ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ಸೋಲಿಗೆ ಎಂ.ಎಸ್.ಧೋನಿ ಕಾರಣ: ಶ್ರೀಲಂಕಾ ನಾಯಕ

ಏಷ್ಯಾಕಪ್ 2022ರ ಫೈನಲ್ ಗೆದ್ದ ನಂತರ ಶ್ರೀಲಂಕಾದ ನಾಯಕ ದಸುನ್ ಶನಕ ದೊಡ್ಡ ಹೇಳಿಕೆ ನೀಡಿದ್ದಾರೆ. ತಮ್ಮ ಈ ದೊಡ್ಡ ಗೆಲುವಿಗೆ ಕೂಲ್ ಕ್ಯಾಪ್ಟನ್ ಖ್ಯಾತಿಯ ಎಂ.ಎಸ್.ಧೋನಿ ಕಾರಣವೆಂದು ಅವರು ಹೇಳಿದ್ದಾರೆ.

Written by - Puttaraj K Alur | Last Updated : Sep 13, 2022, 09:07 AM IST
  • ಏಷ್ಯಾಕಪ್ ಫೈನಲ್‍ ಪಂದ್ಯದಲ್ಲಿ ಪಾಕಿಸ್ತಾನದ ಸೋಲಿಗೆ ಎಂ.ಎಸ್.ಧೋನಿ ಕಾರಣ
  • ನಮ್ಮ ತಂಡದ ಗೆಲುವಿಗೆ ಚೆನ್ನೈ ಸೂಪರ್ ಕಿಂಗ್ಸ್ ಕಾರಣವೆಂದ ಶ್ರೀಲಂಕಾದ ನಾಯಕ ದಸುನ್ ಶನಕಾ
  • ಪಾಕ್ ವಿರುದ್ಧ ಫೈನಲ್‍ನಲ್ಲಿ ಟಾಸ್ ಸೋತರೂ ಚಾಂಪಿಯನ್ ಆದ ಶ್ರೀಲಂಕಾ ತಂಡ
ಏಷ್ಯಾಕಪ್‌ನಲ್ಲಿ ಪಾಕಿಸ್ತಾನ ಸೋಲಿಗೆ ಎಂ.ಎಸ್.ಧೋನಿ ಕಾರಣ: ಶ್ರೀಲಂಕಾ ನಾಯಕ title=
ಪಾಕಿಸ್ತಾನದ  ಸೋಲಿಗೆ ಎಂ.ಎಸ್.ಧೋನಿ ಕಾರಣ!

ನವದೆಹಲಿ: ಏಷ್ಯಾಕಪ್ 2022ರ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ  ಸೋಲನ್ನು ಎದುರಿಸಬೇಕಾಯಿತು. ಏಷ್ಯಾಕಪ್ ಟೂರ್ನಿಯ ಅಂತಿಮ ಪಂದ್ಯವು ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ ನಡೆಯಿತು. 23 ರನ್‌ಗಳಿಂದ ಗೆಲುವು ಸಾಧಿಸಿದ ಶ್ರೀಲಂಕಾ ತಂಡವು 6ನೇ ಬಾರಿಗೆ ಏಷ್ಯಾಕಪ್ ಪ್ರಶಸ್ತಿಯನ್ನು ಎತ್ತಿಹಿಡಿಯಿತು. ತಂಡದ ಗೆಲುವಿನ ನಂತರ ಶ್ರೀಲಂಕಾ ನಾಯಕ ದೊಡ್ಡ ಹೇಳಿಕೆ ನೀಡಿದ್ದು, ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.

ಧೋನಿಯಿಂದಾಗಿ ಪಾಕಿಸ್ತಾನ ಸೋತಿದೆ!

2022ರ ಏಷ್ಯಾಕಪ್‌ನಲ್ಲಿ ಟಾಸ್ ಪ್ರಮುಖ ಪಾತ್ರ ವಹಿಸಿತ್ತು. ಈ ಬಾರಿ ಟಾಸ್ ಗೆದ್ದ ತಂಡವೇ ಹೆಚ್ಚು ಪಂದ್ಯಗಳನ್ನು ಗೆದ್ದಿದ್ದರೆ, ಫೈನಲ್‍ನಲ್ಲಿ ಶ್ರೀಲಂಕಾ ತಂಡ ಟಾಸ್ ಸೋತರೂ ಚಾಂಪಿಯನ್ ಆಯಿತು. ಇದರ ಹಿಂದಿನ ದೊಡ್ಡ ಕಾರಣ ಎಂ.ಎಸ್.ಧೋನಿ. ಏಷ್ಯಾಕಪ್ 2022ರ ಫೈನಲ್ ಪಂದ್ಯಕ್ಕೂ ಮುನ್ನ ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಕಳೆದ 30 ಪಂದ್ಯಗಳಲ್ಲಿ ಗುರಿ ಬೆನ್ನಟ್ಟಿದ ತಂಡ 26 ಬಾರಿ ಗೆದ್ದಿತ್ತು. ಪಂದ್ಯದ ನಂತರ ಶ್ರೀಲಂಕಾದ ನಾಯಕ 2021ರ ಐಪಿಎಲ್‍ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪ್ರಶಸ್ತಿ ಗೆದ್ದಿದ್ದು ನಮಗೆ ಪಂದ್ಯ ಗೆಲ್ಲಲು ಸಹಾಯ ಮಾಡಿತು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಟೀಂ ಇಂಡಿಯಾದಿಂದ ಜಡೇಜಾ ಔಟ್ : ಈ ಆಟಗಾರನಿಗೆ ಸಿಕ್ತು ಚಾನ್ಸ್!

