Good News: ತನ್ನ ಗ್ರಾಹಕರಿಗೆ Happy New Year 2022 ಯೋಜನೆ ಆರಂಭಿಸಿದ Jio, ಒಂದೇ ರೀಚಾರ್ಜ್ ನಲ್ಲಿ ವರ್ಷವಿಡೀ ಈ ಲಾಭಗಳು ಸಿಗಲಿವೆ

Jio Happy New Year 2022 Plan: ಹೊಸ ವರ್ಷ 2022ರ ಆಗಮನಕ್ಕೆ ದಿನಗಣನೆ ಆರಂಭವಾಗಿದೆ, ಸಂಭ್ರಮಾಚರಣೆಗೂ ಮುನ್ನವೇ ಜಿಯೋ (Jio) ತನ್ನ ಗ್ರಾಹಕರಿಗೆ ಅದ್ಭುತ ಉಡುಗೊರೆಯನ್ನು ನೀಡಿದೆ. ಹೌದು, ಜಿಯೋ (Reliance Jio) ತನ್ನ ಗ್ರಾಹಕರಿಗೆ ಹೊಸ ಪ್ರಿಪೇಯ್ಡ್ ಯೋಜನೆಯನ್ನು (Jio New Prepaid Plan) ಪರಿಚಯಿಸಿದೆ. 

Written by - Nitin Tabib | Last Updated : Dec 25, 2021, 07:19 PM IST
  • ತನ್ನ ಗ್ರಾಹಕರಿಗೆ ಹೊಸ ಯೋಜನೆ ಪ್ರಕಟಿಸಿದ ರಿಲಯನ್ಸ್ ಜಿಯೋ.
  • ಹೊಸ ವರ್ಷದ ಆರಂಭಕ್ಕೂ ಮುನ್ನವೇ ಗ್ರಾಹಕರಿಗೆ ಉಡುಗೊರೆ ನೀಡಿದ ಜಿಯೋ.
  • ಈ ಹೊಸ ಪ್ಲಾನ್ ಏನನ್ನು ಒಳಗೊಂಡಿದೆ ತಿಳಿದುಕೊಳ್ಳೋಣ ಬನ್ನಿ.
Good News: ತನ್ನ ಗ್ರಾಹಕರಿಗೆ  Happy New Year 2022 ಯೋಜನೆ ಆರಂಭಿಸಿದ Jio, ಒಂದೇ ರೀಚಾರ್ಜ್ ನಲ್ಲಿ ವರ್ಷವಿಡೀ ಈ ಲಾಭಗಳು ಸಿಗಲಿವೆ title=
Jio Happy New Year 2022 Plan(File Photo)

Jio Happy New Year 2022 Plan: ಹೊಸ ವರ್ಷ 2022ರ ಆಗಮನಕ್ಕೆ ದಿನಗಣನೆ ಆರಂಭವಾಗಿದೆ, ಸಂಭ್ರಮಾಚರಣೆಗೂ ಮುನ್ನವೇ ಜಿಯೋ (Jio) ತನ್ನ ಗ್ರಾಹಕರಿಗೆ ಅದ್ಭುತ ಉಡುಗೊರೆಯನ್ನು ನೀಡಿದೆ. ಹೌದು, ಜಿಯೋ (Reliance Jio) ತನ್ನ ಗ್ರಾಹಕರಿಗೆ ಹೊಸ ಪ್ರಿಪೇಯ್ಡ್ ಯೋಜನೆಯನ್ನು (Jio New Prepaid Plan) ಪರಿಚಯಿಸಿದೆ. ಹೊಸದಾಗಿ ಪರಿಚಯಿಸಲಾದ ಪ್ರಿಪೇಯ್ಡ್ ಯೋಜನೆಯನ್ನು 'ಜಿಯೋ ಹ್ಯಾಪಿ ನ್ಯೂ ಇಯರ್ 2022 ಆಫರ್' ಎಂದು ಕರೆಯಲಾಗುತ್ತಿದೆ. ಈ ಪ್ಲಾನ್‌ನಲ್ಲಿ ವಿಶೇಷತೆ ಏನು, ಬೆಲೆ ಎಷ್ಟು ಮತ್ತು ಪ್ರಯೋಜನಗಳೇನು ಎಲ್ಲವನ್ನೂ ತಿಳಿದುಕೊಳ್ಳೋಣ ಬನ್ನಿ. 

