SonyLiv Premiumನ ಉಚಿತ ಚಂದಾದಾರಿಕೆ ಹೊಂದಿದ ಅಗ್ಗದ ರೀಚಾರ್ಜ್ ಯೋಜನೆ ಬಿಡುಗಡೆ ಮಾಡಿದ Vi, ಬೆಲೆ ಕೇವಲ ರೂ.100 ಮಾತ್ರ

Cheapest Recharge Plan With Free OTT Subscription - ವೊಡಾಫೋನ್-ಐಡಿಯಾ ತನ್ನ ಪೋಸ್ಟ್‌ಪೇಯ್ಡ್ ರೀಚಾರ್ಜ್ ಪ್ಲಾನ್ ಪೋರ್ಟ್‌ಫೋಲಿಯೊಗೆ ಹೊಸ ಅಗ್ಗದ ರೀಚಾರ್ಜ್ ಯೋಜನೆಯೊಂದನ್ನು ಸೇರಿಸಿದೆ. ಇದು ಕಂಪನಿಯ ಅಗ್ಗದ ಆಡ್-ಆನ್ ಡೇಟಾ ಪ್ಯಾಕ್ ಆಗಿದೆ, ಇದರಲ್ಲಿ ಬಳಕೆದಾರರು ಡೇಟಾದೊಂದಿಗೆ ಉಚಿತ OTT ಚಂದಾದಾರಿಕೆಯನ್ನು ಸಹ ಪಡೆಯಲಿದ್ದಾರೆ. ವಿಶೇಷವೆಂದರೆ ಈ OTT ಚಂದಾದಾರಿಕೆಯು 30 ದಿನಗಳ ವ್ಯಾಲಿಡಿಟಿಯೊಂದಿಗೆ ಬಳಕೆದಾರರಿಗೆ ಲಭ್ಯವಿದೆ.  

Written by - Nitin Tabib | Last Updated : Jun 14, 2022, 05:34 PM IST
  • ತನ್ನ ರಿಚಾರ್ಜ್ ಪೋರ್ಟ್ಫೋಲಿಯೋಗೆ ಅಗ್ಗದ ರಿಚಾರ್ಜ್ ಯೋಜನೆ ಸೇರಿಸಿದ ವಿಐ.
  • ಈ ಯೋಜನೆಯ ಬೆಲೆ ಕೇವಲ ರೂ. 100 ಆಗಿದೆ
  • ಈ ಯೋಜನೆಯಲ್ಲಿ ಉಚಿತ ಸೋನಿಲಿವ್ ಚಂದಾದಾರಿಕೆ ಕೂಡ ಲಭ್ಯವಿದೆ
SonyLiv Premiumನ ಉಚಿತ ಚಂದಾದಾರಿಕೆ ಹೊಂದಿದ ಅಗ್ಗದ ರೀಚಾರ್ಜ್ ಯೋಜನೆ ಬಿಡುಗಡೆ ಮಾಡಿದ Vi, ಬೆಲೆ ಕೇವಲ ರೂ.100 ಮಾತ್ರ title=
Cheapest Recharge Plan With Free OTT Subscription

Cheapest Recharge Plan With Free OTT Subscription - ವೊಡಾಫೋನ್-ಐಡಿಯಾ  ತನ್ನ ಪೋಸ್ಟ್‌ಪೇಯ್ಡ್ ರೀಚಾರ್ಜ್ ಪ್ಲಾನ್ ಪೋರ್ಟ್‌ಫೋಲಿಯೊಗೆ ಹೊಸ ಅಗ್ಗದ ರೀಚಾರ್ಜ್ ಯೋಜನೆಯೊಂದನ್ನು ಶಾಮೀಲುಗೊಳಿಸಿದೆ. ಇದು ಕಂಪನಿಯ ಅತ್ಯಂತ ಅಗ್ಗದ ಆಡ್-ಆನ್ ಡೇಟಾ ಪ್ಯಾಕ್ ಆಗಿದೆ, ಇದರಲ್ಲಿ ಬಳಕೆದಾರರು ಡೇಟಾದೊಂದಿಗೆ ಉಚಿತ OTT ಚಂದಾದಾರಿಕೆಯನ್ನು ಸಹ ಪಡೆಯಬಹುದು. ವಿಶೇಷವೆಂದರೆ ಈ OTT ಚಂದಾದಾರಿಕೆಯು 30 ದಿನಗಳ ವ್ಯಾಲಿಡಿಟಿಯೊಂದಿಗೆ ಬಳಕೆದಾರರಿಗೆ ಲಭ್ಯವಿದೆ.

