ದಿನಭವಿಷ್ಯ 30-04-2024: ಇಂದು ಉತ್ತರಾಷಾಢ ನಕ್ಷತ್ರ, ಸಾಧ್ಯ ಯೋಗ ಈ ರಾಶಿಯವರಿಗೆ ಕಾರ್ಯ ಸಿದ್ಧಿ!

Today Horoscope 30th April 2024: ಮಂಗಳವಾರದ ಈ ದಿನ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ಫಲಾಫಲ ಹೇಗಿದೆ ತಿಳಿಯಿರಿ. 

Written by - Yashaswini V | Last Updated : Apr 30, 2024, 07:25 AM IST
  • ವೃಷಭ ರಾಶಿಯವರು ಇಂದು ಅನಿರೀಕ್ಷಿತ ಘಟನೆಗಳಿಗೆ ಸಾಕ್ಷಿಯಾಗಲಿದ್ದೀರಿ.
  • ತುಲಾ ರಾಶಿಯವರು ಇಂದು ನಿಮ್ಮ ಆಪ್ತರನ್ನು ಭೇಟಿಯಾಗುವಿರಿ.
  • ಧನು ರಾಶಿಯವರು ಮಾತು ಮತ್ತು ನಡವಳಿಕೆಯಲ್ಲಿ ಮಾಧುರ್ಯವನ್ನು ಕಾಪಾಡಿಕೊಂಡರೆ ಒಳಿತು.
ದಿನಭವಿಷ್ಯ 30-04-2024:  ಇಂದು ಉತ್ತರಾಷಾಢ ನಕ್ಷತ್ರ, ಸಾಧ್ಯ ಯೋಗ ಈ ರಾಶಿಯವರಿಗೆ ಕಾರ್ಯ ಸಿದ್ಧಿ!  title=

Mangalavara Dina Bhavishya In Kannada: ಏಪ್ರಿಲ್ ತಿಂಗಳ ಕೊನೆಯ ದಿನ ಚೈತ್ರ ಮಾಸ ಕೃಷ್ಣ ಪಕ್ಷ, ಷಷ್ಠಿ ತಿಥಿಯ ಈ ದಿನ ಮಂಗಳವಾರ ಉತ್ತರಾಷಾಢ ನಕ್ಷತ್ರ ಸಾಧ್ಯ ಯೋಗ ಯಾವೆಲ್ಲಾ ರಾಶಿಯವರಿಗೆ ಶುಭ, ಯಾರಿಗೆ ಎಚ್ಚರಿಕೆ ಅಗತ್ಯ ತಿಳಿಯೋಣ... 

ಮೇಷ ರಾಶಿ:  
ಮೇಷ ರಾಶಿಯ ಜನರಿಗೆ ಇಂದು ಅದೃಷ್ಟದ ದಿನ. ಹಣಕಾಸು ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ಯಶಸ್ಸು ನಿಮ್ಮದಾಗಲಿದೆ. ವೃತ್ತಿ-ವ್ಯವಹಾರದಲ್ಲಿ ಬೆಳವಣಿಗೆಯನ್ನು ಕಾಣುವಿರಿ. ನಿಮ್ಮ ಕಲಾತ್ಮಕ ಕೌಶಲ್ಯಗಳಿಗೆ ಮನ್ನಣೆ ದೊರೆಯಲಿದೆ. 

ವೃಷಭ ರಾಶಿ:  
ವೃಷಭ ರಾಶಿಯವರು ಇಂದು ಅನಿರೀಕ್ಷಿತ ಘಟನೆಗಳಿಗೆ ಸಾಕ್ಷಿಯಾಗಲಿದ್ದೀರಿ. ನಿಮ್ಮ ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ. ನೀವು ವೃತ್ತಿ ಮತ್ತು ವ್ಯವಹಾರದಲ್ಲಿ ಲಾಭದಾಯಕ ಯೋಜನೆಗಳನ್ನು ಪ್ರಚಾರ ಮಾಡುತ್ತೀರಿ. ಪ್ರೀತಿ ಪಾತ್ರರೊಂದಿಗೆ  ನಂಬಿಕೆ ಮತ್ತು ಆತ್ಮವಿಶ್ವಾಸ ಹೆಚ್ಚುತ್ತದೆ.

ಮಿಥುನ ರಾಶಿ:   
ಮಿಥುನ ರಾಶಿಯವರಿಗೆ ದಿನದ ಉತ್ತರಾರ್ಧದಲ್ಲಿ ನೀವು ಕೈ ಹಾಕುವ ಕೆಲಸಗಳಲ್ಲಿ ಯಶಸ್ಸನ್ನು ಕಾಣುವಿರಿ. ಯಾವುದೇ ವಿಚಾರದಲ್ಲಿ ಮಾತನಾಡುವ ಮೊದಲು ಹಿರಿಯರ ಮಾರ್ಗದರ್ಶನವನ್ನು ಪಡೆಯಲು ಮರೆಯಬೇಡಿ. ಪ್ರೀತಿಪಾತ್ರರ ಸಹಾಯದಿಂದ ಯಾವುದೇ ಕಠಿಣ ಪರಿಸ್ಥಿತಿಯನ್ನೂ ಸುಲಭವಾಗಿ ಜಯಿಸುವಿರಿ. 

