MS Dhoni: ಧೋನಿಯ ಮೊದಲ ಪ್ರೇಯಸಿ ಕಾರು ಅಪಘಾತದಲ್ಲಿಯೇ ಸಾವನ್ನಪ್ಪಿದ್ದಾ? ನಿಜವಾದ ಪ್ರೇಮಕಥೆ ಇಲ್ಲಿದೆ!!

MS Dhoni First Love Story: ಮಹೇಂದ್ರ ಸಿಂಗ್ ಧೋನಿ 2010 ರಲ್ಲಿ ಸಾಕ್ಷಿ ಅವರನ್ನು ವಿವಾಹವಾದರು.. ಆದರೆ ಅದಕ್ಕೂ ಮೊದಲು ಅವರು ಪ್ರೀತಿಸಿದ ಪ್ರೇಯಸಿ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ... ಇದೀಗ ಈ ಸ್ಟಾರ್‌ ಕ್ರಿಕೆಟಿಗನ ಲವ್ ಸ್ಟೋರಿ ತಿಳಿಯೋಣ....

Written by - Savita M B | Last Updated : Apr 1, 2024, 01:44 PM IST
  • ಐಪಿಎಲ್ 2024 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಭರ್ಜರಿ ಧೂಳೆಬ್ಬಿಸಿದರು
  • ಈ ಮಧ್ಯೆ, ಧೋನಿ ಅವರ ವೈಯಕ್ತಿಕ ಜೀವನದ ಅನೇಕ ಜನರಿಗೆ ತಿಳಿದಿಲ್ಲದ ಒಂದು ಇಂಟ್ರೆಸ್ಟಿಂಗ್‌ ಮಾಹಿತಿ ಹೊರಬಿದ್ದಿದೆ
MS Dhoni: ಧೋನಿಯ ಮೊದಲ ಪ್ರೇಯಸಿ ಕಾರು ಅಪಘಾತದಲ್ಲಿಯೇ ಸಾವನ್ನಪ್ಪಿದ್ದಾ? ನಿಜವಾದ ಪ್ರೇಮಕಥೆ ಇಲ್ಲಿದೆ!! title=

ಐಪಿಎಲ್ 2024 ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಭರ್ಜರಿ ಧೂಳೆಬ್ಬಿಸಿದರು.. ಅವರು 17 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಹಾಯದಿಂದ 37* ರನ್‌ಗಳ ಇನ್ನಿಂಗ್ಸ್‌ಗಳನ್ನು ಆಡಿದರು. ಧೋನಿಯ ಈ ಇನ್ನಿಂಗ್ಸ್ ಎಲ್ಲೆಡೆ ಚರ್ಚೆಯಾಗುತ್ತಿದೆ.

ಈ ಮಧ್ಯೆ, ಧೋನಿ ಅವರ ವೈಯಕ್ತಿಕ ಜೀವನದ ಅನೇಕ ಜನರಿಗೆ ತಿಳಿದಿಲ್ಲದ ಒಂದು ಇಂಟ್ರೆಸ್ಟಿಂಗ್‌ ಮಾಹಿತಿಯೊಂದನ್ನು ನಾವು ನಿಮಗೆ ಹೇಳಲಿದ್ದೇವೆ.. 'ಧೋನಿ: ದಿ ಅನ್‌ಟೋಲ್ಡ್ ಸ್ಟೋರಿ' ಚಿತ್ರದಲ್ಲಿ ತೋರಿಸಿರುವಂತೆ, ಅವರ ಮೊದಲ ಗೆಳತಿ ಪ್ರಿಯಾಂಕಾ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದಾರಾ? ಎನ್ನುವುದನ್ನು ಇದೀಗ ತಿಳಿಯೋಣ.. 

ಇದನ್ನೂ ಓದಿ-Urvashi Rautela: ಕ್ರಿಕೇಟಿಗ ರಿಷಭ್ ಪಂತ್‌ನನ್ನು ಕೆಣಸಿದ ಐರಾವತ ಬೆಡಗಿ: ನಟಿಗೆ ನೆಟ್ಟಿಗರಿಂದ ಕ್ಲಾಸ್!!
 
