Cheapest Recharge: ಮಾರುಕಟ್ಟೆಗೆ ಎರಡು ಹೊಸ ಪ್ಲಾನ್ ಬಿಡುಗಡೆ ಮಾಡಿದ ವೊಡಾಫೋನ್-ಐಡಿಯಾ

Vodafone Idea Prepaid Plans Launched: ಟೆಲಿಕಾಂ ಕಂಪನಿ ವೊಡಾಫೋನ್ ಐಡಿಯಾ ಇತ್ತೀಚೆಗೆ ಎರಡು ಹೊಸ ಪ್ರಿಪೇಯ್ಡ್ ಪ್ಲಾನ್‌ಗಳನ್ನು ಆರಂಭಿಸಿದೆ. ಕೇವಲ 29 ರೂ. ಈ ಯೋಜನೆಗಳ ಹೆಚ್ಚಿನ ಮಾಹಿತಿ ಪಡೆಯೋಣ ಬನ್ನಿ.

Written by - Nitin Tabib | Last Updated : Apr 30, 2022, 07:58 PM IST
  • ಎರಡು ಹೊಸ ಯೋಜನೆಗಳನ್ನು ಪ್ರಕಟಿಸಿದ ವೊಡಾಫೋನ್-ಐಡಿಯಾ
  • ರೂ.29ರ ಯೋಜನೆಯ ವಿಶೇಷತೆ ಏನು?
  • ರೂ.39ರ ಯೋಜನೆಯ ವಿಶೇಷತೆ ಏನು?
Cheapest Recharge: ಮಾರುಕಟ್ಟೆಗೆ ಎರಡು ಹೊಸ ಪ್ಲಾನ್ ಬಿಡುಗಡೆ ಮಾಡಿದ ವೊಡಾಫೋನ್-ಐಡಿಯಾ title=
Cheapest Recharge Plans

Vodafone Idea Prepaid Plans Launched: ಖಾಸಗಿ ಟೆಲಿಕಾಂ ಸೇವೆ ಒದಗಿಸುವ ವೊಡಾಫೋನ್-ಐಡಿಯಾ ಕಂಪನಿ ಎರಡು ಹೊಸ ರಿಚಾರ್ಜ್ ಯೋಜನೆಗಳನ್ನು ಬಿಡುಗಡೆ ಮಾಡಿದೆ.e ಎರಡು ಪ್ರೀಪೇಡ್ ಯೋಜನೆಗಳ ಆರಂಭಿಕ ಬೆಲೆ ರೂ.29 ಇರಲಿದೆ. ಹಾಗಾದರೆ ಬನ್ನಿ ಈ ಪ್ಲಾನ್ ಗಳು ಯಾವುವು ಮತ್ತು ಅವುಗಳಲ್ಲಿ ಯಾವ ಯಾವ ಲಾಭಗಳನ್ನು ನೀಡಲಾಗುತ್ತಿದೆ ತಿಳಿದುಕೊಳ್ಳೋಣ ಬನ್ನಿ, 

ಹೊಸ ರಿಚಾರ್ಜ್ ಯೋಜನೆಗಳನ್ನು ಬಿಡುಗಡೆ ಮಾಡಿದ ವೊಡಾಫೋನ್-ಐಡಿಯಾ
ಒಂದು ವೇಳೆ ನೀವೂ ಕೂಡ ವೊಡಾಫೋನ್-ಐಡಿಯಾ ಅಥವಾ ವಿಐ ಗ್ರಾಹಕರಗಿದ್ದರೆ ಮತ್ತು ಉತ್ತಮ ಪ್ರೀಪೇಡ್ ಯೋಜನೆಯನ್ನು ಬಯಸುತ್ತಿದ್ದರೆ, ಈ ಸುದ್ದಿ ನಿಮಗಾಗಿ. ಇತ್ತೀಚೆಗಷ್ಟೇ ವಿಐ ಎರಡು ಹೊಸ ಪ್ರೀಪೇಡ್ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಈ ಯೋಜನೆಗಳಲ್ಲಿ ನಿಮಗೆ ಹಲವು ಆಕರ್ಷಕ ಲಾಭಗಳನ್ನು ಅತ್ಯಂತ ಕಡಿಮೆ ಬೆಲೆಗೆ ನೀಡಲಾಗುತ್ತಿದೆ. ಇದರಲ್ಲಿನ ಮೊದಲ ಯೋಜನೆಯ ಬೆಲೆ ರೂ.29 ಆಗಿದೆ, ಎರಡನೇ ಯೋಜನೆಯ ಬೆಲೆ ರೂ 39 ಆಗಿದೆ. 

