New Covid-19 Variant - ಕೊರೊನಾ ವೈರಸ್(Coronavirus)ನ ಈ ರೂಪಾಂತರಿಯನ್ನು ಹೆಚ್ಚು ಮಾರಕ ಎನ್ನಲಾಗುತ್ತಿದೆ. ಏಕೆಂದರೆ ಈ ಸೋಂಕು ರೋಗಿಗಳಲ್ಲಿ ಗಂಭೀರ ಲಕ್ಷಣಗಳನ್ನು ತೋರಿಸಬಹುದು. NIV (National Institute Of Virology) ತನಿಖೆಯ ಪ್ರಕಾರ, ಈ ವೇರಿಯಂಟ್ ಜನರಲ್ಲಿ ಗಂಭೀರ ಕಾಯಿಲೆಯನ್ನುಂಟು ಮಾಡುವ ಸಾಧ್ಯತೆ ಇದೆ ಎಂದಿದೆ.
ಸಂಶೋಧನೆಯ ಪ್ರಕಾರ, ಕೋವ್ಶೀಲ್ಡ್ (Covishield) ಮತ್ತು ಕೊವಾಕ್ಸಿನ್ ಎರಡೂ ಉತ್ತಮ ರೋಗನಿರೋಧಕ ಪ್ರತಿಕ್ರಿಯೆಯನ್ನು (Good Immune Response) ಉತ್ತೇಜಿಸಿದವು, ಆದರೆ ಸೇರೋಪೊಸಿಟಿವಿಟಿ ದರ ಮತ್ತು ಸರಾಸರಿ ಆಂಟಿ-ಸ್ಪೈಕ್ ಪ್ರತಿಕಾಯಗಳು ಕೋವಿಶೀಲ್ಡ್ನಲ್ಲಿ ಹೆಚ್ಚಾಗಿದ್ದವು. ಅಂದರೆ, ಕೋವಿಶೀಲ್ಡ್ ಕೋವಾಕ್ಸಿನ್ (Covaxin) ಗಿಂತ ಹೆಚ್ಚಿನ ಪ್ರತಿಕಾಯಗಳನ್ನು ಉತ್ಪಾದಿಸುತ್ತದೆ ಎಂದು ಹೇಳಲಾಗಿದೆ.
ಕೊವಾಕ್ಸಿನ್ನ ಕ್ಲಿನಿಕಲ್ ಪ್ರಯೋಗಗಳಿಗಾಗಿ ಮಕ್ಕಳ ತಪಾಸಣೆ ನಾಳೆ ದೆಹಲಿಯ ಏಮ್ಸ್ನಲ್ಲಿ ಪ್ರಾರಂಭವಾಗಲಿದೆ, ಪಾಟ್ನಾದ ಏಮ್ಸ್ನಲ್ಲಿ ಇದೇ ರೀತಿಯ ಪ್ರಯೋಗಗಳು ಪ್ರಾರಂಭವಾದ ಕೆಲವು ದಿನಗಳ ನಂತರ ಈಗ ನಾಳೆ ದೆಹಲಿಯಲ್ಲಿ ಆರಂಭಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಕೋವಿಶೀಲ್ಡ್ ಅನ್ನು ಒಂದೇ-ಶಾಟ್ಗೆ ಬದಲಾಯಿಸಲಾಗುವುದಿಲ್ಲ ಮತ್ತು ವೈಜ್ಞಾನಿಕವಾಗಿ ಸಾಬೀತಾಗುವವರೆಗೂ ಲಸಿಕೆಗಳನ್ನು ಬೆರೆಸುವ ಬಗ್ಗೆ ಯಾವುದೇ ಪ್ರಶ್ನೆಯಿಲ್ಲ ಎಂದು ಸರ್ಕಾರ ಮಂಗಳವಾರ ಹೇಳಿದೆ.
Covishield+Covaxin Cocktail - ಇದು ಖಂಡಿತವಾಗಿಯೂ ಒಂದು ತಪ್ಪು ಎಂದು ಸಿದ್ಧಾರ್ಥನಗರದ ಮುಖ್ಯ ವೈದ್ಯಾಧಿಕಾರಿ ಸಂದೀಪ್ ಚೌಧರಿ ಹೇಳಿದ್ದಾರೆ. ಲಸಿಕೆಗಳ ಕಾಕ್ಟೈಲ್ಗಳನ್ನು ನೀಡಲು ಸರ್ಕಾರದಿಂದ ಯಾವುದೇ ಸೂಚನೆಗಳಿಲ್ಲ. ನಾವು ತನಿಖೆಗೆ ಆದೇಶಿಸಿದ್ದೇವೆ ಮತ್ತು ವರದಿಯನ್ನು ಸ್ವೀಕರಿಸಲಾಗಿದೆ. ತಪ್ಪಿತಸ್ಥರಿಂದ ನಾನು ಸ್ಪಷ್ಟನೆ ಕೋರಿದ್ದೇನೆ ಎಂದಿದ್ದಾರೆ.
