Cheapest Recharge Plan: Airtel, Jio Or Vi: ನಿತ್ಯ ಡೇಟಾ ಲಿಮಿಟ್ ಖಾಲಿಯಾಯ್ತಾ? ಅತ್ಯಂತ ಅಗ್ಗದ ಬೆಲೆಯಲ್ಲಿ ಹೆಚ್ಚುವರಿ ಇಂಟರ್ನೆಟ್ ಈ ರೀತಿ ಪಡೆಯಿರಿ

Cheapest 1GB Data Voucher: ಒಂದು ವೇಳೆ ನಿಮ್ಮ ಬಳಿ ಇರುವ ಡೆಲಿ ಡೇಟಾ ಪ್ಲಾನ್ ಮುಗಿದುಹೋಗಿದ್ದರೆ, ನೀವು ಚಿಂತಿಸಬೇಕಾದ ಅವಶ್ಯಕತೆ ಇಲ್ಲ. ಏಕೆಂದರೆ, ನೀವು 20 ರೂ.ಗಳಿಗಿಂತಲೂ ಕಡಿಮೆ ಬೆಲೆಗೆ ಹೆಚ್ಚುವರಿ ಡೇಟಾ ಪ್ಯಾಕ್ ಬಳಸಬಹುದು. ಹಾಗಾದರೆ ಬನ್ನಿ ಏರ್ಟೆಲ್, ವಿಐ ಹಾಗೂ ಜಿಯೋ ಯೋಜನೆಗಳಲ್ಲಿ ಯಾರ ಯೋಜನೆ ಉತ್ತಮ ತಿಳಿದುಕೊಳ್ಳೋಣ,   

Written by - Nitin Tabib | Last Updated : Jun 10, 2022, 03:05 PM IST
  • ಅನೇಕ ಸಂದರ್ಭಗಳಲ್ಲಿ ಈ ಡೇಟಾ ಕೂಡ ಸಾಕಾಗುವುದಿಲ್ಲ.
  • ಹೀಗಿರುವಾಗ ಮುಂದಿನ ದಿನದ ಡೇಟಾ ಸಿಗುವವರೆಗೆ ಕೆಲಸ ನಿರ್ವಹಣೆಯ ಡೇಟಾ ಪ್ಲಾನ್ ಗಳಿಗಾಗಿ ಜನರು ಹುಡುಕಾಟ ನಡೆಸುತ್ತಾರೆ.
  • ವೊಡಾಫೋನ್-ಐಡಿಯಾ, ಏರ್ಟೆಲ್ ಹಾಗೂ ಜಿಯೋ ಈ ಮೂರು ಕಂಪನಿಗಳ ಬಳಿ ಇಂತಹ ಹಲವಾರು ಯೋಜನೆಗಳಿವೆ.
Cheapest Recharge Plan: Airtel, Jio Or Vi: ನಿತ್ಯ ಡೇಟಾ ಲಿಮಿಟ್ ಖಾಲಿಯಾಯ್ತಾ? ಅತ್ಯಂತ ಅಗ್ಗದ ಬೆಲೆಯಲ್ಲಿ ಹೆಚ್ಚುವರಿ ಇಂಟರ್ನೆಟ್ ಈ ರೀತಿ ಪಡೆಯಿರಿ title=
Cheapest Recharge Plan

Airtel, Vi ಹಾಗೂ Jio ಎಲ್ಲಾ ಟೆಲಿಕಾಂ ಕಂಪನಿಗಳು ಹಲವಾರು ಪ್ರೀಪೇಡ್ ಯೋಜನೆಗಳನ್ನು ತಮ್ಮ ಗ್ರಾಹಕರಿಗಾಗಿ ಚಲಾಯಿಸುತ್ತವೆ. ಇಂದಿನ ಕಾಲದಲ್ಲಿ ಬಹುತೇಕ ಎಲ್ಲರೂ ಕೂಡ ಡೆಲಿ ಡೇಟಾ ಪ್ಲಾನ್ ಗಳನ್ನು ಬಳಸುತ್ತಾರೆ. ಮನೆಯಿಂದಲೇ ಆಫೀಸ್ ಕೆಲಸ ಮಾಡುವುದಾಗಲಿ ಅಥವಾ ವಿದ್ಯಾಭ್ಯಾಸ ಮಾಡುವುದಾಗಲಿ ಎಲ್ಲದಕ್ಕೂ ಕೂಡ ಹೆಚ್ಚಿನ ಡೇಟಾ ಅಗತ್ಯ ಬೀಳುತ್ತದೆ. ಇದೇ ಕಾರಣದಿಂದ ಜನರು 1ಜಿಬಿ, 2ಜಿಬಿ ಹಾಗೂ 3ಜಿಬಿ ಡೇಟಾ ಪ್ಲಾನ್ ಗಳನ್ನು ಹೆಚ್ಚಾಗಿ ಬಳಸುತ್ತಾರೆ. 

ಆದರೆ, ಅನೇಕ ಸಂದರ್ಭಗಳಲ್ಲಿ ಈ ಡೇಟಾ ಕೂಡ ಸಾಕಾಗುವುದಿಲ್ಲ. ಹೀಗಿರುವಾಗ ಮುಂದಿನ ದಿನದ ಡೇಟಾ ಸಿಗುವವರೆಗೆ ಕೆಲಸ ನಿರ್ವಹಣೆಯ ಡೇಟಾ ಪ್ಲಾನ್ ಗಳಿಗಾಗಿ ಜನರು ಹುಡುಕಾಟ ನಡೆಸುತ್ತಾರೆ. ವೊಡಾಫೋನ್-ಐಡಿಯಾ, ಏರ್ಟೆಲ್ ಹಾಗೂ ಜಿಯೋ ಈ ಮೂರು ಕಂಪನಿಗಳ ಬಳಿ ಇಂತಹ ಹಲವಾರು ಯೋಜನೆಗಳಿವೆ. ಯಾವ  ಕಂಪನಿಯ ಪ್ಲಾನ್ ಎಲ್ಲಕ್ಕಿಂತ ಅಗ್ಗವಾಗಿದೆ ತಿಳಿದುಕೊಳ್ಳಲು ಮುಂದೆ ಓದಿ.

