5G ಸೇವೆಗಾಗಿ ಕಾಯುತ್ತಿರುವವರಿಗೆ ಗುಡ್ ನ್ಯೂಸ್

5G Launch: ದೇಶದಲ್ಲಿ 5ಜಿ ತರಂಗಾಂತರದ ಹರಾಜು ಪ್ರಕ್ರಿಯೆ ಪೂರ್ಣಗೊಂಡಿದೆ.  ಶೀಘ್ರದಲ್ಲೇ 5G ಸೇವೆಯನ್ನು ಪ್ರಾರಂಭಿಸಲು ಟೆಲಿಕಾಂ ಕಂಪನಿಗಳು ಸಜ್ಜಾಗಿವೆ. ಈ ಕುರಿತಂತೆ ಸಂವಹನ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಹೊಸ ನವೀಕರಣವನ್ನು ಬಿಡುಗಡೆ ಮಾಡಿದ್ದಾರೆ.

Written by - Yashaswini V | Last Updated : Aug 19, 2022, 06:46 AM IST
  • ಭಾರ್ತಿ ಏರ್‌ಟೆಲ್ ಶೀಘ್ರದಲ್ಲೇ 5G ಸೇವೆಯನ್ನು ಪ್ರಾರಂಭಿಸಲು ಈಗಾಗಲೇ ಸೂಚಿಸಿದೆ. ಇ
  • ಏರ್‌ಟೆಲ್ 5 ಜಿ ಸೇವೆಯನ್ನು ಒದಗಿಸಲು ಎರಿಕ್ಸನ್, ನೋಕಿಯಾ ಮತ್ತು ಸ್ಯಾಮ್‌ಸಂಗ್ ಜೊತೆ ಒಪ್ಪಂದ ಮಾಡಿಕೊಂಡಿದೆ.
  • ಆಗಸ್ಟ್‌ನಲ್ಲಿಯೇ 5G ಸೇವೆಯನ್ನು ಪ್ರಾರಂಭಿಸಲಾಗುವುದು ಎಂದು ಕಂಪನಿಯು ಇತ್ತೀಚೆಗೆ ತಿಳಿಸಿತ್ತು.
5G ಸೇವೆಗಾಗಿ ಕಾಯುತ್ತಿರುವವರಿಗೆ ಗುಡ್ ನ್ಯೂಸ್  title=
5G Launch-Ashwini vaishnaw

ಶೀಘ್ರದಲ್ಲೇ 5G ಸೇವೆ ಆರಂಭ: 5G ಸೇವೆಗಾಗಿ ಕಾಯುತ್ತಿರುವವರಿಗೆ ಶುಭ ಸುದ್ದಿಯೊಂದಿದೆ. ದೇಶದಲ್ಲಿ 5ಜಿ ತರಂಗಾಂತರದ ಹರಾಜು ಪ್ರಕ್ರಿಯೆ ಪೂರ್ಣಗೊಂಡಿದೆ.  ಶೀಘ್ರದಲ್ಲೇ 5G ಸೇವೆಯನ್ನು ಪ್ರಾರಂಭಿಸಲು ಟೆಲಿಕಾಂ ಕಂಪನಿಗಳು ಸಜ್ಜಾಗಿವೆ. ಈ ಕುರಿತಂತೆ ಸಂವಹನ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್ ಹೊಸ ನವೀಕರಣವನ್ನು ಬಿಡುಗಡೆ ಮಾಡಿದ್ದು,  5G ಬಿಡುಗಡೆಗೆ ಸಿದ್ಧತೆಗಳನ್ನು ಪ್ರಾರಂಭಿಸುವಂತೆ ಟೆಲಿಕಾಂ ಸೇವಾ ಪೂರೈಕೆದಾರರನ್ನು ಕೇಳಿಕೊಂಡಿದ್ದಾರೆ. ಮಾತ್ರವಲ್ಲ, ಈ ಸಂಬಂಧ ಟೆಲಿಕಾಂ ಕಂಪನಿಗಳಿಗೆ ಸ್ಪೆಕ್ಟ್ರಮ್ ನಿಯೋಜನೆ ಪತ್ರವನ್ನು ನೀಡಲಾಗಿದೆ ಎಂದು ಅವರು ಟ್ವಿಟರ್ ಹ್ಯಾಂಡಲ್‌ನಲ್ಲಿ ತಿಳಿಸಿದ್ದಾರೆ.

