Adani Stock: ಸೋಮವಾರವೂ ಅದಾನಿ ಷೇರುಗಳಲ್ಲಿ ಭಾರೀ ಕುಸಿತ! ಲೋವರ್ ಸರ್ಕ್ಯೂಟ್‍ನಲ್ಲಿ ಹಲವು ಷೇರು ಲಾಕ್!  

Adani Group Shares: ವಾರದ ಮೊದಲ ವಹಿವಾಟಿನ ದಿನವಾದ ಸೋಮವಾರವೂ ಅದಾನಿ ಸಮೂಹದ ಷೇರುಗಳು ದೊಡ್ಡ ಕುಸಿತ ಕಂಡಿವೆ. ಇಂದು ಸಹ ಕಂಪನಿಯ ಕೆಲವು ಷೇರುಗಳು ಲೋವರ್ ಸರ್ಕ್ಯೂಟ್‌ನಲ್ಲಿ ಲಾಕ್ ಆಗಿದ್ದವು. ಅದಾನಿ ಎಂಟರ್‌ಪ್ರೈಸಸ್ ಷೇರುಗಳು ಇಂದು ಶೇ.7.63ರಷ್ಟು ಕುಸಿತದೊಂದಿಗೆ ವಹಿವಾಟು ಅಂತ್ಯಗೊಳಿಸಿದೆ.

Written by - Puttaraj K Alur | Last Updated : Feb 13, 2023, 04:20 PM IST
  • ಸೋಮವಾರವೂ ಅದಾನಿ ಸಮೂಹದ ಷೇರುಗಳು ದೊಡ್ಡ ಕುಸಿತ ಕಂಡಿವೆ
  • ಅದಾನಿಯ ಅನೇಕ ಷೇರುಗಳು ಲೋವರ್ ಸರ್ಕ್ಯೂಟ್‍ನಲ್ಲಿ ಲಾಕ್ ಆಗಿವೆ
  • ಇಂದು ಶೇ.7.63ರಷ್ಟು ಕುಸಿತ ಕಂಡ ಅದಾನಿ ಎಂಟರ್‌ಪ್ರೈಸಸ್ ಷೇರು
Adani Stock: ಸೋಮವಾರವೂ ಅದಾನಿ ಷೇರುಗಳಲ್ಲಿ ಭಾರೀ ಕುಸಿತ! ಲೋವರ್ ಸರ್ಕ್ಯೂಟ್‍ನಲ್ಲಿ ಹಲವು ಷೇರು ಲಾಕ್!   title=
ಅದಾನಿ ಷೇರುಗಳ ಭಾರೀ ಕುಸಿತ!

ನವದೆಹಲಿ: ವಾರದ ಮೊದಲ ವಹಿವಾಟಿನ ದಿನವಾದ ಸೋಮವಾರವೂ ಅದಾನಿ ಸಮೂಹದ ಷೇರುಗಳು ದೊಡ್ಡ ಕುಸಿತ ಕಂಡಿವೆ. ಇಂದೂ ಸಹ ಕಂಪನಿಯ  ಅನೇಕ ಷೇರುಗಳು ಲೋವರ್ ಸರ್ಕ್ಯೂಟ್‌ನಲ್ಲಿ ಲಾಕ್ ಆಗಿವೆ. ಅದಾನಿ ಎಂಟರ್‌ಪ್ರೈಸಸ್ ಷೇರು ಇಂದು ಶೇ.7.63ರಷ್ಟು ಕುಸಿತದೊಂದಿಗೆ ವಹಿವಾಟು ಮುಕ್ತಾಯಗೊಳಿಸಿದೆ.

ಇನ್ನು ಕ್ರೆಡಿಟ್ ರೇಟಿಂಗ್ ಏಜೆನ್ಸಿ ಮೂಡೀಸ್ ಅದಾನಿಯ 4 ಕಂಪನಿಗಳ ರೇಟಿಂಗ್ ಅನ್ನು ಋಣಾತ್ಮಕ ಮಟ್ಟಕ್ಕೆ ಇಳಿಸಿದೆ. ಈ ಕಾರಣದಿಂದ ಕಂಪನಿಯ ಷೇರುಗಳಲ್ಲಿ ಭಾರೀ ಕುಸಿತ ಕಂಡುಬಂದಿದೆ. ಇಂದು ಅದಾನಿ ಪೋರ್ಟ್ಸ್(ಶೇ.5.39), ಅದಾನಿ ಗ್ಯಾಸ್(ಶೇ.5) ಮತ್ತು ಅದಾನಿ ವಿಲ್ಮರ್(ಶೇ.5) ಸೇರಿದಂತೆ ಹೆಚ್ಚಿನ ಷೇರುಗಳು ಹೆಚ್ಚಿನ ಕುಸಿತ ದಾಖಲಿಸಿವೆ.   

