IPL 2024: ಇಂದು RCB ಮ್ಯಾಚ್‌ ಗೆದ್ದರೂ‌ ಪ್ಲೇಆಫ್ ಗೆ ಹೋಗೋದು ಡೌಟ್? ಯಾಕೆ ಗೊತ್ತಾ! ‌

IPL 2024 RCB vs CSK : ಪ್ಲೇಆಫ್‌ಗೆ ಹೋಗಲು ಎರಡು ತಂಡಗಳಿಗೂ ಈ ಮ್ಯಾಚ್‌ ಗೆಲ್ಲುವುದು ಅವಶ್ಯಕವಾಗಿದೆ. ಆದರೆ ಇಂದು ಈ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ದಟ್ಟವಾಗಿದೆ. 

Written by - Chetana Devarmani | Last Updated : May 18, 2024, 08:50 AM IST
  • ಆರ್‌ಸಿಬಿ ಹಾಗೂ ಸಿಎಸ್‌ಕೆ ಪಂದ್ಯ
  • ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೈವೋಲ್ಟೇಜ್ ಪಂದ್ಯ
  • ಪ್ಲೇಆಫ್‌ಗೆ ಹೋಗಲು ಎರಡು ತಂಡಗಳ ಪೈಪೋಟಿ
IPL 2024: ಇಂದು RCB ಮ್ಯಾಚ್‌ ಗೆದ್ದರೂ‌ ಪ್ಲೇಆಫ್ ಗೆ ಹೋಗೋದು ಡೌಟ್? ಯಾಕೆ ಗೊತ್ತಾ! ‌  title=

RCB vs CSK playoff scenario : ಆರ್‌ಸಿಬಿ ಹಾಗೂ ಸಿಎಸ್‌ಕೆ (RCB vs CSK) ನಡುವೆ ಇಂದು ಮೇ 18 ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಹೈವೋಲ್ಟೇಜ್ ಪಂದ್ಯ ನಡೆಯಲಿದೆ. ಪ್ಲೇಆಫ್‌ಗೆ ಹೋಗಲು ಎರಡು ತಂಡಗಳಿಗೂ ಈ ಮ್ಯಾಚ್‌ ಗೆಲ್ಲುವುದು ಅವಶ್ಯಕವಾಗಿದೆ. ಆದರೆ ಇಂದು ಈ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ದಟ್ಟವಾಗಿದೆ. 

ಇದು RCB ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ. ಈ ಪಂದ್ಯ ಇಂದು ಬೆಂಗಳೂರಿನಲ್ಲಿ ನಡೆಯಲಿದೆ. ಒಂದು ವೇಳೆ ಇಂದು ಮಳೆ ಬಂದು ಪಂದ್ಯ ರದ್ದಾದರೆ ಸಿಎಸ್‌ಕೆ ಮತ್ತು ಆರ್‌ಸಿಬಿ ಈ ಎರಡು ತಂಡದಲ್ಲಿ ಯಾರು ಪ್ಲೇ ಆಫ್‌ಗೆ ಹೋಗಲಿದ್ದಾರೆ ಎಂಬುದು ಕ್ರಿಕೆಟ್‌ ಅಭಿಮಾನಿಗಳಿಗೆ ಕುತೂಹಲ ಮೂಡಿಸಿದೆ. 

ಇಂದು ಬೆಂಗಳೂರಿನಲ್ಲಿ ಆರ್‌ಸಿಬಿ ಮತ್ತು ಸಿಎಸ್‌ಕೆ ಪಂದ್ಯದ ವೇಳೆ ಮಳೆ ಬಂದರೆ ಬೆಂಗಳೂರು ತಂಡದ ಅಭಿಮಾನಿಗಳಿಗೆ ನಿರಾಸೆಯಾಗಲಿದೆ. ಐಪಿಎಲ್‌ 2024 ರಲ್ಲಿ CSK ನಾಲ್ಕನೇ ತಂಡವಾಗಿ ಸುಲಭವಾಗಿ ಪ್ಲೇಆಫ್‌ ಪ್ರವೇಶಿಸಲಿದೆ. RCB ಮತ್ತೊಮ್ಮೆ ಲೀಗ್‌ನಿಂದ ಹೊರಬೀಳಲಿದೆ. 