ಗ್ರಾಹಕರಿಗೆ ಈ ಎಲ್ಲಾ ಸೌಲಭ್ಯಗಳು ಸಿಗಲಿವೆ (Reliance Jio Latest News)
>>  ಜಿಯೋ ಹ್ಯಾಪಿ ನ್ಯೂ ಇಯರ್ 2022 ಆಫರ್ ಅನ್ನು ಪರಿಚಯಿಸಿದೆ, ಇದರ ಬೆಲೆ 2545 ರೂ. ಇದು 365 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ, ಇದರಲ್ಲಿ ಗ್ರಾಹಕರು ಪ್ರತಿದಿನ 1.5GB ಡೇಟಾವನ್ನು ಪಡೆಯುತ್ತಾರೆ.

>> ಅಂದರೆ, ಈ ಯೋಜನೆಯನ್ನು ಆಯ್ಕೆ ಮಾಡುವ ಗ್ರಾಹಕರು ಒಂದು ವರ್ಷದಲ್ಲಿ ಒಟ್ಟು 547.5GB ಡೇಟಾವನ್ನು ಪಡೆಯುತ್ತಾರೆ. ಆದಾಗ್ಯೂ, 1.5GB ಡೇಟಾದ ದೈನಂದಿನ ಮಿತಿಯು ಮುಗಿದ ನಂತರ, ಇಂಟರ್ನೆಟ್ ವೇಗವು 64KBps ಇರಲಿದೆ.

>> ಇದಲ್ಲದೇ, ಜಿಯೋ ಹ್ಯಾಪಿ ನ್ಯೂ ಇಯರ್ 2022 ಯೋಜನೆಯು ಅನಿಯಮಿತ ಧ್ವನಿ ಕರೆಗಳು, ದೈನಂದಿನ 100 SMS ಮತ್ತು Jio TV, Jio Cinema, JioSecurity ಮತ್ತು JioCloud ಸೇರಿದಂತೆ Jio ಅಪ್ಲಿಕೇಶನ್‌ಗಳಿಗೆ ಉಚಿತ ಚಂದಾದಾರಿಕೆಯನ್ನು ನೀಡುತ್ತದೆ.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಪ್ರಸ್ತುತ, ಈ ಕೊಡುಗೆಯು ರಿಲಯನ್ಸ್ ಜಿಯೋದ ಮೈ ಜಿಯೋ ಅಪ್ಲಿಕೇಶನ್‌ನಲ್ಲಿ ಮಾತ್ರ ಕಾಣಿಸುತ್ತಿದೆ. ಯೋಜನೆಯನ್ನು ಜಿಯೋ ಅಧಿಕೃತ ವೆಬ್‌ಸೈಟ್‌ನಲ್ಲಿ ಹಳೆಯ ವಿವರಗಳೊಂದಿಗೆ ಪಟ್ಟಿಮಾಡಲಾಗಿದೆ, ಇದು 504GB ಡೇಟಾ ಮತ್ತು 336 ದಿನಗಳ ಮಾನ್ಯತೆಯನ್ನು ಒಳಗೊಂಡಿದೆ. ಆದಾಗ್ಯೂ, ಈ ಯೋಜನೆಯು ಇದೀಗ 29 ದಿನಗಳ ಹೆಚ್ಚುವರಿ ಮಾನ್ಯತೆಯೊಂದಿಗೆ ಬರಲಿದೆ ಎಂದು ಜಿಯೋ ಹೇಳಿದೆ. ಇದನ್ನು ಪಟ್ಟಿ ಮಾಡಲಾದ ಯೋಜನೆಯ ಮೇಲ್ಭಾಗದಲ್ಲಿ ಸಣ್ಣ ಸಂದೇಶದ ಮೂಲಕ ವಿವರಿಸಲಾಗಿದೆ.

