Vi ಬಳಕೆದಾರರಿಗೆ Disney Plus Hotstar ಸಂಪೂರ್ಣ ಉಚಿತ : ಜಿಯೋ, ಏರ್ ಟೆಲ್ ಗೆ ಭಾರೀ ಟಕ್ಕರ್ !

Disney+ Hotstar subscription for free : ಕಂಪನಿಯು ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ಅತ್ಯಂತ ಅಗ್ಗದ ಯೋಜನೆಯೊಂದಿಗೆ ನೀಡುತ್ತಿದೆ. ಈ ಚಂದಾದಾರಿಕೆಯು ಕೇವಲ 155 ರೂಗಳ ಯೋಜನೆಯಲ್ಲಿ ಲಭ್ಯವಿದೆ.

Written by - Ranjitha R K | Last Updated : Mar 1, 2024, 11:32 AM IST
  • ಟಾಪ್ OTT ಪ್ಲಾಟ್‌ಫಾರ್ಮ್‌ಗಳೆಂದರೆ ನೆಟ್ ಫ್ಲಿಕ್ಷ್, ಅಮೆಜಾನ್ ಪ್ರೈಮ್, ಜಿಯೋ ಸಿನಿಮಾ
  • ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲಿ ಬಹಳಷ್ಟು ಕಂಟೆಂಟ್ ಗಳು ಲಭ್ಯವಿದೆ.
  • ಹಣ ಪಾವತಿಸದೆಯೇ ಡಿಸ್ನಿ+ ಹಾಟ್‌ಸ್ಟಾರ್ ಅನ್ನು ಉಚಿತವಾಗಿ ವೀಕ್ಷಿಸಬಹುದು
 Vi ಬಳಕೆದಾರರಿಗೆ Disney Plus Hotstar ಸಂಪೂರ್ಣ ಉಚಿತ : ಜಿಯೋ, ಏರ್ ಟೆಲ್ ಗೆ ಭಾರೀ ಟಕ್ಕರ್ ! title=

Disney+ Hotstar subscription for free : ಭಾರತದ ಟಾಪ್ OTT ಪ್ಲಾಟ್‌ಫಾರ್ಮ್‌ಗಳೆಂದರೆ ಮೊದಲು ನಮ್ಮ ಮನಸ್ಸಿಗೆ ಬರುವುದೇ Netflix, Amazon Prime Video, Jio Cinema ಮತ್ತು Disney+ Hotstar. ಎಲ್ಲಾ ಪ್ಲಾಟ್‌ಫಾರ್ಮ್‌ಗಳಲ್ಲಿ ಬಹಳಷ್ಟು ಕಂಟೆಂಟ್ ಗಳು ಲಭ್ಯವಿದೆ. Disney + Hotstar ನಲ್ಲಿ ಕೆಲವೊಂದು ಕಾರ್ಯಕ್ರಮಗಳು ಫ್ರೀಯಾಗಿದ್ದರೆ, ಚಲನಚಿತ್ರಗಳು ಅಥವಾ ಕೆಲವು ಶೋ ಗಳನ್ನು ವೀಕ್ಷಿಸಲು ಚಂದಾದಾರಿಕೆಯ ಅಗತ್ಯವಿದೆ. ಹಣ ಪಾವತಿಸದೆಯೇ ಡಿಸ್ನಿ+ ಹಾಟ್‌ಸ್ಟಾರ್ ಅನ್ನು ಉಚಿತವಾಗಿ ವೀಕ್ಷಿಸಲು ಬಯಸಿದರೆ, Viನ ಈ ಯೋಜನೆಯು  ನಿಮಗೆ ಸಹಾಯ ಮಾಡಲಿದೆ. ಕಂಪನಿಯು ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ಅತ್ಯಂತ ಅಗ್ಗದ ಯೋಜನೆಯೊಂದಿಗೆ ನೀಡುತ್ತಿದೆ. ಈ ಚಂದಾದಾರಿಕೆಯು ಕೇವಲ 155 ರೂ.ಗಳ ಯೋಜನೆಯಲ್ಲಿ ಲಭ್ಯವಿದೆ. 

