Jio-Facebook Deal: Amazon-Flipkartಗೆ ಭಾರಿ ಪೈಪೋಟಿ, WhatsApp ಮೂಲಕ ಚಿಲ್ಲರೆ ವ್ಯಾಪಾರ

ರಿಲಯನ್ಸ್‌ನ ಜಿಯೋ ಮಾರ್ಟ್ ಹಾಗೂ ಫೇಸ್‌ಬುಕ್‌ನ ಮಾಲೀಕತ್ವದ ವಾಟ್ಸಾಪ್ ದೇಶಾದ್ಯಂತ ಇರುವ ಲಕ್ಷಾಂತರ ದಿನಸಿ ವ್ಯಾಪಾರಿಗಳು ಮತ್ತು ಗ್ರಾಹಕರನ್ನು ಜೋಡಿಸಲು ಯೋಜನೆ ರೂಪಿಸಿವೆ. ಹೀಗಾಗಿ ಇದೇ ರೀತಿಯ ವ್ಯವಹಾರದಲ್ಲಿ ತೊಡಗಿರುವ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ಗಳಿಗೆ ರಿಲಯನ್ಸ್ ರಿಟೇಲ್ ಭಾರಿ ಪೈಪೋಟಿ ನೀಡಲಿದೆ. ರಿಲಯನ್ಸ್ ಜಿಯೋದಲ್ಲಿನ ಶೇ 9.9 ರಷ್ಟು ಪಾಲು ಖರೀದಿಸುವ ಒಪ್ಪಂದಕ್ಕೆ ಫೇಸ್‌ಬುಕ್ ಸಹಿ ಹಾಕಿದೆ. ಈ ಒಪ್ಪಂದದಿಂದ, ಭಾರತದಲ್ಲಿ ಚಿಲ್ಲರೆ ಅಂಗಡಿ ನಿರ್ವಹಣೆ ಸ್ವರೂಪ ಬದಲಾಗಲಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.  

Last Updated : Apr 22, 2020, 01:10 PM IST
Jio-Facebook Deal: Amazon-Flipkartಗೆ ಭಾರಿ ಪೈಪೋಟಿ, WhatsApp ಮೂಲಕ ಚಿಲ್ಲರೆ ವ್ಯಾಪಾರ title=

ವಿಶ್ವದ ಸಾಮಾಜಿಕ ಜಾಲತಾಣದ ದೈತ್ಯ ಕಂಪನಿಯಾಗಿರುವ ಫೇಸ್ ಬುಕ್, ಭಾರತದ ಟೆಲಿಕಾಂ ದಿಗ್ಗಜ ರಿಲಯನ್ಸ್ ಜಿಯೋ ಜೊತೆಗೆ 43,574 ಕೋಟಿ ರೂ. ಈ ಒಪ್ಪಂದಕ್ಕೆ ಸಹಿ ಹಾಕಿರುವ ವಿಷಯ ನಿಮ್ಮೆಲ್ಲರಿಗೂ ತಿಳಿದೇ ಇದೆ. ಈ ಒಪ್ಪಂದದಿಂದ ಭಾರತದಲ್ಲಿ ಚಿಲ್ಲರೆ ವ್ಯಾಪಾರದ ಸ್ವರೂಪ ಬದಲಾಗಲಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟೇ ಅಲ್ಲ ಭಾರತದಲ್ಲಿ ಈಗಾಗಲೇ ಈ ರೀತಿಯ ವ್ಯವಹಾರದಲ್ಲಿ ತೊಡಗಿರುವ ಅಮೆಜಾನ್ ಹಾಗೂ ಫ್ಲಿಪ್ ಕಾರಟ್ ಕಂಪನಿಗಳಿಗೆ ರಿಲಯನ್ಸ್ ರಿಟೇಲ್ ತೀವ್ರ ಪೈಪೋಟಿ ನೀಡಲಿದೆ ಎಂದು ಅಂದಾಜಿಸಲಾಗುತ್ತಿದೆ.