Vi ಹೊಸ ಪೋಸ್ಟ್‌ಪೇಯ್ಡ್ ರೀಚಾರ್ಜ್ ಯೋಜನೆ
ಹೊಸ ರೀಚಾರ್ಜ್ ಯೋಜನೆ ಕುರಿತು ಹೇಳುವುದಾದರೆ, Vi ನ ಈ ಹೊಸ ಪೋಸ್ಟ್‌ಪೇಯ್ಡ್ ಆಡ್-ಆನ್ ಡೇಟಾ ಪ್ಯಾಕ್ ಬೆಲೆ ಕೇವಲ 100 ರೂ. ಆಗಿದೆ. ಪೋಸ್ಟ್‌ಪೇಯ್ಡ್ ರೀಚಾರ್ಜ್ ಪ್ಯಾಕ್‌ನಲ್ಲಿ ಬಳಕೆದಾರರು 10GB ಡೇಟಾ ಪ್ರವೇಶವನ್ನು ಪಡೆಯುತ್ತಾರೆ. ಈ ಯೋಜನೆಯಡಿಯಲ್ಲಿ, 10 GB ಡೇಟಾವು 30 ದಿನಗಳವರೆಗೆ ಮಾನ್ಯತೆಯೊಂದಿಗೆ ಲಭ್ಯವಿದೆ. ಇದರರ್ಥ ಬಳಕೆದಾರರು ಈ ಪ್ಯಾಕ್‌ನೊಂದಿಗೆ ಲಭ್ಯವಿರುವ 10GB ಡೇಟಾವನ್ನು 30 ದಿನಗಳವರೆಗೆ ಯಾವಾಗ ಬೇಕಾದರೂ ಬಳಸಬಹುದು.

ಇದನ್ನೂ ಓದಿ-Excellent Recharge Plan: ಅಬ್ಬಾ...! ಜಿಯೋ ಕಂಪನಿಯ ಈ ಪ್ಲಾನ್ ಅಡಿ ಉಚಿತ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ಚಂದಾದಾರಿಕೆಯ ಜೊತೆಗೆ 1095 GB ಡೇಟಾ ಲಭ್ಯ

ಯೋಜನೆಯು OTT ಚಂದಾದಾರಿಕೆಯನ್ನು ಸಹ ಒಳಗೊಂಡಿದೆ
ನಾವು ಈ ಮೊದಲೇ ಹೇಳಿದಂತೆ ಈ ಪ್ಯಾಕ್ ಉಚಿತ OTT ಚಂದಾದಾರಿಕೆ ಯೋಜನೆಯನ್ನು ಸಹ ಒಳಗೊಂಡಿದೆ. ಈ ಪ್ಯಾಕ್‌ನಲ್ಲಿ, ಬಳಕೆದಾರರು SonyLIV ಪ್ರೀಮಿಯಂನ  ಚಂದಾದಾರಿಕೆಯನ್ನು ಪಡೆಯುತ್ತಾರೆ, ಅದು ಕೂಡ ಸಂಪೂರ್ಣವಾಗಿ ಉಚಿತವಾಗಿದೆ. ಈ ಅಗ್ಗದ ರೀಚಾರ್ಜ್ ಯೋಜನೆಯೊಂದಿಗೆ, ಬಳಕೆದಾರರು ತಮ್ಮ ನೆಚ್ಚಿನ ಚಲನಚಿತ್ರಗಳು ಮತ್ತು ಪ್ರದರ್ಶನಗಳನ್ನು SonyLIV ಪ್ರೀಮಿಯಂ ಚಂದಾದಾರಿಕೆಯೊಂದಿಗೆ ವೀಕ್ಷಿಸಬಹುದು ಎಂದು ಕಂಪನಿ ಹೇಳಿದೆ.

ಇದನ್ನೂ ಓದಿ-Mobile Wallpaper Vastu: ಮೊಬೈಲ್ ನಲ್ಲಿ ಯಾವ ವಾಲ್ ಪೇಪರ್ ಬಳಸಿದರೆ ಯಶಸ್ಸು ನಿಮ್ಮದಾಗುತ್ತದೆ?

SonyLIV ಪ್ರೀಮಿಯಂ ಪ್ರವೇಶದ ಮೂಲಕ, ಬಳಕೆದಾರರು UEFA ಚಾಂಪಿಯನ್ಸ್ ಲೀಗ್, WWE, ಬುಂಡೆಸ್ಲಿಗಾ ಮತ್ತು UFC ನಂತಹ ವಿವಿಧ ಕ್ರೀಡೆಗಳನ್ನು ಸ್ಟ್ರೀಮ್ ಮಾಡಬಹುದು ಮತ್ತು ಸ್ಕ್ಯಾಮ್ 1992 - ದಿ ಹರ್ಷದ್ ಮೆಹ್ತಾ ಸ್ಟೋರಿ, ಮಹಾರಾಣಿ ಹಾಗೂ ಗುಲ್ಲಕ್ ಸೀಸನ್: 3 ಇತ್ಯಾದಿ OTT ಸೀರೀಸ್ ಗಳು ಮತ್ತು ಚಲನಚಿತ್ರಗಳನ್ನು ವೀಕ್ಷಿಸಬಹುದು.ಈ ಪೋಸ್ಟ್‌ಪೇಯ್ಡ್ ರೀಚಾರ್ಜ್ ಯೋಜನೆಯಲ್ಲಿ ಕಂಪನಿ  Vi ಅಪ್ಲಿಕೇಶನ್‌ ಗಳಾಗಿರುವ Vi Movies & TV (Vi MTV) ಗೆ ಉಚಿತ ಪ್ರವೇಶವನ್ನು ಸಹ ನೀಡುತ್ತದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
    

Trending News