Vodafone-idea Prepaid Plan: ಎರಡು ಹೊಸ ಧಮಾಕ ಪ್ರಿಪೇಯ್ಡ್ ಯೋಜನೆಗಳನ್ನು ಪ್ರಕಟಿಸಿದ ವೋಡಾಫೋನ್ ಐಡಿಯಾ

Vodafone-idea New Prepaid Plan: ವೋಡಾಫೋನ್ ಐಡಿಯಾ-ವಿಐ ಟೆಲಿಕಾಂ ಕಂಪನಿಯು ತನ್ನ ಗ್ರಾಹಕರಿಗಾಗಿ ಎರಡು ಧಮಾಕ ಪ್ರಿಪೇಯ್ಡ್ ಯೋಜನೆಗಳನ್ನು ಪ್ರಕಟಿಸಿದೆ. ನೀವೂ ಕೂಡ ವಿಐ ಗ್ರಾಹಕರಾಗಿದ್ದರೆ, ಯಾವುದೀ 2 ಹೊಸ ಯೋಜನೆಗಳು, ಇದರ ಪ್ರಯೋಜನಗಳೇನು ಎಂದು ತಿಳಿಯೋಣ.

Written by - Yashaswini V | Last Updated : Mar 16, 2023, 03:31 PM IST
  • ವೋಡಾಫೋನ್ ಐಡಿಯಾದಿಂದ ಎರಡು ಹೊಸ ಧಮಾಕ ಪ್ರಿಪೇಯ್ಡ್ ಪ್ಲಾನ್ಸ್

    289 ರೂ. ಮತ್ತು 429 ರೂ.ಗಳ ಎರಡು ಧಮಾಕ ಪ್ರಿಪೇಯ್ಡ್ ಪ್ಲಾನ್ಸ್ ಅನ್ನು ಘೋಷಿಸಿದ ವಿಐ

    ಈ ಎರಡೂ ಆಫರ್‌ಗಳ ಪ್ರಯೋಜನಗಳ ಬಗ್ಗೆ ತಿಳಿಯೋಣ
Vodafone-idea Prepaid Plan: ಎರಡು ಹೊಸ ಧಮಾಕ ಪ್ರಿಪೇಯ್ಡ್ ಯೋಜನೆಗಳನ್ನು ಪ್ರಕಟಿಸಿದ ವೋಡಾಫೋನ್ ಐಡಿಯಾ  title=
Vodafone-idea New Prepaid Plan

Vodafone-idea New Prepaid Plan: ವೊಡಾಫೋನ್ ಐಡಿಯಾದ 5ಜಿ ಸೇವೆ ಯಾವಾಗ ಲಭ್ಯವಾಗಲಿದೆ, ಕಂಪನಿಯು ಈ ಕುರಿತಂತೆ ಯಾವಾಗ ಘೋಷಿಸಲಿದೆ ಎಂದು ವಿಐ ಬಳಕೆದಾರದು ಕಾತುರದಿಂದ ಕಾಯುತ್ತಿದ್ದಾರೆ. ಈ ಮಧ್ಯೆ, ವೋಡಾಫೋನ್ ಐಡಿಯಾ-ವಿಐ ಟೆಲಿಕಾಂ ಕಂಪನಿಯು ತನ್ನ ಗ್ರಾಹಕರಿಗಾಗಿ ಎರಡು ಧಮಾಕ ಪ್ರಿಪೇಯ್ಡ್ ಯೋಜನೆಗಳನ್ನು ಪ್ರಕಟಿಸಿದೆ. ಯಾವುದೀ, ಪ್ರಿಪೇಯ್ಡ್  ಪ್ಲಾನ್ಸ್? ಇದರ ಪ್ರಯೋಜನಗಳೇನು ಎಂದು ತಿಳಿಯೋಣ...