ರಿಲಯನ್ಸ್ ರಿಟೇಲ್ ಹಾಗೂ ವಾಟ್ಸ್ ಆಪ್ ಗಳ ಮಧ್ಯೆಯೂ ನಡೆದಿದೆ ಡೀಲ್
ಫೇಸ್ ಬುಕ್, ರಿಲಯನ್ಸ್ ಮಾಲೀಕತ್ವದ ಜೋಯೋ ಕಂಪನಿಯಲಿ ಶೇ.9.9ರಷ್ಟು ಪಾಲುದಾರಿಕೆಯನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿದೆ. ಹೀಗಾಗಿ ಫೇಸ್ ಬುಕ್ ಇನ್ಕಾರ್ಪೋರೇಶನ್ ಮಾಲೀಕತ್ವದ ವಾಟ್ಸ್ ಆಪ್ ಮತ್ತು ರಿಲಯನ್ಸ್ ಮಾಲೀಕತ್ವದ ರಿಲಯನ್ಸ್ ರಿಟೇಲ್ ಗಳ ನಡುವೆಯೂ ಕೂಡ ಒಂದು ಪರೋಕ್ಷ ಒಪ್ಪಂದ ಏರ್ಪಟ್ಟಿದೆ.

ಭಾರತದಲ್ಲಿರುವ ಲಕ್ಷಾಂತರ ದಿನಸಿ ವ್ಯಾಪಾರಿಗಳನ್ನು ತನ್ನ ಜೊತೆಗೆ ಜೋಡಿಸಲು ರಿಲಯನ್ಸ್ ಮಹತ್ವಾಕಾಂಕ್ಷಿ ಯೋಜನೆಯೊಂದರ ಮೇಲೆ ಕಾರ್ಯನಿರ್ವಹಿಸುತ್ತಿದೆ. ಇದಕ್ಕಾಗಿ ಕಂಪನಿ ತನ್ನ ನೂತನ ಇ-ಕಾಮರ್ಸ್ ಪ್ಲಾಟ್ ಫಾರ್ಮ್ 'ಜಿಯೋ ಮಾರ್ಟ್' ಆರಂಭಿಸಿದೆ. ಫೇಸ್ ಬುಕ್ ಜೊತೆ ನಡೆಸಲಾಗಿರುವ ಈ ಡೀಲ್ ನಿಂದ ರಿಲಯನ್ಸ್ ಗೆ ಫೇಸ್ಬುಕ್ ಮೆಸ್ಸೆಂಜರ್ ಹಾಗೂ ವಾಟ್ಸ್ ಆಪ್ ಗಳ ಮೂಲಕ ದಿನಸಿ ವ್ಯಾಪಾರಿಗಳಿಗೆ ಸಪೋರ್ಟ್ ನೀಡುವುದು ಮತ್ತಷ್ಟು ಸುಲಭವಾಗಲಿದೆ.

ಭಾರತೀಯ ಗ್ರಾಹಕರ ಬೇಡಿಕೆಗಳನ್ನು ಇನ್ನಷ್ಟು ಹತ್ತಿರದಿಂದ ಅರ್ಥಮಾಡಿಕೊಳ್ಳುವ ಉದ್ದೇಶದಿಂದ ಭಾರತದ ಲಕ್ಷಾಂತರ ಸಣ್ಣಪುಟ್ಟ ದಿನಸಿ ವ್ಯಾಪಾರಿಗಳೊಂದಿಗೆ ಪಾರ್ಟ್ನರ್ ಶಿಪ್ ಮಾಡಲು ನಿರ್ಧರಿಸಿರುವುದಾಗಿ ರಿಲಯನ್ಸ್ ಹೇಳಿದೆ. ಹೀಗಾಗಿ ವಾಟ್ಸ್ ಆಪ್ ಸಹಾಯದಿಂದ ಗ್ರಾಹಕರ ಮನೆಬಾಗಿಲಿಗೆ ಅವರ ಹತ್ತಿರದಲ್ಲಿರುವ ಅಂಗಡಿಯ ಸೇವೆಗಳು ಹೇಗೆ ತಲುಪಿಸಬೇಕು ಎಂಬುದರ ಮೇಲೆ ಇದೀಗ ರಿಲಯನ್ಸ್ ಹಾಗೂ ಫೇಸ್ ಬುಕ್ ಕಾರ್ಯನಿರ್ವಹಿಸಲಿದೆ.

Trending News