Viral News: ಗೆಳತಿಯ ಹುಟ್ಟುಹಬ್ಬಕ್ಕೆ ಒಂಟೆಮರಿ ಗಿಫ್ಟ್ ನೀಡಿ ಜೈಲುಪಾಲಾದ ವ್ಯಕ್ತಿ..!

Viral News: ತನ್ನ ಹುಟ್ಟುಹಬ್ಬಕ್ಕೆ ಗೆಳತಿ ಒಂಟೆಯನ್ನೇ ಉಡುಗೊರೆಯಾಗಿ ನೀಡಬೇಕು ಎಂದು ಹಠಹಿಡಿದ್ದಳಂತೆ. ಇದರಿಂದ ದಿಕ್ಕುತೋಚದಂತಾದ ಪ್ರೇಮಿ ಏನು ಮಾಡೋದೆಂದು ಕೈಕೈಹಿಚುಕಿಕೊಂಡಿದ್ದಾನೆ. ಒಂಟೆಯನ್ನು ಖರೀದಿಸಲು ಆತನ ಬಳಿ ಹಣ ಇರಲಿಲ್ಲ. ಹೇಗಾದರೂ ಮಾಡಿ ಗಿಫ್ಟ್ ಕೊಡಲೇಬೇಕೆಂದು ನಿರ್ಧರಿಸಿದ ಆತ ಕೊನೆಗೆ ಒಂಟೆಯನ್ನು ಕದ್ದು ಆಕೆಗೆ ನೀಡಿದ್ದಾನೆ.

Written by - Puttaraj K Alur | Last Updated : Feb 10, 2024, 10:15 AM IST
  • ಹುಟ್ಟುಹಬ್ಬಕ್ಕೆ ಒಂಟೆ ಉಡುಗೊರೆಯಾಗಿ ನೀಡಬೇಕೆಂದು ಹಠ ಹಿಡಿದ ಪ್ರೇಯಸಿ
  • ಗೆಳತಿಗಾಗಿ ಪಕ್ಕದ ಮನೆಯವರ ಒಂಟೆ ಕದ್ದು ಜೈಲುಪಾಲಾದ ಪ್ರಿಯತಮ
  • ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ ಒಂಟೆ ಕದ್ದ ಸ್ಟೋರಿ
Viral News: ಗೆಳತಿಯ ಹುಟ್ಟುಹಬ್ಬಕ್ಕೆ ಒಂಟೆಮರಿ ಗಿಫ್ಟ್ ನೀಡಿ ಜೈಲುಪಾಲಾದ ವ್ಯಕ್ತಿ..! title=
ಒಂಟೆ ಕದ್ದು ಜೈಲುಪಾಲಾದ!

ನವದೆಹಲಿ: ಹುಟ್ಟುಹಬ್ಬಕ್ಕೆ ಬೆಲೆಬಾಳುವ ಗಿಫ್ಟ್ ಕೊಡುವುದರ ಬಗ್ಗೆ ಕೇಳಿದ್ದೀರಿ. ಆದರೆ ವ್ಯಕ್ತಿಯೊಬ್ಬ ತನ್ನ ಗಳೆತಿಯ ಹುಟ್ಟುಹಬ್ಬಕ್ಕೆ ಕೊಟ್ಟ ಉಡುಗೊರೆ ಬಗ್ಗೆ ಕೇಳಿದರೆ ನಿಮ್ಮ ಹೊಟ್ಟೆ ಹುಣ್ಣಾಗುವುದು ಗ್ಯಾರಂಟಿ. ಅರೇ, ಅದ್ಯಾವ ಗಿಫ್ಟ್ ಅಂತಿರಾ..? ಒಂಟೆ… ಹೌದು, ತನ್ನ ಪ್ರೇಯಸಿಯ ಹುಟ್ಟುಹಬ್ಬಕ್ಕೆ ವ್ಯಕ್ತಿಯೊಬ್ಬ ಒಂಟೆ ಗಿಫ್ಟ್ ಆಗಿ ನೀಡಿದ್ದಾನೆ. ಈ ವಿಚಿತ್ರ ಘಟನೆಗೆ ಸಾಕ್ಷಿಯಾಗಿದ್ದು ದುಬೈ.

ತನ್ನ ಹುಟ್ಟುಹಬ್ಬಕ್ಕೆ ಗೆಳತಿ ಒಂಟೆಯನ್ನೇ ಉಡುಗೊರೆಯಾಗಿ ನೀಡಬೇಕೆಂದು ಹಠಹಿಡಿದ್ದಳಂತೆ. ಇದರಿಂದ ದಿಕ್ಕುತೋಚದಂತಾದ ಪ್ರೇಮಿ ಏನು ಮಾಡಬೇಕೆಂದು ಕೈಕೈ ಹಿಚುಕಿಕೊಂಡಿದ್ದಾನೆ. ಒಂಟೆ ಖರೀದಿಸಲು ಆತನ ಬಳಿ ಹಣ ಇರಲಿಲ್ಲ. ಹೇಗಾದರೂ ಮಾಡಿ ಗಿಫ್ಟ್ ಕೊಡಲೇಬೇಕೆಂದು ನಿರ್ಧರಿಸಿದ ಆತ ಕೊನೆಗೆ ಒಂಟೆ ಕದ್ದು ಆಕೆಗೆ ನೀಡಿದ್ದಾನೆ. ತಾನು ಮಾಡಿದ ತಪ್ಪಿಗೆ ಇದೀಗ ಜೈಲುಪಾಲಾಗಿದ್ದಾನೆ.

