Darling krishna-Milana Nagaraj : ಸ್ಯಾಂಡಲ್ವುಡ್ ನಟ ಕೃಷ್ಣ ಅವರು ಡಾರ್ಲಿಂಗ್ ಕೃಷ್ಣ ಎಂದೇ ಸಿನಿಪ್ರಿಯರಿಗೆ ಪರಿಚಿತರು. ಇನ್ನು ಇವರ ಸಂಗಾತಿ `ನಮ್ ದುನಿಯಾ ನಮ್ಮ ಸ್ಟೈಲ್' ಚಿತ್ರದಿಂದ ಸಿನಿರಂಗಕ್ಕೆ ಪ್ರವೇಶಿಸಿದ ಕ್ಯೂಟ್ ಬೆಡಗಿ. ಇವರಿಬ್ಬರು ಜೊತೆಯಾಗಿ ನಟಿಸಿರುವ ಮೊದಲ ಸಿನಿಮಾ ʼಲವ್ ಮಾಕ್ಟೇಲ್ʼ ಈ ಚಿತ್ರದಿಂದ ಖ್ಯಾತಿ ಪಡೆದ ಜೋಡಿ ಇಂದಿಗೂ ಸ್ಯಾಂಡಲ್ವುಡ್ನ ಟಾಪ್ ಜೋಡಿಗಳಲ್ಲಿ ಒಂದು.
ಎಲ್ಲರಿಗೂ ಮದುವೆ ಬಗ್ಗೆ ಸಾಕಷ್ಟು ಕನಸುಗಳಿರುತ್ತದೆ. ಆ ಪ್ರಸಂಗಕ್ಕೆ ತಕ್ಕದಾದ ಹಾಡೊಂದನ್ನು ಕವಿರಾಜ್ ಅದ್ಭುತವಾಗಿ ಬರೆದಿದ್ದಾರೆ. ಅರ್ಜುನ್ ಜನ್ಯ ಅಷ್ಟೇ ಚೆನ್ನಾಗಿ ಸಂಗೀತ ನೀಡಿದ್ದಾರೆ.
ಶ್ರೀಬನಶಂಕರಿ ಚಿತ್ರಾಲಯ ಲಾಂಛನದಲ್ಲಿ ಕಡ್ಡಿಪುಡಿ ಚಂದ್ರು ನಿರ್ಮಿಸಿರುವ, ಪಿ.ಸಿ.ಶೇಖರ್ ನಿರ್ದೇಶನದ, ಡಾರ್ಲಿಂಗ್ ಕೃಷ್ಣ - ಮಿಲನ ನಾಗರಾಜ್ ನಾಯಕ, ನಾಯಕಿಯಾಗಿ ನಟಿಸಿರುವ "ಲವ್ ಬರ್ಡ್ಸ್" ಚಿತ್ರದ ಟೀಸರ್ ಬಿಡುಗಡೆಯಾಗಿದೆ. ನಾಯಕ, ನಾಯಕಿಯ ಪಾತ್ರವನ್ನು ಪರಿಸಿಚಯಿಸುವ ಈ ಟೀಸರ್ ಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಕನ್ನಡ ಚಿತ್ರರಂಗದ ಖ್ಯಾತ ನಟರಾದ ವಿಜಯ ರಾಘವೇಂದ್ರ ಹಾಗೂ ಅಜಯ್ ರಾವ್ "ಲವ್ ಬರ್ಡ್ಸ್" ಚಿತ್ರದ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.
ನಾನು ಇಲ್ಲಿಯವರೆಗೆ ಯಾವ ಚಿತ್ರದಲ್ಲೂ ಹಾಕಿರದಷ್ಟು ಬಟ್ಟೆಗಳನ್ನು ಈ ಚಿತ್ರದಲ್ಲಿ ಹಾಕಿದ್ದೇನೆ. ಅದಕ್ಕೆ ನಿರ್ದೇಶಕರೆ ಕಾರಣ. ಅವರಿಗೆ ಸಾಕಷ್ಟು ಅಭಿರುಚಿಯಿದೆ. ಮಿಲನ ನಾಗರಾಜ್ ಅವರು ಈ ಚಿತ್ರದ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ ಎಂದು ನಾಯಕ ಡಾರ್ಲಿಂಗ್ ಕೃಷ್ಣ ಹೇಳಿದ್ದಾರೆ.
