ಜಿಯೋ, ಏರ್ ಟೆಲ್ ಸ್ಪೆಷಲ್ ಆಫರ್ ನಲ್ಲಿ ಸಿಗುವುದು Free Netflix

Free Netflix on recharge : ಈ ಎರಡೂ ಯೋಜನೆಗಳು ನೆಟ್‌ಫ್ಲಿಕ್ಸ್,  ಮೊಬೈಲ್ ಡೇಟಾ ಮತ್ತು ಕರೆ ಪ್ರಯೋಜನಗಳನ್ನು  ನೀಡುತ್ತದೆ.   

Written by - Ranjitha R K | Last Updated : Mar 13, 2024, 03:56 PM IST
  • ರಿಚಾರ್ಜ್ ಪ್ಲಾನ್ ನಿಂದ ಉಚಿತ ನೆಟ್‌ಫ್ಲಿಕ್ಸ್ ಚಂದಾದಾರಿಕೆ
  • 84 ದಿನಗಳ ಮಾನ್ಯತೆಯೊಂದಿಗೆ ನೆಟ್‌ಫ್ಲಿಕ್ಸ್‌ನ ಬೇಸಿಕ್ ಪ್ಲಾನ್
  • ಇದರಲ್ಲಿದೆ ನೆಟ್‌ಫ್ಲಿಕ್ಸ್, ಮೊಬೈಲ್ ಡೇಟಾ ಮತ್ತು ಕರೆ ಪ್ರಯೋಜನ
ಜಿಯೋ, ಏರ್ ಟೆಲ್ ಸ್ಪೆಷಲ್ ಆಫರ್ ನಲ್ಲಿ ಸಿಗುವುದು Free Netflix  title=

ಬೆಂಗಳೂರು : ಜಿಯೋ ಮತ್ತು ಏರ್‌ಟೆಲ್‌ನಂತಹ ಟೆಲಿಕಾಂ ಕಂಪನಿಗಳು ತಮ್ಮ ಹೆಚ್ಚಿನ ರಿಚಾರ್ಜ್ ಪ್ಲಾನ್ ನಿಂದ ಉಚಿತ ನೆಟ್‌ಫ್ಲಿಕ್ಸ್ ಚಂದಾದಾರಿಕೆಯನ್ನು ತೆಗೆದುಹಾಕಿವೆ. ಆದರೆ, ಜಿಯೋ ಮತ್ತು ಏರ್‌ಟೆಲ್ ನ ಒಂದು ಪ್ಲಾನ್ ನಲ್ಲಿ  84 ದಿನಗಳ ಮಾನ್ಯತೆಯೊಂದಿಗೆ ನೆಟ್‌ಫ್ಲಿಕ್ಸ್‌ನ  ಬೇಸಿಕ್ ಪ್ಲಾನ್  ಲಭ್ಯವಿದೆ. ಈ ಎರಡೂ ಯೋಜನೆಗಳು ನೆಟ್‌ಫ್ಲಿಕ್ಸ್,  ಮೊಬೈಲ್ ಡೇಟಾ ಮತ್ತು ಕರೆ ಪ್ರಯೋಜನಗಳನ್ನು  ನೀಡುತ್ತದೆ. 

ಜಿಯೋ 1099 ರೂ. ಪ್ಲಾನ್ ವಿವರಗಳು : 
ಜಿಯೋದ 1099 ರೂಪಾಯಿ ಪ್ರಿಪೇಯ್ಡ್ ಪ್ಲಾನ್ 84 ದಿನಗಳವರೆಗೆ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಒಟ್ಟು 168GB ಡೇಟಾ ಲಭ್ಯವಿದೆ. ಅಂದರೆ ಪ್ರತಿದಿನ 2GB ಹೈ-ಸ್ಪೀಡ್ ಡೇಟಾ ಸಿಗುತ್ತದೆ. ಫಾಸ್ಟ್ ಡೇಟಾ ಖಾಲಿಯಾದ ನಂತರವೂ, 64 Kbps ಲೋ ಸ್ಪೀಡ್ ನಲ್ಲಿ ಅನಿಯಮಿತ ಇಂಟರ್ನೆಟ್ ಅನ್ನು ಬಳಸಬಹುದು. ಈ ಯೋಜನೆಯಲ್ಲಿ, ಅನಿಯಮಿತ ಕರೆ ಮತ್ತು ದಿನಕ್ಕೆ 100 SMS  ಲಭ್ಯವಿದೆ. 5G ಬಳಸುವ ಸೌಲಭ್ಯವು ಲಭ್ಯವಿರುವ ಪ್ರದೇಶಗಳಲ್ಲಿ ಈ ಪ್ರಯೋಜನವೂ ಇದೆ.  

