Business Idea: ಇಂದೇ ಈ ಸೂಪರ್ ಹಿಟ್ ಬಿಸ್ನೆಸ್ ಆರಂಭಿಸಿ ತಿಂಗಳಿಗೆ 10 ಲಕ್ಷ ಸಂಪಾದಿಸಿ

Business Idea: ಒಂದು ವೇಳೆ ನೀವೂ ಕೂಡ ಬಿಸ್ನೆಸ್ ಮಾಡುವ  ನಿಮ್ಮ ನಿರ್ಧಾರವನ್ನು ಖಚಿತಪಡಿಸಿದ್ದು, ಸಣ್ಣ ಪ್ರಮಾಣದ ಹೂಡಿಕೆಯಿಂದ ಕೈತುಂಬಾ ಲಾಭ ಗಳಿಸಲು ಯೋಚಿಸುತ್ತಿದ್ದರೆ, ಈ ಸುದ್ದಿ ನಿಮಗಾಗಿ. ಇಂದು ನಾವು ನಿಮಗೆ ಹೇಳಲು ಹೊರಟಿರುವ ಈ ಬಿಸ್ನೆಸ್ ಮಾಡಿ ನೀವು ಅತ್ಯಲ್ಪ ಹೂಡಿಕೆಯಿಂದ ಭಾರಿ ಲಾಭವನ್ನು ಪಡೆಯಬಹುದು.

Business Idea: ಒಂದು ವೇಳೆ ನೀವೂ ಕೂಡ ಬಿಸ್ನೆಸ್ ಮಾಡುವ  ನಿಮ್ಮ ನಿರ್ಧಾರವನ್ನು ಖಚಿತಪಡಿಸಿದ್ದು, ಸಣ್ಣ ಪ್ರಮಾಣದ ಹೂಡಿಕೆಯಿಂದ ಕೈತುಂಬಾ ಲಾಭ ಗಳಿಸಲು ಯೋಚಿಸುತ್ತಿದ್ದರೆ, ಈ ಸುದ್ದಿ ನಿಮಗಾಗಿ. ಇಂದು ನಾವು ನಿಮಗೆ ಹೇಳಲು ಹೊರಟಿರುವ ಈ ಬಿಸ್ನೆಸ್ ಮಾಡಿ ನೀವು ಅತ್ಯಲ್ಪ ಹೂಡಿಕೆಯಿಂದ ಭಾರಿ ಲಾಭವನ್ನು ಪಡೆಯಬಹುದು. ಹೌದು, ಹಾಲೋತ್ಪನ್ನಗಳ ಕಂಪನಿಯಾಗಿರುವ ಅಮೂಲ್ ಜೊತೆಗೂಡಿ ಬಿಸ್ನೆಸ್ ಮಾಡುವ ಸುವರ್ಣಾವಕಾಶ ನಿಮ್ಮ ಬಳಿ ಇದೆ. ಅಮೂಲ್ ಫ್ರೇಂಚೈಸಿ ತೆರೆಯುವ ಮೂಲಕ ನೀವು ಪ್ರತಿ ತಿಂಗಳಿಗೆ ಬಂಪರ್  ಲಾಭವನ್ನು ಗಳಿಕೆ ಮಾಡಬಹುದು. ಅಮೂಲ್ ಫ್ರಂಚೈಸೆ ತೆರೆಯುವ ಪ್ರಕ್ರಿಯೆ ತುಂಬಾ ಸುಲಭವಾಗಿದೆ. ಹಾಗಾದರೆ ಬನ್ನಿ ಅಮೂಲ್ ಫ್ರಂಚೈಸೆ ತೆರೆದು ನೀವು ಹೇಗೆ ಗಳಿಕೆ ಮಾಡಬಹುದು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,

 

ಇದನ್ನೂ ಓದಿ-Digital Rupee: ಡಿಸೆಂಬರ್ 1 ಕ್ಕೆ ಡಿಜಿಟಲ್ ರೂಪಾಯಿ e₹-R ಬಿಡುಗಡೆ! RBI ನಿಂದ ಮಹತ್ವದ ಘೋಷಣೆ

 

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಯಾವುದೇ ರೀತಿಯ ಹೂಡಿಕೆಗೆ ಸಲಹೆ ನೀಡುವುದಿಲ್ಲ)

