ಧೋನಿ-ಯುವಿ ಬಳಿಕ Team Indiaದಲ್ಲಿ ಫಿನಿಶಿಂಗ್ ಸ್ಥಾನ ತುಂಬಿದ ಏಕೈಕ ಆಟಗಾರ 31ರ ಹರೆಯದ ಈ ಕನ್ನಡಿಗ!

R Ashwin-KL Rahul: ಟೀಂ ಇಂಡಿಯಾದಲ್ಲಿ ಫಿನಿಶರ್ ಸ್ಥಾನ ತುಂಬುತ್ತಿರುವ ಏಕೈಕ ಆಟಗಾರನೆಂದರೆ ಅದು ಕೆಎಲ್ ರಾಹುಲ್. “ಪರಿಣತಿಯೊಂದಿಗೆ ಆ ಸ್ಥಾನಕ್ಕೆ ನ್ಯಾಯ ನೀಡಿದ್ದಾರೆ.

Written by - Bhavishya Shetty | Last Updated : Aug 26, 2023, 12:05 PM IST
    • ಟೀಂ ಇಂಡಿಯಾದಲ್ಲಿ ಫಿನಿಶರ್ ಸ್ಥಾನ ತುಂಬುತ್ತಿರುವ ಏಕೈಕ ಆಟಗಾರನೆಂದರೆ ಅದು ಕೆಎಲ್ ರಾಹುಲ್
    • ಟೀಂ ಇಂಡಿಯಾದ ರೈಟ್ ಆರ್ಮ್ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮಾತು
    • ಭಾರತೀಯ ಕ್ರಿಕೆಟ್ ತಂಡಕ್ಕೆ ಬಹುಮುಖ ಕ್ರಿಕೆಟಿಗರಾಗಿ ಕೊಡುಗೆ ನೀಡುತ್ತಿದ್ದಾರೆ
ಧೋನಿ-ಯುವಿ ಬಳಿಕ Team Indiaದಲ್ಲಿ ಫಿನಿಶಿಂಗ್ ಸ್ಥಾನ ತುಂಬಿದ ಏಕೈಕ ಆಟಗಾರ 31ರ ಹರೆಯದ ಈ ಕನ್ನಡಿಗ!   title=
Ashwin Talks About KL Rahul

Ashwin Talks About KL Rahul: ಎಂಎಸ್ ಧೋನಿ ಮತ್ತು ಯುವರಾಜ್ ಸಿಂಗ್ ಅವರ ನಿವೃತ್ತಿ ಬಳಿಕ ಟೀಂ ಇಂಡಿಯಾದಲ್ಲಿ ಫಿನಿಶರ್ ಸ್ಥಾನ ತುಂಬುತ್ತಿರುವ ಆಟಗಾರನ ಬಗ್ಗೆ ಟೀಂ ಇಂಡಿಯಾದ ರೈಟ್ ಆರ್ಮ್ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮಾತನಾಡಿದ್ದಾರೆ.

ಇದನ್ನೂ ಓದಿ: “ಭಾರತದ ಈ ಕ್ರಿಕೆಟಿಗನೆಂದರೆ ತುಂಬಾ ಇಷ್ಟ, ಈತನಲ್ಲಿ ನನ್ನನ್ನು ನಾನು ಕಂಡೆ”: ವಿವಿಯನ್ ರಿಚರ್ಡ್ಸ್

ಟೀಂ ಇಂಡಿಯಾದಲ್ಲಿ ಫಿನಿಶರ್ ಸ್ಥಾನ ತುಂಬುತ್ತಿರುವ ಏಕೈಕ ಆಟಗಾರನೆಂದರೆ ಅದು ಕೆಎಲ್ ರಾಹುಲ್. “ಪರಿಣತಿಯೊಂದಿಗೆ ಆ ಸ್ಥಾನಕ್ಕೆ ನ್ಯಾಯ ನೀಡಿದ್ದಾರೆ. ಮುಂಬರುವ ಏಷ್ಯಾ ಕಪ್ 2023 ರ ಸಮಯದಲ್ಲಿ ಭಾರತಕ್ಕೆ ಐದನೇ ಸ್ಥಾನದಲ್ಲಿ ಖಚಿತವಾಗಿ ಅವರು ಆಡಿದರೆ ಉತ್ತಮ” ಎಂದು ಆರ್ ಅಶ್ವಿನ್ ಹೇಳಿದ್ದಾರೆ.

ರಾಹುಲ್ ಇತ್ತೀಚಿನ ವರ್ಷಗಳಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕೆ ಬಹುಮುಖ ಕ್ರಿಕೆಟಿಗರಾಗಿ ಕೊಡುಗೆ ನೀಡುತ್ತಿದ್ದಾರೆ, ಬ್ಯಾಟಿಂಗ್ ಕ್ರಮಾಂಕದಲ್ಲಿ ಹಲವಾರು ವಿಭಿನ್ನ ಸ್ಥಾನಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಮುಂಬರುವ ಏಷ್ಯಾಕಪ್ ಮತ್ತು ವಿಶ್ವಕಪ್‌’ಗೆ ಸಿದ್ಧರಾಗಲು ರಾಹುಲ್ ಕಳೆದ ಕೆಲವು ತಿಂಗಳಿನಿಂದ ಫಿಟ್ನೆಸ್ ಬಗ್ಗೆ ಮುತುವರ್ಜಿ ವಹಿಸುತ್ತಿದ್ದಾರೆ, ಇನ್ನು ಏಷ್ಯಾಕಪ್‌’ನ 17 ಸದಸ್ಯರ ತಂಡದಲ್ಲಿ ಕರ್ನಾಟಕದ ಬ್ಯಾಟರ್‌’ಗೆ ಸ್ಥಾನ ಸಿಕ್ಕಿರುವುದು ಸಂತಸದ ಸಂಗತಿ.

ಇದನ್ನೂ ಓದಿ: 2011ರಲ್ಲಿ ವಿಶ್ವಕಪ್ ಗೆದ್ದಿದ್ದು ಧೋನಿಯಿಂದಲ್ಲ, ಈ ಆಟಗಾರರ ಬ್ಯಾಟಿಂಗ್-ಬೌಲಿಂಗ್’ನಿಂದ…!

ಅಶ್ವಿನ್ ಯೂಟ್ಯೂಬ್ ಚಾನೆಲ್‌’ವೊಂದರ ಸಂದರ್ಶನಲ್ಲಿ ಮಾತನಾಡುತ್ತಾ ಈ ಬಗ್ಗೆ ಹೇಳಿದ್ದಾರೆ. “ಧೋನಿ ಮತ್ತು ಯುವರಾಜ್ ಅವರ ನಿವೃತ್ತಿಯ ನಂತರ ಭಾರತವು ಮಧ್ಯಮ ಕ್ರಮಾಂಕದ ಕಾಯುತ್ತಿತ್ತು. ರಾಹುಲ್ ಪಾತ್ರವನ್ನು ಉತ್ತಮವಾಗಿ ನಿರ್ವಹಿಸಿದ್ದಾರೆ ಮತ್ತು ತಂಡದಲ್ಲಿ ನಂ.5 ಗೆ ಖಚಿತವಾದ ಆಟಗಾರ ಎಂದೆನಿಸಿಕೊಂಡಿದ್ದಾರೆ” ಎಂದು ಆಫ್ ಸ್ಪಿನ್ನರ್ ಹೇಳಿದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News