Jio #HappyNewYear ಕೊಡುಗೆ; ಕೇವಲ 501 ರೂ.ಗೆ ಮೊಬೈಲ್ ಖರೀದಿಸಿ!

ಜಿಯೋ ಮಾನ್ಸೂನ್ ಆಫರ್ ಜೊತೆ ಈ ಡೀಲ್ ಲಿಂಕ್ ಮಾಡಿರುವುದರಿಂದ ಮೊದಲು ನೀವು ಜಿಯೋ ವೆಬ್ ಸೈಟ್ನಲ್ಲಿ 1095 ರೂ.ಗಳ ಜಿಯೋ ಫೆಸ್ಟೀವ್ ಗಿಫ್ಟ್ ಕಾರ್ಡ್ ಖರೀದಿಸಬಹುದು.

Last Updated : Jan 4, 2019, 02:24 PM IST
Jio #HappyNewYear ಕೊಡುಗೆ; ಕೇವಲ 501 ರೂ.ಗೆ ಮೊಬೈಲ್ ಖರೀದಿಸಿ! title=

ನವದೆಹಲಿ: ಗ್ರಾಹಕರನ್ನು ಸದಾ ಸೆಳೆದಿಟ್ಟುಕೊಳ್ಳಲು ಆರಂಭದಿಂದಲೂ ಜಿಯೋ ಒಂದಿಲ್ಲೊಂದು ಕೊಡುಗೆಗಳನ್ನು ಘೋಷಿಸುತ್ತಲೇ ಬಂದಿದೆ. ಈ ಬಾರಿಯೂ ಸಹ ಹೊಸ ವರ್ಷಕ್ಕೆ ಜಿಯೋ ನೂತನ ಕೊಡುಗೆಯನ್ನು ನೀಡಿ. ಅದರಂತೆ ಗ್ರಾಹಕರು ಕೇವಲ 501 ರೂ.ಗಳಿಗೆ ಹೊಸ ಜಿಯೋ ಫೋನ್ ಖರೀದಿಸಬಹುದು. ಅಷ್ಟೇ ಅಲ್ಲ, ಇದರೊಂದಿಗೆ ಸ್ಮಾರ್ಟ್ ಡೀಲ್ ಅನ್ನೂ ಸಹ ಜಿಯೋ ನೀಡಿದೆ!

ಏನಿದು ಸ್ಮಾರ್ಟ್ ಡೀಲ್?
ಈ ಕೊಡುಗೆಯನ್ನು ನೀವು ಪಡೆಯಬೇಕಿದ್ದರೆ ಎರಡು ಮುಖ್ಯವಾದ ವಿಚಾರಗಳನ್ನು ತಿಳಿಯಬೇಕು. ಮೊದಲಿಗೆ ನಿಮ್ಮ ಹಳೆಯ ಫೀಚರ್ ಫೋನ್ ನೀಡಿದರೆ ಮಾತ್ರ 501 ರೂ.ಗಳಿಗೆ ಹೊಸ ಮೊಬೈಲ್ ಖರೀದಿಸಬಹುದು. ಆದರೆ ನೀವು ಬದಲಾಯಿಸಲು ಬಯಸುವ ಹಳೆಯ ಫೋನ್ ಚಾಲ್ತಿಯಲ್ಲಿದ್ದು, ಅದರ ಚಾರ್ಜರ್ ಸುಸ್ಥಿತಿಯಲ್ಲಿದ್ದರೆ ಮಾತ್ರ ಹೊಸ ಫೋನ್ ಪಡೆಯಬಹುದು. ಎರಡನೇ ಮುಖ್ಯವಾದ ಅಂಶ ಎಂದರೆ, 6 ತಿಂಗಳ ಅವಧಿಗೆ ಪ್ರತಿ ತಿಂಗಳು 99 ರೂ.ಗಳ ವೋಚರ್ ದೊರೆಯಲಿದ್ದು, ಒಟ್ಟು 594ರೂ.ಗಳ ವೋಚರ್ ನಿಮ್ಮದಾಗಲಿದೆ. ಈ ಪೂರ್ಣ ಆಫರ್ ಪಡೆಯಬೇಕೆಂದರೆ ಮೊದಲು ನೀವು 1095 ರೂ.ಗಳನ್ನು ಪಾವತಿಸಬೇಕಾಗುತ್ತದೆ. ಬಳಿಕ 6 ತಿಂಗಳವರೆಗೆ ಉಚಿತ ಡಾಟಾ ಮತ್ತು ಅನಿಯಮಿತ ಕರೆ ಮಾಡಬಹುದು. 

ಈ ಡೀಲ್ ಪಡೆಯುವುದು ಹೇಗೆ?
ಜಿಯೋ ಮಾನ್ಸೂನ್ ಆಫರ್ ಜೊತೆ ಈ ಡೀಲ್ ಲಿಂಕ್ ಮಾಡಿರುವುದರಿಂದ ಮೊದಲು ನೀವು ಜಿಯೋ ವೆಬ್ ಸೈಟ್ನಲ್ಲಿ 1095 ರೂ.ಗಳ ಜಿಯೋ ಫೆಸ್ಟೀವ್ ಗಿಫ್ಟ್ ಕಾರ್ಡ್ ಖರೀದಿಸಬಹುದು. ಬಳಿಕ ಈ ಕಾರ್ಡ್ ತಲುಪಿದ ಮೇಲೆ, ಅದನ್ನು ಹತ್ತಿರದ ಜಿಯೋ ಸ್ಟೋರ್'ನಲ್ಲಿ ನೀಡಿ ಈ ಕೊಡುಗೆ ಪಡೆಯಬಹುದು.

ಹೊಸವರ್ಷಾಚರಣೆ ಸಂದರ್ಭದಲ್ಲಿ ಘೋಷಣೆಯಾಗಿರುವ ಈ ಕೊಡುಗೆ ವರ್ಷಪೂರ್ತಿ ಚಾಲ್ತಿಯಲ್ಲಿರಲಿದೆ. ಹಾಗಾಗಿ ನೀವು ಗಿಫ್ಟ್ ಕಾರ್ಡ್ ಖರೀಡಿಸಿದ ಕೂಡಲೇ ಅದನ್ನು ರಿಡೀಮ್ ಮಾಡಿಕೊಳ್ಳಬೇಕು ಎಂದೇನಿಲ್ಲ. ಒಂದು ವರ್ಷದ ಅವಧಿಯಲ್ಲಿ ಯಾವಾಗ ಬೇಕಾದರೂ ಈ ಕಾರ್ಡ್ ಬಳಸಿ ಮೊಬೈಲ್ ಖರೀದಿಸಬಹುದು ಅಥವಾ ರಿಡೀಮ್ ಮಾಡಿಕೊಳ್ಳಬಹುದು.

Trending News