Jio Cheapest Plan: 90 ದಿನಗಳ ವ್ಯಾಲಿಡಿಟಿ ಇರುವ ಅಗ್ಗದ 5ಜಿ ಪ್ಲಾನ್ ಬಿಡುಗಡೆ ಮಾಡಿದ ಜಿಯೋ!

Jio Cheapest Plan: ರಿಲಯನ್ಸ್ ಜಿಯೋ 90 ದಿನಗಳ ಮಾನ್ಯತೆ ಇರುವ ಜಬರ್ದಸ್ತ್ ಪ್ಲಾನ್ ಬಿಡುಗಡೆ ಮಾಡಿದೆ. ಇದು ಕಡಿಮೆ ವೆಚ್ಚದಲ್ಲಿ ಹೆಚ್ಚು ದಿನಗಳ ಮಾನ್ಯತೆಯನ್ನು ನಿಮಗೆ ನೀಡುತ್ತದೆ. ಈ ಯೋಜನೆಯಲ್ಲಿ ನೀವು ಮೂರು ತಿಂಗಳುಗಳ ವರಗೆ ಕಾರ್ಯ ನಿರ್ವಹಿಸಬಹುದು. ಯೋಜನೆಯ ಕುರಿತು ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳೋಣ ಬನ್ನಿ,   

Written by - Nitin Tabib | Last Updated : Dec 22, 2022, 01:47 PM IST
  • ಜಿಯೋ ಇದೇ ರೀತಿಯ ಮತ್ತೊಂದು ಯೋಜನೆಯನ್ನು ಹೊಂದಿದೆ, ಇದರ ಬೆಲೆ 719 ರೂ.
  • ಇದು 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ ಮತ್ತು ಇದರಲ್ಲಿ ನಿಮಗೆ ಒಟ್ಟು 168 ಜಿಬಿ ಡೇಟಾವನ್ನು ನೀಡಲಾಗುತ್ತಿದೆ.
  • ಇದಲ್ಲದೇ ಅನಿಯಮಿತ ಕರೆ ಮತ್ತು ಪ್ರತಿದಿನ 100 ಎಸ್‌ಎಂಎಸ್ ಸೌಲಭ್ಯವೂ ಇದೆ.
Jio Cheapest Plan: 90 ದಿನಗಳ ವ್ಯಾಲಿಡಿಟಿ ಇರುವ ಅಗ್ಗದ 5ಜಿ ಪ್ಲಾನ್ ಬಿಡುಗಡೆ ಮಾಡಿದ ಜಿಯೋ! title=
Jio Cheapest 5g plan

Reliance Jio Rs 749 plan: ಟೆಲಿಕಾಂ ಮಾರುಕಟ್ಟೆಯಲ್ಲಿ ಪ್ರತಿ ತಿಂಗಳಿಗೆ ರೀಚಾರ್ಚ್ ಮಾಡಿಸಬೇಕಾದ ಕಾಲವೊಂದಿತ್ತು. ಆದರೆ ಇದೀಗ ಆ ಕಾಲ ಬದಲಾಗಿದ್ದು, ದೀರ್ಘಾವಧಿ ಮಾನ್ಯತೆಯ ಪ್ಲಾನ್‌ಗಳು ಮಾರುಕಟ್ಟೆಗೆ ಬಂದಿವೆ, ಇಲ್ಲಿ ವಿಶೇಷತೆ ಎಂದರೆ ತಿಂಗಳ ಲೆಕ್ಕಾಚಾರದಲ್ಲಿ ನೋಡಿದರೆ, ಈ ಪ್ಲಾನ್ ಗಳ ಬೆಲೆ ತುಂಬಾ ಕಡಿಮೆಯಾಗಿದೆ. ರಿಲಯನ್ಸ್ ಜಿಯೋ 90 ದಿನಗಳ ಸಿಂಧುತ್ವ ಹೊಂದಿರುವ ಪ್ಲಾನ್ ವೊಂದನ್ನು ಬಿಡುಗಡೆ ಮಾಡಿದೆ. ಇದು ಕಡಿಮೆ ವೆಚ್ಚದಲ್ಲಿ ಹೆಚ್ಚು ದಿನಗಳ ಮಾನ್ಯತೆಯನ್ನು ನೀಡುತ್ತದೆ. ಹೆಚ್ಚಿನ ಯೋಜನೆಗಳು 80 ರಿಂದ 84 ದಿನಗಳ ವ್ಯಾಲಿಡಿಟಿ ಹೊಂದಿವೆ. ಆದರೆ ಈ ಯೋಜನೆಯಲ್ಲಿ  ನೀವು ಸಂಪೂರ್ಣ ಮೂರು ತಿಂಗಳುಗಳ ಮಾನ್ಯತೆಯನ್ನು ಪಡೆದುಕೊಳ್ಳಬಹುದು..