ದೀರ್ಘಕಾಲದ ಕೋವಿಡ್ ನಿರ್ಬಂಧಗಳ ನಂತರ ದೇಶಗಳು ಪ್ರಯಾಣ ಮತ್ತು ಪ್ರವಾಸೋದ್ಯಮವನ್ನು ಕ್ರಮೇಣ ಮರುಪ್ರಾರಂಭಿಸಲು ತಯಾರಿ ನಡೆಸುತ್ತಿರುವಾಗ,ವಿಶ್ವ ಆರೋಗ್ಯ ಸಂಸ್ಥೆ ಇದುವರೆಗೆ ಭಾರತ್ ಬಯೋಟೆಕ್ ತಯಾರಿಸಿರುವ ಕೋವಾಕ್ಸಿನ್ ಲಸಿಕೆಗೆ ಅನುಮೋದನೆ ನೀಡದಿರುವುದು ಭಾರತೀಯ ವಿದ್ಯಾರ್ಥಿಗಳಲ್ಲಿ ಆತಂಕ ಎದುರಾಗಿದೆ.
ಕರೋನಾ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಭಾರತ ತನ್ನ ವ್ಯಾಕ್ಸಿನೇಷನ್ ಅಭಿಯಾನವನ್ನು ತೀವ್ರಗೊಳಿಸಲು ನಿರಂತರವಾಗಿ ಪ್ರಯತ್ನಿಸುತ್ತಿದೆ. ಇದಕ್ಕಾಗಿ ವಿದೇಶಗಳಿಂದಲೂ ಲಸಿಕೆಗಳನ್ನು ತರಿಸಿಕೊಳ್ಳಲಾಗುತ್ತಿದೆ.
Covishield Online Appointment: ಸರ್ಕಾರಿ ಸಮಿತಿಯ ಸಲಹೆಯ ಮೇರೆಗೆ ಕೋವಿಶೀಲ್ಡ್ ಲಸಿಕೆಯ ಎರಡು ಪ್ರಮಾಣಗಳ ನಡುವಿನ ಅಂತರವನ್ನು 6-8 ವಾರಗಳಿಂದ 12-16 ವಾರಗಳಿಗೆ ಹೆಚ್ಚಿಸಲು ಭಾರತ ಸರ್ಕಾರ ನಿರ್ಧರಿಸಿದೆ.
ಭಾರತ್ ಬಯೋಟೆಕ್ನ ಕೊವಾಕ್ಸಿನ್ ಲಸಿಕೆ ಭಾರತ ಮತ್ತು ಇಂಗ್ಲೆಂಡ್ ನಲ್ಲಿ ಮೊದಲು ಗುರುತಿಸಲ್ಪಟ್ಟ ಬಿ .1.617 ಮತ್ತು ಬಿ.1.1.7 ಸೇರಿದಂತೆ ಪರೀಕ್ಷಿಸಲ್ಪಟ್ಟ ಎಲ್ಲಾ ಪ್ರಮುಖ ಉದಯೋನ್ಮುಖ ರೂಪಾಂತರಗಳನ್ನು ತಟಸ್ಥಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಕಂಪನಿ ಮಾಹಿತಿ ನೀಡಿದೆ.
'ಕೋವಾಕ್ಸಿನ್ ಲಸಿಕೆಗೆ ಮತ್ತೊಮ್ಮೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಸಿಕ್ಕಿದೆ ಎಂದು ಸುಸಿತ್ರಾ ಇಲ್ಲಾ ಟ್ವಿಟ್ಟರ್ ನಲ್ಲಿ ಬರೆದಿದ್ದಾರೆ. ಇತ್ತೀಚೆಗೆ ಪ್ರಕಟವಾದ ಸಂಶೋಧನಾ ಮಾಹಿತಿಯ ಪ್ರಕಾರ, ಕೋವಾಕ್ಸಿನ್ ಹೊಸ ರೂಪಾಂತರಗಳ ವಿರುದ್ಧ ರಕ್ಷಣೆ ನೀಡುತ್ತದೆ ಎಂಬ ಅಂಶ ಬೆಳಕಿಗೆ ಬಂದಿದೆ ಎಂದು ಹೇಳಿದ್ದಾರೆ.
Vaccination in India: ಪ್ರಸ್ತುತ ಭಾರತದಲ್ಲಿ ಕೋವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್ ಲಸಿಕೆಗಳನ್ನು ಬಳಸಲಾಗುತ್ತಿದೆ. ಲಸಿಕೆ ಹಾಕಿಸಿಕೊಂಡ ಬಳಿಕ ಜ್ವರ, ನೋವುಗಳಂತಹ ಅಡ್ಡಪರಿಣಾಮಗಳು ಸಾಮಾನ್ಯವಾಗಿದ್ದರೂ ಕೂಡ ಹೊಸ ಲಸಿಕೆಯ ಪರಿಚಯದ ನಂತರ ಲಸಿಕೆಯ ಕುರಿತಾದ ಪ್ರಶ್ನೆಗಳು ಮತ್ತಷ್ಟು ಮಹತ್ವಪಡೆದುಕೊಂಡಿವೆ.
