OPPO Smartphone: ಭಾರೀ ರಿಯಾಯಿತಿಯೊಂದಿಗೆ ಲಭ್ಯವಾಗಲಿದೆ ಒಪ್ಪೋ ಸ್ಮಾರ್ಟ್ಫೋನ್, Jio ಬಳಕೆದಾರರಿಗೆ ಸಿಗಲಿದೆ ಈ ಆಫರ್

OPPO A15 ಬೆಲೆಯನ್ನು ಕಡಿತಗೊಳಿಸಲಾಗಿದೆ. ಇದು 3GB + 32GB ರೂಪಾಂತರದ ಸ್ಮಾರ್ಟ್ಫೋನ್ ಬೆಲೆಯನ್ನು ಕಡಿಮೆಗೊಳಿಸಲು  ಜಿಯೋ ಜೊತೆ ಪಾಲುದಾರಿಕೆ ಹೊಂದಿದೆ. OPPO A15 ನ ವೈಶಿಷ್ಟ್ಯಗಳು ಮತ್ತು ಕೊಡುಗೆಗಳ ಬಗ್ಗೆ ತಿಳಿದುಕೊಳ್ಳೋಣ ....

Written by - Yashaswini V | Last Updated : Aug 20, 2021, 12:35 PM IST
  • OPPO A15 ಬೆಲೆಯನ್ನು ಕಡಿತಗೊಳಿಸಲಾಗಿದೆ
  • ಒಪ್ಪೋ ಭಾರತದಲ್ಲಿ ಟೆಲಿಕಾಂ ಆಪರೇಟರ್ ಜಿಯೋ ಜೊತೆ ಪಾಲುದಾರಿಕೆ ಹೊಂದಿದೆ
  • OPPO A15 ನ ವೈಶಿಷ್ಟ್ಯಗಳು ಮತ್ತು ಕೊಡುಗೆಗಳ ಬಗ್ಗೆ ತಿಳಿದುಕೊಳ್ಳೋಣ
OPPO Smartphone: ಭಾರೀ ರಿಯಾಯಿತಿಯೊಂದಿಗೆ ಲಭ್ಯವಾಗಲಿದೆ ಒಪ್ಪೋ ಸ್ಮಾರ್ಟ್ಫೋನ್, Jio ಬಳಕೆದಾರರಿಗೆ ಸಿಗಲಿದೆ ಈ ಆಫರ್ title=
OPPO A15 Price, Features, Specifications

ನವದೆಹಲಿ: OPPO A15 ಅನ್ನು ಅಕ್ಟೋಬರ್ 2020 ರಲ್ಲಿ ಭಾರತದಲ್ಲಿ ಬಿಡುಗಡೆ ಮಾಡಲಾಯಿತು. ಇದಾದ ಕೆಲವೇ ದಿನಗಳಲ್ಲಿ, OPPO A15s ಅನ್ನು ಡಿಸೆಂಬರ್‌ನಲ್ಲಿ ಬಿಡುಗಡೆ ಮಾಡಲಾಯಿತು. ಅದರ ನಂತರ ಫೋನಿನ ಬೆಲೆಯನ್ನು ಕಡಿತಗೊಳಿಸಲಾಯಿತು. ಆದಾಗ್ಯೂ, ಜುಲೈ 2021 ರಲ್ಲಿ ಇದರ ಬೆಲೆಯನ್ನು ಮತ್ತೊಮ್ಮೆ ಹೆಚ್ಚಿಸಲಾಯಿತು. ಈಗ, ದೇಶದಲ್ಲಿ ಮತ್ತೊಮ್ಮೆ ಸಾಧನದ ಬೆಲೆಯನ್ನು ಕಡಿತಗೊಳಿಸಲಾಗಿದೆ. ಒಪ್ಪೋ ಭಾರತದಲ್ಲಿ ಟೆಲಿಕಾಂ ಆಪರೇಟರ್ ಜಿಯೋ ಜೊತೆ ಪಾಲುದಾರಿಕೆ ಹೊಂದಿದ್ದು, 10 ತಿಂಗಳ ಹಳೆಯ Oppo A15 ನ 3GB + 32GB ರೂಪಾಂತರದ ಸ್ಮಾರ್ಟ್ಫೋನ್ ಖರೀದಿಸಲು ಭಾರೀ ರಿಯಾಯಿತಿಯನ್ನು ನೀಡುತ್ತಿದೆ. ಡಿಸ್ಕೌಂಟ್ ಬಳಿಕ OPPO A15 ಬೆಲೆ ಎಷ್ಟು ಎಂದು ತಿಳಿಯೋಣ...