ಇದನ್ನೂ ಓದಿ: ರೈತರಿಗೆ ಸಿಹಿ ಸುದ್ದಿ! ಹೋಳಿ ಹಬ್ಬಕ್ಕೆ ಸರ್ಕಾರ ನೀಡುತ್ತಿದೆ ಗಿಫ್ಟ್ !

ಭಾರೀ ಕುಸಿದ ಅದಾನಿ ಎಂಟರ್‌ಪ್ರೈಸಸ್

ಸೋಮವಾರದ ವಹಿವಾಟು ಅಂತ್ಯಕ್ಕೆ ಬಿಎಸ್‌ಇಯಲ್ಲಿ ಅದಾನಿ ಎಂಟರ್‌ಪ್ರೈಸಸ್ ಷೇರು ಶೇ.7.63ರಷ್ಟು ಕುಸಿತ ಕಾಣುವ ಮೂಲಕ 1,706 ಮಟ್ಟದಲ್ಲಿ ವಹಿವಾಟು ನಡೆಸುತ್ತಿತ್ತು. ಅದೇ ರೀತಿ ಅದಾನಿ ಪೋರ್ಟ್ಸ್ ಷೇರುಗಳು ಸಹ ಶೇ.5.39ರಷ್ಟು ಕುಸಿತ ಕಂಡು 552.50ರ ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ.

ಲೋವರ್ ಸರ್ಕ್ಯೂಟ್ ಕಂಡ ಸ್ಟಾಕ್‌ಗಳು  

ಅದಾನಿಯ ಅನೇಕ ಕಂಪನಿಗಳ ಷೇರುಗಳಲ್ಲಿ ಲೋವರ್ ಸರ್ಕ್ಯೂಟ್‍ನಲ್ಲಿ ಲಾಕ್ ಆಗಿವೆ. ಅದಾನಿ ಪವರ್‌ನ ಷೇರುಗಳು 156 ರೂ. ಮಟ್ಟದಲ್ಲಿ ವಹಿವಾಟು ನಡೆಸುತ್ತಿದ್ದು, ಶೇ.4.99ರಷ್ಟು ಇಳಿಕೆಯಾಗಿದೆ. ಅದಾನಿ ಟ್ರಾನ್ಸ್‌ಮಿಷನ್ 1,127.35 ರೂ., ಅದಾನಿ ಗ್ರೀನ್ ಎನರ್ಜಿ 688.05 ರೂ. ಮತ್ತು ಅದಾನಿ ಟೋಟಲ್ ಗ್ಯಾಸ್ 1,192.65 ರೂ.ನಂತೆ ವಹಿವಾಟನ್ನು ಅಂತ್ಯಗೊಳಿಸಿವೆ. ಈ ಎಲ್ಲಾ ಷೇರುಗಳು ತಲಾ ಶೇ.5ರಷ್ಟು ಕುಸಿತ ದಾಖಲಿಸಿವೆ.

ಇದನ್ನೂ ಓದಿ: PM Kisan Yojana: ಕಡ್ಡಾಯವಾಗಿ ಈ ಕೆಲಸ ಮಾಡಿದರೆ ಮಾತ್ರ ಸಿಗಲಿದೆ ಪಿಎಂ ಕಿಸಾನ್ ಯೋಜನೆಯ 13ನೇ ಕಂತಿನ ಹಣ!

ಈ ಷೇರುಗಳಲ್ಲಿಯೂ ಭಾರೀ ಕುಸಿತ!  

ಬಿಎಸ್‌ಇಯಲ್ಲಿ ಅಂಬುಜಾ ಸಿಮೆಂಟ್ಸ್ ಶೇ.5.25ರಷ್ಟು ಕುಸಿದು 341.85ಕ್ಕೆ ತಲುಪಿದರೆ, ಅದಾನಿ ವಿಲ್ಮರ್ ಶೇ.5ರಷ್ಟು ಕುಸಿದು 414.10 ರೂ.ನಂತೆ ವಹಿವಾಟು ಅಂತ್ಯಗೊಳಿಸಿದೆ. ಅದೇ ರೀತಿ ಎನ್‌ಡಿಟಿವಿ ಶೇ.5ರಷ್ಟು ಕುಸಿದು 198.10 ರೂ.ತಲುಪಿದೆ. ಎಸಿಸಿ ಷೇರು ಶೇ.3.02ರಷ್ಟು ನಷ್ಟದೊಂದಿಗೆ 1,823.55 ರೂ.ನಲ್ಲಿ ವಹಿವಾಟು ನಡೆಸುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News