ಏರ್ಟೆಲ್ vs ಜಿಯೋ vs ವಿಐ
ಏರ್ಟೆಲ್ ಕುರಿತು ಹೇಳುವುದಾದರೆ, ಕಂಪನಿ ಇಂತಹ ಹಲವಾರು ಯೋಜನೆಗಳನ್ನು ಚಲಾಯಿಸುತ್ತದೆ. ಈ ಕಂಪನಿಯ ಅತ್ಯಂತ ಅಗ್ಗದ ಪ್ಲಾನ್ 19 ರೂ. ಪ್ಲಾನ್ ಆಗಿದೆ. ಇದಳಲ್ಲಿ ಬಳಕೆದಾರರಿಗೆ ಸಂಪೂರ್ಣ 1ಜಿಬಿ ಡೇಟಾ ಸಿಗುತ್ತದೆ ಹಾಗೂ ಅದು ಒಂದು ದಿನದ ಮಾನ್ಯತೆಯೊಂದಿಗೆ ಬರುತ್ತದೆ. 

ಇದಲ್ಲದೆ 100 ರೂ.ಗಳಿಗಿಂತ ಕಡಿಮೆ ಬೆಲೆಗೆ ರೂ.98 ಮತ್ತು ರೂ 58ರ ಎರಡು ಪ್ಲಾನ್ ಗಳಿವೆ. ಇವುಗಳಲ್ಲಿಯೂ ಕೂಡ 1 ಜಿಬಿಗಿಂತ ಹೆಚ್ಚು ಡೇಟಾ ಸಿಗುತ್ತದೆ. 

ವಿಐ ಕೊಡುಗೆ 
ಏರ್ಟೆಲ್ ನಂತೆಯೇ ವಿಐ ಕಂಪನಿಯ ಅತ್ಯಂತ ಅಗ್ಗದ ಯೋಜನೆಯ ಬೆಲೆ ರೂ.19 ಆಗಿದೆ. ಇದರ ಅಡಿ 24 ಗಂಟೆಗಳಿವೆ 1 ಜಿಬಿ ಡೇಟಾ ಸಿಗುತ್ತದೆ. ಇದನ್ನು ಹೊರತುಪಡಿಸಿ ಕಂಪನಿ ರೂ.29 ಹಾಗೂ ರೂ.39ರ ಯೋಜನೆಗಳನ್ನು ಕೂಡ ನಡೆಸುತ್ತದೆ. ಈ ಯೋಜನೆಗಳು ಹೆಚ್ಚುವರಿ ಡೇಟಾ ಹಾಗೂ ಹೆಚ್ಚು ದಿನಗಳ ಮಾನ್ಯತೆಯನ್ನು ಹೊಂದಿವೆ. 

ಇದನ್ನೂ ಓದಿ-

ಜಿಯೋ ಯೋಜನೆಗಳು
ಜಿಯೋ ಪ್ಲಾನ್ ಗಳ ಕುರಿತು ಹೇಳುವುದಾದರೆ. 4ಜಿ ಡೇಟಾ ವೌಚರ್ ಪ್ಲಾನ್ಗಳ ಅಡಿ ಒಟ್ಟು ನಾಲ್ಕು ಯೋಜನೆಗಳಿವೆ. ಇದರಲ್ಲಿ ಅತ್ಯಂತ ಅಗ್ಗದ ಪ್ಲಾನ್ ಎಂದರೆ ಅದು ರೂ.15ರ ಪ್ಯಾಕ್. ಇದು ವಿಐ ಹಾಗೂ ಏರ್ಟೆಲ್ ಯೋಜನೆಗಳಿಗಿಂತ ಅಗ್ಗದ ಪ್ಲಾನ್ ಆಗಿದೆ ಮತ್ತು ಇದರಲ್ಲಿಯೂ ಕೂಡ ನಿಮಗೆ ಒಂದು ಜಿಬಿ ಡೇಟಾ ಸಿಗುತ್ತದೆ.

ಇದನ್ನೂ ಓದಿ-

ಆದರೆ, ಇದರ ಮಾನ್ಯತೆ ಅವುಗಳಿಗಿಂತ ಭಿನ್ನವಾಗಿದೆ ಮತ್ತು ಫೋನ್ ನಲ್ಲಿರುವ ಸಕ್ರೀಯ ಪ್ಲಾನ್ ಅನ್ನು ಇದು ಆಧರಿಸಿದೆ. ಅಂದರೆ, ಈ 1ಜಿಬಿ ಡೇಟಾ, ನಿಮ್ಮ ಫೋನ್ ನಲ್ಲಿ ಇನ್ನೂ ಸಕ್ರೀಯವಾಗಿರುವ ಪ್ಲಾನ್ ಅವಧಿ ಮುಕ್ತಾಯದವರೆಗೆ ಇರಲಿದೆ. ಈ ಪ್ಲಾನ್ ಗಾಗಿ ನಿಮ್ಮ ನಂಬರ್ ಮೇಲೆ ಇತರೆ ರೀಚಾರ್ಜ್ ಕೂಡ ಇರಬೇಕು. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News