನ್ ! ಇಲ್ಲಿ ಎಲ್ಲವೂ ಅನ್ ಲಿಮಿಟೆಡ್ ಜೊತೆಗೆ ಉಚಿತ OTT ಚಂದಾದಾರಿಕೆ

Prepaid Recharge Plan:ಈ ಪ್ಲಾನ್ ನಲ್ಲಿ ನೀರಿಕ್ಷೆಗೂ ಮೀರಿದ ಕೆಲವು ಪ್ರಯೋಜನಗಳನ್ನು ಸಹ ನೀಡಲಾಗಿದೆ. ಬೇರೆ ಯಾವುದೇ ಇತರ ಪ್ಲಾನ್ ನಲ್ಲಿ ಕಂಡು ಬಾರದ ಕೆಲವು ಪ್ರಯೋಜನಗಳನ್ನು ಇಲ್ಲಿ ನೀಡಲಾಗಿದೆ. 

Written by - Ranjitha R K | Last Updated : Oct 24, 2023, 09:47 AM IST
  • ಜಿಯೋ ವಾರ್ಷಿಕ 3,227 ರೀಚಾರ್ಜ್ ಪ್ಲಾನ್
  • ಅನ್ ಲಿಮಿಟೆಡ್ ಜೊತೆಗೆ ಉಚಿತ OTT ಚಂದಾದಾರಿಕೆ
  • ಇತರ ಪ್ಲಾನ್ ನಲ್ಲಿ ಕಂಡು ಬಾರದ ಕೆಲವು ಪ್ರಯೋಜನಗಳು ಇಲ್ಲಿವೆ
Jio ತಂದಿದೆ ಪೈಸಾ ವಸೂಲ್  ಪ್ರಿಪೇಯ್ಡ್ ಪ್ಲಾನ್ ! ಇಲ್ಲಿ ಎಲ್ಲವೂ ಅನ್ ಲಿಮಿಟೆಡ್ ಜೊತೆಗೆ ಉಚಿತ OTT ಚಂದಾದಾರಿಕೆ  title=

Prepaid Recharge Plan : ರಿಲಯನ್ಸ್ ಜಿಯೋ ವಾರ್ಷಿಕ  ಪ್ರಿಪೇಯ್ಡ್ ಯೋಜನೆಯನ್ನು ಪರಿಚಯಿಸಿದೆ. ಸಾಮಾನ್ಯ ರೀಚಾರ್ಜ್ ಯೋಜನೆಗಳಂತೆ, ಇದು ಅಗತ್ಯ ಪ್ರಯೋಜನಗಳನ್ನು ನೀಡುತ್ತದೆ. ಇನ್ನು ಈ ಪ್ಲಾನ್ ನಲ್ಲಿ ನೀರಿಕ್ಷೆಗೂ ಮೀರಿದ ಕೆಲವು ಪ್ರಯೋಜನಗಳನ್ನು ಸಹ ನೀಡಲಾಗಿದೆ. ಬೇರೆ ಯಾವುದೇ ಇತರ ಪ್ಲಾನ್ ನಲ್ಲಿ ಕಂಡು ಬಾರದ ಕೆಲವು ಪ್ರಯೋಜನಗಳನ್ನು ಇಲ್ಲಿ ನೀಡಲಾಗಿದೆ. 

ಜಿಯೋ ವಾರ್ಷಿಕ 3,227 ರೀಚಾರ್ಜ್ ಪ್ಲಾನ್ : 
ರಿಲಯನ್ಸ್ ಜಿಯೊದ ವಾರ್ಷಿಕ ರೀಚಾರ್ಜ್  ಪ್ಲಾನ್ ಗೆ 3,227 ವೆಚ್ಚವಾಗುತ್ತದೆ. ಇದು ಬಳಕೆದಾರರಿಗೆ ಇಡೀ ವರ್ಷದ ಮಾನ್ಯತೆಯನ್ನು ಒದಗಿಸುತ್ತದೆ. ಇದರಲ್ಲಿ ವಿಶೇಷವಾಗಿ ಮೊಬೈಲ್ ಆವೃತ್ತಿಗಾಗಿ ಅಮೆಜಾನ್ ಪ್ರೈಮ್ ವಿಡಿಯೋವನ್ನು ನೀಡಲಾಗಿದೆ. ಪ್ರೈಮ್ ವೀಡಿಯೋ ಪ್ರಯೋಜನಗಳ ಹೊರತಾಗಿ, ಈ ಸ್ಕೀಮ್‌ನ ವಿಶೇಷವೆಂದರೆ ಇದರಲ್ಲಿ ಲಭ್ಯವಿರುವ ಶಕ್ತಿಯುತ ಡೇಟಾ ನಿಮ್ಮ ಇಂಟರ್ನೆಟ್ ಸಂಬಂಧಿತ ಅಗತ್ಯಗಳನ್ನು ಪೂರೈಸುತ್ತದೆ. 