ತಜ್ಞರ ಸಮಿತಿಯು ಮಂಗಳವಾರ ಭಾರತ್ ಬಯೋಟೆಕ್ನ COVID-19 ಲಸಿಕೆ Covaxinನ ಎರಡನೇ ಮತ್ತು ಮೂರನೇ ಹಂತದ ಪರೀಕ್ಷೆಗೆ ಶಿಫಾರಸು ಮಾಡಿದೆ. ಅಂದರೆ 2ವರ್ಷದಿಂದ 18 ವರ್ಷದವರೆಗಿನವರಿಗೆ ನೀಡುವ ಕೋವಿಡ್ ಲಸಿಕೆಯ ಪರೀಕ್ಷೆ ನಡೆಸಲು ಶಿಫಾರಸು ಮಾಡಿದೆ.
Corona Vaccine Latest Update: ಇನ್ಮುಂದೆ ನಿಮಗೆ ಕೊರೊನಾ ವ್ಯಾಕ್ಸಿನ್ ಹಾಕಿಸಿಕೊಳ್ಳುವಾಗ ನಿಮಗೆ ಬೇಕಾದ ಕೊರೊನಾ ವ್ಯಾಕ್ಸಿನ್ ಆಯ್ಕೆ (Corona Vaccine Option)ಮಾಡುವ ಸ್ವಾತಂತ್ರ್ಯ ದೊರೆತಿದೆ. ಅಂದರೆ, ಕೋವಿಶೀಲ್ಡ್, ಕೊವ್ಯಾಕ್ಸಿನ್, ಸ್ಪುಟ್ನಿಕ್ V ಈ ಮೂರು ವ್ಯಾಕ್ಸಿನ್ ಗಳಲ್ಲಿ ನೀವು ಯಾವ ವ್ಯಾಕ್ಸಿನ್ ಬೇಕಾದರೂ ಆಯ್ಕೆ ಮಾಡಬಹುದು.
ಕರೋನಾ ವೈರಸ್ನಿಂದ ನಿಮ್ಮನ್ನು ರಕ್ಷಿಸಿಕೊಳ್ಳಲು ನೀವು ಕೋವಿಶೀಲ್ಡ್ ಲಸಿಕೆ ಪಡೆಯಲು ಬಯಸುವುದಾದರೆ, ಇದಕ್ಕಾಗಿ ನೀವು ಪ್ರತಿ ಡೋಸ್ಗೆ 700 ರಿಂದ 900 ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಕೋವಾಕ್ಸಿನ್ ಲಸಿಕೆಯ ಪ್ರತೀ ಡೋಸ್ ಗೆ 1250 ರಿಂದ 1500 ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ.
Sputnik V First Consignment Reaches India - ರಷ್ಯಾ ಕೊರೊನಾ ಲಸಿಕೆಯಾಗಿರುವ Sputnik V First Lot ಶನಿವಾರ ಹೈದ್ರಾಬಾದ್ ತಲುಪಿದೆ. ಈ ವ್ಯಾಕ್ಸಿನ್ ಕೊರೊನಾ ವೈರಸ್ ವಿರುದ್ಧ ಶೇ.90 ಕ್ಕಿಂತ ಅಧಿಕ ಪರಿಣಾಮಕಾರಿಯಾಗಿದೆ.
Who Should Not Take Vaccine - ಮೇ 1 ರಿಂದ, 18 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿಯೊಬ್ಬರೂ ಕರೋನಾ ಲಸಿಕೆ ನೀಡುವ ಅಭಿಯಾನ ಆರಂಭಗೊಳ್ಳುತ್ತಿದೆ. ಈ ಹಿನ್ನೆಲೆ ಕೆಲ ಆರೋಗ್ಯ ಸಮಸ್ಯೆಗಳಿರುವ ಜನರು ಕೊರೊನಾ ಲಸಿಕೆಯನ್ನು ಹಾಕಿಸಿಕೊಳ್ಳಬಾರದು ಎನ್ನಲಾಗಿದೆ. ಯಾರು ಈ ಲಸಿಕೆಯನ್ನು ಹಾಕಿಸಿಕೊಳ್ಳಬಾರದು ಎಂಬ ಮಾಹಿತಿ ಇಲ್ಲಿದೆ.
Corona Vaccine Registration for Vaccine: ಮೂರನೇ ಹಂತದಲ್ಲಿ ಫಲಾನುಭವಿಗಳಿಗೆ ನೇರವಾಗಿ ಹೋಗಿ ಲಸಿಕೆ ಪಡೆಯಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಕರೋನಾ ಲಸಿಕೆಗಾಗಿ ಇಂದಿನಿಂದ 18 ರಿಂದ 44 ವರ್ಷದೊಳಗಿನ ಜನರು ಆನ್ಲೈನ್ನಲ್ಲಿ ನೋಂದಣಿ ಪ್ರಕ್ರಿಕೆ ಪ್ರಾರಂಭವಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.