ಧೋನಿ ನೇತೃತ್ವದಲ್ಲಿ ಚೆನ್ನೈ ಚಾಂಪಿಯನ್ ಆಗಿತ್ತು

ಫೈನಲ್ ಪಂದ್ಯವನ್ನು ಗೆದ್ದ ನಂತರ ಶ್ರೀಲಂಕಾದ ನಾಯಕ ದಸುನ್ ಶನಕಾ ಮಾತನಾಡಿ, ‘ನೀವು ಐಪಿಎಲ್ 2021ರ ಫೈನಲ್ ಪಂದ್ಯ ನೋಡಿದರೆ ಅಂತಿಮ ಪಂದ್ಯದಲ್ಲಿ ಚೆನ್ನೈ ತಂಡವು ಮೊದಲು ಬ್ಯಾಟಿಂಗ್ ಮಾಡುವ ಮೂಲಕ ಚಾಂಪಿಯನ್ ಆಗುವಲ್ಲಿ ಯಶಸ್ವಿಯಾಯ್ತು. ಹೀಗಾಗಿ ಮೊದಲು ಬ್ಯಾಟ್ ಮಾಡಿದ ಮೇಲೂ ನಮಗೆ ಪ್ರಶಸ್ತಿ ಗೆಲ್ಲುವ ವಿಶ್ವಾಸವಿತ್ತು. ಐಪಿಎಲ್ 2021ರ ಫೈನಲ್‌ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು 27 ರನ್‌ಗಳಿಂದ ಸೋಲಿಸಿದ ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಆಯಿತು. ಈ ಪಂದ್ಯದಲ್ಲಿ ಚೆನ್ನೈ ತಂಡ ಮೊದಲು ಬ್ಯಾಟಿಂಗ್ ಮಾಡಿತ್ತು.

6ನೇ ಬಾರಿ ಏಷ್ಯಾಕಪ್ ಗೆದ್ದ ಶ್ರೀಲಂಕಾ

ಏಷ್ಯಾಕಪ್ ಫೈನಲ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 170 ರನ್ ಗಳಿಸಿತು. ಶ್ರೀಲಂಕಾ ಪರ ರಾಜಪಕ್ಸೆ 45 ಎಸೆತಗಳಲ್ಲಿ 6 ಬೌಂಡರಿ ಹಾಗೂ 3 ಸಿಕ್ಸರ್‌ಗಳ ನೆರವಿನಿಂದ ಅಜೇಯ 71 ರನ್ ಹಾಗೂ ವನಿಂದು ಹಸರಂಗಾ 21 ಎಸೆತಗಳಲ್ಲಿ 36 ರನ್ ಗಳಿಸಿದರು. ಅದೇ ರೀತಿ 171 ರನ್‌ಗಳ ಗುರಿ ಬೆನ್ನತ್ತಿದ ಪಾಕಿಸ್ತಾನ ತಂಡ 20 ಓವರ್‌ಗಳಲ್ಲಿ 147 ರನ್‌ಗಳಿಗೆ ಆಲೌಟ್ ಆಯಿತು. ಶ್ರೀಲಂಕಾ ಪರ ಪ್ರಮೋದ್ ಮಧುಶನ್ (4/34), ವನಿಂದು ಹಸರಂಗ (3/27) ಮತ್ತು ಚಮಿಕಾ ಕರುಣರತ್ನೆ (2/33) ಮಾರಕ ಬೌಲಿಂಗ್ ನಡೆಸಿ ಪಾಕ್ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿದ್ದರು.

ಇದನ್ನೂ ಓದಿ: Virat Kohli: ಈ ಮಹಿಳಾ ಕ್ರಿಕೆಟರ್ ದೊಡ್ಡ ಅಭಿಮಾನಿಯಂತೆ ಕಿಂಗ್ ಕೊಹ್ಲಿ: ಯಾರಾಕೆ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News