RCB-CSK ಪಂದ್ಯ ರದ್ದಾದರೆ ಪ್ಲೇಆಫ್‌ನಲ್ಲಿ ಯಾರು ಸ್ಥಾನ ಪಡೆಯುತ್ತಾರೆ?

RCB vs CSK Match: ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ನಿರ್ಣಾಯಕ ಪಂದ್ಯ ಶನಿವಾರ ನಡೆಯಲಿದ್ದು, ಈ ಪಂದ್ಯದ ವೇಳೆ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.. 

Written by - Savita M B | Last Updated : May 17, 2024, 11:39 AM IST
  • IPL 2024 ರ ಪ್ಲೇಆಫ್‌ಗಳ ರೇಸ್‌ ಸಾಕಷ್ಟು ಕುತೂಹಲಕಾರಿಯಾಗಿದೆ
  • ಮೂರು ತಂಡಗಳು ಈಗಾಗಲೇ ಈ ಹಂತ ತಲುಪಿವೆ
RCB-CSK ಪಂದ್ಯ ರದ್ದಾದರೆ ಪ್ಲೇಆಫ್‌ನಲ್ಲಿ ಯಾರು ಸ್ಥಾನ ಪಡೆಯುತ್ತಾರೆ?  title=

IPL 2024 playoff: IPL 2024 ರ ಪ್ಲೇಆಫ್‌ಗಳ ರೇಸ್‌ ಸಾಕಷ್ಟು ಕುತೂಹಲಕಾರಿಯಾಗಿದ್ದು, ಮೂರು ತಂಡಗಳು ಈಗಾಗಲೇ ಈ ಹಂತ ತಲುಪಿವೆ. ಈಗ ಒಂದು ಸ್ಥಾನಕ್ಕಾಗಿ ಎರಡು ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿದೆ.. ಶನಿವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಪ್ಲೇ ಆಫ್‌ಗೆ ಅರ್ಹತೆ ಪಡೆಯಲಿದೆ. ಈ ಪಂದ್ಯ ಮಳೆಯಿಂದ ರದ್ದಾದರೆ ಯಾರಿಗೆ ಲಾಭ? 

ವಾಸ್ತವವಾಗಿ ಚೆನ್ನೈ ತಂಡ 14 ಅಂಕ ಹೊಂದಿದೆ. ಅವರ ರನ್ ರೇಟ್ +0.528 ಆಗಿದೆ. ಆದರೆ ಬೆಂಗಳೂರು 12 ಅಂಕಗಳನ್ನು ಹೊಂದಿದ್ದು, ಇದರ ರನ್ ರೇಟ್ +0.387 ಆಗಿದೆ. ಈ ಪಂದ್ಯವನ್ನು ಚೆನ್ನೈ ಗೆದ್ದರೆ ಪ್ಲೇ ಆಫ್‌ಗೆ ಪ್ರವೇಶಿಸಲಿದೆ. ಒಂದು ವೇಳೆ RCB ಗೆದ್ದರೂ ಈ ಪಂದ್ಯವನ್ನು ದೊಡ್ಡ ಅಂತರದಲ್ಲಿಯೇ ಗೆಲ್ಲಬೇಕಾಗುತ್ತದೆ. 

ಇದನ್ನೂ ಓದಿ-“ಹಾರ್ದಿಕ್ ಟೀಕೆಗೂ ಮುನ್ನ ನಿಮ್ಮ ದಾಖಲೆ ತೆಗೆದು ನೋಡಿ”- ಡಿವಿಲಿಯರ್ಸ್-ಪೀಟರ್ಸನ್ ಕುಟುಕಿದ ಗೌತಮ್ ಗಂಭೀರ್

ಮಳೆಯಿಂದಾಗಿ ಪಂದ್ಯ ರದ್ದಾದರೆ ಲಾಭ ಯಾರಿಗೆ?
ಆರ್‌ಸಿಬಿ ಹಾಗೂ ಸಿಎಸ್‌ಕೆ ನಡುವಿನ ಪಂದ್ಯದಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಒಂದು ವೇಳೆ ಈ ಪಂದ್ಯ ಮಳೆಯಿಂದ ರದ್ದಾದರೆ ಚೆನ್ನೈಗೆ ಲಾಭವಾಗಲಿದೆ. ಪಂದ್ಯ ರದ್ದಾಗುವುದರಿಂದ ಉಭಯ ತಂಡಗಳು ತಲಾ 1 ಅಂಕ ಪಡೆಯಲಿವೆ. ಇದರೊಂದಿಗೆ ಚೆನ್ನೈ 15 ಅಂಕಗಳನ್ನು ಹೊಂದಿದ್ದು, ಪ್ಲೇ ಆಫ್‌ಗೆ ಅರ್ಹತೆ ಪಡೆಯಲಿದೆ ಎನ್ನಲಾಗುತ್ತಿದೆ..

ಗುಜರಾತ್, ಪಂಜಾಬ್ ಮತ್ತು ಮುಂಬೈ ಪ್ಲೇ ಆಫ್ ರೇಸ್‌ನಿಂದ ಹೊರಗುಳಿದಿವೆ. ಡೆಲ್ಲಿ 14 ಅಂಕ ಹೊಂದಿದೆ. ಆದರೆ ಅವರ ನೆಟ್ ರನ್ ರೇಟ್ ಮೈನಸ್ ನಲ್ಲಿದೆ. ಲಕ್ನೋಗೆ ಒಂದು ಪಂದ್ಯ ಉಳಿದಿದ್ದು, ಅವರು 12 ಅಂಕಗಳನ್ನು ಹೊಂದಿದ್ದಾರೆ. ಪ್ರಮುಖ ಅಂಶವೆಂದರೆ ಲಕ್ನೋದ ನೆಟ್ ರನ್ ರೇಟ್ ಕೂಡ ಮೈನಸ್ ನಲ್ಲಿದೆ. ಕೆಕೆಆರ್, ರಾಜಸ್ಥಾನ ಮತ್ತು ಹೈದರಾಬಾದ್ ತಂಡಗಳು ಈಗಾಗಲೇ ಪ್ಲೇ ಆಫ್ ತಲುಪಿವೆ.

ಇದನ್ನೂ ಓದಿ-ಧೋನಿಯೂ ಅಲ್ಲ, ರೋಹಿತ್ ಶರ್ಮಾನೂ ಅಲ್ಲ… ಈ ಕ್ರಿಕೆಟಿಗನೇ ಟಿ20 ಕ್ರಿಕೆಟ್’ನಲ್ಲಿ ವಿಶ್ವದ ಅತ್ಯಂತ ಯಶಸ್ವಿ ನಾಯಕ!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News