ಹೊಸ ವರ್ಷದ ಮೊದಲ ದಿನವೇ 7.5 ತೀವ್ರತೆಯ ಭೂಕಂಪ, ಸುನಾಮಿ ಎಚ್ಚರಿಕೆ

Earthquake In Japan:ಜಪಾನ್ ನಲ್ಲಿ ಭೂಕಂಪ ಸಂಭವಿಸಿದೆ. ಭೂಕಂಪದ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 7.5 ಎಂದು ಅಳೆಯಲಾಗಿದೆ. ಭೂಕಂಪದ ನಂತರ ಸುನಾಮಿ ಎಚ್ಚರಿಕೆ ನೀಡಲಾಗಿದೆ.  

Written by - Ranjitha R K | Last Updated : Jan 1, 2024, 01:54 PM IST
  • ಜಪಾನ್ ನಲ್ಲಿ ನಡುಗಿನ ಭೂಮಿ
  • 7.5 ತೀವ್ರತೆ ದಾಖಲು
  • ಸುನಾಮಿ ಎಚ್ಚರಿಕೆ ನೀಡಲಾಗಿದೆ.
ಹೊಸ ವರ್ಷದ ಮೊದಲ ದಿನವೇ 7.5  ತೀವ್ರತೆಯ ಭೂಕಂಪ, ಸುನಾಮಿ ಎಚ್ಚರಿಕೆ  title=

Earthquake In Japan: ಹೊಸ ವರ್ಷದ ಮೊದಲ ದಿನವೇ ಜಪಾನ್ ನಲ್ಲಿ ಭೂಕಂಪ ಸಂಭವಿಸಿದೆ. ಭೂಕಂಪದ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 7.5 ಎಂದು ಅಳೆಯಲಾಗಿದೆ. ಭೂಕಂಪದ ಹಿನ್ನೆಲೆಯಲ್ಲಿ ಸಮುದ್ರದಲ್ಲಿ 1 ಮೀಟರ್ ಎತ್ತರದ ಅಲೆ ಎದ್ದಿದೆ ಎಂದು ಹೇಳಲಾಗಿದೆ. ಈ ಕಾರಣದಿಂದಾಗಿ ಭೂಕಂಪದ ನಂತರ ಸುನಾಮಿ ಎಚ್ಚರಿಕೆ ನೀಡಲಾಗಿದೆ.  ಜನರು ಜಾಗೃತರಾಗಿರಲು ಕೋರಲಾಗಿದೆ.

ಉತ್ತರ-ಮಧ್ಯ ಜಪಾನ್‌ನಲ್ಲಿ ಈ ಭೂಕಂಪ ಸಂಭವಿಸಿದೆ ಎಂದು ಹೇಳಲಾಗಿದೆ.  ಜಪಾನ್‌ನ ಏಜೆನ್ಸಿ ಪಶ್ಚಿಮ ಕರಾವಳಿ ಪ್ರದೇಶಗಳಾದ ಇಶಿಕಾವಾ, ನಿಗಾಟಾ ಮತ್ತು ಟೊಯಾಮಾಗೆ ಸುನಾಮಿ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ : ಕೊರೊನಾ ಪ್ರತಿರೋಧದ ಕಡೆಗೆ ಮಕ್ಕಳನ್ನು ಸುರಕ್ಷಿತವಾಗಿ ಕಾಪಾಡಲು ಅಗತ್ಯವಿರುವ ಮುಖ್ಯ ಸಲಹೆಗಳು

ಜಪಾನ್ ಭೂಕಂಪದ ಇತ್ತೀಚಿನ ಅಪ್ಡೇಟ್ :
ಹವಾಮಾನ ಸಂಸ್ಥೆ ಪ್ರಕಾರ, ಇಶಿಕಾವಾ ಪ್ರಾಂತ್ಯದ ಬಳಿ ಸಮುದ್ರದಲ್ಲಿ ಅಲೆಗಳು 5 ಮೀಟರ್ ಎತ್ತರಕ್ಕೆ ಏರುತ್ತಿವೆ. ಅದೇ ಸಮಯದಲ್ಲಿ, ಅದೇ ಪ್ರಾಂತ್ಯದ ವಾಜಿಮಾ ನಗರದ ಕರಾವಳಿಯ ಬಳಿ, ಅಲೆಗಳು 1 ಮೀಟರ್ ಎತ್ತರಕ್ಕೆ ಏರುತ್ತಿವೆ. ಈ ಕಾರಣದಿಂದಾಗಿ ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. 

ಇದೀಗ ಜಪಾನ್‌ನಲ್ಲಿ ಇರುವವರು ಎರಡು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.  ಜನರು ಎರಡು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮನೆಯಲ್ಲಿದ್ದರೆ ಭೂಕಂಪ, ಮನೆಯ ಹೊರಗೆ ಬಂದರೆ ಸುನಾ ಎದುರಿಸುವಂತಾಗಿದೆ. ಮಿ ಭೀತಿ.

ಇದನ್ನೂ ಓದಿ : ಅದ್ದೂರಿಯಾಗಿ ಹೊಸ ವರ್ಷವನ್ನು ಸ್ವಾಗತಿಸಿದ ನ್ಯೂಜಿಲೆಂಡ್..!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News