JioCinema ಹೊರ ತಂದಿದೆ ಹೊಸ ಸುಬ್ಸ್ಕ್ರಿಪ್ಶನ್ ಪ್ಲಾನ್ ! ಕೇವಲ 29 ರೂಪಾಯಿಗೆ ಸಿಗುತ್ತದೆ ಇಷ್ಟೆಲ್ಲಾ ಪ್ರಯೋಜನ

JioCinema ಪ್ರೀಮಿಯಂ ಸದಸ್ಯರು ಸ್ಮಾರ್ಟ್ ಟಿವಿಗಳು ಸೇರಿದಂತೆ ಯಾವುದೇ ಸಾಧನದಲ್ಲಿ ವಿಶೇಷ ಸೀರಿಸ್, ಚಲನಚಿತ್ರಗಳು, ಹಾಲಿವುಡ್ ಬ್ಲಾಕ್‌ಬಸ್ಟರ್‌ಗಳು,ಮಕ್ಕಳ ಕಾರ್ಯಕ್ರಮಗಳು ಮತ್ತು ಟಿವಿ ಮನರಂಜನೆಯನ್ನು ಆನಂದಿಸಬಹುದು.

Written by - Ranjitha R K | Last Updated : Apr 25, 2024, 03:37 PM IST
  • JioCinema ತನ್ನ ಹೊಸ ಚಂದಾದಾರಿಕೆ ಸೇವೆ 'JioCinema Premium'ಪ್ರಾರಂಭ
  • JioCinema ತಿಂಗಳಿಗೆ ಕೇವಲ 29 ರೂ.ಯಿಂದ ಪ್ರಾರಂಭವಾಗುವ ಯೋಜನೆಗಳನ್ನು ನೀಡುತ್ತಿದೆ.
  • JioCinema ಫ್ಯಾಮಿಲಿ ಪ್ಲಾನ್ ಅನ್ನು ಪರಿಚಯಿಸಿದೆ.
JioCinema ಹೊರ ತಂದಿದೆ ಹೊಸ ಸುಬ್ಸ್ಕ್ರಿಪ್ಶನ್ ಪ್ಲಾನ್ ! ಕೇವಲ 29 ರೂಪಾಯಿಗೆ ಸಿಗುತ್ತದೆ ಇಷ್ಟೆಲ್ಲಾ ಪ್ರಯೋಜನ  title=

ಬೆಂಗಳೂರು : JioCinema ತನ್ನ ಹೊಸ ಚಂದಾದಾರಿಕೆ ಸೇವೆ 'JioCinema Premium'ಅನ್ನು ಪ್ರಾರಂಭಿಸಿದೆ.ಒಂದೇ ಸಾಧನದ ಬಳಕೆ,ಕಳಪೆ ವೀಡಿಯೊ ಗುಣಮಟ್ಟ ಮತ್ತು ದುಬಾರಿ ಚಂದಾದಾರಿಕೆಯಂತಹ ಹಿಂದಿನ ಸಮಸ್ಯೆಗಳನ್ನು ತೆಗೆದುಹಾಕುವ ಮೂಲಕ, JioCinema ಈಗ ತಿಂಗಳಿಗೆ ಕೇವಲ 29 ರೂಪಾಯಿಯಿಂದ ಪ್ರಾರಂಭವಾಗುವ ಯೋಜನೆಗಳನ್ನು ನೀಡುತ್ತಿದೆ.ಈ ಯೋಜನೆಗಳಲ್ಲಿ, ಜಾಹೀರಾತುಗಳಿಲ್ಲದೆ ಚಲನಚಿತ್ರಗಳನ್ನು ವೀಕ್ಷಿಸುವ ಸೌಲಭ್ಯ ಸಿಗಲಿದೆ. 4K ವರೆಗಿನ ಅತ್ಯುತ್ತಮ ವೀಡಿಯೊ ಗುಣಮಟ್ಟ ಮತ್ತು ವಿಷಯವನ್ನು ಆಫ್‌ಲೈನ್‌ನಲ್ಲಿ ವೀಕ್ಷಿಸಬಹುದು. JioCinema ಪ್ರೀಮಿಯಂ ಸದಸ್ಯರು ಸ್ಮಾರ್ಟ್ ಟಿವಿಗಳು ಸೇರಿದಂತೆ ಯಾವುದೇ ಸಾಧನದಲ್ಲಿ ವಿಶೇಷ ಸೀರಿಸ್, ಚಲನಚಿತ್ರಗಳು, ಹಾಲಿವುಡ್ ಬ್ಲಾಕ್‌ಬಸ್ಟರ್‌ಗಳು,ಮಕ್ಕಳ ಕಾರ್ಯಕ್ರಮಗಳು ಮತ್ತು ಟಿವಿ ಮನರಂಜನೆಯನ್ನು ಆನಂದಿಸಬಹುದು.