ಇದನ್ನೂ ಓದಿ : Laptop Slow: ನಿಮ್ಮ ಲ್ಯಾಪ್ ಟಾಪ್ ನಿಧಾನವಾಗುತ್ತಿದೆಯೇ..? ಚಿಂತಿಸಬೇಡಿ, ಇದನ್ನು ಟ್ರೈ ಮಾಡಿ.

ಜಿಯೋದ ಈ ಪ್ಲಾನ್‌ನ ವಿಶೇಷವೆಂದರೆ ಇದರಲ್ಲಿ ನೆಟ್‌ಫ್ಲಿಕ್ಸ್ ಮೊಬೈಲ್ ಚಂದಾದಾರಿಕೆ ಉಚಿತವಾಗಿ ಲಭ್ಯವಿದೆ. ಇದರರ್ಥ ನೀವು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಯಾವುದೇ ನಿರ್ಬಂಧವಿಲ್ಲದೆ ಸಾಕಷ್ಟು ಚಲನಚಿತ್ರಗಳು ಮತ್ತು ಟಿವಿ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು. ಈಗ ತಮ್ಮದೇ ಆದ ನೆಟ್‌ಫ್ಲಿಕ್ಸ್ ಖಾತೆಯನ್ನು ಬಳಸುತ್ತಿರುವವರಿಗೂ ಇದು ಪ್ರಯೋಜನಕಾರಿಯಾಗಿದೆ. 

ಏರ್‌ಟೆಲ್  1499 ರೂ. ಪ್ಲಾನ್ ವಿವರಗಳು : 
ಏರ್‌ಟೆಲ್‌ನ 1499 ರೂಗಳ ಪ್ರಿಪೇಯ್ಡ್ ಯೋಜನೆಯು 84 ದಿನಗಳವರೆಗೆ ಇರುತ್ತದೆ. ಇದರಲ್ಲಿ, ದಿನಕ್ಕೆ 3GB ಹೈ-ಸ್ಪೀಡ್ ಡೇಟಾ, ಅನಿಯಮಿತ ಕರೆ ಮತ್ತು SMS ಜೊತೆಗೆ  ಸ್ಟ್ಯಾಂಡರ್ಡ್ ಪಿಕ್ಚರ್ ಕ್ವಾಲಿಟಿಯಲ್ಲಿ ನೆಟ್‌ಫ್ಲಿಕ್ಸ್ ವೀಕ್ಷಿಸುವುದು ಸಾಧ್ಯವಾಗುತ್ತದೆ. ಈ ಮೂಲಕ ಉಚಿತ Wynk ಸಂಗೀತ, ಹಲೋ ಟ್ಯೂನ್‌ಗಳು ಮತ್ತು 3 ತಿಂಗಳ  Apollo 24X7 ಸರ್ಕಲ್ ಚಂದಾದಾರಿಕೆ ಕೂಡಾ ಸಿಗುತ್ತದೆ.

ಇದನ್ನೂ ಓದಿ : Semiconductor: ಸೆಮಿಕಂಡಕ್ಟರ್ ಎಂದರೇನು ಇದನ್ನು ಎಲ್ಲಿ ಬಳಸಲಾಗುತ್ತದೆ? ಇದು ನಿಮಗೆ ತಿಳಿದಿದೆಯೇ

ಇವೆರಡರ ನಡುವೆ ಯಾವುದು ಉತ್ತಮ? : 
ಎರಡೂ ಯೋಜನೆಗಳು ಉತ್ತಮವಾಗಿವೆ. ಜಿಯೋ ಬಳಕೆದಾರರು 1099  ರೂ. ಪ್ಲಾನ್ ಅನ್ನು ಆರಿಸಿಕೊಳ್ಳಬಹುದು. ಏರ್‌ಟೆಲ್ ಬಳಕೆದಾರರು 1499 ರೂ . ಪ್ಲಾನ್  ಅನ್ನು ತೆಗೆದುಕೊಳ್ಳಬಹುದು. ನೀವು ಎರಡೂ ಸಿಮ್‌ಗಳನ್ನು ಹೊಂದಿದ್ದರೆ, ನಿಮ್ಮ ಆದ್ಯತೆಗಳನ್ನು ನೆನಪಿನಲ್ಲಿಡಿ.ಎರಡೂ ಯೋಜನೆಗಳು 84 ದಿನಗಳ ಮಾನ್ಯತೆಯನ್ನು ನೀಡುತ್ತವೆ. ಆದರೆ, ಜಿಯೋ ದಿನಕ್ಕೆ 2GB ಡೇಟಾವನ್ನು ನೀಡಿದರೆ ಏರ್‌ಟೆಲ್ ದಿನಕ್ಕೆ 3GB ಡೇಟಾವನ್ನು ನೀಡುತ್ತದೆ.ಜಿಯೋದ ಪ್ಲಾನ್ ಸ್ವಲ್ಪ ಅಗ್ಗವಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News