ಇದನ್ನೂ ಓದಿ: LSG vs MI: ಅಬ್ಬರಿಸಿ ಬೊಬ್ಬಿರಿದ ಪೂರಣ್, ಲಕ್ನೋ ಜೈಂಟ್ಸ್ ಗೆ 18 ರನ್ ಗಳ ಭರ್ಜರಿ ಗೆಲುವು  

ಒಂದು ವೇಳೆ ಪಂದ್ಯದ ದಿನ ಮಳೆ ಬಾರದೆ ಇದ್ದರೂ ಸಹ ಆರ್‌ಸಿಬಿ ಪ್ಲೇಆಫ್‌ ಪ್ರವೇಶಿಸುವುದು ಅಷ್ಟು ಸುಲಭವಾಗಿಲ್ಲ. ಆರ್‌ಸಿಬಿಗಿಂತ ಸಿಎಸ್‌ಕೆ ಒಂದು ಹೆಚ್ಚಿನ ಪಂದ್ಯವನ್ನು ಗೆದ್ದಿರುವುದು ಪ್ಲಸ್‌ ಪಾಯಿಂಟ್‌ ಆಗಲಿದೆ. ಅಲ್ಲದೇ ಸಿಎಸ್‌ಕೆ ನೆಟ್​ ರನ್‌ ರೇಟ್ (NRR)​ ಕೂಡ‌ RCB ಗಿಂತ ಹೆಚ್ಚಾಗಿದೆ.

ಚೆನ್ನೈ 13 ಪಂದ್ಯಗಳನ್ನಾಡಿದ್ದು 7 ರಲ್ಲಿಗೆಲುವು ಸಾಧಿಸಿದೆ. CSK 6 ಪಂದ್ಯಗಳಲ್ಲಿ ಸೋತು 14 ಅಂಕ ಹೊಂದಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಾಯಿಂಟ್ ಪಟ್ಟಿಯಲ್ಲಿ 6 ನೇ ಸ್ಥಾನದಲ್ಲಿದೆ. RCB 13 ಪಂದ್ಯಗಳಲ್ಲಿ 6 ಮ್ಯಾಚ್‌ ಗೆದ್ದಿದ್ದು, 7 ರಲ್ಲಿ ಸೋತಿದ್ದು 12 ಅಂಕ  ಹೊಂದಿದೆ. ಚೆನ್ನೈ ಸೂಪರ್ ಕಿಂಗ್ಸ್ ರನ್ ರೇಟ್ +0.528 ಮತ್ತು ಬೆಂಗಳೂರಿನ ರನ್ ರೇಟ್ +0.387 ಆಗಿದೆ. 

ಬೆಂಗಳೂರು ತಂಡ ಚೆನ್ನೈ ವಿರುದ್ಧ ಮೊದಲು ಬ್ಯಾಟ್ ಮಾಡಿ, 200 ರನ್ ಗಳಿಸಿ ಕನಿಷ್ಠ 18 ರನ್ ಗಳ ಅಂತರದಿಂದ ಮ್ಯಾಚ್‌ ವಿನ್‌ ಆದರೆ ಪ್ಲೇ ಆಫ್‌ ಕನಸು ಈಡೇರಲಿದೆ. ಒಂದು ವೇಳೆ ಬೆಂಗಳೂರು 200 ರನ್‌ಗಳ ಗುರಿ ಬೆನ್ನಟ್ಟಿದರೆ 11 ಎಸೆತ ಬಾಕಿ ಇರುವಾಗಲೇ ಪಂದ್ಯ ಗೆಲ್ಲಲೇಬೇಕು. ಆದರೆ ಗುರಿ ಬೇರೆಯಾದರೆ ಅದಕ್ಕೆ ಸಮೀಕರಣಗಳೂ ಬದಲಾಗುತ್ತವೆ. ಹೀಗಾಗಿ RCB ಪ್ಲೇಆಫ್‌ಗೆ ಅರ್ಹತೆ ಪಡೆಯುವುದು ಸುಲಭವಲ್ಲ. 

ಇದನ್ನೂ ಓದಿ: ಪ್ಲೇಆಫ್ ತಲುಪಿದ ಹೈದರಾಬಾದ್ ತಂಡ.. ಖುಷಿಯಲ್ಲಿ ಸನ್‌ರೈಸರ್ಸ್‌ ಮಾಜಿ ನಾಯಕನ್ನು ಅಪ್ಪಿಕೊಂಡ ಕಾವ್ಯಾ ಮಾರನ್!!‌

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News