ಇದನ್ನೂ ಓದಿ : ಈ ಕೆಲಸ ಮಾಡಿದ್ರೆ ವಿಕಿಪೀಡಿಯಾಗೆ ಒಂದು ಬಿಲಿಯನ್ ಡಾಲರ್ ಕೊಡುವುದಾಗಿ ಎಲಾನ್ ಮಸ್ಕ್ ಘೋಷಣೆ!

ಈ ಪ್ಲಾನ್ ಬಳಕೆದಾರರಿಗೆ ಪ್ರತಿದಿನ 2GB ಹೈ-ಸ್ಪೀಡ್ ಡೇಟಾವನ್ನು ನೀಡುತ್ತದೆ. ಇಡೀ ವರ್ಷದಲ್ಲಿ ಒಟ್ಟು 730GB ಡೇಟಾ ಇದರಲ್ಲಿ ಲಭ್ಯವಿದೆ. ರಿಲಯನ್ಸ್ ಜಿಯೋದ ಈ ರೀಚಾರ್ಜ್‌ನೊಂದಿಗೆ ಅನಿಯಮಿತ ಧ್ವನಿ ಕರೆಗಳು ಮತ್ತು ದಿನಕ್ಕೆ 100 ಉಚಿತ SMS ಸಹ ನೀಡಲಾಗುತ್ತದೆ. ಹೆಚ್ಚುವರಿಯಾಗಿ, ಗ್ರಾಹಕರು JioCloud, JioTV ಮತ್ತು JioCinema ವನ್ನು ಫ್ರೀಯಾಗಿ ವೀಕ್ಷಿಸಬಹುದು. 

ಅಮೆಜಾನ್ ಪ್ರೈಮ್ ವೀಡಿಯೋವನ್ನು ರಿಲಯನ್ಸ್ ಜಿಯೋ ಜೊತೆಗೆ ಒದಗಿಸಲಾಗುತ್ತಿದೆ. ಆದರೆ ಇದರೊಂದಿಗೆ ಬಳಕೆದಾರರು ಸೋನಿ ಲಿವ್, ಝೀ5 ಅಥವಾ ಡಿಸ್ನಿ + ಹಾಟ್‌ಸ್ಟಾರ್ ಅನ್ನು ಪ್ರತ್ಯೇಕವಾಗಿ ಆಯ್ಕೆ ಕೂಡಾ ಮಾಡಬಹುದು. ಆದರೆ ಇದಕ್ಕೆ ಕ್ರಮವಾಗಿ 3,226, 3,225 ಮತ್ತು  3,178 ಬೆಲೆಯ ಪ್ರತ್ಯೇಕ ವಾರ್ಷಿಕ  ಪ್ಲಾನ್ ಗಳಿವೆ.  

ಇದನ್ನೂ ಓದಿ : Flipkartನಲ್ಲಿ ದಸರಾ ಸೇಲ್ ಆರಂಭ ! ಅರ್ಧ ಬೆಲೆಗೆ ಸಿಗುತ್ತಿದೆ ಟಿವಿ, ಫ್ರಿಡ್ಜ್, ಗೀಸರ್

Zee5 ಮತ್ತು Sony Liv ಎರಡನ್ನೂ ಪಡೆಯಲು ಬಯಸುವವರಿಗೆ, ರಿಲಯನ್ಸ್ ಜಿಯೋ ₹3,662 ಬೆಲೆಯ ವಾರ್ಷಿಕ ಯೋಜನೆಯನ್ನು ನೀಡುತ್ತದೆ. ಈ ಯೋಜನೆಯು ಒಂದು ವರ್ಷದ ಮಾನ್ಯತೆಯನ್ನು ಒಳಗೊಂಡಿರುತ್ತದೆ ಮತ್ತು 2.5GB ದೈನಂದಿನ ಡೇಟಾದೊಂದಿಗೆ ಬರುತ್ತದೆ, ಇದು ಸಂಪರ್ಕ ಮತ್ತು ಮನರಂಜನೆಯ ಅಗತ್ಯತೆಗಳನ್ನು ಪೂರೈಸುತ್ತದೆ.

ನೀವು ಬಜೆಟ್ ಸ್ನೇಹಿ ವಾರ್ಷಿಕ ಪ್ರಿಪೇಯ್ಡ್ ಪ್ಲಾನ್ ಅನ್ನು ಹುಡುಕುತ್ತಿದ್ದರೆ, 2,545 ಪ್ಲಾನ್ ಬೆಸ್ಟ್ ಆಯ್ಕೆಯಾಗಿರಲಿದೆ. ಇದು ದಿನಕ್ಕೆ 1.5GB ಡೇಟಾದ ಜೊತೆಗೆ ಅನಿಯಮಿತ ಧ್ವನಿ ಕರೆಗಳು, ದಿನಕ್ಕೆ 100 ಉಚಿತ SMS ಮತ್ತು 336 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ. 

ಇದನ್ನೂ ಓದಿ : ಮನೆಯ ಯಾವ ಜಾಗದಲ್ಲಿ ವೈಫೈ ರೂಟರ್ ಅನ್ನು ಅಳವಡಿಸಿದರೆ ಇಂಟರ್ನೆಟ್ ವೇಗ ಜಾಸ್ತಿ ಸಿಗುತ್ತೆ?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News