PPF: ಮಕ್ಕಳಿಗೆ ಯಾವ ವಯಸ್ಸಿನಲ್ಲಿ ಪಿ‌ಪಿ‌ಎಫ್ ಖಾತೆ ತೆರೆಯಬಹುದು? ಮಕ್ಕಳ ಖಾತೆಯಲ್ಲಿ ಪೋಷಕರಿಗೆ ಸಿಗುತ್ತಾ ಟಾಕ್ಸ್ ಪ್ರಯೋಜನ?

PPF: ಪಬ್ಲಿಕ್ ಪ್ರಾವಿಡೆಂಟ್ ಫಂಡ್(PPF) ಸರ್ಕಾರದ ಖಾತರಿ ಯೋಜನೆಗಳಲ್ಲಿ ಒಂದು. ಈ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ನೀವು ನಿಮ್ಮ ಭವಿಷ್ಯವನ್ನು ಭದ್ರಪಡಿಸಿಕೊಳ್ಳಬಹುದು. ಆದರೆ, ಮಕ್ಕಳ ವಯಸ್ಸಿನಲ್ಲಿ ಪಿ‌ಪಿ‌ಎಫ್ ಖಾತೆ ತೆರೆಯಬಹುದೇ? ಈ ಬಗ್ಗೆ ಎಂದಾದರೂ ಯೋಚಿಸಿದ್ದೀರಾ? 

Written by - Yashaswini V | Last Updated : Feb 6, 2024, 10:44 AM IST
  • ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಸರ್ಕಾರಿ ಯೋಜನೆಯಾಗಿದ್ದು ನೀವು ಖಾತೆ ತೆರೆದ 15 ವರ್ಷಗಳಲ್ಲಿ ಪಿ‌ಪಿ‌ಎಫ್ ಪಕ್ವವಾಗುತ್ತದೆ.
  • ಈ ಯೋಜನೆಯಲ್ಲಿ, ವಾರ್ಷಿಕವಾಗಿ ಕನಿಷ್ಠ 500 ಮತ್ತು ಗರಿಷ್ಠ 1.5 ಲಕ್ಷ ರೂ.ವರೆಗೆ ಹೂಡಿಕೆ ಮಾಡಬಹುದಾಗಿದೆ.
  • ಪ್ರಸ್ತುತ ಈ ಯೋಜನೆಯಲ್ಲಿ 7.1% ಬಡ್ಡಿಯನ್ನು ನೀಡಲಾಗುತ್ತಿದೆ.
PPF: ಮಕ್ಕಳಿಗೆ ಯಾವ ವಯಸ್ಸಿನಲ್ಲಿ ಪಿ‌ಪಿ‌ಎಫ್ ಖಾತೆ ತೆರೆಯಬಹುದು? ಮಕ್ಕಳ ಖಾತೆಯಲ್ಲಿ ಪೋಷಕರಿಗೆ ಸಿಗುತ್ತಾ ಟಾಕ್ಸ್ ಪ್ರಯೋಜನ?  title=

PPF: ನೀವು ಸುರಕ್ಷಿತ ಯೋಜನೆಗಳಲ್ಲಿ ಹೂಡಿಕೆ ಮಾಡಲು ಬಯಸಿದರೆ ಪಬ್ಲಿಕ್ ಪ್ರಾವಿಡೆಂಟ್ ಫಂಡ್(PPF) ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಪಬ್ಲಿಕ್ ಪ್ರಾವಿಡೆಂಟ್ ಫಂಡ್/ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ ಹಣವನ್ನ್ ಹೂಡಿಕೆ ಮಾಡುವ ಮೂಲಕ ನೀವು ಖಾತರಿ ಆದಾಯವನ್ನು ಪಡೆಯಬಹುದು. 

ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಯೋಜನೆ: 
ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಸರ್ಕಾರಿ ಯೋಜನೆಯಾಗಿದ್ದು ನೀವು ಖಾತೆ ತೆರೆದ 15 ವರ್ಷಗಳಲ್ಲಿ ಪಿ‌ಪಿ‌ಎಫ್ ಪಕ್ವವಾಗುತ್ತದೆ. ಈ ಯೋಜನೆಯಲ್ಲಿ, ವಾರ್ಷಿಕವಾಗಿ ಕನಿಷ್ಠ 500 ಮತ್ತು ಗರಿಷ್ಠ 1.5 ಲಕ್ಷ ರೂ.ವರೆಗೆ ಹೂಡಿಕೆ ಮಾಡಬಹುದಾಗಿದೆ. ಪ್ರಸ್ತುತ ಈ ಯೋಜನೆಯಲ್ಲಿ 7.1% ಬಡ್ಡಿಯನ್ನು ನೀಡಲಾಗುತ್ತಿದೆ. 