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

1. ಅಮೂಲ್ ಕಂಪನಿಯ ಜೊತೆಗೂಡಿ ಬಿಸ್ನೆಸ್ ಮಾಡುವುದು ತುಂಬಾ ಸುಲಭವಾಗಿದೆ. ಇದರ ಹಿಂದೆ ಎರಡು ಪ್ರಮುಖ ಕಾರಣಗಳಿವೆ. ಒಂದು ಅಮೂಲ್ ಕಂಪನಿಯ ಕಸ್ಟಮರ್ ಬೇಸ್ ಹಾಗೂ ಎರಡನೆಯದಾಗಿ ಇದನ್ನು ನೀವು ನಗರದ ಯಾವುದೇ ಲೋಕೇಶನ್ ನಲ್ಲಿ ತೆರೆಯಬಹುದು. ಪ್ರತಿಯೊಂದು ನಗರದಲ್ಲಿ ಅಮೂಲ್ ಕಂಪನಿಯ ಕಸ್ಟಮರ್ ಬೇಸ್ ತುಂಬಾ ಉತ್ತಮವಾಗಿದೆ. ಪ್ರತಿಯೊಂದು ನಗರದಲ್ಲಿ ಗ್ರಾಹಕರು ಈ ಕಂಪನಿಯ ಉತ್ಪನ್ನಗಳನ್ನು ಗುರುತಿಸುತ್ತಾರೆ. ದೊಡ್ಡ ದೊಡ್ಡ ನಗರಗಳು ಸೇರಿದಂತೆ ಸಣ್ಣ ಪುಟ್ಟ ನಗರಗಳಿಗೂ ಕೂಡ ಈ ಕಂಪನಿಯ ಉತ್ಪನ್ನಗಳು ತಲುಪಿವೆ. ಹೀಗಾಗಿ ಅಮೂಲ್ ಫ್ರಂಚೈಸಿ ಪಡೆಯುವುದು ನಷ್ಟದ ವ್ಯವಹಾರ ಸಾಬೀತಾಗುವ ಸಾಧ್ಯತೆ ತೀರಾ ಕಮ್ಮಿ.   

2 /6

2. ಅಮುಲ್ ತನ್ನ ವ್ಯಾಪಾರವನ್ನು ಅಭಿವೃದ್ಧಿಪಡಿಸಲು ಒಟ್ಟು ಎರಡು ರೀತಿಯ ಫ್ರಾಂಚೈಸಿಗಳನ್ನು ನೀಡುತ್ತಿದೆ. ನೀವೂ ಕೂಡ ಅಮುಲ್ ಔಟ್ಲೆಟ್, ಅಮುಲ್ ರೈಲ್ವೇ ಪಾರ್ಲರ್ ಅಥವಾ ಅಮುಲ್ ಕಿಯೋಸ್ಕ್ನ ಫ್ರಾಂಚೈಸಿಯನ್ನು ತೆರೆಯಲು ಬಯಸುತ್ತಿದ್ದರೆ, ನೀವು ಅದರಲ್ಲಿ ಸುಮಾರು 2 ಲಕ್ಷ ರೂಪಾಯಿಗಳ ಹೂಡಿಕೆ ಮಾಡಬೇಕಾಗುತ್ತದೆ. ಇದರಲ್ಲಿ 25 ಸಾವಿರ ರೂಪಾಯಿ ಮರುಪಾವತಿಯಾಗದ ಬ್ರ್ಯಾಂಡ್ ಸೆಕ್ಯುರಿಟಿ, 1 ಲಕ್ಷ ರೂಪಾಯಿ ನವೀಕರಣಕ್ಕಾಗಿ, 75 ಸಾವಿರ ರೂಪಾಯಿ ಉಪಕರಣಗಳಿಗೆ ವೆಚ್ಚ ತಗುಲುತ್ತದೆ. ಹೆಚ್ಚಿನ ಮಾಹಿತಿಗಾಗಿ, ಅಮೂಲ್ ಕಂಪನಿಯಾ ವೆಬ್‌ಸೈಟ್ ಅಥವಾ ಫ್ರ್ಯಾಂಚೈಸಿ ಪುಟಕ್ಕೆ ಭೇಟಿ ನೀಡಿ.  

3 /6

3. ನೀವು ಅಮುಲ್ ಐಸ್ ಕ್ರೀಮ್ ಸ್ಕೂಪಿಂಗ್ ಪಾರ್ಲರ್ ಅನ್ನು ತೆರೆಯಲು ಬಯಸುತ್ತಿದ್ದು  ಮತ್ತು ಅದರ ಫ್ರ್ಯಾಂಚೈಸ್‌ಗಾಗಿ ಯೋಜನೆ ರೂಪಿಸುತ್ತಿದ್ದಾರೆ, ನಿಮಗೆ ಇದರಲ್ಲಿ ಸ್ವಲ್ಪ ಹೆಚ್ಚು ಹೂಡಿಕೆಯ ಅಗತ್ಯವಿರುತ್ತದೆ. ಇದನ್ನು ತೆರೆಯಲು, ನೀವು ಸುಮಾರು 5 ಲಕ್ಷ ರೂ. ಖರ್ಚು ಮಾಡಬೇಕಾಗುತ್ತದೆ.ಇದರಲ್ಲಿ 50 ಸಾವಿರ ರೂ. ಬ್ರಾಂಡ್ ಭದ್ರತೆ, 4 ಲಕ್ಷ ರೂ. ನವೀಕರಣ,  1.50 ಲಕ್ಷ ರೂ ಉಪಕರಣ ವೆಚ್ಚಗಳು ಶಾಮೀಲಾಗಿವೆ.  

