ಸೈಕಲ್ ಸವಾರಿಯಲ್ಲಿ ಸ್ಟಂಟ್ ಮಾಡಿದ ಧೋನಿ-ವೀಡಿಯೋ

    

Last Updated : Aug 1, 2018, 01:21 PM IST
ಸೈಕಲ್ ಸವಾರಿಯಲ್ಲಿ ಸ್ಟಂಟ್ ಮಾಡಿದ ಧೋನಿ-ವೀಡಿಯೋ  title=
Photo courtesy: Instagram

ರಾಂಚಿ: ಇಂಗ್ಲೆಂಡ್ ವಿರುದ್ದ ಟೂರ್ನಿಯ ನಂತರ  ರಾಂಚಿಯಲ್ಲಿ ವಿಶ್ರಾಂತಿ ಮೂಡ್ ನಲ್ಲಿರುವ ಧೋನಿ ಈಗ ತಮ್ಮ ಇನ್ಸ್ಟಾ ಗ್ರಾಂ ನಲ್ಲಿ ಸೈಕಲ್ ಸವಾರಿ ಮಾಡುತ್ತಾ ಸ್ಟಂಟ್  ಮಾಡುತ್ತಿರುವ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ.

ಈ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ  ಸಾಕಷ್ಟು ವೈರಲ್ ಆಗಿದೆ.ಈ ವಿಡಿಯೋದಲ್ಲಿ ಕೊಲಿಂಗ್ ಗ್ಲಾಸ್ ಧರಿಸಿ ಇಳಿಜಾರಿನಲ್ಲಿ ಸೈಕಲ್ ಸವಾರಿ ಮಾಡುತ್ತಾ ಸ್ಟಂಟ್ ಮಾಡಿದ್ದಾರೆ.ಟ್ವಿಟ್ಟರ್ ಮತ್ತು ಇನ್ಸ್ತಾಗ್ರಾಂ ನಲ್ಲಿ  ಬ್ಯುಸಿ ಇರುವ ಧೋನಿ ಮತ್ತು ಸಾಕ್ಷಿ ಆಗಾಗ  ಪೋಟೋ ಮತ್ತು ವಿಡಿಯೋಗಳನ್ನು ಶೇರ್ ಮಾಡುವ ಮೂಲಕ ಸುದ್ದಿ ಮಾಡುತ್ತಲೇ ಇರುತ್ತಾರೆ.

 

Just for fun, plz try it at home.

A post shared by M S Dhoni (@mahi7781) on

ಇತ್ತೀಚೆಗಷ್ಟೇ ಧೋನಿ ಪತ್ನಿ ಸಾಕ್ಷಿಯವರು ವಿಭಿನ್ನ ರೀತಿಯ ಡ್ರೆಸ್ ಉಟ್ಟಿರುವ  ಪೋಟೋವೊಂದನ್ನು ಶೇರ್ ಮಾಡಿದ್ದಕ್ಕೆ ಸಾಕಷ್ಟು ಟ್ರೋಲ್ ಮಾಡಲಾಗಿತ್ತು, ಇದಕ್ಕೆ ಕೆಲವು ಅಭಿಮಾನಿಗಳು ಆಕೆಗೆ ಬೆಂಬಲವನ್ನು ಸಹ ವ್ಯಕ್ತಪಡಿಸಿದ್ದರು. 

Trending News