ಫ್ಯಾಮಿಲಿ ಪ್ಲಾನ್ ಪರಿಚಯ : 
JioCinema 'ಫ್ಯಾಮಿಲಿ ಪ್ಲಾನ್ ಅನ್ನು ಪರಿಚಯಿಸಿದೆ. ಇದಕ್ಕಾಗಿ ತಿಂಗಳಿಗೆ ಕೇವಲ 89 ವೆಚ್ಚವಾಗುತ್ತದೆ. ಈ ಯೋಜನೆಯಲ್ಲಿ, ಜಿಯೋಸಿನಿಮಾ ಪ್ರೀಮಿಯಂ ಅನ್ನು ಏಕಕಾಲದಲ್ಲಿ ನಾಲ್ಕು ಬೇರೆ ಬೇರೆ ಸ್ಕ್ರೀನ್ ಗಳಲ್ಲಿ ವೀಕ್ಷಿಸಬಹುದು. ಅಸ್ತಿತ್ವದಲ್ಲಿರುವ JioCinema ಪ್ರೀಮಿಯಂ ಸದಸ್ಯರನ್ನು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ  ಫ್ಯಾಮಿಲಿ ಪ್ಲಾನ್ ಗೆ ಅಪ್‌ಗ್ರೇಡ್ ಮಾಡಲಾಗುತ್ತದೆ.

ಇದನ್ನೂ ಓದಿ : ಕೇವಲ 10,000 ರೂಗಳಿಗೆ Itel S24 ಬಿಡುಗಡೆ! ಇದರ ವೈಶಿಷ್ಟ್ಯಗಳ ಬಗ್ಗೆ ತಿಳಿಯಿರಿ

ಜಾಹೀರಾತು ಇಲ್ಲದೆ ಐಪಿಎಲ್ ವೀಕ್ಷಿಸಬಹುದು : 
ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್ ಅನ್ನು ಜಾಹೀರಾತುಗಳೊಂದಿಗೆ ಉಚಿತವಾಗಿ ಆನಂದಿಸಬಹುದು. JioCinema ಪ್ರೀಮಿಯಂ ಸದಸ್ಯರಾಗುವ ಮೂಲಕ,ಕೆಲವು ವಿಶೇಷ ಪ್ರಯೋಜನಗಳನ್ನು ಪಡೆಯುತ್ತೀರಿ.ಇದರಲ್ಲಿ ನೀವು ಗೇಮ್ ಆಫ್ ಥ್ರೋನ್ಸ್ ಮತ್ತು ಹೌಸ್ ಆಫ್ ದಿ ಡ್ರ್ಯಾಗನ್‌ನಂತಹ ಅನೇಕ ಜನಪ್ರಿಯ ಸರಣಿಗಳನ್ನು ಆನಂದಿಸಬಹುದು. ಹಾಗೆಯೇ ಪೀಕಾಕ್, HBO, ಪ್ಯಾರಾಮೌಂಟ್ ಮತ್ತು ವಾರ್ನರ್ ಬ್ರದರ್ಸ್ ಡಿಸ್ಕವರಿಯಂತಹ  ಸ್ಟುಡಿಯೋಗಳ ಚಲನಚಿತ್ರಗಳನ್ನು ಆನಂದಿಸಬಹುದು.ವಿಶೇಷವೆಂದರೆ ಇವೆಲ್ಲವನ್ನೂ ನಿಮ್ಮ ಆಯ್ಕೆಯ ಭಾರತೀಯ ಭಾಷೆಗಳಲ್ಲಿ ಡಬ್ ಮಾಡಲಾಗುವುದು.

ಪ್ರೀಮಿಯಂ ಯೋಜನೆಯ ಪ್ರಯೋಜನಗಳು :
ಜಿಯೋಸಿನಿಮಾದಲ್ಲಿ ಮೋಟು-ಪತ್ಲು, ಶಿವ, ಪೋಕಿಮನ್,  ಪೆಪ್ಪಾಪಿಗ್,   ಪೆಪ್ಪಾ ಪಿಗ್‌ ನಂಥಹ ವಿವಿಧ ಕಾರ್ಟೂನ್‌ಗಳು ಮತ್ತು ಚಲನಚಿತ್ರಗಳು ಲಭ್ಯವಿರುತ್ತವೆ. ಅಲ್ಲದೆ, ಪೋಷಕರ ನಿಯಂತ್ರಣ ವೈಶಿಷ್ಟ್ಯಗಳ ಸಹಾಯದಿಂದ, ಮಕ್ಕಳಿಗೆ ಸುರಕ್ಷಿತ ವಾತಾವರಣ ನೀಡಬಹುದು. ಹೊಸ ಸೀರಿಸ್,  ಚಲನಚಿತ್ರಗಳನ್ನು ವೀಕ್ಷಿಸಲು ಇಷ್ಟಪಡುವವರಿಗೆ JioCinema Premium  ಉತ್ತಮ ಆಯ್ಕೆ. 

ಇದನ್ನೂ ಓದಿ : ವಿಶ್ವದ ಅತೀ ದೊಡ್ಡ ಆಪರೇಟರ್ ದಾಖಲೆ, ಡೇಟಾ ಬಳಕೆಯಲ್ಲಿ ಚೀನಾ ಹಿಂದಿಕ್ಕಿದ ಜಿಯೋ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News