ಇದನ್ನೂ ಓದಿ-Paytm ಬಳಕೆದಾರರೆ ಎಚ್ಚರ! ಬಳಕೆದಾರರಿಗೆ ಈ ರೀತಿ ಲಕ್ಷಾಂತರ ರೂಪಾಯಿಗಳ ಪಂಗನಾಮ ಹಾಕಲಾಗುತ್ತಿದೆ

ಇದನ್ನೂ ಓದಿ-ಖ್ಯಾತ ಸ್ಮಾರ್ಟ್ ಫೋನ್ ಬ್ರಾಂಡ್ Xiaomi ಮಾಡಿರುವ ತಪ್ಪೇನು ಗೊತ್ತಾ?

ಕಳೆದ ವರ್ಷವೂ ಇಂತಹದೊಂದು ಆಫರ್ ಅನ್ನು ಕಂಪನಿ ಜಾರಿಗೆ ತಂದಿತ್ತು
ಜಿಯೋ ತನ್ನ ಪ್ರಿಪೇಯ್ಡ್ ಚಂದಾದಾರರಿಗೆ ಹೊಸ ವರ್ಷದ ಕೊಡುಗೆಯನ್ನು ಪರಿಚಯಿಸುತ್ತಿರುವುದು ಇದೇ ಮೊದಲಲ್ಲ ಎಂಬುದು ಗಮನಿಸಬೇಕಾದ ಸಂಗತಿ. 2020 ರಲ್ಲಿ, ರಿಲಯನ್ಸ್ ಜಿಯೋ ತನ್ನ ಪ್ರಿಪೇಯ್ಡ್ ಗ್ರಾಹಕರು ಮತ್ತು ಜಿಯೋಫೋನ್ ಗ್ರಾಹಕರಿಗೆ '2020 ಹ್ಯಾಪಿ ನ್ಯೂ ಇಯರ್' ಕೊಡುಗೆಯನ್ನು ಬಿಡುಗಡೆ ಮಾಡಿತ್ತು. ಈ ಯೋಜನೆಯಲ್ಲಿ, ಅನಿಯಮಿತ ಧ್ವನಿ ಕರೆಗಳೊಂದಿಗೆ ದಿನಕ್ಕೆ 1.5GB ಡೇಟಾ, ದೈನಂದಿನ 100 SMS ಮತ್ತು Jio ಅಪ್ಲಿಕೇಶನ್‌ಗಳಿಗೆ ಉಚಿತ ಚಂದಾದಾರಿಕೆ ಲಭ್ಯವಿತ್ತು. ಕಳೆದ  ಸಮಯದಲ್ಲಿ ಈ ಯೋಜನೆಯು 365 ದಿನಗಳ ಮಾನ್ಯತೆಯೊಂದಿಗೆ ಬಂದಿತು. ಒಟ್ಟಾರೆಯಾಗಿ, ಇದು ಒಂದು ವರ್ಷದಲ್ಲಿ ಗ್ರಾಹಕರಿಗೆ 547.5GB ಡೇಟಾ ಜಿಯೋ ನೀಡಿತ್ತು. ಇದನ್ನು ಕಂಪನಿಯು ತನ್ನ ಹ್ಯಾಪಿ ನ್ಯೂ ಇಯರ್ 2022 ಕೊಡುಗೆಯ ಭಾಗವಾಗಿ ನೀಡುತ್ತದೆ.

ಇದನ್ನೂ ಓದಿ-Prototype Lickable TV:ಟಿವಿ ಪರದೆಯ ಮೇಲೆ ನೀವು ವಿಕ್ಷೀಸುವ ಆಹಾರದ ಟೇಸ್ಟ್ ಮಾಡಿಸುತ್ತಂತೆ ಈ TV

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News