ಇದನ್ನೂ ಓದಿ: ಜನರ ಪ್ರಾಣಕ್ಕೆ ಅಪಾಯ ತರಲಿದೆ ದೆಹಲಿಯ ಪ್ರಗತಿ ಮೈದಾನದ ಸುರಂಗ ಮಾರ್ಗ! L&T ಗೆ PWD ಸೂಚನೆ

ತನ್ನ ಮನೆ ಬಳಿಯ ಜಮೀನಿನಲ್ಲಿ ಒಂಟೆಗಳು ಇರುವುದನ್ನು ಗಮನಿಸಿದ್ದ ಆತ ಹೇಗಾದರೂ ಮಾಡಿ ಕದಿಯಬೇಕೆಂದು ನಿರ್ಧರಿಸಿದ್ದ. ಒಂದು ನವಜಾತ ಒಂಟೆ ಮರಿಯನ್ನು ಕದ್ದು ಎಸ್ಕೇಪ್ ಆಗಿದ್ದ ಆತ ತನ್ನ ಪ್ರೇಯಸಿಗೆ ನೀಡಿದ್ದ. ಒಂಟೆ ಕಣ್ಮರೆಯಾದ ಬಗ್ಗೆ ಜಮೀನಿನ ಮಾಲೀಕರು ದುಬೈ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಹುಡುಕಾಟ ನಡೆಸಿದರೂ ಒಂಟೆಯ ಯಾವುದೇ ಕುರುಹು ಸಿಕ್ಕಿರಲಿಲ್ಲ. ಒಂಟೆಯನ್ನು ಯಾರೋ ಕದ್ದರಿಬೇಕೆಂದು ಶಂಕಿಸಿದ ಅವರು ಈ ಬಗ್ಗೆ ತನಿಖೆ ಕೈಗೊಂಡಿದ್ದರು.  

ಒಂದು ದಿನ ತಮ್ಮ ಕೃಷಿಭೂಮಿಯ ಬಳಿ ನವಜಾತ ಒಂಟೆ ಇರುವ ಬಗ್ಗೆ ವ್ಯಕ್ತಿಯೊಬ್ಬರು ದುಬೈ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಕೂಡಲೇ ಸ್ಥಳಕ್ಕೆ ತೆರಳಿದ ಪೊಲೀಸರು ಒಂಟೆ ಇರುವುದನ್ನು ಖಚಿತಪಡಿಸಿಕೊಂಡರು. ಆದರೆ ಒಂಟೆ ಕದ್ದವನ ಕಥೆ ಕೇಳಿ ಅದನ್ನು ಮರಳಿ ತೆಗೆದುಕೊಂಡು ಹೋಗಲು ನಿರಾಕರಿಸಿದರು. ಒಂಟೆ ಕಳ್ಳತನವಾದ ಪ್ರದೇಶದಿಂದ ಸುಮಾರು 3 ಕಿಮೀ ದೂರ ಇದ್ದಿದ್ದರಿಂದ ಅದನ್ನು ತೆಗೆದುಕೊಂಡು ಹೋಗುದುವು ಅಸಾಧ್ಯವೆಂದು ಪೊಲೀಸರು ಹೇಳಿದರು.

ಇದನ್ನೂ ಓದಿ: Viral News: ಕೋರ್ಟ್ ವಿಚಾರಣೆ ವೇಳೆಯೇ ನ್ಯಾಯಾಧೀಶೆಗೆ ಪ್ರೇಮ ನಿವೇದನೆ ಮಾಡಿದ ಕಳ್ಳ..!

ಹುಟ್ಟುಹಬ್ಬದಂದು ತನ್ನ ಗೆಳತಿಯನ್ನು ಸಂತೋಷಪಡಿಸಲು ಒಂಟೆ ಕದ್ದಿರುವುದಾಗಿ ಪೊಲೀಸರ ಬಳಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ರಾತ್ರಿ ವೇಳೆ ಜಮೀನಿಗೆ ನುಗ್ಗಿ ಒಂಟೆ ಮರಿಯನ್ನು ಕದ್ದಿರುವುದಾಗಿ ತಿಳಿಸಿದ್ದಾನೆ. ನಿಜವನ್ನು ಹೇಳಿದರೆ ಅಪರಾಧದಿಂದ ಪಾರಾಗಬಹುದೆಂದು ಯೋಚಿಸಿದ ಪೊಲೀಸರ ಬಳಿ ನಡೆದ ಸಂಗತಿಯನ್ನೆಲ್ಲಾ ವಿವರಿಸಿದ್ದಾನೆ. ಆದರೆ ಮಾಡಿದ ಅಪರಾಧಕ್ಕೆ ದುಬೈ ಪೊಲೀಸರು ಒಂಟೆ ಕದ್ದ ಆರೋಪಿ ಹಾಗೂ ಆತನ ಗೆಳತಿಯನ್ನು ಬಂಧಿಸಿದ್ದಾರೆ. ಬಳಿಕ ಒಂಟೆಯನ್ನು ಅದರ ಮಾಲೀಕರಿಗೆ ನೀಡಲಾಯಿತು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News