ಅತ್ಯಂತ ಕಡಿಮೆ ಬೆಲೆಗೆ 5G Smartphone ಹೊರ ತರುತ್ತಿದೆ ಜಿಯೋ .. ! ಬೆಲೆ ಕೇಳಿದರೆ ಖರೀದಿಸುವುದು ಗ್ಯಾರಂಟಿ

ಕಂಪನಿಯ ಮೊದಲ ಸ್ಮಾರ್ಟ್‌ಫೋನ್ JioPhone Nextನ ಯಶಸ್ಸಿನ ನಂತರ, Jio ಶೀಘ್ರದಲ್ಲೇ ತನ್ನ ಬಹು ನಿರೀಕ್ಷಿತ 5G ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲಿದೆ.  

Written by - Ranjitha R K | Last Updated : Aug 24, 2022, 09:45 AM IST
  • ಮಾರುಕಟ್ಟೆಗೆ ಬರುತ್ತಿದೆ JioPhone 5G
  • 10,000 ರೂಪಾಯಿಗಳ ಕಡಿಮೆ ಬೆಲೆಗೆ ಗ್ರಾಹಕರ ಕೈಗೆ ಸಿಗಲಿದೆ ಫೋನ್
  • ಭಾರತದಲ್ಲಿ JioPhone 5G ಬೆಲೆ ಎಷ್ಟಿರಲಿದೆ ಗೊತ್ತಾ ?
ಅತ್ಯಂತ ಕಡಿಮೆ ಬೆಲೆಗೆ 5G Smartphone ಹೊರ ತರುತ್ತಿದೆ ಜಿಯೋ .. ! ಬೆಲೆ ಕೇಳಿದರೆ ಖರೀದಿಸುವುದು ಗ್ಯಾರಂಟಿ  title=
JioPhone 5G smartphone (file photo)

ಬೆಂಗಳೂರು : ಕಂಪನಿಯ ಮೊದಲ ಸ್ಮಾರ್ಟ್‌ಫೋನ್ JioPhone Nextನ ಯಶಸ್ಸಿನ ನಂತರ, Jio ಶೀಘ್ರದಲ್ಲೇ ತನ್ನ ಬಹು ನಿರೀಕ್ಷಿತ 5G ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲಿದೆ.  JioPhone 5G ಎಂದು ಕರೆಯಲ್ಪಡುವ ಈ ಸ್ಮಾರ್ಟ್‌ಫೋನ್ 5G ಸಾಮರ್ಥ್ಯಗಳನ್ನು ಹೊಂದಿರುವ ಮತ್ತೊಂದು ಬಜೆಟ್ ಸ್ಮಾರ್ಟ್‌ಫೋನ್  ಎಂದೇ ಹೇಳಲಾಗುತ್ತದೆ. ಕೈಗೆಟುಕುವ ದರದಲ್ಲಿ 5G ಸ್ಮಾರ್ಟ್‌ಫೋನ್‌ಗಾಗಿ ಹುಡುಕುತ್ತಿದ್ದರೆ,  JioPhone 5G ಅತ್ಯುತ್ತಮ ಆಯ್ಕೆಯಾಗಲಿದೆ. 

ಭಾರತದಲ್ಲಿ JioPhone 5G ಬೆಲೆ :
JioPhone Next ಅನ್ನು ಕಂಪನಿಯು ಕಳೆದ ವರ್ಷ ನವೆಂಬರ್‌ನಲ್ಲಿ  6,499 ರೂ. ಬೆಲೆಗೆ ಬಿಡುಗಡೆ ಮಾಡಿತು. JioPhone 5G ಅದೇ ಸಂಪ್ರದಾಯವನ್ನು ಮುಂದುವರಿಸಲಿದೆ ಎಂದು ಹೇಳಲಾಗಿದೆ. ಈ ಹೊಸ  ಸ್ಮಾರ್ಟ್ ಫೋನ್ 10,000 ರೂಪಾಯಿಗಳ ಕಡಿಮೆ ಬೆಲೆಗೆ ಗ್ರಾಹಕರ ಕೈಗೆ ಸಿಗಲಿದೆ ಎಂದು ನಿರೀಕ್ಷಿಸಲಾಗಿದೆ. ಆದರೆ, ಸದ್ಯಕ್ಕೆ ಅದರ ನಿಖರ ಬೆಲೆ ತಿಳಿದುಬಂದಿಲ್ಲ.

ಇದನ್ನೂ ಓದಿ : ಭಾರತದ ಸ್ಟಾರ್ಟಪ್ ವಿಭಾಗದಲ್ಲಿ ದೇಶದಲ್ಲೇ ಮೊದಲ ಸ್ಥಾನ ಪಡೆದ ಬೆಂಗಳೂರು

JioPhone 5G ವಿಶೇಷತೆಗಳು :
JioPhone 5G 60Hz ರಿಫ್ರೆಶ್ ರೇಟ್‌ ಬೆಂಬಲಿಸುವ 6.5-ಇಂಚಿನ HD+ IPS LCD  ಸ್ಕ್ರೀನ್ ಹೊಂದಿರುತ್ತದೆ. ಸ್ಮಾರ್ಟ್‌ಫೋನ್‌ನಲ್ಲಿ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 480 5G ಚಿಪ್‌ಸೆಟ್ ಅನ್ನು ಅಳವಡಿಸಿರ ಬಹುದು ಎಂದು ಅಂದಾಜಿಸಲಾಗಿದೆ. ಇದನ್ನು 32GB ಸ್ಟೋರೇಜ್‌ನೊಂದಿಗೆ  ಬರಬಹುದು. ಇದು 13MP ಪ್ರಾಥಮಿಕ ಕ್ಯಾಮೆರಾ ಮತ್ತು 2MP ಮ್ಯಾಕ್ರೋ ಕ್ಯಾಮೆರಾದೊಂದಿಗೆ ರಿಯರ್ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರುವ ಸಾಧ್ಯತೆಯಿದೆ. 18W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯನ್ನು JioPhone 5G ನಲ್ಲಿ ನೀಡಬಹುದು.

JioPhone 5G ಲಾಂಚ್ ದಿನಾಂಕ :
ಜಿಯೋ ತಿಂಗಳ ಅಂತ್ಯದ AGM (ವಾರ್ಷಿಕ ಸಾಮಾನ್ಯ ಸಭೆ) ನಲ್ಲಿ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಬಹುದು ಎಂದು ವರದಿಯಾಗಿದೆ. ಆದರೆ ಕಂಪನಿಯು ಫೋನ್ ಬಗ್ಗೆ ಇನ್ನು ಕೂಡಾ ಏನನ್ನೂ ಹೇಳಿಲ್ಲ. ಇದು ಕೇವಲ ಒಂದು ಸಾಧ್ಯತೆ ಮತ್ತು ನಿರೀಕ್ಷೆಗಳಾಗಿದ್ದು, ಬೆಲೆ ಮತ್ತು ವೈಶಿಷ್ಟ್ಯಗಳನ್ನು  ನಿಖರವಾಗಿ ತಿಳಿಯಲು, ಫೋನ್ ಬಿಡುಗಡೆಯ ತನಕ ಕಾಯಬೇಕಾಗಿದೆ.

ಇದನ್ನೂ ಓದಿ : Jioದ ಅದ್ಭುತ ಪ್ಲ್ಯಾನ್: 150GB ಡೇಟಾದೊಂದಿಗೆ ಉಚಿತ Netflix-Amazon Prime-Disney Hotstar ಪಡೆಯಲು ಹೀಗೆ ಮಾಡಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News