ಷಡಕ್ಷರಿ ಸನ್ ಆಫ್ ಪಂಚಾಕ್ಷರಿ ಚಿತ್ರ ಥ್ರಿಲ್ಲರ್ ಜಾನರ್ ಒಳಗೊಂಡಿದ್ದು, ಪಕ್ಕಾ ಕಮರ್ಶಿಯಲ್ ಹಾದಿಯಲ್ಲಿ ಚಿತ್ರವನ್ನು ಕಟ್ಟಿಕೊಡಲಾಗುತ್ತಿದೆ. ಉಡುಂಬಾ ಸಿನಿಮಾ ನಂತರ ಥ್ರಿಲ್ಲರ್ ಜಾನರ್ ಕಥೆ ಹೆಣೆದು ಒಂದಿಷ್ಟು ಹೊಸತನದೊಂದಿಗೆ ನಿರ್ದೇಶಕ ಶಿವರಾಜ್ ಸಕ್ರೆ ಕಂ ಬ್ಯಾಕ್ ಮಾಡ್ತಿದ್ದಾರೆ. ಕಥೆ, ಚಿತ್ರಕಥೆ, ಸಂಭಾಷಣೆ ಜವಾಬ್ದಾರಿಯನ್ನು ನಿಭಾಯಿಸಿ ನಿರ್ದೇಶನ ಮಾಡಲು ಸಜ್ಜಾಗಿದ್ದಾರೆ. ಚಿತ್ರದ ಪ್ರಿ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು ಜನವರಿ 28ಕ್ಕೆ ಸಿನಿಮಾ ಸೆಟ್ಟೇರಲಿದೆ.
ಡಾರ್ಲಿಂಗ್ ಕೃಷ್ಣ ನಾಯಕರಾಗಿ ನಟಿಸಿರುವ "Mr ಬ್ಯಾಚುಲರ್" ಚಿತ್ರಕ್ಕಾಗಿ ಮಾರುತಿ ಅವರು ಬರೆದಿರುವ "ಮದುವೆ ಯಾವಾಗ" ಎಂಬ ಸೊಗಸಾದ ಹಾಡು ಜಂಕಾರ್ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ.ಹರೀಶ್ ಈ ಹಾಡನ್ನು ಬಿಡುಗಡೆ ಮಾಡಿ ಶುಭ ಕೋರಿದರು. ವಿಜಯ್ ಪ್ರಕಾಶ್ ಹಾಡಿರುವ ಈ ಹಾಡಿಗೆ ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದಾರೆ.
Sugar Factory Movie Song : ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸಿರುವ "ಶುಗರ್ ಫ್ಯಾಕ್ಟರಿ" ಸಿನಿಮಾ ಆರಂಭದ ದಿನದಿಂದಲೂ ಸಾಕಷ್ಟು ಕುತೂಹಲ ಹುಟ್ಟಿಸಿದೆ.ಇತ್ತೀಚಿಗೆ ಈ ಚಿತ್ರದ ಟೈಟಲ್ ಟ್ರ್ಯಾಕ್ ಮಂತ್ರಿಮಾಲ್ ನಲ್ಲಿ ಬಿಡುಗಡೆಯಾಯಿತು. ಅಲ್ಲಿ ನೆರದಿದ್ದ ಅಪಾರ ಜನಸ್ತೋಮ ಶೀರ್ಷಿಕೆ ಹಾಡು ಬಿಡುಗಡೆಗೆ ಸಾಕ್ಷಿಯಾದರು. ಅಲ್ಲಿದ್ದ ಆರು ಜನ ಸಿನಿಪ್ರೇಕ್ಷಕರೆ, ಈ ಹಾಡನ್ನು ಬಿಡುಗಡೆ ಮಾಡಿದ್ದು ವಿಶೇಷವಾಗಿತ್ತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.