ಪಿ‌ಪಿ‌ಎಫ್ ನಲ್ಲಿ ಹೂಡಿಕೆ ಮಾಡುವ ಮೂಲಕ ನೀವು ನಿಮ್ಮ ಭವಿಷ್ಯವನ್ನು ಭದ್ರಪಡಿಸಿಕೊಳ್ಳಬಹುದು. ಆದರೆ, ಮಕ್ಕಳ ವಯಸ್ಸಿನಲ್ಲಿ ಪಿ‌ಪಿ‌ಎಫ್ ಖಾತೆ ತೆರೆಯಬಹುದೇ? ಒಂದೊಮ್ಮೆ ಮಕ್ಕಳ ಹೆಸರಿನಲ್ಲಿ ಪಿ‌ಪಿ‌ಎಫ್ ಖಾತೆಯನ್ನು ತೆರೆಯುವುದಾದರೆ ಯಾವ ವಯಸ್ಸಿಗೆ ಪಿ‌ಪಿ‌ಎಫ್ ಖಾತೆ ತೆರೆಯಬಹುದು? ಪೋಷಕರು ಮಕ್ಕಳ ಖಾತೆಗಳಲ್ಲಿ ತೆರಿಗೆ ಪ್ರಯೋಜನಗಳನ್ನು ಪಡೆಯಬಹುದೇ? ಎಂಬಿತ್ಯಾದಿಗಳ ಬಗ್ಗೆ ಇಲ್ಲಿದೆ ಮಹತ್ವದ ಮಾಹಿತಿ. 

ಇದನ್ನೂ ಓದಿ- ಸರ್ಕಾರಿ ನೌಕರರ ವೇತನದಲ್ಲಿ 9 ಸಾವಿರದಷ್ಟು ಹೆಚ್ಚಳ ! ವೇತನ ನಿಯಮದಲ್ಲಿ ಬದಲಾವಣೆ ಸಾಧ್ಯತೆ

ಮಕ್ಕಳ ಹೆಸರಿನಲ್ಲಿ ಪಿ‌ಪಿ‌ಎಫ್ ಖಾತೆ ತೆರೆಯಬಹುದೇ? ಯಾವ ವಯಸ್ಸಿನಿಂದ ಖಾತೆ ತೆರೆಯಬಹುದು? 
ನೀವು ಬಯಸಿದರೆ ನಿಮ್ಮ ಮಕ್ಕಳ ಹೆಸರಿನಲ್ಲಿಯೂ ಸಹ ಪಿ‌ಪಿ‌ಎಫ್ ಖಾತೆಯನ್ನು ತೆರೆಯಬಹುದು. ಮಕ್ಕಳ ಹೆಸರಿನಲ್ಲಿ ಪಿ‌ಪಿ‌ಎಫ್ ಖಾತೆಯನ್ನು ತೆರೆಯಲು ಯಾವುದೇ ಕನಿಷ್ಠ ವಯಸ್ಸಿನ ಮಿತಿಯಿಲ್ಲ. ಮಕ್ಕಳು ಹುಟ್ಟಿದಾಗಿನಿಂದ ಯಾವುದೇ ಸಮಯದಲ್ಲಿ ನೀವು ಅವರ ಹೆಸರಿನಲ್ಲಿ ಪಿ‌ಪಿ‌ಎಫ್ ಖಾತೆಯನ್ನು ತೆರೆಯಬಹುದು. ಎಲ್ಲರಿಗೂ ತಿಳಿದಿರುವಂತೆ ಮಕ್ಕಳ ಪಿಪಿಎಫ್ ಖಾತೆಯನ್ನು ಅವರ ಪೋಷಕರೇ ತೆರೆಯುತ್ತಾರೆ. ಅವರೇ ಇದರಲ್ಲಿ ಹೂಡಿಕೆ ಮಾಡುತ್ತಾರೆ. ಆದರೆ 18 ವರ್ಷ ಪೂರ್ಣಗೊಂಡ ನಂತರ, ಮಗು ತನ್ನ ಖಾತೆಯನ್ನು ಸ್ವತಃ ನಿಭಾಯಿಸಬಹುದು ಮತ್ತು ಅದರಲ್ಲಿ ಸ್ವತಃ ಹೂಡಿಕೆ ಮಾಡಬಹುದಾಗಿದೆ. 

