ಎಂ.ಎಸ್.ಧೋನಿ ದಾಖಲೆಯನ್ನೇ ಸರಿಗಟ್ಟಿದ ಆ ರಿಶಬ್ ಪಂತ್ ದಾಖಲೆ ಯಾವುದು ಗೊತ್ತಾ?

ಭಾರತ ತಂಡದ ವಿಕೆಟ್ ಕೀಪರ್ ರಿಶಬ್ ಪಂತ್ ಈಗ ಎಂ.ಎಸ್ ಧೋನಿ ದಾಖಲೆಯನ್ನು ಸರಿಗಟ್ಟಿದ್ದಾರೆ.

Last Updated : Dec 8, 2018, 05:34 PM IST
 ಎಂ.ಎಸ್.ಧೋನಿ ದಾಖಲೆಯನ್ನೇ ಸರಿಗಟ್ಟಿದ ಆ ರಿಶಬ್ ಪಂತ್ ದಾಖಲೆ ಯಾವುದು ಗೊತ್ತಾ? title=

ನವದೆಹಲಿ: ಭಾರತ ತಂಡದ ವಿಕೆಟ್ ಕೀಪರ್ ರಿಶಬ್ ಪಂತ್ ಈಗ ಎಂ.ಎಸ್ ಧೋನಿ ದಾಖಲೆಯನ್ನು ಸರಿಗಟ್ಟಿದ್ದಾರೆ.

21 ವರ್ಷದ ವಿಕೆಟ್ ಕೀಪರ್ ಅಡಿಲೇಡ್ ಟೆಸ್ಟ್ ನಲ್ಲಿ ಉಸ್ಮಾನ್ ಖಜಾ, ಪೀಟರ್ ಹ್ಯಾಂಡ್ಸ್ಕಾಂಬ್, ಟಿಮ್ ಪೇನ್  ಮಿಚೆಲ್ ಸ್ಟಾರ್ಕ್, ಟ್ರಾವಿಸ್ ಹೆಡ್ ಮತ್ತು ಜೋಶ್ ಹ್ಯಾಝೆಲ್ವುಡ್ ಅವರ ಕ್ಯಾಚ್ ಗಳನ್ನು ಪಡೆಯುವುದರ ಮೂಲಕ ಟೆಸ್ಟ್ ಇನ್ನಿಂಗ್ಸ್ವೊಂದರಲ್ಲಿ ಅತಿ ಹೆಚ್ಚು ಕ್ಯಾಚ್ ಗಳನ್ನು ಪಡೆದ ವಿಕೆಟ್ ಕಿಪರ್ ಎನ್ನುವ ದಾಖಲೆಯನ್ನು ತಮ್ಮದಾಗಿಸಿಕೊಂಡರು. 

2009 ರಲ್ಲಿ ನ್ಯೂಜಿಲೆಂಡ್ ವಿರುದ್ಧದ ವೆಲ್ಲಿಂಗ್ಟನ್ ಟೆಸ್ಟ್ನಲ್ಲಿ ಧೋನಿ ಆರು ಕ್ಯಾಚ್ ಗಳನ್ನು ಪಡೆಯುವ ಮೂಲಕ ದಾಖಲೆ ಮಾಡಿದ್ದರು. ಅಡಿಲೇಡ್ ಟೆಸ್ಟ್ ರಿಶಬ್ ಪಂತ್ ರವರ ಆರನೇ ಟೆಸ್ಟ್ ಪಂದ್ಯವಾಗಿದೆ.ಇದುವರೆಗೂ ರಿಷಬ್ ಪಂತ್ 43.25 ಸರಾಸರಿಯಲ್ಲಿ 346 ರನ್ ಗಳಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ 114 ರನ್ ಗಳಿಸಿರುವುದು ಇದುವರೆಗಿನ ಗರಿಷ್ಟ ಮೊತ್ತವಾಗಿದೆ.

Trending News