Gautam Adani ಗೆ ಮುಳುವಾಯಿತೆ ಶನಿಯ ಸಾಡೆಸಾತಿ! ಮುಂದೀನಾಗಲಿದೆ? ಜೋತಿಷ್ಯ ಪಂಡಿತರು ಹೇಳುವುದೇನು?

Horoscope: ಖ್ಯಾತ ಉದ್ಯಮಿ ಗೌತಮ್ ಅದಾನಿ ಪ್ರಸ್ತುತ ತುಂಬಾ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಜೋತಿಷ್ಯ ಶಾಸ್ತ್ರದ ಪ್ರಕಾರ ಅವರ ಮೇಲೆ ಶನಿಯ ಏಳೂವರೆ ವರ್ಷಗಳ ಕಾಟ  ಆರಂಭವಾಗಿದೆ ಎನ್ನಲಾಗಿದೆ. ಮುಂದೆ ಅದಾನಿ ಅವರ ಸಮಯ ಹೇಗೆ ಇರಲಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,  

Written by - Nitin Tabib | Last Updated : Feb 6, 2023, 09:39 PM IST
  • ಗೌತಮ್ ಅದಾನಿಗೆ, ಜನವರಿ 17 ರಿಂದ ಶನಿಯ ಸಾಡೆಸಾತಿ ಆರಂಭಗೊಂಡಿದೆ ಮತ್ತು
  • ಜನವರಿ 17 ರ ಆರಂಭದಿಂದ ಕಳೆದ 18 ದಿನಗಳಲ್ಲಿ ಅವರು ಭಾರಿ ನಷ್ಟವನ್ನು ಅನುಭವಿಸಿದ್ದಾರೆ.
  • ಅಂದರೆ ಅವರಿಗೆ ಸುಮಾರು 150 ಬಿಲಿಯನ್ ನಷ್ಟವಾಗಿದೆ ಎನ್ನಲಾಗಿದೆ.
Gautam Adani ಗೆ ಮುಳುವಾಯಿತೆ ಶನಿಯ ಸಾಡೆಸಾತಿ! ಮುಂದೀನಾಗಲಿದೆ? ಜೋತಿಷ್ಯ ಪಂಡಿತರು ಹೇಳುವುದೇನು? title=
ಗೌತಮ್ ಅದಾನಿ ಕುಂಡಲಿ ವಿಶ್ಲೇಷಣೆ

Astrology: ಖ್ಯಾತ ಉದ್ಯಮಿ ಗೌತಮ್ ಅದಾನಿ ತಮ್ಮ ಜೀವನದ ಅತ್ಯಂತ ಸಂಕಷ್ಟದ ಪರಿಷ್ಟಿತಿಯನ್ನು ಎದುರಿಸುತ್ತಿದ್ದಾರೆ . ಅದಾನಿ ಕಂಪನಿಯ ಷೇರುಗಳು ನಿರಂತರವಾಗಿ ಕುಸಿಯುತ್ತಿವೆ. ಗೌತಮ್ ಅದಾನಿ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ವಿಶ್ವದ ಎರಡನೇ ಮತ್ತು ಏಷ್ಯಾದ ಶ್ರೀಮಂತ ವ್ಯಕ್ತಿಯಾಗಿದ್ದರು. ಆದರೆ ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಪ್ರಸ್ತುತ ಅದಾನಿ ಆಸ್ತಿ $ 59 ಬಿಲಿಯನ್ ಗೆ ತಲುಪಿದೆ. ಕಳೆದ 6 ತಿಂಗಳಲ್ಲೇ ಅದಾನಿ ಸಂಪತ್ತು 91 ಬಿಲಿಯನ್ ಡಾಲರ್‌ಗೂ ಹೆಚ್ಚು ಕುಸಿದಿದೆ.