ವೊಡಾಫೋನ್ ಐಡಿಯಾ ರೂ 29 ಯೋಜನೆ
Vi ನ ರೂ 29 ಯೋಜನೆಯಲ್ಲಿ, ನಿಮಗೆ ಒಟ್ಟು 2GB ಹೈ-ಸ್ಪೀಡ್ ಇಂಟರ್ನೆಟ್ ಸಿಗಲಿದೆ. ಈ ಯೋಜನೆಯು ವಿಶೇಷವಾಗಿ ಅಲ್ಪಾವಧಿಗೆ ಹೆಚ್ಚಿನ ವೇಗದ ಇಂಟರ್ನೆಟ್ ಅನ್ನು ಆನಂದಿಸಲು ಬಯಸುವ ಜನರಿಗಾಗಿ ಇರಲಿದೆ. ವೊಡಾಫೋನ್ ಐಡಿಯಾದ ಈ ರೂ 29 ಪ್ಲಾನ್ ಒಂದು ಡೇಟಾ ವೋಚರ್ ಪ್ಲಾನ್ ಆಗಿದೆ. ಬೇರೆ ಯಾವುದೇ ಪ್ರಯೋಜನವನ್ನು ಇದರಲ್ಲಿ ಸೇರಿಸದಿರುವುದು ಇದೇ ಕಾರಣ. ಈ ಯೋಜನೆಯ ಮಾನ್ಯತೆ ಎರಡು ದಿನಗಳು ಮಾತ್ರ ಎಂಬುದು ಇಲ್ಲಿ ಉಲ್ಲೇಖನೀಯ.

ಇದನ್ನೂ ಓದಿ-Koo App : ಬದಲಾದ ಸ್ವರೂಪದಲ್ಲಿ Koo ಆ್ಯಪ್‌ : ಬಳಕೆದಾರರಿಗೆ ಈಗ ಉತ್ತಮ ಬ್ರೌಸಿಂಗ್ ಅನುಭವ

ವೊಡಾಫೋನ್-ಐಡಿಯಾ ಕಂಪನಿಯ ರೂ.39ರ ಪ್ಲಾನ್ 
ರೂ 29 ಪ್ಲಾನ್ ಜೊತೆಗೆ, ವೊಡಾಫೋನ್ ಐಡಿಯಾ ರೂ 39 ಪ್ಲಾನ್ ಅನ್ನು ಸಹ ಬಿಡುಗಡೆ ಮಾಡಿದೆ. ವಾಸ್ತವದಲ್ಲಿ ಇದೊಂದು 4GB ಡೇಟಾ ವೋಚರ್ ಪ್ಲಾನ್ ಆಗಿದ್ದು ಇದರಲ್ಲಿ ನಿಮಗೆ 3GB ಹೈ-ಸ್ಪೀಡ್ ಡೇಟಾ ನೀಡಲಾಗುತ್ತಿದೆ. ಪೂರ್ಣ ವಾರ ಅಂದರೆ ಏಳು ದಿನಗಳ ವ್ಯಾಲಿಡಿಟಿ ಹೊಂದಿರುವ ಈ ವೋಚರ್‌ನಲ್ಲಿ, ನಿಮಗೆ ಅನಿಯಮಿತ ಕರೆ ಮತ್ತು ದೈನಂದಿನ SMS ನಂತಹ ಪ್ರಯೋಜನಗಳು ಲಭ್ಯವಿಲ್ಲ. 

ಇದನ್ನೂ ಓದಿ-Instagram ಗೆ ಬರಲಿದೆ ಅದ್ಭುತ ವೈಶಿಷ್ಟ್ಯ!

ಇತ್ತೀಚೆಗಷ್ಟೇ ಈ ಯೋಜನೆಗಳನ್ನು ಪ್ರಾರಂಭಿಸಲಾಗಿದೆ ಮತ್ತು ಪ್ರಸ್ತುತ ಅವುಗಳನ್ನು ಎಲ್ಲಾ ವಲಯಕ್ಕೂ ಆರಂಭಿಸಲಾಗಿಲ್ಲ. ಪ್ರಸ್ತುತ, ಗುಜರಾತ್‌ನ ವೊಡಾಫೋನ್ ಐಡಿಯಾ ಬಳಕೆದಾರರು ಮಾತ್ರ ಈ ಯೋಜನೆಗಳ ಲಾಭವನ್ನು ಪಡೆಯಬಹುದು.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
    

Trending News