ವೋಡಾಫೋನ್ ಐಡಿಯಾದಿಂದ ಎರಡು ಹೊಸ ಧಮಾಕ ಪ್ರಿಪೇಯ್ಡ್ ಪ್ಲಾನ್ಸ್: 
ವೊಡಾಫೋನ್ ಐಡಿಯಾ ಕಂಪನಿಯು  ತನ್ನ ಗ್ರಾಹಕರಿಗಾಗಿ 289 ರೂ. ಮತ್ತು 429 ರೂ.ಗಳ ಎರಡು ಧಮಾಕ ಪ್ರಿಪೇಯ್ಡ್ ಪ್ಲಾನ್ಸ್ ಅನ್ನು ಘೋಷಿಸಿದೆ. Vi Store ಮತ್ತು ಅಧಿಕೃತ Vi ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಈ ಪ್ರಿಪೇಯ್ಡ್ ಪ್ಲಾನ್ಸ್ ಅನ್ನು ಖರೀದಿಸಬಹುದಾಗಿದೆ. 

ಇದನ್ನೂ ಓದಿ- ಫ್ಲಿಪ್‌ಕಾರ್ಟ್‌ನಲ್ಲಿ ಫ್ರೀ ಶಾಪಿಂಗ್: ಎಸಿ, ಫ್ರಿಜ್ ಅನ್ನು ಕೇವಲ 1 ರೂ.ಗೆ ಮನೆಗೆ ತನ್ನಿ

ವೋಡಾಫೋನ್ ಐಡಿಯಾದ 289 ರೂ. ಯೋಜನೆಯಲ್ಲಿ ಏನೆಲ್ಲಾ ಕೊಡುಗೆಗಳು ಲಭ್ಯವಾಗಲಿದೆ?
ಕಂಪನಿಯ ವತಿಯಿಂದ ಲಭ್ಯವಾಗಿರುವ ಮಾಹಿತಿಗಳ ಪ್ರಕಾರ, ವೋಡಾಫೋನ್ ಐಡಿಯಾ-ವಿಐನ 289 ರೂ. ಪ್ರಿಪೇಯ್ಡ್ ಪ್ಲಾನ್ಸ್ನಲ್ಲಿ ಲಭ್ಯವಿರುವ ಪ್ರಯೋಜನಗಳೆಂದರೆ 
* ಅನ್ಲಿಮಿಟೆಡ್ ಕಾಲ್ ಸೌಲಭ್ಯ 
* ಇದು 48 ದಿನಗಳ ವ್ಯಾಲಿಡಿಟಿಯೊಂದಿಗೆ ಬರಲಿದೆ.
* ಈ ಯೋಜನೆಯಲ್ಲಿ  4GB ಡೇಟಾ ಲಭ್ಯವಿದೆ.
* 600 ಉಚಿತ ಎಸ್ಎಂಎಸ್ ಸೌಲಭ್ಯವೂ ಲಭ್ಯವಾಗಲಿದೆ. 

ಇದನ್ನೂ ಓದಿ- Jio Big Dhamaka! ಮಾರುಕಟ್ಟೆಯನ್ನೆ ತಲ್ಲಣಗೊಳಿಸುವ ಜಬ್ಬರ್ದಸ್ತ್ ಫ್ಯಾಮಿಲಿ ರಿಚಾರ್ಜ್ ಯೋಜನೆ ಬಿಡುಗಡೆಗೊಳಿಸಿದ ಜಿಯೋ!

ವೋಡಾಫೋನ್ ಐಡಿಯಾ 429 ರೂ.ಗಳ ಯೋಜನೆಯ ಪ್ರಯೋಜನಗಳೆಂದರೆ:
>> ಈ ಪ್ಲಾನ್ 78 ದಿನಗಳ ಮಾನ್ಯತೆಯೊಂದಿಗೆ ಬರಲಿದೆ. 
>> ಈ ಯೋಜನೆಯಲ್ಲಿ ಅನಿಯಮಿತ ಕರೆ ಜೊತೆಗೆ 1000 ಉಚಿತ ಎಸ್ಎಂಎಸ್ ಸೌಲಭ್ಯ ಲಭ್ಯವಾಗಲಿದೆ. 
>> ಇದಲ್ಲದೆ ಈ ಯೋಜನೆಯಲ್ಲಿ 6GB ವರೆಗಿನ ಹೈಸ್ಪೀಡ್ ಡೇಟಾ ಪ್ರಯೋಜನವೂ ಸಿಗಲಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News