Almond Side Effects: ಈ ಸಮಸ್ಯೆ ಇರುವವರು ಮರೆತೂ ಬಾದಾಮಿ ತಿನ್ನಬೇಡಿ

Almond Side Effects: ಕೆಲವು ಆರೋಗ್ಯ ಸಮಸ್ಯೆ ಇರುವವರಿಗೆ ಬಾದಾಮಿ ಸೇವನೆ ತುಂಬಾ ಅಪಾಯಕಾರಿ ಎಂದು ಸಾಬೀತುಪಡಿಸಬಹುದು. 
 

Almond Side Effects: ಒಣಹಣ್ಣುಗಳಲ್ಲಿ ಬಾದಾಯಿಯನ್ನು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಬಾದಾಮಿಯು ವಿಟಮಿನ್‌ಗಳು, ಪ್ರೋಟೀನ್‌ಗಳು, ಫೈಬರ್, ಆಂಟಿಆಕ್ಸಿಡೆಂಟ್‌ಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಬಾದಾಮಿಯಲ್ಲಿ ಹಲವಾರು ಔಷಧೀಯ ಗುಣಗಳಿದ್ದು, ಇದು ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ಒದಗಿಸುತ್ತದೆ. ಆದರೆ, ಕೆಲವು ಆರೋಗ್ಯ ಸಮಸ್ಯೆ ಇರುವವರಿಗೆ ಬಾದಾಮಿ ಸೇವನೆ ತುಂಬಾ ಅಪಾಯಕಾರಿ ಎಂದು ಸಾಬೀತುಪಡಿಸಬಹುದು. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಕಿಡ್ನಿ ಸ್ಟೋನ್: ಕಿಡ್ನಿ ಸ್ಟೋನ್ ಸಮಸ್ಯೆ ಇರುವವರಿಗೆ ಬಾದಾಮಿ ಸೇವನೆ ಅಪಾಯಕಾರಿ ಎಂದು ಸಾಬೀತುಪಡಿಸಬಹುದು. ಬಾದಾಮಿಯಲ್ಲಿ ಆಕ್ಸಲೇಟ್ ಉತ್ತಮ ಪ್ರಮಾಣದಲ್ಲಿರುತ್ತದೆ. ಇದು ಕಿಡ್ನಿಯಲ್ಲಿ ಸಂಗ್ರಹವಾಗಿ ಸ್ಟೋನ್ ಅಪಾಯವನ್ನು ಹೆಚ್ಚಿಸುತ್ತದೆ. ಹಾಗಾಗಿ, ಕಿಡ್ನಿ ಸ್ಟೋನ್ ಸಮಸ್ಯೆ ಇರುವವರಿಗೆ ಬಾದಾಮಿ ಸೇವನೆ ಒಳ್ಳೆಯದಲ್ಲ.

2 /5

ಅಲರ್ಜಿ: ಕೆಲವರಿ ಬಾದಾಮಿ ಸೇವನೆಯಿಂದ ಅಲರ್ಜಿ ಸಮಸ್ಯೆ ಉಂಟಾಗಬಹುದು. ಇದರಲ್ಲಿರುವ ಅಮಾಂಡಿನ್ ಎಂಬ ಪ್ರೋಟೀನ್ ಅಲರ್ಜಿ ಸಮಸ್ಯೆ ಉಂಟುಮಾಡುತ್ತದೆ. ನಿಮಗೆ ಮೊದಲೇ ಅಲರ್ಜಿ ಸಮಸ್ಯೆ ಇದ್ದರೆ ಬಾದಾಮಿ ಸೇವನೆ ತಪ್ಪಿಸಿ.

3 /5

ಜೀರ್ಣಕಾರಿ ಸಮಸ್ಯೆ: ಬಾದಾಮಿ ಸೇವನೆಯು ಕೆಲವರಿಗೆ ಜೀರ್ಣಕಾರಿ ಸಮಸ್ಯೆ ಉಂಟು ಮಾಡಬಹುದು. ಅಧಿಕ ಬಾದಾಮಿ ಸೇವನೆಯಿಂದ ಮಲಬದ್ಧತೆ ಸಮಸ್ಯೆಯೂ ಉಂಟಾಗಬಹುದು.

4 /5

ಉಸಿರಾಟದ ಸಮಸ್ಯೆ: ಬಾದಾಮಿಯಲ್ಲಿ ಹೈಡ್ರೋಸಯಾನಿಕ್ ಆಸಿಡ್ ಇರುವುದರಿಂದ ಉಸಿರಾಟದ ಸಮಸ್ಯೆ ಇರುವವರಿಗೆ ಇದು ಅಪಾಯಕಾರಿ ಎಂದು ಸಾಬೀತುಪಡಿಸಬಹುದು.

5 /5

ಬಾದಾಮಿ ತಿನ್ನಲು ಸರಿಯಾದ ಮಾರ್ಗ ಯಾವುದು? ನಮ್ಮಲ್ಲಿ ಬಹುತೇಕ ಮಂದಿ ಬಾದಾಮಿಯನ್ನು ಸಿಪ್ಪೆ ತೆಗೆದು ತಿನ್ನುತ್ತಾರೆ. ಬಾದಾಮಿ ಸಿಪ್ಪೆಯಲ್ಲಿ ಪಾಲಿಫಿನಾಲ್ ಮತ್ತು ಫೈಬರ್ ಇರುತ್ತದೆ. ಸಿಪ್ಪೆ ಇಲ್ಲದೆ ಬಾದಾಮಿ ಸೇವಿಸುವುದರಿಂದ ಪೌಷ್ಟಿಕಾಮ್ಶವು ಪೂರ್ಣ ಪ್ರಮಾಣದಲ್ಲಿ ಲಭ್ಯವಾಗುವುದಿಲ್ಲ.  ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. ಇದನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆ ಪಡೆಯಿರಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.