ಚಿತ್ರದಲ್ಲಿ ಧೋನಿ ಪಾಕಿಸ್ತಾನ ವಿರುದ್ಧದ ಏಕದಿನ ಪಂದ್ಯಕ್ಕಾಗಿ ವಿಮಾನದಲ್ಲಿ ಪ್ರಯಾಣಿಸುತ್ತಿರುವುದನ್ನು ತೋರಿಸಲಾಗಿದ್ದು, ಈ ಮಧ್ಯೆ ಪ್ರಿಯಾಂಕಾ ಕೂಡ ವಿಮಾನದಲ್ಲಿದ್ದು ಸಚಿನ್ ತೆಂಡೂಲ್ಕರ್ ಅವರ ಆಟೋಗ್ರಾಫ್ ಬಯಸುತ್ತಾರೆ... ಧೋನಿ ಅವರಿಗೆ ಸಚಿನ್ ಅವರ ಆಟೋಗ್ರಾಫ್ ನೀಡುತ್ತಾರೆ.. ಆಗ ಇಬ್ಬರ ನಡುವೆ ಸಂಭಾಷಣೆ ಪ್ರಾರಂಭವಾಗುತ್ತದೆ.

ಇದನ್ನೂ ಓದಿ-DC Vs CSK : ಪಂತ್ ಬ್ಯಾಟಿಂಗ್, ಮುಕೇಶ್ ಬೌಲಿಂಗ್ 20 ರನ್ ಗಳ ಮೊದಲ ಗೆಲುವು ಕಂಡ ಡೆಲ್ಲಿ ಕ್ಯಾಪಿಟಲ್ಸ್

ಫೆಬ್ರವರಿ 2006 ರಲ್ಲಿ ಪ್ರಿಯಾಂಕಾ ಮಾಹಿಗೆ ವ್ಯಾಲೆಂಟೈನ್ಸ್ ಉಡುಗೊರೆಯನ್ನು ಖರೀದಿಸಲು ಹೋಗಿ, ಕಾರು ಅಪಘಾತಕ್ಕೀಡಾಗಿ ಸಾವನ್ನಪ್ಪುದವುನ್ನು ಚಿತ್ರ ತೋರಿಸಿದೆ.. ಆದರೆ ವಾಸ್ತವವಾಗಿ ಕಥೆ ಬೇರೆಯೇ ಆಗಿದೆ.

ಮಾಧ್ಯಮ ವರದಿಗಳ ಪ್ರಕಾರ, ಧೋನಿ ತನ್ನ ಮೊದಲ ಗೆಳತಿಯನ್ನು 2005 ರಲ್ಲಿ ಅಲ್ಲ 2002 ರಲ್ಲಿ ಭೇಟಿಯಾದರು.. ಆ ಸಮಯದಲ್ಲಿ ಧೋನಿ ಭಾರತೀಯ ಕ್ರಿಕೆಟ್ ತಂಡದ ಭಾಗವಾಗಿರಲಿಲ್ಲ. ಭೇಟಿಯಾದ ನಂತರ ಇಬ್ಬರೂ ಪ್ರೀತಿಯಲ್ಲಿ ಬಿದ್ದರು.. ಶಾಶ್ವತವಾಗಿ ಒಟ್ಟಿಗೆ ಇರುವುದಾಗಿ ಭರವಸೆ ನೀಡಿದರು ಆದರೆ ವಿಧಿಯ ಆಟವೇ ಬೇರೆಯಾಗಿತ್ತು.. ವರದಿಗಳ ಪ್ರಕಾರ, ಧೋನಿಯ ಮೊದಲ ಗೆಳತಿ ಸಾವನ್ನಪ್ಪಿದ್ದು 2006ರಲ್ಲಿ ಅಲ್ಲ, 2003ರಲ್ಲಿ. ಆಗ ಜಿಂಬಾಬ್ವೆ ಪ್ರವಾಸದಲ್ಲಿ ಭಾರತ ಎ ತಂಡಕ್ಕೆ ಧೋನಿ ಆಯ್ಕೆಯಾಗಿ.. 6 ಇನ್ನಿಂಗ್ಸ್‌ಗಳಲ್ಲಿ 362 ರನ್ ಗಳಿಸಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News