ಉಚಿತ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆ :
Vi  155 ರೂ ಪ್ಲಾನ್ : 

ವೊಡಾಫೋನ್ ಐಡಿಯಾದ 155 ರೂ ಪ್ಲಾನ್ 30 ದಿನಗಳ ಮಾನ್ಯತೆಯೊಂದಿಗೆ ಬರುತ್ತದೆ.  ಇದರಲ್ಲಿ 8GB ಡೇಟಾ ಸಿಗುತ್ತದೆ. ಈ ಪ್ಲಾನ್ ನಲ್ಲಿ ಉಚಿತ ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆ 3 ತಿಂಗಳವರೆಗೆ ಲಭ್ಯವಿದೆ. ಇದು ಆಡ್ ಆನ್ ಪ್ಲಾನ್ ಎನ್ನುವುದು ಇಲ್ಲಿ ಗಮನಿಸಬೇಕಾದ ಅಂಶ. 

ಇದನ್ನೂ ಓದಿ : ಸಾರ್ವಜನಿಕರ ಒಳಿತಿಗಾಗಿ AI ಬಳಕೆ ಕುರಿತಂತೆ ಪ್ರಧಾನಿ ಮೋದಿ ಜೊತೆ ಬಿಲ್ ಗೇಟ್ಸ್ ಸುದೀರ್ಘ ಚರ್ಚೆ

ಏರ್‌ಟೆಲ್ 839 ರೂ . ಪ್ಲಾನ್ : 
ಏರ್‌ಟೆಲ್‌ನ 839 ರೂ. ಪ್ಲಾನ್ 84 ದಿನಗಳ ಮಾನ್ಯತೆಯನ್ನು ನೀಡುತ್ತದೆ. ಇದು ಪ್ರತಿದಿನ 2GB ಡೇಟಾವನ್ನು ಒದಗಿಸುತ್ತದೆ ಮಾತ್ರವಲ್ಲ ಇದರಲ್ಲಿ ಅನಿಯಮಿತ ಕರೆ ಸೌಲಭ್ಯ ಕೂಡಾ ಇದೆ. ಈ ಯೋಜನೆಯಲ್ಲಿ ಪ್ರತಿದಿನ 100 SMS ಲಭ್ಯವಿದೆ. ಯೋಜನೆಯಲ್ಲಿ 5G ಡೇಟಾ ಆಫರ್ ನೀಡಲಾಗುತ್ತದೆ. ಇದಲ್ಲದೇ, ಉಚಿತ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆಯು  3 ತಿಂಗಳವರೆಗೆ ಲಭ್ಯವಿದೆ. 

ಜಿಯೋ 328 ರೂ. ಪ್ಲಾನ್ :
ಜಿಯೋದ  328 ರೂ. ಪ್ಲಾನ್ 28 ದಿನಗಳ ಮಾನ್ಯತೆಯನ್ನು ಹೊಂದಿದೆ. ಇದಲ್ಲದೆ, ಇದರಲ್ಲಿ ದಿನಕ್ಕೆ 1.5GB ಡೇಟಾವನ್ನು ನೀಡಲಾಗುತ್ತದೆ.ಈ ಯೋಜನೆಯಲ್ಲಿ, ಬಳಕೆದಾರರು 3 ತಿಂಗಳವರೆಗೆ ಉಚಿತ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ಪಡೆಯುತ್ತಾರೆ. 

ಇದನ್ನೂ ಓದಿ : WhatsApp New Feature: ವಾಟ್ಸ್ ಆಪ್ ನಲ್ಲಿ ಇನ್ಮುಂದೆ ದಿನಾಂಕ ಆಧರಿಸಿ ನೀವು ಈ ಕೆಲಸ ಮಾಡಬಹುದು, ಹೊಸ ವೈಶಿಷ್ಟ್ಯ ಬಿಡುಗಡೆ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News