ಕರ್ಕಾಟಕ ರಾಶಿ: 
ಕರ್ಕಾಟಕ ರಾಶಿಯವರಿಗೆ ಇಂದು ಅಧಿಕಾರಿಗಳೊಂದಿಗೆ ಸಮನ್ವಯತೆ ಹೆಚ್ಚಾಗಲಿದೆ. ಕುಟುಂಬದೊಂದಿಗೆ ಆಹ್ಲಾದಕರ ಸಮಯವನ್ನು ಆನಂದಿಸುವಿರಿ. ದಾಂಪತ್ಯ ಜೀವನದಲ್ಲಿ ಸುಖ-ಶಾಂತಿ, ನೆಮ್ಮದಿಯನ್ನು ಕಾಣಬಹುದು. ಕೆಲಸದಲ್ಲಿ ನೀವು ಹೆಚ್ಚು ಕ್ರಿಯಾಶೀಲರಾಗುತ್ತೀರಿ.

ಇದನ್ನೂ ಓದಿ- Shani Nakshatra Parivartan: ಶನಿ ನಕ್ಷತ್ರ ಪರಿವರ್ತನೆ ಈ 3 ರಾಶಿಯ ಜನರಿಗೆ ಕೀರ್ತಿ ಯಶಸ್ಸು

ಸಿಂಹ ರಾಶಿ:   
ಸಿಂಹ ರಾಶಿಯವರಿಗೆ ನಿಮ್ಮ ಸಹೋದ್ಯೋಗಿಗಳು ಬೆಂಬಲವಾಗಿ ನಿಲ್ಲಲಿದ್ದಾರೆ. ನಿಮ್ಮ ಮಾತಿನಲ್ಲಿ ಮಾಧುರ್ಯತೆ ಕಾಪಾಡಿಕೊಂಡರೆ ಎಂತಹುದ್ದೇ ಪರಿಸ್ಥಿತಿಯನ್ನು ಸುಲಭವಾಗಿ ಜಯಿಸಬಹುದು. ನಿಮ್ಮ ವೈಯಕ್ತಿಕ ಸಂಬಂಧಗಳು ಸುಧಾರಿಸಲಿವೆ. ಇದಕ್ಕಾಗಿ, ಸಕಾರಾತ್ಮಕ ಮನಸ್ಥಿತಿಯನ್ನು ಕಾಪಾಡಿಕೊಳ್ಳಿ. 

ಕನ್ಯಾ ರಾಶಿ: 
ಕನ್ಯಾ ರಾಶಿಯವರಿಗೆ ಇಂದು ಕುಟುಂಬ ಸಂಬಂಧಿತ ವಿಷಯಗಳು ತ್ವರಿತವಾಗಿ ಬಗೆಹರಿಯಲಿವೆ. ಪ್ರಮುಖ ಕೆಲಸಗಳಲ್ಲಿ ಜವಾಬ್ದಾರಿಯುತ ವರ್ಗವು ನಿಮ್ಮನ್ನು ಬೆಂಬಲಿಸುತ್ತದೆ. ನಿಮ್ಮ ಗುರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವುದರಿಂದ ಲಾಭದ ನಿರೀಕ್ಷೆಯೂ ಇದೆ. 

ತುಲಾ ರಾಶಿ:  
ತುಲಾ ರಾಶಿಯವರು ಇಂದು ನಿಮ್ಮ ಆಪ್ತರನ್ನು ಭೇಟಿಯಾಗುವಿರಿ. ನಿರ್ವಹಣೆ ಮತ್ತು ಆಡಳಿತಾತ್ಮಕ ವಿಷಯಗಳು ವೇಗವನ್ನು ಪಡೆಯುತ್ತವೆ. ನಿಮ್ಮ ಪ್ರೀತಿಪಾತ್ರರಿಗೆ ಗೌರವವನ್ನು ತೋರಿಸಿ. ತಾಳ್ಮೆ ಮತ್ತು ನೈತಿಕ ಮೌಲ್ಯಗಳನ್ನು ಕಾಪಾಡಿಕೊಳ್ಳಿ.

ವೃಶ್ಚಿಕ ರಾಶಿ:   
ವೃಶ್ಚಿಕ ರಾಶಿಯವರು ಇಂದು ನೀವು ಬಯಸಿದ ಪ್ರಸ್ತಾಪಗಳನ್ನು ಸ್ವೀಕರಿಸುತ್ತೀರಿ. ಸಾಮಾಜಿಕ ಸಂವಹನಗಳನ್ನು ಹೆಚ್ಚಿಸುವಲ್ಲಿ ನೀವು ಉತ್ಸಾಹದಿಂದ ಇರುತ್ತೀರಿ. ಸಂವಹನ ಮತ್ತು ನೆಟ್‌ವರ್ಕಿಂಗ್ ಕ್ಷೇತ್ರದಲ್ಲಿ ಇರುವವರಿಗೆ ಗುಡ್ ನ್ಯೂಸ್ ಸಿಗುವ ಸಾಧ್ಯತೆ ಇದೆ. 