ಮಕ್ಕಳ ಖಾತೆಗಳಲ್ಲಿ ಪೋಷಕರು ತೆರಿಗೆ ಪ್ರಯೋಜನಗಳನ್ನು ಪಡೆಯುತ್ತಾರೆಯೇ?
ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80 ಸಿ ಅಡಿಯಲ್ಲಿ ಪಿಪಿಎಫ್‌ನಲ್ಲಿ ತೆರಿಗೆ ವಿನಾಯಿತಿ ಲಭ್ಯವಿದೆ. ನೀವು ನಿಮ್ಮ ಮಕ್ಕಳ ಹೆಸರಿನಲ್ಲಿ ಪಿ‌ಪಿ‌ಎಫ್ ಖಾತೆಯನ್ನು ತೆರೆದು ಅದರಲ್ಲಿ ಹಣವನ್ನು ಠೇವಣಿ ಮಾಡಿದರೆ, ನೀವು ಆದಾಯ ತೆರಿಗೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ವಿನಾಯಿತಿ ಪಡೆಯಬಹುದು. ಆದಾಯ ತೆರಿಗೆ ನಿಯಮಗಳ ಪ್ರಕಾರ, ಮಕ್ಕಳ ಖಾತೆಯಲ್ಲಿ ಠೇವಣಿ ಮಾಡಿದ ಮೊತ್ತವನ್ನು ಅವರ ಪೋಷಕರು ಅಥವಾ ಪೋಷಕರು ಗಳಿಸಿದರೆ, ಅವರು ಅದರ ಮೇಲೆ ತೆರಿಗೆ ವಿನಾಯಿತಿಯನ್ನು ಸಹ ಪಡೆಯಬಹುದು.

ಇದನ್ನೂ ಓದಿ- FD Interest Rate Hike: ಈ ಸರ್ಕಾರಿ ಬ್ಯಾಂಕುಗಳು ಎಫ್ಡಿ ಮೇಲೆ ನೀಡುತ್ತಿವೆ ಶೇ.8.40ರಷ್ಟು ಬಡ್ಡಿದರ!

ಮಕ್ಕಳ  ಹೆಸರಿನಲ್ಲಿ ಪಿ‌ಪಿ‌ಎಫ್ ಖಾತೆಯನ್ನು ಹೇಗೆ ತೆರೆಯುವುದು? ಇಲ್ಲಿದೆ ಹಂತ-ಹಂತದ ಪ್ರಕ್ರಿಯೆ: 
>> ಮೊದಲಿಗೆ ನೀವು ಯಾವ ಬ್ಯಾಂಕ್ ಅಥವಾ ಪೋಸ್ಟ್ ಆಫೀಸ್‌ನಲ್ಲಿ ಮಕ್ಕಳ ಹೆಸರಿನಲ್ಲಿ ಪಿ‌ಪಿ‌ಎಫ್ ಖಾತೆಯನ್ನು ತೆರೆಯಲು ಬಯಸುತ್ತೀರೋ ಅಲ್ಲಿ ಫಾರ್ಮ್ ಅನ್ನು ಪಡೆಯಿರಿ. 
>> ನಂತರ ಫಾರ್ಮ್ ಭರ್ತಿ ಮಾಡಿ ಇದರೊಂದಿಗೆ ಮಗುವಿನ ಪೋಷಕರು ಅಥವಾ ಕಾನೂನು ಪಾಲಕರ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ ಮತ್ತು KYC ದಾಖಲೆಗಳನ್ನು ಸಲ್ಲಿಸಬೇಕಾಗುತ್ತದೆ. ಇದಲ್ಲದೆ, ಅರ್ಜಿಯೊಂದಿಗೆ ನಿಮ್ಮ ಮಗುವಿನ ವಯಸ್ಸಿನ ಪ್ರಮಾಣಪತ್ರವನ್ನು ಸಲ್ಲಿಸಬೇಕಾಗುತ್ತದೆ. 
>> ಎಲ್ಲಾ ದಾಖಲೆಗಳೊಂದಿಗೆ ಫಾರ್ಮ್ ಅನ್ನು ಸಲ್ಲಿಸಿ. 
>> ಇದರ ನಂತರ, ಮಗುವಿನ ಹೆಸರಿನಲ್ಲಿ ಪಿ‌ಪಿ‌ಎಫ್ ಖಾತೆಯನ್ನು ತೆರೆಯಲಾಗುತ್ತದೆ. 

ಈ ಡಿಜಿಟಲ್ ಯುಗದಲ್ಲಿ ಅನೇಕ ಬ್ಯಾಂಕ್‌ಗಳು ಆನ್‌ಲೈನ್‌ನಲ್ಲಿ ಪಿಪಿಎಫ್ ಖಾತೆಯನ್ನು ತೆರೆಯುವ ಸೌಲಭ್ಯವನ್ನು ಒದಗಿಸಲು ಪ್ರಾರಂಭಿಸಿವೆ, ಆದರೆ ಇದಕ್ಕಾಗಿ ಮಗುವಿನ ಪಾಲಕರು ಈಗಾಗಲೇ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆಯನ್ನು ಹೊಂದಿರುವುದು ಅವಶ್ಯಕವಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News