ಈ ತಿಂಗಳು ಪ್ರಾರಂಭವಾಗಲಿದೆ ಏರ್‌ಟೆಲ್‌ನ 5G ಸೇವೆ:
ಭಾರ್ತಿ ಏರ್‌ಟೆಲ್ ಶೀಘ್ರದಲ್ಲೇ 5G ಸೇವೆಯನ್ನು ಪ್ರಾರಂಭಿಸಲು ಈಗಾಗಲೇ ಸೂಚಿಸಿದೆ. ಇದಕ್ಕಾಗಿ ಏರ್‌ಟೆಲ್ ಇಎಂಡಿಗೆ 8,312.4 ಕೋಟಿ ರೂ. ಹೂಡಿಕೆ ಮಾಡಿದೆ.  ಈ ಹಣವನ್ನು ಏರ್‌ಟೆಲ್ ನಾಲ್ಕು ವರ್ಷಗಳ ಕಂತಿನ ಮುಂಗಡ ಪಾವತಿಯಾಗಿ ನೀಡಿದೆ. ಅದೇ ಸಮಯದಲ್ಲಿ, ರಿಲಯನ್ಸ್ ಜಿಯೋ (RJio) 7864 ಕೋಟಿ ರೂ., ವೊಡಾಫೋನ್ ಐಡಿಯಾ 1679 ಕೋಟಿ ಮತ್ತು ಅದಾನಿ ಡೇಟಾ ನೆಟ್‌ವರ್ಕ್ಸ್ (ಅದಾನಿ ಡೇಟಾ) 18 ಕೋಟಿ ರೂ. ಹಣವನ್ನು ಪಾವತಿ ಮಾಡಿದೆ.

ಇದನ್ನೂ ಓದಿ- Jio 5G ಸೇವೆ 4G ಗಿಂತ ಅಗ್ಗವಾಗಿರಬಹುದು!

43 ಸಾವಿರ ಕೋಟಿಗೆ ಬಿಡ್ ಮಾಡಿದ ಏರ್‌ಟೆಲ್ :
ಏರ್‌ಟೆಲ್ 5 ಜಿ ಸೇವೆಯನ್ನು ಒದಗಿಸಲು ಎರಿಕ್ಸನ್, ನೋಕಿಯಾ ಮತ್ತು ಸ್ಯಾಮ್‌ಸಂಗ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಆಗಸ್ಟ್‌ನಲ್ಲಿಯೇ 5G ಸೇವೆಯನ್ನು ಪ್ರಾರಂಭಿಸಲಾಗುವುದು ಎಂದು ಕಂಪನಿಯು ಇತ್ತೀಚೆಗೆ ತಿಳಿಸಿತ್ತು. ಹಿರಿಯ ಟೆಲಿಕಾಂ ವ್ಯಾಪಾರಿ ಸುನಿಲ್ ಭಾರ್ತಿ ಮಿತ್ತಲ್ ಅವರ ಭಾರ್ತಿ ಏರ್‌ಟೆಲ್ 5G ಸ್ಪೆಕ್ಟ್ರಮ್‌ಗಾಗಿ 43,039.63 ಕೋಟಿ ರೂಪಾಯಿಗಳ ಯಶಸ್ವಿ ಬಿಡ್ ಮಾಡಿದೆ.

ಇದನ್ನೂ ಓದಿ- ಬಿಎಸ್ಎನ್ಎಲ್ ವರ್ಷದ ವ್ಯಾಲಿಡಿಟಿ ಪ್ಯಾಕ್ ₹800ಕ್ಕಿಂತ ಕಡಿಮೆ ಬೆಲೆಗೆ: ನಿತ್ಯ 2ಜಿಬಿ ಡೇಟಾ ಜೊತೆ ಸಿಗುತ್ತೆ ಈ ಎಲ್ಲಾ ಲಾಭ

ಯೋಜನೆಯ ವೆಚ್ಚ ಎಷ್ಟು?
5G ಸೇವೆಯ ಪ್ರಾರಂಭದ ದಿನಾಂಕದ ಬಗ್ಗೆ ವೊಡಾಫೋನ್ ಐಡಿಯಾದಿಂದ ಯಾವುದೇ ಮಾಹಿತಿ ಬಹಿರಂಗವಾಗಿಲ್ಲ. ಆದರೆ, 5G ಸೇವೆಗೆ ಗ್ರಾಹಕರು ಪ್ರೀಮಿಯಂ ಬೆಲೆಯನ್ನು ಪಾವತಿಸಬೇಕಾಗುತ್ತದೆ ಎಂದು ಕಂಪನಿ ಹೇಳಿದೆ. ಸ್ಪೆಕ್ಟ್ರಂ ಹರಾಜಿನಲ್ಲಿ ಕಂಪನಿ ಸಾಕಷ್ಟು ಹಣ ಖರ್ಚು ಮಾಡಿರುವುದು ಇದಕ್ಕೆ ಕಾರಣ. 5G ಸ್ಪೆಕ್ಟ್ರಮ್ ಆಧಾರಿತ ಸೇವೆಯನ್ನು ಪರಿಚಯಿಸುವುದರೊಂದಿಗೆ, ವೇಗವು 4G ಗಿಂತ 10 ಪಟ್ಟು ಹೆಚ್ಚು ವೇಗವಾಗಿರುತ್ತದೆ ಎಂದು ಟೆಲಿಕಾಂ ಇಲಾಖೆ ಹೇಳುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News