Reliance Jio ಬಳಕೆದಾರರಿಗೆ ಶಾಕ್ : ಇನ್ನು ರೀಚಾರ್ಜ್ ಪ್ಲಾನ್ ನಲ್ಲಿ ಸಿಗುವುದಿಲ್ಲ ಈ ಪ್ರಯೋಜನಗಳು

ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾದಂತೆ ಇತ್ತೀಚೆಗೆ, ಜಿಯೋ ತಮ್ಮ ಪ್ರಿಪೇಯ್ಡ್ ಯೋಜನೆಗಳ ಬೆಲೆಯನ್ನು ಹೆಚ್ಚಿಸಿದೆ. ಡಿಸೆಂಬರ್ 1ರಿಂದ ಹೊಸ ದರ ಜಾರಿಯಾಗಿದೆ.

Written by - Ranjitha R K | Last Updated : Dec 2, 2021, 12:22 PM IST
  • ಜಿಯೋ ಪ್ರಿಪೇಯ್ಡ್ ಯೋಜನೆಗಳ ಬೆಲೆಯನ್ನು ಹೆಚ್ಚಿಸಿದೆ
  • ಡಿಸ್ನಿ + ಹಾಟ್‌ಸ್ಟಾರ್ ಕೇವಲ ಒಂದು ಪ್ಲಾನ್ ನಲ್ಲಿ ಮಾತ್ರ ಲಭ್ಯ
  • 601 ರೂ ಯೋಜನೆಯ ಪ್ರಯೋಜನಗಳನ್ನು ತಿಳಿಯಿರಿ
Reliance Jio ಬಳಕೆದಾರರಿಗೆ ಶಾಕ್ : ಇನ್ನು ರೀಚಾರ್ಜ್ ಪ್ಲಾನ್ ನಲ್ಲಿ ಸಿಗುವುದಿಲ್ಲ ಈ ಪ್ರಯೋಜನಗಳು  title=
ಜಿಯೋ ಪ್ರಿಪೇಯ್ಡ್ ಯೋಜನೆಗಳ ಬೆಲೆಯನ್ನು ಹೆಚ್ಚಿಸಿದೆ (file photo)

ನವದೆಹಲಿ :  ದೇಶದ ನಂಬರ್ ಒನ್ ಖಾಸಗಿ ಟೆಲಿಕಾಂ ಕಂಪನಿ ರಿಲಯನ್ಸ್ ಜಿಯೋ (Reliance Jio) ಇತ್ತೀಚೆಗೆ ತನ್ನ ಎಲ್ಲಾ ಪ್ರಿಪೇಯ್ಡ್ ಯೋಜನೆಗಳ (Jio prepaid plan) ಬೆಲೆಯನ್ನು ಹೆಚ್ಚಿಸಿದೆ. ಹೊಸ ಬೆಲೆಗಳನ್ನು ಡಿಸೆಂಬರ್ 1 ರಿಂದ ಜಾರಿಗೆ ತರಲಾಗಿದೆ. ಜಿಯೋದ ಈ ನಿರ್ಧಾರಕ್ಕೂ ಮುನ್ನ, ದೇಶದ ಉಳಿದ ಎರಡು ಪ್ರಮುಖ ಟೆಲಿಕಾಂ ಕಂಪನಿಗಳಾದ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ (Vodafone idea) ಕೂಡ ತಮ್ಮ ಪ್ರಿಪೇಯ್ಡ್ ಯೋಜನೆಗಳ ಬೆಲೆಯನ್ನು ಹೆಚ್ಚಿಸುವುದಾಗಿ ಘೋಷಿಸಿವೆ. ರೀಚಾರ್ಜ್ ಪ್ಲಾನ್ ದುಬಾರಿಯಾದ ನಂತರ ಬಳಕೆದಾರರು ಜಿಯೋದ ಕೇವಲ ಒಂದು ಯೋಜನೆಯಲ್ಲಿ ಮಾತ್ರ OTT ನಲ್ಲಿ ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ಪಡೆಯುತ್ತಾರೆ. ಈ ಮೊದಲು ಈ ಪ್ರಯೋಜನವನ್ನು ಕನಿಷ್ಠ ಐದು ಪ್ರಿಪೇಯ್ಡ್ ಯೋಜನೆಗಳಲ್ಲಿ ನೀಡಲಾಗುತ್ತಿತ್ತು.  

