ಬೆಂಗಳೂರು: ಕೆಲ ದಿನಗಳ ಹಿಂದೆ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಧೋನಿ ತಂಡ ಎಂದು ಕರೆಯಲಾಗಿತ್ತು. ಆದರೆ 17ನೇ ಸೀಸನ್ಗೂ ಮುನ್ನ ಧೋನಿ ತಂಡದ ನಾಯಕತ್ವವನ್ನು ಯುವ ರಿತುರಾಜ್ ಗಾಯಕ್ವಾಡ್ಗೆ ವಹಿಸಿದ್ದರು. ಆದರೆ ಇದಾದ ನಂತರವೂ ಈಗ ಸೋಶಿಯಲ್ ಮಿಡಿಯಾದಲ್ಲಿ ಧೋನಿ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಇದನ್ನೂ ಓದಿ: ನಮ್ಮ ಗ್ಯಾರಂಟಿ ಯೋಜನೆಗಳಿಗೆ ಐದು ವರ್ಷಗಳ ವಾರಂಟಿ ಇದೆ: ಡಿಸಿಎಂ ಡಿ.ಕೆ. ಶಿವಕುಮಾರ್
ಹೌದು, ಈಗ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಧೋನಿ ಅದ್ಬುತ ಕ್ಯಾಚ್ ತೆಗೆದುಕೊಳ್ಳುವ ಮೂಲಕ ಸುದ್ದಿಯಲ್ಲಿದ್ದಾರೆ.42ರ ಹರೆಯದಲ್ಲೂ ಈ ಕ್ಯಾಚ್ ಹಿಡಿಯಲು ಧೋನಿ ಸ್ವಲ್ಪವೂ ಹಿಂಜರಿಯಲಿಲ್ಲ.ಕ್ಯಾಪ್ಟನ್ ಕೂಲ್ ಕ್ಯಾಚ್ ಹಿಡಿದ ತಕ್ಷಣ ಇಡೀ ಮೈದಾನದಲ್ಲಿ ಪ್ರೇಕ್ಷಕರು ಕುಣಿದು ಕುಪ್ಪಳಿಸಿದರು.ಇದೀಗ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.ಗುಜರಾತ್ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದ ವಿಜಯ್ ಶಂಕರ್ ಡ್ಯಾರಿಲ್ ಮಿಚೆಲ್ ಅವರ ಎಸೆತದಲ್ಲಿ ಧೋನಿಯವರ ಕೈಚಳಕದಿಂದಾಗಿ ವಿಕೆಟ್ ಒಪ್ಪಿಸಬೇಕಾಗಿ ಬಂತು.
ಇದನ್ನೂ ಓದಿ: ವಿಶ್ವದಲ್ಲಿ ದಿನೇ ದಿನೆ ಏರಿಕೆ ಆಗ್ತಿದೆ ಮಾರಕ ಕ್ಯಾನ್ಸರ್; ಬೆಂಗಳೂರಲ್ಲಿ 3 ದಿನ ಆರೋಗ್ಯ ಸಮ್ಮೇಳನ
ಇದಾದ ನಂತರ ಚೆನ್ನೈನ ಎಲ್ಲಾ ಆಟಗಾರರು ಸಂತೋಷದಿಂದ ಕುಣಿದು ಕುಪ್ಪಳಿಸಿದ್ದಲ್ಲದೆ ಮಹಿ ಅವರನ್ನು ಅಭಿನಂದಿಸಿದರು.
ಕ್ಯಾಪ್ಟನ್ ಕೂಲ್ ಎಂದೇ ಫೇಮಸ್ ಆಗಿರುವ ಧೋನಿ ಈ ವಯಸ್ಸಿನಲ್ಲೂ ಫಿಟ್ನೆಸ್ ಗೆ ಹೆಸರುವಾಸಿ. ಧೋನಿಯ ಈ ಕ್ಯಾಚ್ ನೋಡಿ ಸಂತಸ ವ್ತಕ್ತಪಡಿಸಿರುವ ಅವರ ಆತ್ಮೀಯ ಗೆಳೆಯ ಸುರೇಶ್ ರೈನಾ ಖುಷಿ ಪಟ್ಟಿದ್ದಾರೆ. ಅವರು ಧೋನಿ ಅವರ ವೀಡಿಯೊವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡು.ಇದನ್ನು ನೆನಪಿಡಿ ಸರ್, ಮಾಹಿ ಭಾಯ್ ಯಾವಾಗಲೂ ದೃಢವಾಗಿ ಉಳಿಯುತ್ತಾರೆ ಮತ್ತು ಎಲ್ಲರಿಗೂ ಸ್ಫೂರ್ತಿ ನೀಡುತ್ತಿರುತ್ತಾರೆ ಎಂದು ರೈನಾ ಸಂತಸ ವ್ಯಕ್ತಪಡಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.