ಶನಿ ಸಾಡೇ ಸತಿ ಶುರುವಾಗಿದೆ.. ಮುಂದೆ ಏನಾಗುತ್ತೆ!
ಗೌತಮ್ ಅದಾನಿಗೆ, ಜನವರಿ 17 ರಿಂದ ಶನಿಯ ಸಾಡೆಸಾತಿ ಆರಂಭಗೊಂಡಿದೆ ಮತ್ತು ಜನವರಿ 17 ರ ಆರಂಭದಿಂದ ಕಳೆದ 18 ದಿನಗಳಲ್ಲಿ ಅವರು ಭಾರಿ ನಷ್ಟವನ್ನು ಅನುಭವಿಸಿದ್ದಾರೆ. ಅಂದರೆ ಅವರಿಗೆ ಸುಮಾರು 150 ಬಿಲಿಯನ್ ನಷ್ಟವಾಗಿದೆ ಎನ್ನಲಾಗಿದೆ. ರಾಹುವಿನ ದೆಸೆಯಿಂದ ಅವರಿಗೆ ಆಗುತ್ತಿದ್ದ ಲಾಭಗಳು, ಸಾಡೇಸಾತಿ ಆರಂಭದಿಂದ ಮುಕ್ತಾಯಗೊಂಡಿವೆ ಎಂಬುದು ಜೋತಿಷ್ಯ ತಜ್ಞರ ಅಭಿಪ್ರಾಯವಾಗಿದೆ. ಶನಿಯ ಈ ಸಾಡೇಸಾತಿಯ ಚಕ್ರದ ಮೊದಲ ಹಂತ ಅಂದರೆ  ಮುಂದಿನ ಎರಡೂವರೆ ವರ್ಷಗಳವರೆಗೆ ಇರಲಿದೆ. ಇನ್ನೊಂದೆಡೆ ಕುಂಡಲಿಯಲ್ಲಿ ಅಶುಭ ಪಾಪಕರ್ತರಿ ಯೋಗವೂ ರೂಪುಗೊಂಡಿದೆ ಎಂಬುದು ಜೋತಿಷ್ಯ ಪಂಡಿತರ ಅಭಿಪ್ರಾಯ. ಇದೇ ಅವಧಿಯಲ್ಲಿ ಶುಕ್ರನ ಮಹಾದೆಸೆ ಹಾಗೂ ರಾಹುವಿನ ಅಂತರ ಮತ್ತು ಪ್ರತ್ಯಂತರ ದೆಸೆ ಕೂಡ  ನಡೆಯುತ್ತಿದೆ. ಈ ಕಾರಣದಿಂದ ಅವರಿಗೆ ಸಾಕಷ್ಟು ಹಾನಿ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ. ಮತ್ತೊಂದೆಡೆ, ಜೂನ್ ನಂತರ, ಶುಕ್ರ-ರಾಹು-ಬುಧಗಳ ದೆಸೆಯಿಂದ ಅವರೋಗೆ ಸ್ವಲ್ಪ ನೆಮ್ಮದಿ ಸಿಗಲಿದೆ ಎಂಬ ಅಭಿಪ್ರಾಯ ಕೂಡ ಅವರು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ- Mahashivratri 2023 ರಂದು ರೂಪುಗೊಳ್ಳುತ್ತಿದೆ ಅಪರೂಪದ ಕಾಕತಾಳೀಯ, ಮರೆತೂ ಈ ತಪ್ಪುಗಳನ್ನು ಮಾಡ್ಬೇಡಿ

ಗೌತಮ್ ಅದಾನಿ ಅವರ ಕುಂಡಲಿ ವಿಶ್ಲೇಷಣೆ
ಮತ್ತೊಂದೆಡೆ, ಜ್ಯೋತಿಷ್ಯದ ದೃಷ್ಟಿಕೋನದಿಂದ ನೋಡಿದರೆ, ಗೌತಮ್ ಅದಾನಿ 24 ಜೂನ್ 1962 ರಂದು ಅಹಮದಾಬಾದ್‌ನಲ್ಲಿ ಜನಿಸಿದ್ದಾರೆ ಮತ್ತು ಅವನ ಹುಟ್ಟಿದ ಸಮಯ ಬೆಳಗ್ಗೆ  5:15 ಆಗಿತ್ತು. ಅವನ ಲಗ್ನ ಜಾತಕವು ವೃಷಭ ರಾಶಿಯಾಗಿದ್ದು, ಸಂಪತ್ತು ಮತ್ತು ಬುದ್ಧಿಶಕ್ತಯ ಅಧಿಪತಿ ಅವನ ಲಗ್ನ ಭಾವದಲ್ಲಿ ಕುಳಿತಿದ್ದಾನೆ ಎಂಬುದು ಜೋತಿಷಿಗಳ ಲೆಕ್ಕಾಚಾರ. ಅವರ ಮೇಲೆ ಬುಧನ ದೆಸೆ ಆರಂಭಗೊಂಡ ಮೇಲೆ ಅವರು ಭಾರಿ ಉತ್ತುಂಗ ಶಿಖರಕ್ಕೆ ಏರಿದ್ದಾರೆ. ಇದೇ ವೇಳೆ, ಅವರ ಜಾತಕದ ದಶಮ ಭಾವದಲ್ಲಿ ಗಜಕೇಸರಿ ರಾಜಯೋಗವು ರೂಪುಗೊಂಡಿದೆ. ಸ್ವರಾಶಿಯಲ್ಲಿ ಶನಿದೇವನು ಭಾಗ್ಯಸ್ಥಾನದಲ್ಲಿ ಕೇತುವಿನ ಜೊತೆ ಕುಳಿತಿದ್ದಾನೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ-ಕುಂಭ ರಾಶಿಯಲ್ಲಿ 12 ತಿಂಗಳುಗಳ ಬಳಿಕ ಸೂರ್ಯ-ಶುಕ್ರರ ಮೈತ್ರಿ, ಈ ರಾಶಿಗಳ ಜನರಿಗೆ ಅಪಾರ ಧನ ಪ್ರಾಪ್ತಿ!