ಜಿಯೋ ತನ್ನ ಪ್ರಿಪೇಯ್ಡ್ ಯೋಜನೆಗಳ ಬೆಲೆಯನ್ನು ಹೆಚ್ಚಿಸಿದೆ  :
ಏರ್‌ಟೆಲ್ (Airtel) ಮತ್ತು ವೊಡಾಫೋನ್ ಐಡಿಯಾದಂತೆ (Vodafone idea) ಇತ್ತೀಚೆಗೆ, ಜಿಯೋ ತಮ್ಮ ಪ್ರಿಪೇಯ್ಡ್ ಯೋಜನೆಗಳ ಬೆಲೆಯನ್ನು ಹೆಚ್ಚಿಸಿದೆ. ಡಿಸೆಂಬರ್ 1ರಿಂದ ಹೊಸ ದರ ಜಾರಿಯಾಗಿದೆ. ಆದರೂ, ಜಿಯೋದ ಯೋಜನೆಗಳು ಇತರ ಕಂಪನಿಗಳಿಗಿಂತ ಅಗ್ಗವಾಗಿದೆ. ಆದರೆ ಈಗ ಕೇವಲ ಒಂದು ಪ್ಲಾನ್ ನಲ್ಲಿ ಮಾತ್ರ ಬಳಕೆದಾರರು ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆಯ ಲಾಭವನ್ನು ಪಡೆಯುವುದು ಸಾಧ್ಯವಾಗುತ್ತದೆ.  

ಇದನ್ನೂ ಓದಿ : Amazon Sale: 349 ರೂ.ಗೆ ಖರೀದಿಸಿ ಎರಡು ದಿನಗಳವರೆಗೆ ಚಾರ್ಜಿಂಗ್ ಉಳಿಯುವ ಈ ಅದ್ಬುತ ಫೋನ್

ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆಯು ಕೇವಲ ಒಂದು ಯೋಜನೆ ಮಾತ್ರ ಲಭ್ಯ :  
ಪ್ರಸ್ತುತ ಜಿಯೋದ 601 ರೂ.  ಪ್ರಿಪೇಯ್ಡ್ ಯೋಜನೆಯಲ್ಲಿ (prepaid plans) ಮಾತ್ರ ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ನೀಡಲಾಗುತ್ತಿದೆ. ಈ ಯೋಜನೆಯಲ್ಲಿ, 12 ತಿಂಗಳವರೆಗೆ Disney + Hotstar ಚಂದಾದಾರಿಕೆಯನ್ನು ಸಿಗಲಿದೆ.  ಇದನ್ನು ಬಳಸಲು Jio SIM ಮೂಲಕ OTT ಅಪ್ಲಿಕೇಶನ್‌ಗೆ ಸೈನ್-ಇನ್ ಮಾಡಬೇಕಾಗುತ್ತದೆ. 

ಜಿಯೋದ ರೂ 601 ಪ್ರಿಪೇಯ್ಡ್ ಯೋಜನೆ :
ಜಿಯೋದ (Jio) ಈ ಯೋಜನೆಯ  601 ರೂ. ಪ್ಲಾನ್ ನಲ್ಲಿ 28 ದಿನಗಳವರೆಗೆ ಪ್ರತಿದಿನ 3GB ಡೇಟಾ, ಹೆಚ್ಚುವರಿ 6GB ಇಂಟರ್ನೆಟ್, ಯಾವುದೇ ನೆಟ್‌ವರ್ಕ್‌ನಲ್ಲಿ ಅನಿಯಮಿತ ಧ್ವನಿ ಕರೆ ಮತ್ತು ಪ್ರತಿದಿನ 100 SMS ಸೇವೆ ಸಿಗಲಿದೆ.  ದೈನಂದಿನ ಡೇಟಾ ಖಾಲಿಯಾಗಿದ್ದರೆ ನಿಮ್ಮ ಇಂಟರ್ನೆಟ್ ವೇಗವು 64Kbps ಗೆ ಕಡಿಮೆಯಾಗುತ್ತದೆ. 

ಇದನ್ನೂ ಓದಿ : Miಯ 32 ಇಂಚಿನ Smart TVಯನ್ನು ಕೇವಲ 4 ಸಾವಿರ ರೂಪಾಯಿಗಳಿಗೆ ಖರೀದಿಸಿ, ಇಲ್ಲಿದೆ Offers

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ. 

Trending News