ರಿಲಯನ್ಸ್ ಜಿಯೋ ರೂ 749 ಯೋಜನೆ
ಪ್ರಸ್ತುತ ರಿಲಯನ್ಸ್ ಜಿಯೋ ಮಾರುಕಟ್ಟೆಗೆ ಪರಿಚಯಿಸಿರುವ ಯೋಜನೆಯ ಬೆಲೆ 749 ರೂ. ಜಿಯೋ ಕಂಪನಿಯ  ಈ ಪ್ರಿಪೇಯ್ಡ್ ಯೋಜನೆಯಲ್ಲಿ ಅನಿಯಮಿತ ಕರೆ ಮತ್ತು ಹೆಚ್ಚಿನ ಡೇಟಾವನ್ನು ನೀಡಲಾಗುತ್ತದೆ. 90 ದಿನಗಳ ಮಾನ್ಯತೆಯೊಂದಿಗೆ, 2GB ದೈನಂದಿನ ಡೇಟಾದಂತೆ ನೀವು  ಒಟ್ಟು 180GB ಡೇಟಾ ಪಡೆಯಬಹುದು. ಯೋಜನೆಯಲ್ಲಿ ಅನಿಯಮಿತ ಡೇಟಾ ಕೊಡುಗೆಯೂ ಲಭ್ಯವಿದೆ, ಆದರೆ ವೇಗ 64 Kbps ಗೆ ಇಳಿಕೆಯಾಗುತ್ತದೆ. ಇದಲ್ಲದೇ, ಅನಿಯಮಿತ ಕರೆ, ದಿನಕ್ಕೆ 100 SMS ಮತ್ತು Jio ಅಪ್ಲಿಕೇಶನ್‌ಗಳ ಉಚಿತ ಪ್ರಯೋಜನಗಳು ಈ ಯೋಜನೆಯಲ್ಲಿ ಲಭ್ಯವಿದೆ.

ಇದನ್ನೂ ಓದಿ-Watch Video: ನೀರಿನಿಂದಲೂ ಬೈಕ್ ಓಡುತ್ತೆ... ನಂಬ್ತಿರಾ? ವಿಡಿಯೋ ನೋಡಿ

ಈ ಯೋಜನೆಯಲ್ಲಿ 5G ಲಭ್ಯವಿರುತ್ತದೆ
ನೀವು ಜಿಯೋ 5G ಇರುವ ನಗರದಲ್ಲಿದ್ದರೆ, ಕಂಪನಿಯು 5G ವೆಲ್ಕಮ್ ಆಫರ್ ಅಡಿಯಲ್ಲಿ ಅನಿಯಮಿತ 5G ಡೇಟಾವನ್ನು ಸಹ ನೀಡುತ್ತಿದೆ. ನೀವು 5G ಫೋನ್ ಹೊಂದಿದ್ದರೆ ಮತ್ತು Jio 5G ಗಾಗಿ ಆಹ್ವಾನವನ್ನು ಸ್ವೀಕರಿಸಿದ್ದರೆ, ನೀವು ಅದನ್ನು ಸುಲಭವಾಗಿ ಬಳಸಬಹುದು.

ಇದನ್ನೂ ಓದಿ-IDF: ದೇಶದ ಕೋಟ್ಯಾಂತರ ಮಹಿಳೆಯರಿಗೆ ಭಾರಿ ಸಂತಸದ ಸುದ್ದಿ ಪ್ರಕಟಿಸಿದ ಗೂಗಲ್

ಜಿಯೋ ಇದೇ ರೀತಿಯ ಮತ್ತೊಂದು ಯೋಜನೆಯನ್ನು ಹೊಂದಿದೆ, ಇದರ ಬೆಲೆ 719 ರೂ. ಇದು 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ ಮತ್ತು ಇದರಲ್ಲಿ ನಿಮಗೆ ಒಟ್ಟು 168 ಜಿಬಿ ಡೇಟಾವನ್ನು ನೀಡಲಾಗುತ್ತಿದೆ. ಇದಲ್ಲದೇ ಅನಿಯಮಿತ ಕರೆ ಮತ್ತು ಪ್ರತಿದಿನ 100 ಎಸ್‌ಎಂಎಸ್ ಸೌಲಭ್ಯವೂ ಇದೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News