ಇದನ್ನೂ ಓದಿ- Kuber Yog: ಹನ್ನೆರಡು ವರ್ಷಗಳ ಕುಬೇರ ಯೋಗ ರಚನೆ, ಲಕ್ಷ್ಮಿ ಕೃಪೆಯಿಂದ ಈ ಜನರ ಮೇಲೆ 2025ರವರೆಗೆ ಭಾರಿ ಧನವೃಷ್ಟಿ!

ಧನು ರಾಶಿ:  
ಧನು ರಾಶಿಯವರು ಇಂದು ನಿಮ್ಮಲ್ಲಿರುವ ಸೃಜನಾತ್ಮಕತೆಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ. ಕೌಟುಂಬಿಕ ವಿಷಯಗಳ ಮೇಲೆ ನಿಮ್ಮ ಗಮನವನ್ನು ಕೇಂದ್ರೀಕರಿಸಿ. ಆಕರ್ಷಕ ಪ್ರಸ್ತಾವನೆಗಳನ್ನು ಸ್ವೀಕರಿಸಿದಾಗ ನಿಮ್ಮ ಭಾವನೆಗಳನ್ನು ನಿಯಂತ್ರಿಸಿ. ಮಾತು ಮತ್ತು ನಡವಳಿಕೆಯಲ್ಲಿ ಮಾಧುರ್ಯವನ್ನು ಕಾಪಾಡಿಕೊಂಡರೆ ಒಳಿತು. 

ಮಕರ ರಾಶಿ:  
ಮಕರ ರಾಶಿಯವರಿಗೆ ಇಂದು ಸಮಾಜದಲ್ಲಿ ಗೌರವ ಮತ್ತು ಮನ್ನಣೆ ಹೆಚ್ಚಾಗುತ್ತದೆ. ಸೃಜನಾತ್ಮಕ ಪ್ರಯತ್ನಗಳು ಯಶಸ್ವಿಯಾಗುತ್ತವೆ. ನಿಮ್ಮ ಕಾರ್ಯಕ್ಷಮತೆಗೆ ಎಲ್ಲರೂ ಪ್ರಭಾವಿತರಾಗುತ್ತಾರೆ. ಕೆಲಸ ಮತ್ತು ವ್ಯವಹಾರದಲ್ಲಿ ಸುಧಾರಣೆ ಕಂಡುಬರುವುದು. ನೀವು ಸಂಪರ್ಕಗಳು ಮತ್ತು ಸಂವಹನವನ್ನು ಸುಧಾರಿಸುತ್ತೀರಿ. 

ಕುಂಭ ರಾಶಿ:  
ಕುಂಭ ರಾಶಿಯವರಿಗೆ ಇಂದು ಹೂಡಿಕೆಯಿಂದ ಲಾಭವಾಗಲಿದೆ. ಹೊಸ ಕೆಲಸಕ್ಕೆ ಕೈ ಹಾಕುವಾಗ ಹಿರಿಯರ ಸಲಹೆ ಪಡೆದು ಮುನ್ನಡೆಯಿರಿ. ತ್ಯಾಗ ಮತ್ತು ಸಹಕಾರದ ಮನೋಭಾವದಿಂದ ನಿಮ್ಮ ಸುತ್ತಲಿನ ವಾತಾವರಣವನ್ನು ಸುಧಾರಿಸುವಿರಿ.  ಬಜೆಟ್‌ಗೆ ಅನುಗುಣವಾಗಿ ಮುಂದುವರೆದರೆ ಸಾಲಬಾಧೆಯನ್ನು ತಪ್ಪಿಸಬಹುದು. 

ಮೀನ ರಾಶಿ:  
ಮೀನ ರಾಶಿಯವರಿಗೆ ನಿಮ್ಮ ನಿರ್ವಹಣಾ ಪ್ರಯತ್ನಗಳು ನಿಮ್ಮ ಗುರಿಗಳನ್ನು ಸಾಧಿಸಲು ಸಹಾಯ ಮಾಡುತ್ತದೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ನಿಮ್ಮ ವೃತ್ತಿ ಮತ್ತು ವ್ಯವಹಾರದಲ್ಲಿ ನೀವು ನಿರೀಕ್ಷಿತ ಯಶಸ್ಸನ್ನು ಸಾಧಿಸುವಿರಿ. ವ್ಯಾಪಾರ ವಿಸ್ತರಣೆ ವೇಗವನ್ನು ಪಡೆಯುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News