ಕೊಹ್ಲಿ.. ಧೋನಿ ಇಬ್ಬರೂ ಅಲ್ಲ.. ಕೆಎಲ್ ರಾಹುಲ್ ಗೆ ಸ್ಫೂರ್ತಿಯಂತೆ ಈ ಲೆಜೆಂಡರಿ ಆಟಗಾರ!

K L Rahul Inspiration: ಟಿಂ ಇಂಡಿಯಾದ ಸ್ಟಾರ್‌ ಆಟಗಾರ ಕೆ ಎಲ್‌ ರಾಹುಲ್‌ ಗಾಯದಿಂದ ಹೊರಗುಳಿದಿದ್ದಾರೆ.. ಹೀಗಾಗಿ ಕ್ರೀಸ್‌ಗೆ ಮರಳಲು ಈ ಸ್ಟಾರ್ ಆಟಗಾರ ಅವರಿಗೆ ಸ್ಫೂರ್ತಿ ನೀಡಿದ್ದಾರೆ ಅವರೇ ಸ್ವತಃ ಹೇಳಿಕೊಂಡಿದ್ದಾರೆ..   

Written by - Savita M B | Last Updated : Mar 2, 2024, 11:02 AM IST
  • ಭಾರತದ ಸ್ಟಾರ್ ಆಟಗಾರ ಕೆಎಲ್ ರಾಹುಲ್
  • ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ.
  • ಕ್ರೀಸ್‌ಗೆ ಮರಳಲು ಸ್ಟಾರ್ ಯಾವ ಆಟಗಾರ ಸ್ಫೂರ್ತಿ ನೀಡುತ್ತಿದ್ದಾರೆ ಎಂದು ರಾಹುಲ್‌ ಹೇಳಿಕೊಂಡಿದ್ದಾರೆ..
ಕೊಹ್ಲಿ.. ಧೋನಿ ಇಬ್ಬರೂ ಅಲ್ಲ.. ಕೆಎಲ್ ರಾಹುಲ್ ಗೆ ಸ್ಫೂರ್ತಿಯಂತೆ ಈ ಲೆಜೆಂಡರಿ ಆಟಗಾರ! title=

K L Rahul: ಭಾರತದ ಸ್ಟಾರ್ ಆಟಗಾರ ಕೆಎಲ್ ರಾಹುಲ್ ಗಾಯದ ಕಾರಣ ಮಾರ್ಚ್ 7 ರಿಂದ ಧರ್ಮಶಾಲಾದಲ್ಲಿ ನಡೆಯುತ್ತಿರುವ ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ನೇ ಟೆಸ್ಟ್ ಪಂದ್ಯದಿಂದ ಹೊರಗುಳಿದಿದ್ದಾರೆ. ಪದೇ ಪದೇ ಗಾಯಗೊಂಡಿರುವ ಆತಂಕ ವ್ಯಕ್ತವಾಗುತ್ತಿದ್ದು.. ಹೊರಗುಳಿದ ನಂತರ ಕ್ರೀಸ್‌ಗೆ ಮರಳಲು ಸ್ಟಾರ್ ಯಾವ ಆಟಗಾರ ಸ್ಫೂರ್ತಿ ನೀಡುತ್ತಿದ್ದಾರೆ ಎಂದು ರಾಹುಲ್‌ ಹೇಳಿಕೊಂಡಿದ್ದಾರೆ.. 

ಕೆಎಲ್ ರಾಹುಲ್ ಗೆ ಸ್ಫೂರ್ತಿಯಾಗಿರುವುದು ಟೀಂ ಇಂಡಿಯಾದ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ ಹಾಗೂ ಭಾರತದ ದಿಗ್ಗಜ ನಾಯಕ ಎಂಎಸ್ ಧೋನಿ ಇಬ್ಬರೂ ಅಲ್ಲವಂತೆ.. ಈ ಬಗ್ಗೆ ಕೆ ಎಲ್‌ ರಾಹುಲ್‌ ಮಾತನಾಡಿರುವ ವಿಡಿಯೋವೊಂದು ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.. 

ಇದನ್ನೂ ಓದಿ-ಗೆಳೆಯನ ಪತ್ನಿಯನ್ನೇ ಪ್ರೀತಿಸಿ.. ಡಿವೋರ್ಸ್‌ ಬಳಿಕ ಮದುವೆಯಾದ ಟೀಮ್‌ ಇಂಡಿಯಾ ಸ್ಟಾರ್‌ ಕ್ರಿಕೆಟರ್! ‌

ಸಂದರ್ಶನವೊಂದರಲ್ಲಿ 31 ವರ್ಷದ ಭಾರತೀಯ ಕ್ರಿಕೆಟಿಗ ಕೆಎಲ್ ರಾಹುಲ್ ನಿಮಗೆ ಸ್ಫೂರ್ತಿ ನೀಡುವ ವ್ಯಕ್ತಿ ಯಾರು ಎಂದು ಕೇಳಿದಾಗ ರಾಹುಲ್‌  "ದಕ್ಷಿಣ ಆಫ್ರಿಕಾದ ಲೆಜೆಂಡರಿ ಆಟಗಾರ, ಮಿಸ್ಟರ್ 360 ಎಬಿ ಡಿವಿಲಿಯರ್ಸ್" ಎಂದಿದ್ದಾರೆ..   

ನಿಜ ಜೀವನದಲ್ಲಿ ತಂದೆ ಮತ್ತು ಕ್ರಿಕೆಟ್ ಮೈದಾನದಲ್ಲಿ ಎಬಿ ಡಿವಿಲಿಯರ್ಸ್ ಅವರಿಂದ ಸ್ಫೂರ್ತಿ ಪಡೆದಿದ್ದೇನೆ ಎಂದು ಕೆಎಲ್ ರಾಹುಲ್ ತಿಳಿಸಿದ್ದಾರೆ. ಐಪಿಎಲ್ 2011 ರ ಮೆಗಾ ಹರಾಜಿನಿಂದ 11 ಸೀಸನ್‌ಗಳಲ್ಲಿ ಆರ್‌ಸಿಬಿ ಪರ ಆಡಿದ ಎಬಿ ಡಿವಿಲಿಯರ್ಸ್ 2021 ರಲ್ಲಿ ನಿವೃತ್ತಿ ಘೋಷಿಸಿದ್ದಾರೆ. ಸದ್ಯ ಒಂದು ತಿಂಗಳಿಗೂ ಹೆಚ್ಚು ಕಾಲ ಆಟದಿಂದ ದೂರ ಉಳಿದಿರುವ ಕೆಎಲ್ ರಾಹುಲ್ ಮುಂದಿನ ಐಪಿಎಲ್ 2024ರಲ್ಲಿ ಕಣಕ್ಕೆ ಇಳಿಯಲಿದ್ದಾರೆ. ಲಕ್ನೋ ಸೂಪರ್‌ಜೈಂಟ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ಕೆಎಲ್ ರಾಹುಲ್ ಮುಂಬರುವ ಸೀಸನ್‌ನಲ್ಲಿ ತಂಡದ ನಾಯಕರಾಗಿರುತ್ತಾರೆ.  

ಇದನ್ನೂ ಓದಿ-ಮೊದಲ ಬಾರಿಗೆ ಟೆಸ್ಟ್ ಪಂದ್ಯ ಗೆದ್ದು ಇತಿಹಾಸ ನಿರ್ಮಿಸಿದ ಐರ್ಲೆಂಡ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News