ಜಾತಕದಲ್ಲಿ ಎರಡು ಪಂಚಮಹಾಪುರುಷ ರಾಜಯೋಗಗಳಿವೆ
ಇದರೊಂದಿಗೆ, ಜಾತಕದಲ್ಲಿ ಕಾಲಸರ್ಪ ದೋಷವಿದೆ, ಇದು ಜೀವನದ ಏರಿಳಿತಗಳನ್ನು ಸೂಚಿಸುತ್ತದೆ. ಇದೇ ವೇಳೆ, ಸಂಪತ್ತು ಮತ್ತು ವೈಭವದ ಕಾರಕ ಶುಕ್ರನ ದೆಸೆ ನಡೆಯುತ್ತಿದೆ. ಇದರ ಜೊತೆಗೆ ರಾಹುವಿನ ಅಂತರ್ದೆಸೆ ಕೂಡ ನಡೆಯುತ್ತಿದೆ. ಈ ಕಾರಣದಿಂದಾಗಿ ಅವರು ಉತ್ತುಂಗಕ್ಕೆ ಏರಲು ಆರಂಭಿಸಿದ್ದಾರೆ ಮತ್ತು ಇದೀಗ ಎರಡೂ ಗ್ರಹಗಳು ಸಂಚಾರ ಜಾತಕದ ಮೂರನೇ ಭಾವದಲ್ಲಿ ನಡೆಯುತ್ತಿದೆ, ಅಲ್ಲಿ ಅವುಗಳ ಸ್ಥಾನ ಪ್ರಬಲ ಎಂದು ಪರಿಗಣಿಸಲಾಗುತ್ತದೆ. ಮತ್ತೊಂದೆಡೆ, ನವಾಂಶ ಕುಂಡಲಿಯಲ್ಲಿ ಕಾಕ್ರಾಂಕ್ಷ ಎಂಬ ರಾಜಯೋಗವು ರೂಪುಗೊಳ್ಳುತ್ತಿದೆ, ಇದು ವ್ಯಕ್ತಿಗೆ ಅಪಾರ ಸಂಪತ್ತನ್ನು ನೀಡುತ್ತದೆ. ಆದರೆ ಗುರು ಮತ್ತು ಬುಧ ತಮ್ಮದೇ ರಾಶಿಯಲ್ಲಿದ್ದಾರೆ. ಇದರಿಂದ ಎರಡು ಪಂಚಮಹಾಪುರುಷ ರಾಜಯೋಗಗಳು ರೂಪುಗೊಂಡಿವೆ. ಹೀಗಾಗಿ ಅವರ ಜೀವನದಲ್ಲಿ ಅಪಾರ ಧನ=ಸಂಪತ್ತು ಇದೆ. ಆದರೆ ಸಾಡೆಸಾತಿಯಲ್ಲಿ ಅವರು ಎಚ್ಚರಿಕೆ ವಹಿಸುವುದು ತುಂಬಾ ಅವಶ್ಯಕವಾಗಿದೆ ಎಂದು ಜೋತಿಷ್ಯ ಪಂಡಿತರು ಹೇಳಿದ್ದಾರೆ.

ಇದನ್ನೂ ಓದಿ-ಸೂರ್ಯ-ಮಂಗಳನ ಸಂಯೋಜನೆಯಿಂದ ನವಪಂಚಮ ಯೋಗ ನಿರ್ಮಾಣ, ಈ ರಾಶಿಗಳಿಗೆ ಬಂಪರ್ ಲಾಭ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಗೌತಮ್ ಅದಾನಿ ಅವರ ಕುಂಡಲಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಜೋತಿಷ್ಯ ವಿಶ್ಲೇಷಣೆ ಹಾಗೂ ಲೆಕ್ಕಾಚಾರದ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News