4 /6

4. ನೀವು ಅಮುಲ್ ಔಟ್ಲೆಟ್ನ ಫ್ರಾಂಚೈಸಿಯನ್ನು ತೆಗೆದುಕೊಂಡರೆ, ಇದಕ್ಕಾಗಿ ನೀವು ಕೇವಲ 150 ಚದರ ಅಡಿ ಜಾಗವನ್ನು ಹೊಂದಿರಬೇಕು. ನಿಮಗೆ ಸಾಕಷ್ಟು ಸ್ಥಳವಿದ್ದರೆ, ಅಮುಲ್ ನಿಮಗೆ ಫ್ರಾಂಚೈಸಿಯನ್ನು ನೀಡುತ್ತದೆ. ಆದರೆ, ಅಮುಲ್ ಐಸ್ ಕ್ರೀಮ್ ಪಾರ್ಲರ್ ನ ಫ್ರಾಂಚೈಸಿಗೆ ಕನಿಷ್ಠ 300 ಚದರ ಅಡಿ ಜಾಗ ಇರಬೇಕು. ನಿಮ್ಮ ಬಳಿ ಸಾಕಷ್ಟು ಸ್ಥಳಾವಕಾಶವಿಲ್ಲದಿದ್ದರೆ ಅಮುಲ್ ಫ್ರಾಂಚೈಸಿಯನ್ನು ನೀಡುವುದಿಲ್ಲ.  

5 /6

5. ಅಮುಲ್ ಫ್ರಾಂಚೈಸಿ ನೀಡಿರುವ ಮಾಹಿತಿ ಪ್ರಕಾರ ಫ್ರಾಂಚೈಸಿ ಮೂಲಕ ಪ್ರತಿ ತಿಂಗಳು ಸುಮಾರು 5 ರಿಂದ 10 ಲಕ್ಷ ರೂಪಾಯಿ ಗಳಿಕೆ ಮಾಡಬಹುದು. ಅಮುಲ್ ಔಟ್ಲೆಟ್ ತೆಗೆದುಕೊಳ್ಳುವಾಗ, ಕಂಪನಿಯು ಅಮುಲ್ ಉತ್ಪನ್ನಗಳ ಕನಿಷ್ಠ ಮಾರಾಟ ಬೆಲೆ (MRP) ಮೇಲೆ ಕಮಿಷನ್ ಪಾವತಿಸುತ್ತದೆ. ಇದರಲ್ಲಿ ಹಾಲಿನ ಪೌಚ್ ಮೇಲೆ ಶೇ.2.5 ರಷ್ಟು , ಹಾಲೋತ್ಪನ್ನಗಳ ಮೇಲೆ ಶೇ.10 ಮತ್ತು ಐಸ್ ಕ್ರೀಂ ಮೇಲೆ ಶೇ.20 ಕಮಿಷನ್ ಲಭ್ಯವಿದೆ.  

6 /6

6. ಅಮುಲ್ ಐಸ್ ಕ್ರೀಮ್ ಸ್ಕೂಪಿಂಗ್ ಪಾರ್ಲರ್‌ನ ಫ್ರಾಂಚೈಸಿಯನ್ನು ತೆಗೆದುಕೊಳ್ಳುವಾಗ, ನೀವು ಪಾಕವಿಧಾನ ಆಧಾರಿತ ಐಸ್ ಕ್ರೀಮ್, ಶೇಕ್, ಪಿಜ್ಜಾ, ಸ್ಯಾಂಡ್‌ವಿಚ್, ಹಾಟ್ ಚಾಕೊಲೇಟ್ ಹಾಗೂ ಪಾನೀಯಗಳ ಮೇಲೆ 50% ಕಮಿಷನ್ ಪಡೆಯುವಿರಿ. ಇದೇ ವೇಳೆ ಕಂಪನಿಯು ಪೂರ್ವ-ಪ್ಯಾಕ್ ಮಾಡಿದ ಐಸ್ ಕ್ರೀಮ್ ಮೇಲೆ ಶೇ.20 ರಷ್ಟು ಮತ್ತು ಅಮುಲ್ ಉತ್ಪನ್ನಗಳ ಮೇಲೆ ಶೇ.10 ರಷ್ಟು ಕಮಿಷನ್ ನೀಡುತ್ತದೆ.