OPPO A15 ನಲ್ಲಿ ಕೊಡುಗೆಗಳು:
Oppo A15 ನ 3GB + 32GB ರೂಪಾಂತರದ ಬೆಲೆ 10,990 ರೂ. ಆದರೆ ಈಗ ಇದನ್ನು 9,991 ರೂ.ಗೆ ಖರೀದಿಸಬಹುದು. ಅಂದರೆ ಈ ಸ್ಮಾರ್ಟ್ಫೋನ್ (Smartphone) ಮೇಲೆ 999 ರೂ. ರಿಯಾಯಿತಿ ಲಭ್ಯವಾಗುತ್ತಿದೆ. ಹೆಚ್ಚುವರಿಯಾಗಿ, ಬಳಕೆದಾರರು 7000 ರೂ. ಮೌಲ್ಯದ ಜಿಯೋ ರೀಚಾರ್ಜ್ ಯೋಜನೆಗಳನ್ನು ಮತ್ತು ನೋ ಕಾಸ್ಟ್ ಇಎಂಐ ಪ್ರಯೋಜನಗಳನ್ನು ಸಹ ಪಡೆಯಬಹುದು.

ಇದನ್ನೂ ಓದಿ- Whatsappನಲ್ಲಿ ಈ ಎರಡು ಕೆಲಸಗಳನ್ನು ಎಂದಿಗೂ ಮಾಡಬೇಡಿ, ಇಲ್ಲವೇ ನಿಮ್ಮ ಅಕೌಂಟ್ ಬ್ಯಾನ್ ಆಗುತ್ತೆ

OPPO A15 ಡಿಸ್ಪ್ಲೇ:
ಹ್ಯಾಂಡ್‌ಸೆಟ್‌ಗೆ ಸಂಬಂಧಿಸಿದಂತೆ, OPPO A15 ಪ್ಲಾಸ್ಟಿಕ್ ಬಿಲ್ಡ್ ಮತ್ತು 6.52-ಇಂಚಿನ HD+ LCD ಪ್ಯಾನೆಲ್ ಅನ್ನು ಹೊಂದಿದೆ. ಇದು ಮೀಡಿಯಾ ಟೆಕ್ ಹೆಲಿಯೋ P35 SoC ಜೊತೆಗೆ LPDDR4x RAM ನೊಂದಿಗೆ ಚಾಲಿತವಾಗಿದೆ.

OPPO A15 ಕ್ಯಾಮೆರಾ:
ಫೋನ್ 13MP ಪ್ರಾಥಮಿಕ ಸಂವೇದಕ, 2MP ಮ್ಯಾಕ್ರೋ ಶೂಟರ್ ಮತ್ತು 2MP ಆಳ ಸಂವೇದಕವನ್ನು ಒಳಗೊಂಡಿರುವ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು ಡ್ಯೂಡ್ರಾಪ್ ನಾಚ್ ಒಳಗೆ 5MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ.

ಇದನ್ನೂ ಓದಿ- ಮಾರುಕಟ್ಟೆಗೆ ಬರುತ್ತಿದೆ Samsung 5G Smartphone, ಬೆಲೆ ಮತ್ತು ವೈಶಿಷ್ಟ್ಯ ತಿಳಿಯಿರಿ

OPPO A15 ಬ್ಯಾಟರಿ:
ಇತರ ವೈಶಿಷ್ಟ್ಯಗಳಲ್ಲಿ ಹಿಂಭಾಗದಲ್ಲಿ ಅಳವಡಿಸಲಾಗಿರುವ ಫಿಂಗರ್‌ಪ್ರಿಂಟ್ ಸೆನ್ಸರ್, ಡ್ಯುಯಲ್-ಸಿಮ್, 4 ಜಿ, ಡ್ಯುಯಲ್-ಬ್ಯಾಂಡ್ ವೈಫೈ, ಬ್ಲೂಟೂತ್ 5.0, ಜಿಎನ್‌ಎಸ್‌ಎಸ್, 3.5 ಎಂಎಂ ಹೆಡ್‌ಫೋನ್ ಜ್ಯಾಕ್, ಮೈಕ್ರೊ ಎಸ್‌ಡಿ ಕಾರ್ಡ್ ಸ್ಲಾಟ್ ಮತ್ತು ಮೈಕ್ರೋ ಯುಎಸ್‌ಬಿ ಪೋರ್ಟ್ ಸೇರಿವೆ. ಸ್ಮಾರ್ಟ್ಫೋನ್ ಆಂಡ್ರಾಯ್ಡ್ 10 ಆಧಾರಿತ ಕಲರ್ಓಎಸ್ 7.2 ಅನ್ನು ರನ್ ಮಾಡುತ್ತದೆ ಮತ್ತು 4,230mAh ಬ್ಯಾಟರಿಯಿಂದ 10W ಚಾರ್ಜಿಂಗ್ಗೆ ಬೆಂಬಲವನ್ನು ಪಡೆಯುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News